TUMAKURU:SHAKTHI PEETA FOUNDATION
ತುಮಕೂರು ಲೋಕಸಭಾ ಸದಸ್ಯ, ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಅಧ್ಯಕ್ಷ, ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಹಾಗೂ ಕೇಂದ್ರ ಜಲ ಶಕ್ತಿ ಸಮಿತಿ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸೋಮವಾರ ತುಮಕೂರು ಜಿಲ್ಲೆಯ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಗಳ ಸಭೆ ಕರೆದಿದ್ದಾರೆ.
ಈ ಸಭೆಗೆ ಬರುವಾಗ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಗಳು ನಿಖರವಾದ ದಾಖಲೆ ಮತ್ತು ಜಿಐಎಸ್ ನಕ್ಷೆಯೊಂದಿಗೆ ಬರಲು ಖಡಕ್ ಆಗಿ ಸೂಚಿಸಿದ್ದಾರೆ. ಈ ಬಗ್ಗೆ ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿಯವರಾದ ಶ್ರೀ ಮೃತ್ಯುಂಜಯ ಸ್ವಾಮಿ ರವರೊಂದಿಗೂ ಮಾತನಾಡಿದ್ದಾರೆ.
ನಾನು ಸಹ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯನಾಗಿ ಕಾರ್ಯದರ್ಶಿಯವರೊಂದಿಗೆ ಅವರ ಕಚೇರಿಯಲ್ಲಿ ಸಮಾಲೋಚನೆ ನಡೆಸಿದ್ದೇನೆ. ಎಸ್.ಇ ರವರಿಗೆ ಸೂಚಿಸಿ ಶ್ರೀ ಜಿ.ಎಸ್.ಬಸವರಾಜ್ ರವರು ಕೇಳುವ ಎಲ್ಲಾ ಮಾಹಿತಿಯೊಂದಿಗೆ ಭೇಟಿ ಮಾಡಿ ಮಾಹಿತಿ ನೀಡಲು ಸೂಚಿಸಿದ್ದಾರೆ.
ಸಣ್ಣ ನೀರಾವರಿ ಇಲಾಖೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಪ್ರಸ್ತಾವನೆ ಬಗ್ಗೆ ಸೆಂಟ್ರಲ್ ವಾಟರ್ ಕಮೀಷನ್ ಅಧಿಕಾರಿಗಳೊಂದಿಗೂ ಸಮಾಲೋಚನೆ ನಡೆಸಿದ್ದೇನೆ. ಜಿ.ಎಸ್.ಬಸವರಾಜ್ ರವರು ಕೇಂದ್ರ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ.
ನಾಳಿನ(30.08.2021) ಸಭೆಯಲ್ಲಿ ಸಂಸದರು ಕೇಳುವ ಮಾಹಿತಿಗಳು ಈ ಕೆಳಕಂಡಂತಿವೆ.
- ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ತುಮಕೂರು ಜಿಲ್ಲೆಯ 10 ತಾಲ್ಲೂಕುಗಳ ಮತ್ತು 11 ವಿಧಾನಸಭಾ ಕ್ಷೇತ್ರಗಳ ಕೆರೆ-ಕಟ್ಟೆಗಳ ನಕ್ಷೆಯೊಂದಿಗೆ ಮಾಹಿತಿ.
- ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯ ರಾಜ್ಯದ ಇತರೆ ಯೋಜನೆಗಳ ನಕ್ಷೆ ಮತ್ತು ಮಾಹಿತಿ.
- ಸಣ್ಣ ನೀರಾವರಿ ಇಲಾಖೆ ವತಿಯಿಂದ ತುಮಕೂರಿನ ಸ್ಪೆಕ್ಟ್ರಾ ಅಸೋಯೇಷನ್ ರವರಿಂದ ಸಿದ್ಧಪಡಿಸಿರುವ ನಕ್ಷೆ ಮತ್ತು ವರದಿಯನ್ನು ಜಿಲ್ಲೆಯ 330 ಗ್ರಾಮ ಪಂಚಾಯತ್ ಗಳಿಗೆ ಮತ್ತು 11 ನಗರ ಸ್ಥಳೀಯ ಸಂಸ್ಥೆಗಳಿಗೆ ರವಾನಿಸಿ ತಪಾಸಣೆ ಮಾಡಲು ದಿಶಾ ಸಮಿತಿಯಲ್ಲಿ ಸೂಚಿಸಲಾಗಿದೆ. ಈ ಬಗ್ಗೆ ಕೈಗೊಂಡಿರುವ ಕ್ರಮಗಳ ಮಾಹಿತಿ.
- ಅಟಲ್ ಭೂ ಜಲ್ ಯೋಜನೆಯ ಮತ್ತು ಜಲಾಮೃತ ಯೋಜನೆಯಡಿಯಲ್ಲಿ ತುಮಕೂರು ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳವಾರು ಸಿದ್ಧಪಡಿಸಿರುವ ‘ವಾಟರ್ ಆಡಿಟ್- ವಾಟರ್ ಬಡ್ಜೆಟ್- ವಾಟರ್ ಸ್ಟ್ರಾಟಜಿ’ ನಕ್ಷೆಯೊಂದಿಗೆ ಮಾಹಿತಿ.
- ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯ ಪ್ರಕಾರ ಕೆರೆ-ಕಟ್ಟೆಗಳಿಗೆ ನದಿ ನೀರಿನ ಅಲೋಕೇಷನ್ ಮಾಹಿತಿ.
- ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯು ಪ್ರಸ್ತುತ ಯಾವ, ಯಾವ ಕಚೇರಿಯಲ್ಲಿದೆ. ಸಂಸದರು ದೆಹಲಿಯಲ್ಲಿ ಯಾವ ಯಾವ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಬೇಕು ಎಂಬ ಬಗ್ಗೆ ಮಾಹಿತಿ.
- ರಾಜ್ಯ ಸಚಿವ ಸಂಪುಟದ ನಿರ್ಣಯಗಳ ಸರ್ಕಾರಿ ಆದೇಶದ ಪ್ರತಿ.
- ಕೇಂದ್ರ ಸರ್ಕಾರದಲ್ಲಿ ಯೋಜನೆಯ ಮಂಜೂರಾತಿಗೆ ಮುಂದೆ ನಾವು ಯಾವ ಸ್ಟ್ರಾಟಜಿ ಮಾಡಬೇಕು ಎಂಬ ಮಾಹಿತಿ.
- ರಾಜ್ಯ ಸರ್ಕಾರದಿಂದ ಮಾಡಿಸ ಬೇಕಾದ ಕ್ರಮಗಳ ಮಾಹಿತಿ.
‘ಇಲ್ಲಿ ನಮ್ಮ ಸ್ನೇಹಿತರೊಬ್ಬರು ಹರಿಕಥೆ ಹೇಳುವುದು ಅಗತ್ಯವಿಲ್ಲ, ಕಿವಿಗೆ ಚೆಂಡು ಹೂ ಇಡುವುದು ಬೇಕಿಲ್ಲ. ಪಾಯಿಂಟ್ ಪಾಯಿಂಟ್ ಉತ್ತರ ಅಷ್ಟೆ, ಸಾರ್ ಮೊದಲೇ ಹೇಳಿದರೆ ಎಲ್ಲವನ್ನೂ ತರುತ್ತಿದ್ದೆವು, ಈಗ ತಂದಿಲ್ಲ ಎನ್ನುವ ಸಿದ್ಧ ಉತ್ತರ ಬೇಕಿಲ್ಲ. ದಯವಿಟ್ಟು ನಕ್ಷೆ ಮತ್ತು ಡಾಟಾ ದೊಂದಿಗೆ ಸಭೆಗೆ ಹಾಜರಾಗುವುದು ಸೂಕ್ತ ಸ್ವಾಮಿ’