TUMAKURU:SHAKTHIPEETA FOUNDATION
ಕೇಂದ್ರ ಸರಕಾರ 2025 ರವೇಳೆಗೆ INFRASTRUCURE ಅಭಿವೃಧ್ಧಿ ಸೂಚ್ಯಂಕ ಮೌಲ್ಯ ಹೆಚ್ಚಿನ ಆಂಕಕ್ಕೆ ಏರಿಸಲು, ದೇಶದ ನಾಗರೀಕರಿಗೆ ಉತ್ತಮ ಗುಣ ಮಟ್ಟದ-ಕುಡಿಯುವ ನೀರು ವಿಧ್ಯುತ್, ರಸ್ತೆ , ಸಾರಿಗೆ ವ್ಯವಸ್ಥೆ, ನಗರ/ಗ್ರಾಮೀಣ ಪ್ರದೇಶಗಳಲ್ಲಿ ವಸತಿ ಹೀನರಿಗೆ ವಸತಿ ಸೌಲಭ್ಯ, ಇಂಧನ ಸೌಲಭ್ಯ,ಇದರ ಜೊತೆಗೆ ಕೃಷಿ ಕ್ಷೇತ್ರ ಇರಿಗೇಶನ್ ಕ್ಷೇತ್ರದಲ್ಲಿ,ಆಹಾರ ಸಂಸ್ಕರಣ ಕ್ಷೇತ್ರ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸೌಲಭ್ಯ ಉನ್ನತೀಕರಣ NATIONAL INFRASTRUCURE PIPE LINE 2020-25 ಎಂಬ ಹೊಸ ಪರಿಕಲ್ಪನೆ ಬಿಡುಗಡೆ ಮಾಡಿದೆ.
NATIONAL INFRASTRUCURE PIPE LINE 2020-25 ಅಡಿಯಲ್ಲಿ ಮೇಲಿನ ಕಂಡಿಕೆಯಲ್ಲಿ ಚರ್ಚಿಸಲಾದ ಕ್ಷೇತ್ರಗಳಲ್ಲಿ ಯೋಜನೆಗಳ ಒಟ್ಟು ಮೊತ್ತ 111 ಲಕ್ಷಕೋಟಿ ರೂಗೆ ಏರಿಕೆ ಮಾಡಿ , ಈ ಮುಂಚೆ ಗುರುತಿಸಲಾಗಿದ್ದ 6835 ಯೋಜನೆಗೆ ಬದಲಾಗಿ ಹೆಚ್ಚುವರಿಯಾಗಿ 7400 ಯೋಜನೆಗಳನ್ನು ಗುರುತಿಸಲಾಗಿದೆ.
ಈ ಶೀರ್ಷಿಕೆ ಅಡಿ ಗುರುತಿಸಲಾದ ಯೋಜನೆಗಳಿಗೆ
- ಕೇಂದ್ರ ಸರ್ಕಾರದ ಪಾಲು 39 %
- ರಾಜ್ಯ ಸರ್ಕಾರದ ಪಾಲು 39 %
- ಖಾಸಗಿ ವಲಯದಿಂದ ಹೂಡಿಕೆ ಪ್ರಮಾಣ 22%
ಚರ್ಚಿಸಲಾದ ಕ್ಷೇತ್ರಗಳಲ್ಲಿ INFRASTRUCURE ಪೈಪ್ ಲೈನ್ ಯೋಜನೆಗಳ ಒಟ್ಟು ಮೊತ್ತ 111 ಲಕ್ಷ ಕೋಟಿ ಆಗಿದ್ದು, ಅದನ್ನು ವಿಂಗಡಿಸಲಾಗಿದೆ.
- ಶೇ.40 ಭಾಗ ಅಂದರೆ 44 ಲಕ್ಷಕೋಟಿ ರೂಗಳ ಕಾಮಗಾರಿಗಳು ಜಾರಿಯಲ್ಲಿರುವುದು ಆಗಿದೆ.
- ಶೇ.30 ಭಾಗ ಅಂದರೆ 33 ಲಕ್ಷ ಕೋಟಿರೂಗಳ ಯೋಜನೆಗಳು ಮಂಜೂರಾಗಿ ಪ್ರಾಥಮಿಕ ಹಂತದಲ್ಲಿ ಇರುವುದು,
- 20% ಭಾಗ ಅಂದರೆ 22 ಲಕ್ಷಕೋಟಿ ರೂಗಳ ಯೋಜನೆಗಳು ಇನ್ನೂ ಪರಿಕಲ್ಪನಾ ಸ್ಥಿತಿ,ಡಿಪಿಆರ್ ಸಿದ್ದವಾಗಿ ಆರಂಭವಾಗದೇ ಇರುವುದು,
- ಉಳಿಕೆ 10% ಭಾಗ ಅಂದರೆ 10 ಲಕ್ಷಕೋಟಿ ಇನ್ನೂ ಗುರುತಿಸ ಲಾಗದ, ಆಲೋಚನೆಯಲ್ಲಿರುವ ಯೋಜನೆಗಳಾಗಿವೆ.
ಕರ್ನಾಟಕ ರಾಜ್ಯ ಸರಕಾರ NATIONAL INFRASTRUCURE PIPE LINE(NIP) 2020-25 ಆವರಣ ಅಡಿಯಲ್ಲಿ ಗುರುತಿಸಲಾದ ಕ್ಶೇತ್ರವಾರು ವಿವರಣಾ ಪಟ್ಟಿ ಈಗಾಗಲೇ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದ್ದು, ಅವುಗಳ ಪೂರ್ಣ ಮಾಹಿತಿಯ ಬಗ್ಗೆ ಸಾರ್ವಜನಿಕ ಚರ್ಚೆ ಅಗತ್ಯ.
T.R.RAGHOTTHAM RAO