26th December 2024
Share

TUMAKURU:SHAKTHIPEETA FOUNDATION

ಶಕ್ತಿಪೀಠ ಫೌಂಡೇಷನ್ ನ ಎರಡನೇ ವಾರ್ಷಿಕೋತ್ಸವದಲ್ಲಿ ಶಕ್ತಿಪೀಠ ಕ್ಯಾಂಪಸ್ ನಲ್ಲಿ 2019-2020, 2020-2021 ಮತ್ತು 2021 -2022 ನೇ ಸಾಲಿನಲ್ಲಿ ಕೈಗೊಂಡಿರುವ ಮತ್ತು ಕೈಗೊಳ್ಳಲು ಉದ್ದೇಶಿರುವ ಯೋಜನೆಗಳ ಬಗ್ಗೆ ಅಭಿವೃದ್ಧಿ ಚಿಂತಕ ಶ್ರೀ ಟಿ.ಆರ್.ರಘೋತ್ತಮರಾವ್ ರವರು ಮಾತನಾಡಿದರು.

ಶಕ್ತಿಪೀಠ ಕ್ಯಾಂಪಸ್ ಒಂದು ಸಾಮಾನ್ಯ ಸೌಲಭ್ಯ ಕೇಂದ್ರ, ಯಾವುದೇ ವಿಚಾರದಲ್ಲಿ ಸಂಶೋಧನೆ ಮಾಡಲು ಅಥವಾ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸಲು ಆಸಕ್ತಿ ಇರುವವರಿಗೆ ಎಲ್ಲಾ ವಿಧವಾದ ಅನೂಕೂಲ ಮಾಡಲಾಗುವುದು ಎಂದು ಕರೆ ನೀಡಿದರು.

ತಾಯಿ ಶಕ್ತಿದೇವತೆಯ ಆಶೀರ್ವಾದದಿಂದ ನಮ್ಮದೇ ಒಂದು ಅಭಿವೃದ್ಧಿ ಚಿ0ತಕರ ಲೋಕ ನಿರ್ಮಾಣ ಮಾಡುವ ಕೆಲಸವನ್ನು ಮಾತ್ರ ಕುಂದರನಹಳ್ಳಿ ರಮೇಶ್ ಮಾಡುತ್ತಿದ್ದಾರೆ ಅಷ್ಟೆ ಎಂದರು. ಅವರ ಇಡೀ ಕುಟುಂಬವೇ ಒಂದು ವಿಶಿಷ್ಠವಾಗಿದೆ. ಎಲ್ಲರೂ ಇದೇ ಸೇವೆಯಲ್ಲಿ ತೊಡಗಿದ್ದಾರೆ. ನಾನು ಕಳೆದ ಸುಮಾರು 20 ವರ್ಷಗಳಿಂದ ಅವರ ಕುಟುಂಬದ ಒಬ್ಬ ಸದಸ್ಯನಂತೆ ಇದ್ದೇನೆ. ಕೊನೆಗೂ ಒಂದು ಉತ್ತಮವಾದ ಸಂಸ್ಥೆ ಮಾಡಲು ಮುಂದಾಗಿರುವುದು ನನಗೆ ಸಂತೋಷ ತಂದಿದೆ.

ಈ ಕೆಳಕಂಡ ಯೋಜನೆಗಳ ಚಿಂತಕರು/ಆಸಕ್ತರು ಸಂಪರ್ಕಿಸಬಹುದಾಗಿಸಲು ಮನವಿ ಮಾಡಿದರು.

ಶಕ್ತಿಪೀಠ ಫೌಂಡೇಷನ್ ಪ್ರಮುಖ ಕಾರ್ಯಚಟುವಟಿಕೆಗಳು

  1. ಭಾರತದ ನದಿ ಜೋಡಣೆಗಳ ಪ್ರಾತ್ಯಕ್ಷಿಕೆ.
  2. ವಿಶ್ವದ ಶಕ್ತಿಪೀಠಗಳ ಪ್ರಾತ್ಯಾಕ್ಷಿಕೆ.
  3. ನೀರು ಮತ್ತು ಶಕ್ತಿಪೀಠಗಳ ಸಂಭಂದ ಸಂಶೋಧನೆ.
  4. ರಾಜ್ಯದ ನದಿ ಜೋಡಣೆಗೆ ಶ್ರಮಿಸುವುದು.
  5. ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಯೋಜನೆ ಜಾರಿಗೆ ಶ್ರಮಿಸುವುದು.
  6. ನದಿ ನೀರಿನಲ್ಲಿ ಸಾಮಾಜಿಕ ನ್ಯಾಯದಡಿ ರಾಜ್ಯದ ಪ್ರತಿಯೊಂದು ಗ್ರಾಮಗಳಿಗೂ ನದಿ ನೀರಿನ ಅಲೋಕೇಷನ್.
  7. ಭಾರತ ದೇಶದ 697 ಜಿಲ್ಲಾ ಮಟ್ಟದ ದಿಶಾ ಸಮಿತಿಗಳ ಮೌಲ್ಯಮಾಪನ.
  8. ಭಾರತ ದೇಶದ 37 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜ್ಯ ಮಟ್ಟದ ದಿಶಾ ಸಮಿತಿಗಳ ಮೌಲ್ಯಮಾಪನ.
  9. ದೇಶದ 734 ಜಿಲ್ಲೆಗಳ ಜಲಶಕ್ತಿ ಕೇಂದ್ರಗಳ ಕಾರ್ಯವೈಖರಿಗಳ ಮೌಲ್ಯಮಾಪನ.
  10. ಕರ್ನಾಟಕ ರಾಜ್ಯದ ನಾಟಿ ವೈಧ್ಯರ, ಪಾರಂಪರಿಕ ವೈಧ್ಯರ ಮತ್ತು ಹಕೀಮರಿಗೆ ಸ್ಥಳೀಯ ಸಂಸ್ಥೆಗಳಿಂದ ಧೃಡೀಕರಣ ಪತ್ರ ಕೊಡಿಸುವುದು.
  11. ವಿಶ್ವದ ಎಲ್ಲಾ ಔಷಧಿ ಗಿಡಗಳ ಡೆಮೋ ಪ್ಲಾಟ್ ಮತ್ತು ಡಿಜಿಟಲ್ ಡಾಟಾ ಬೇಸ್.
  12. ರೈತರ ಆದಾಯ ದುಪ್ಪುಟ್ಟು ಗೊಳಿಸಲು ವಿವಿಧ ಜಾತಿಗಳ ಗಿಡಗಳ ನರ್ಸರಿ ಮತ್ತು ತರಬೇತಿ.
  13. ದೇಶದ ವಿವಿಧ ರಾಕ್ಸ್ ಕಲೆಕ್ಷನ್.
  14. ಕರ್ನಾಟಕ ರಾಜ್ಯದ 225 ಜನ ವಿಧಾ£ ಸಭಾ, 75 ಜನ ವಿಧಾನ ಪರಿಷತ್, 28 ಜನ ಲೋಕಸಭಾ ಸದಸ್ಯರ, 12 ಜನ ರಾಜ್ಯ ಸಭಾ ಸದಸ್ಯರ, ದೇಹಲಿ ಪ್ರತಿನಿಧಿ, 31 ಜನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರ, 31 ಜನ ಜಿಲ್ಲಾಧಿಕಾರಿಗಳು ಮತ್ತು 31 ಜನ ಜಿಲ್ಲಾ ಪಂಚಾಯತ್ ಸಿಇಓಗಳು ಸೇರಿದಂತೆ 440 ಜನರ ಕಾರ್ಯವೈಖರಿಗಳ ಮೌಲ್ಯಮಾಪನ.
  15. ಕರ್ನಾಟಕ ರಾಜ್ಯ ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆದ ರಾಜ್ಯವಾಗಲು ಶ್ರಮಿಸುವುದು.
  16. ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳ ಎಲ್ಲಾ ಯೋಜನೆಗಳ ಬಗ್ಗೆ ಅಧಿಕಾರಿಗಳಿಗೆ ಮತ್ತು ಜನಜಾಗೃತಿ.
  17. 2022 ರೊಳಗೆ ತುಮಕೂರು ಜಿಲ್ಲೆಯನ್ನು ಡಾಟಾ ಜಿಲ್ಲೆಯಾಗಿ ಘೋಶಿಸಲು ಶ್ರಮಿಸುವುದು.
  18. ವಿಲೇಜ್ -1 ಯೋಜನೆಯ ಸದುÀಪಯೋಗಕ್ಕೆ ಶ್ರಮಿಸುವುದು.
  19. ಜಲಗ್ರಾಮ ಕ್ಯಾಲೆಂಡರ್ ಯೋಜನೆ ಅನುಷ್ಠಾನಕ್ಕೆ ಶ್ರಮಿಸುವುದು.
  20. ವಿವಿಧ ವರ್ಗದವರಿಗೆ ನಿರಂತರವಾಗಿ ತರಬೇತಿ ನೀಡುವುದು.
  21. ಅಗ್ನಿ ಹೋತ್ರ ಹೋಮದ ಸಂಶೋಧನೆ.
  22. ಇ ಪೇಪರ್ ಶಕ್ತಿಪೀಠ ಮೂಲಕ ಶಕ್ತಿಪೀಠ ಫೌಂಡೇಷನ್ ಕಾರ್ಯಕ್ರಮಗಳ ಬಗ್ಗೆ ಪ್ರಚಾರ ಮಾಡುವುದು.
  23. 440 ಜನ ನಿರ್ಗತಿಕರಿಗೆ ಊಟ-ವಸತಿ ಸೌಕರ್ಯ ನೀಡಿ, ತರಬೇತಿ ನೀಡಿ ಸಂಶೋಧನೆಗಾಗಿ ಬಳಸಿಕೊಳ್ಳುವುದು.
  24. ರಾಜ್ಯಾಧ್ಯಾಂತ 440 ಸಂಘಸಂಸ್ಥೆಗಳ ಒಕ್ಕೂಟ ರಚಿಸುವುದು.
  25. ಮಾತಾ-ಪಿತಾರ ಮಹತ್ವದ ಅರಿವು ಮೂಡಿಸುವುದು.