15th January 2025
Share

TUMAKURU:SHAKTHI PEETA FOUNDATION

ಶಕ್ತಿಪೀಠ ಫೌಂಡೇಷನ್ ನ ಎರಡನೇ ವಾರ್ಷಿಕೋತ್ಸವದಲ್ಲಿ ಶಕ್ತಿಪೀಠ ಕ್ಯಾಂಪಸ್ ನಲ್ಲಿ ವಿಶ್ವದ ಎಲ್ಲಾ ಜಾತಿಗಳ ಔಷಧಿ ಗಿಡಗಳ ಡೆಮೋ ಪ್ಲಾಟ್ ಮಾಡಲು ಸಾಧ್ಯವೇ? ಎಂಬ ವಿಚಾರದ ಬಗ್ಗೆ ಪಾರಂಪರಿಕ ವೈಧ್ಯ ಹಾಗೂ ಔಷಧಿ ಗಿಡಗಳ ಡೆಮೋ ವಿಭಾಗದ ಮುಖ್ಯಸ್ಥರಾದ ಶ್ರೀ ಗುರುಸಿದ್ಧರಾಧ್ಯರವರ ನೇತೃತ್ವದ ತಂಡ ಗಂಭೀರವಾಗಿ ಚಿಂತನೆ ನಡೆಸಿತು.

ಕುಂದರನಹಳ್ಳಿ ರಮೇಶ್ ರವರು 440 ಜಾತಿಯ ಗಿಡಗಳನ್ನು ಕ್ಯಾಂಪಸ್ ನಲ್ಲಿ ಹಾಕಿ ಬೆಳೆಸಲು ಗುರಿ ಹೊಂದಿದ್ದಾರೆ. ಆದರೇ ನಮ್ಮ ತಂಡ ವಿಶ್ವದ ಎಲ್ಲಾ ಜಾತಿಯ ಗಿಡಗಳ ಡೆಮೋಪ್ಲಾಟ್ ಮಾಡಲು ಕಟಿಬದ್ಧವಾಗಿದೆ. ಈ ವಾತಾವಾರಣದಲ್ಲಿ ಬೆಳೆಯಲು ಶಕ್ತಿ ಇಲ್ಲದ ಗಿಡಗಳಿಗೆ ಗ್ರೀನ್ ಹೌಸ್ ನಿರ್ಮಾಣ ಮಾಡುವ ಹೊಣೆಗಾರಿಕೆಯನ್ನು ಶಕ್ತಿಪೀಠ ಫೌಂಡೆಷನ್ ಹೊರಬೇಕು ಎಂದು ಶ್ರೀ ಗೋವಿಂದಪ್ಪನವರು ಕರೆ ನೀಡಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ನಾಟಿ ವೈಧ್ಯರು ಮತ್ತು ಪಾರಂಪರಿಕ ವೈಧ್ಯರ ತಂಡ ಸುಮಾರು 50 ಜಾತಿಗಳಿಗೂ ಹೆಚ್ಚು ಔಷಧಿ ಬೀಜ ಮತ್ತು ಗಿಡಗಳನ್ನು ತರುವ ಮೂಲಕ ಔಷಧಿ ಗಿಡಗಳ ಸಂಗ್ರಹಣೆಗೆ ಚಾಲನೆ ನೀಡಲಾಯಿತು.

ರಾಜ್ಯದ 108 ಜನ ನಾಟಿ ವೈಧ್ಯರು, ಪಾರಂಪರಿಕ ವೈಧ್ಯರ ಮತ್ತು ಹಕೀಮರ ತಂಡ ತಲಾ 50 ಔಷಧಿ ಸಸಿಗಳಂತೆ ಸುಮಾರು 5000 ಔಷಧಿ ಗಿಡಗಳ ನ್ನು ತಂದು ಒಂದೇ ದಿವಸ ನಾಟಿ ಹಾಕುವ ಸಮಾವೇಶ ಆಯೋಜನೆ ಬಗ್ಗೆ ಸಮಾಲೋಚನೆ ನಡೆಸಲಾಯಿತು.

ಶಕ್ತಿಪೀಠ ಕ್ಯಾಂಪಸ್ ಲೋಕಾರ್ಪಣೆ ವೇಳೆಗೆ ರಾಜ್ಯದ ಎಲ್ಲಾ ನಾಟಿ ವೈಧ್ಯರು, ಪಾರಂಪರಿಕ ವೈಧ್ಯರ ಮತ್ತು ಹಕೀಮರಿಗೆ ಸರ್ಕಾರದ ಸ್ಥಳೀಯ ಸಂಸ್ಥೆಗಳಿಂದ ಧೃಡೀಕರಣ ಪತ್ರ ಪಡೆಯುವ ಆಂದೋಲನಕ್ಕೆ ಚಾಲನೆ ನೀಡಲು ರೂಪುರೇಷೆಗಳನ್ನು ನಿರ್ಧರಿಸಲು ಒಂದು ವಿಷನ್ ಗ್ರೂಪ್ ರಚಿಸಲು ನಿರ್ಣಯ ಮಾಡಲಾಯಿತು.

ಕ್ಯಾಂಪಸ್ ನಲ್ಲಿ ಕಟ್ಟಡಗಳು ನಿರ್ಮಾಣ ಆಗುವವರೆಗೂ ಒಂದು ದಿನದ ಕಾರ್ಯಕ್ರಮ ಮಾತ್ರ ನಡೆಸಲು ಚಿಂತನೆ ನಡೆಸಲಾಯಿತು. ನಂತರ ನಿರಂತರವಾಗಿ ಔಷಧಿ ಗಿಡಗಳ ಡಿಜಿಟಲ್ ಡಾಟಾ ಬೇಸ್ ಬಗ್ಗೆ ತರಬೇತಿ ನೀಡುವ ಮೂಲಕ ಜೀವ ವೈವಿದ್ಯ ದಾಖಲಾತಿ ಬಗ್ಗೆ ಜಾಗೃತಿ ಮೂಡಿಸಲು ಸಮಾಲೋಚನೆ ನಡೆಸಲಾಯಿತು.

ರಾಜ್ಯದ ಎಲ್ಲಾ 224 ವಿಧಾನ ಸಭಾ ಕ್ಷೇತ್ರಗಳ ಮಟ್ಟದಲ್ಲೂ ಕನಿಷ್ಟ ಒಬ್ಬರಂತೆ ಸುಮಾರು 224 ನಾಟಿ ವೈಧ್ಯರು, ಪಾರಂಪರಿಕ ವೈಧ್ಯರ ಮತ್ತು ಹಕೀಮರ ಸಮಾವೇಶ ನಡೆಸಲು ಸಿದ್ಧತೆ ಬಗ್ಗೆಯೂ ಚರ್ಚಿಸಲಾಯಿತು.

ಶ್ರೀ ಗುರುಸಿದ್ಧರಾಧ್ಯರವರ ನೇತೃತ್ವದಲ್ಲಿ ಇಂದು ಸಭೆಗೆ ಭಾಗವಹಿಸಿದವರನ್ನೆ ರಾಜ್ಯ ಮಟ್ಟದ ಸಂಚಾಲಕರಾಗಿ ನೇಮಿಸಲು ನಿರ್ಣಯ ಮಾಡಲಾಯಿತು.