21st November 2024
Share

ದಿನಾಂಕ:29.08.2021 ರಂದು ಶ್ರೀ ಜಿ.ಎಸ್.ಬಸವರಾಜ್ ರವರು ನಡೆಸಿದ ಪತ್ರಿಕಾ ಘೋಷ್ಠಿಯಲ್ಲಿ ಶ್ರೀ ಗುರುಸಿದ್ದಪ್ಪ, ಶ್ರೀ ಕುಂದರನಹಳ್ಳಿ ರಮೇಶ್ ಶ್ರೀ ಶಿವಪ್ರಸಾದ್, ಶ್ರೀ ನಾಗಣ್ಣ, ಶ್ರೀ ವೀರಭದ್ರಯ್ಯ, ಶ್ರೀ ಹೊನ್ನೇಶ್ ಕುಮಾರ್, ಕಾಟೇನಹಳ್ಳಿ ಕುಮಾರ್, ಶ್ರೀ ಬಂಡಿಹಳ್ಳಿ ಚಂದ್ರಮೌಳಿ ಶ್ರೀ ಉಮಾಶಂಕರ್, ಶ್ರೀ ಕೊಪ್ಪಳ್ ನಾಗರಾಜ್, ಇನ್ನೂ ಮುಂತಾದವರು ಇದ್ದರು.

TUMAKURU:SHAKTHI PEETA FOUNDATION

  ನನ್ನ ಹಲವಾರು ವರ್ಷಗಳ ಕನಸಿನ ಯೋಜನೆಯಾದ ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆ ಮಂಜೂರಾತಿಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಣ್ಣ ನೀರಾವರಿ ಇಲಾಖೆಯಿಂದ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಯಲ್ಲಿ ತುಮಕೂರು ಜಿಲ್ಲೆಯ ಎಲ್ಲಾ ಗ್ರಾಮಗಳ ಕೆರೆ-ಕಟ್ಟೆಗಳು ಸೇರ್ಪಡೆ ಮಾಡಲಾಗಿದೆಯೇ  ಎಂದು ಪರಿಶೀಲನೆ ನಡೆಸಲು ನಾಳೆ(ದಿನಾಂಕ:30.08.2021) ರಂದು ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್‍ಗಳ ಸಭೆ ಕರೆಯಲಾಗಿದೆ.

 ತುಮಕೂರು ಜಿಲ್ಲೆಯ ಪ್ರತಿಯೊಂದು ಗ್ರಾಮಗಳ ಪ್ರತಿ ಮನೆ, ಮನೆಗೂ ಕುಡಿಯುವ ನಲ್ಲಿ ನೀರಿನ ಸಂಪರ್ಕ ಮಾಡಲು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪ್ರತಿಯೊಂದು ಗ್ರಾಮದ ‘ವಿಲೇಜ್ ಆಕ್ಷನ್ ಪ್ಲಾನ್’ ಮಾಡಲು ಈಗಾಗಲೇ ಜಿಲ್ಲೆಯ 330 ಗ್ರಾಮ ಪಂಚಾಯತ್ ಗಳಿಗೂ ಖಡಕ್ ಆಗಿ ಸೂಚಿಸಲಾಗಿದೆ. ಇದೇ ಮಾದರಿಯಲ್ಲಿ ಜಿಲ್ಲೆಯ 11 ನಗರ ಸ್ಥಳೀಯ ಸಂಸ್ಥೆಗಳಿಗೂ ಸೂಚಿಸಲಾಗಿದೆ. ಈ ಸಂಭಂದ ಪ್ರತ್ಯೇಕವಾಗಿ ಎರಡು ದಿಶಾ ಸಮಿತಿ ಸಭೆ ನಡೆಸಿ ಕಾಲಮಿತಿ(24.08.2021) ನೀಡಲಾಗಿತ್ತು.

ಎಲ್ಲಾ 341 ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಗ್ರಾಮಗಳ ವಾಟರ್ ಆಡಿಟ್-ವಾಟರ್ ಬಡ್ಜೆಟ್- ವಾಟರ್ ಸ್ಟ್ರಾಟಜಿ’ ಮಾಹಿತಿ ಸಹಿತ ಮಾಡಿ ನಕ್ಷೆಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲು ಸೂಚಿಸಲಾಗಿದೆ. ನಾನು ಜಿಲ್ಲೆಯ ಹಲವಾರು ಸ್ಥಳೀಯ ಸಂಸ್ಥೆಗಳಿಗೆ   ಬೇಟಿ ನೀಡಿ ತಪಾಸಣೆ ಮಾಡಲು ನಿರ್ಧರಿಸಿದ್ದೇನೆ.

 ಯಾವ ಸ್ಥಳೀಯ ಸಂಸ್ಥೆ ಜಿಐಎಸ್ ಆಧಾರಿತ ನಕ್ಷೆ ಅಥವಾ ಕೈಬರಹದ ನಕ್ಷೆಗಳನ್ನು ಪ್ರಕಟಿಸಿಲ್ಲವೋ ಅಂಥಹ ಸ್ಥಳೀಯ ಸಂಸ್ಥೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಉನ್ನತ ಅಧಿಕಾರಿಗಳಿಗೆ ಶೀಫಾರಸ್ಸು ಮಾಡಲಾಗುವುದು.

ಈಗಾಗಲೇ ಸಣ್ಣ ನೀರಾವರಿ ಇಲಾಖೆಯಿಂದ ತುಮಕೂರು ಜಿಲ್ಲೆಗೆ ಹೇಮಾವತಿ, ಎತ್ತಿನಹೊಳೆ, ಭಧ್ರಾ ಮೇಲ್ಧಂಡೆ ಮತ್ತು ತುಂಗಾ-ಭಧ್ರಾ ನೀರಿನ ‘ಅಲೋಕೇಷನ್ ಅನ್ನು ಜಿಲ್ಲೆಯ ಯಾವ ಗ್ರಾಮಗಳಿಗೆ ಮಾಡಲಾಗಿದೆ’ ಎಂಬ ಮಾಹಿತಿಯನ್ನು ಸಂಗ್ರಹ ಮಾಡಿಸಲಾಗಿದೆ. ಉಳಿದ ಗ್ರಾಮಗಳಿಗೆ ‘ಕುಮಾರಧಾರ ನದಿ ನೀರಿನ ಯೋಜನೆಯಿಂದ ಅಲೋಕೇಷನ್ ಮಾಡಲು ಡಿಮ್ಯಾಂಡ್ ಸರ್ವೇ’ ಮಾಡಲು ಸಹ ಇಂಜಿನಿಯರ್ ಗಳಿಗೆ ಸೂಚಿಸಲಾಗಿದೆ.

ಕುಡಿಯುವ ನೀರಿಗಾಗಿ ಈಗಾಗಲೇ ಮಾಡಿರುವ ಬಹುಗ್ರಾಮಗಳ ಯೋಜನೆಗಳ ಸಾಧಕ-ಭಾಧಕಗಳ ಬಗ್ಗೆಯೂ ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ. ದಿನಾಂಕ:21.10.2019 ರಿಂದ  ಇಲ್ಲಿಯವರೆಗೂ ನಡೆದ ಪ್ರತಿಯೊಂದು ದಿಶಾ ಸಮಿತಿ ಸಭೆಯಲ್ಲೂ ಪ್ರಗತಿ ಪರಿಶೀಲನೆ ಮಾಡಲಾಗಿದೆ.

ಇನ್ನೂ ಮುಂದೆ ಯಾವ ಅಧಿಕಾರಿ ಜಿಐಎಸ್ ಆಧಾರಿತ ಮಾಹಿತಿ ಸಂಗ್ರಹ ಮಾಡಿಲ್ಲವೋ ಅಥವಾ ದಿಶಾ ಸಮಿತಿ ನಿರ್ಣಯದ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲವೋ ಅಂತಹ ಅಧಿಕಾರಿಗಳ ಮೇಲೆ ನಿಯಮ ಪ್ರಕಾರ ಕೈಗೊಳ್ಳದೆ ವಿಧಿಯಿಲ್ಲ.

  ತುಮಕೂರು ಜಿಲ್ಲೆಯ ದಿಶಾ ಸಮಿತಿಯಲ್ಲಿ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಿ, ರಾಜ್ಯ ಜಲಸಂಪನ್ಮೂಲ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಒಂದು ಸಭೆ, ಜಲಸಂಪನ್ಮೂಲ  ಸಚಿವರ ಅಧ್ಯಕ್ಷತೆಯಲ್ಲಿ ಒಂದು ಸಭೆ, ಮುಖ್ಯ ಮಂತ್ರಿಯವರಿಂದ ಪ್ರಧಾನಿಯವರಿಗೆ ಮೂರು ಪತ್ರ ಬರೆಸಿದ ಫಲವಾಗಿ ಕೇಂದ್ರ ಸರ್ಕಾರದ  NATIONAL INFRASTRUCURE PIPE LINE(NIP) 2019-20 TO 2024-25ಪೋರ್ಟಲ್ ನಲ್ಲಿ ಸೇರ್ಪಡೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.

 ಪ್ರಸ್ತುತ ಕೇಂದ್ರ ಸರ್ಕಾರ  NATIONAL INFRASTRUCURE PIPE LINE(NIP) 2019-20 TO 2024-25 ಲಾಂಚ್ ಮಾಡಿರುವ ಯೋಜನೆಯಡಿಯಲ್ಲಿ, ರಾಜ್ಯದ ಯಾವ ಯಾವ ಯೋಜನೆಗಳು ಸೇರ್ಪಡೆಯಾಗಿವೆ ಎಂಬ ಬಗ್ಗೆ ಪರಿಶೀಲನೆ ನಡೆಸಲು ಸಭೆ ಕರೆಯಲು ಜಲಸಂಪನ್ಮೂಲ ಸಚಿವರಾದ ಶ್ರೀ ಗೋವಿಂದ ಕಾರಜೋಳರವರೊಂದಿಗೆ ಸಮಾಲೋಚನೆ ನಡೆಸಲಾಗಿದೆ.

ಈ ಹಿನ್ನಲೆಯಲ್ಲಿ ನಾಳೆ(ದಿನಾಂಕ:30.08.2021) ರಾಜ್ಯದ ನದಿ ಜೋಡಣೆ ನೋಡೆಲ್ ಆಫೀಸರ್ ಜೊತೆ ಸಮಾಲೋಚನೆ ಸಭೆ ನಡೆಸಲಾಗುವುದು. ನಂತರ ನಿಖರವಾದ ಮಾಹಿತಿಯೊಂದಿಗೆ ದೆಹಲಿಗೆ ತೆರಳಿ ತುಮಕೂರು ಜಿಲ್ಲೆಯ ಮತ್ತು ರಾಜ್ಯದ ನೀರಾವರಿ ಯೋಜನೆಗಳ ಕಡತಗಳ ಅನುಸರಣೆ ಮಾಡಲಾಗುವುದು. ಈಗಲೂ ಪ್ರತಿ ದಿವಸವೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳ ಜೊತೆ ನಿಕಟ ಸಂಪರ್ಕದಲ್ಲಿದ್ದೇನೆ.

ರಾಜ್ಯದಲ್ಲಿನ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿಯವರು ಸ್ವತಃ ನೀರಾವರಿ ತಜ್ಞರಾಗಿದ್ದಾರೆ. ಜಲ ಸಂಪನ್ಮೂಲ ಸಚಿವರಾದ ಶ್ರೀ ಗೋವಿಂದ ಕಾರಜೋಳರವರು ಸಹ ಏನಾದರೂ ಸಾಧನೆ ಮಾಡಲೇ ಬೇಕು ಎಂಬ ಛಲ ಹೊಂದಿದ್ದಾರೆ.

ಸಣ್ಣ ನೀರಾವರಿ ಇಲಾಖೆ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರು ಸಹ ವಿಶೇಷ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪನವರು ಸಹ 2024 ರೊಳಗೆ ರಾಜ್ಯದ ಪ್ರತಿಯೊಂದು ಮನೆಗೂ ನಲ್ಲಿ ನೀರು ಯೋಜನೆ ಪೂರ್ಣಗೊಳಿಸಲೇ ಬೇಕು ಎಂಬ ದೃಢ ನಿರ್ಧಾರ ಮಾಡಿದ್ದಾರೆ.

ಇವರೆಲ್ಲರ ಸಹಕಾರ ಮತ್ತು ಕೇಂದ್ರವನ್ನು ಪ್ರತಿನಿಧಿಸುವ ರಾಜ್ಯದ ಎಲ್ಲಾ ಸಚಿವರ ಸಹಕಾರದಿಂದ, ತುಮಕೂರು ಜಿಲ್ಲೆ ಮತ್ತು ರಾಜ್ಯದ ನದಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಅತಿ ಹೆಚ್ಚಿನ ಅನುದಾನ ಪಡೆಯಲು ಶ್ರಮಿಸಲಾಗುವುದು. ಮುಂದಿನ ಒಂದೆರಡು ತಿಂಗಳಲ್ಲಿ ಸ್ಪಷ್ಟ ರೂಪುರೇಷೆ ದೊರೆಯಲಿದೆ.

ಸಾರ್ವಜನಿಕರೇ ಸಹಕರಿಸಿ.

ತುಮಕೂರು ಜಿಲ್ಲೆಯ ನೀರಾವರಿ ಆಸಕ್ತರು, ಸಂಘಸಂಸ್ಥೆಗಳ ಪದಾಧಿಕಾರಿಗಳು, ತಮ್ಮ ತಮ್ಮ ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ, ಜಿಐಎಸ್ ಆಧಾರಿತ ನಕ್ಷೆ ಪ್ರಕಟಣೆ ಮಾಡಿದ್ದಾರೆಯೇ, ಎಲ್ಲಾ ಮಾಹಿತಿಗಳು ಸರಿಯಾಗಿ ಇವೆಯೇ ಎಂಬ ಬಗ್ಗೆ ಖಚಿತ ಪಡಿಸಿಕೊಳ್ಳುವ ಮೂಲಕ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಕನಸಿನ ಯೋಜನೆಗಳ ಅನುಷ್ಠಾನಕ್ಕೆ ಸಹಕರಿಸಲು ಕರೆ ನೀಡಲಾಗಿದೆ.

(ಜಿ.ಎಸ್.ಬಸವರಾಜ್)

ತುಮಕೂರು ಲೋಕಸಭಾ ಸದಸ್ಯ, ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಹಾಗೂ ಕೇಂದ್ರ ಜಲಶಕ್ತಿ ಸಮಿತಿ ಸದಸ್ಯ.