TUMAKURU:SHAKTHIPEETA FOUNDATION
ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ನಿನ್ನೆ(30.08.2021) ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಗಳ ಸಭೆ ಕರೆದು ತುಮಕೂರು ಜಿಲ್ಲೆಯ 6 ತಾಲ್ಲೂಕುವಾರು ಅಟಲ್ ಭೂಜಲ್ ಯೋಜನೆಯಡಿ ‘ವಾಟರ್ ಆಡಿಟ್-ವಾಟರ್ ಬಡ್ಜೆಟ್-ವಾಟರ್ ಸ್ಟ್ರಾಟಜಿ’ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡರು.
ನಾನು ರಾಜ್ಯಮಟ್ಟದ ದಿಶಾ ಸಮಿತಿಯ ಸದಸ್ಯನಾಗಿ ಈ ಸಭೆಯಲ್ಲಿ ಭಾಗವಹಿಸಿದ್ದೆ. ಅಟಲ್ ಭೂಜಲ್ ಯೋಜನೆಯ ನಂತರ ಏನು ಮಾಡಬೇಕು ಎಂಬ ಬಗ್ಗೆ ತಾಲ್ಲೂಕುವಾರು ಚರ್ಚೆ ಮಾಡುತ್ತಾ ಬಂದರು ಸಂಸದರು. ನಾನು ಗಮನಿಸುತ್ತಲೇ ಇದ್ದೆ.
ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಕೊರಟಗೆರೆ, ಮಧುಗಿರಿ, ಶಿರಾ, ತಿಪಟೂರು ಮತ್ತು ತುಮಕೂರು ತಾಲ್ಲೂಕಿನ 199 ಗ್ರಾಮ ಪಂಚಾಯಿತಿಗಳು ಅಟಲ್ ಭೂಜಲ್ ಯೋಜನೆ ವ್ಯಾಪ್ತಿಗೆ ಬರಲಿವೆ.
ಉಳಿದ ಗುಬ್ಬಿ, ಕುಣಿಗಲ್, ಪಾವಗಡ ಮತ್ತು ತುರುವೇಕರೆ ನಾಲ್ಕು ತಾಲ್ಲೂಕುಗಳ 131 ಗ್ರಾಮ ಪಂಚಾಯಿತಿಗಳನ್ನು ಜಲಾಮೃತ ಯೋಜನೆಯಡಿ ‘ವಾಟರ್ ಆಡಿಟ್-ವಾಟರ್ ಬಡ್ಜೆಟ್-ವಾಟರ್ ಸ್ಟ್ರಾಟಜಿ’ ಮಾಡಲು ದಿಶಾ ಸಮಿತಿಯಲ್ಲಿ ಈಗಾಗಲೇ ಸೂಚಿಸಲಾಗಿತ್ತು. ನಾನು ಗಮನಿಸದ ಹಾಗೆ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಸಭೆ ಮಾಡಿ, ಭಾಷಣ ಮಾಡಿ, ಸುಮ್ಮನೆ ಇರುವ ಹಾಗೆ ಕಾಣಿಸುತ್ತಿದೆ. ಪೂರ್ಣವಾದ ಮಾಹಿತಿ ಪಡೆದ ನಂತರವೇ ಮಾತನಾಡಲಿದ್ದೇನೆ.
ಕೇಂದ್ರ ಸರ್ಕಾರಕ್ಕೆ ಸಣ್ಣ ನೀರಾವರಿ ಇಲಾಖೆಯಿಂದ 10 ತಾಲ್ಲೂಕಗಳ ವ್ಯಾಪ್ತಿಗೂ ಪ್ರಸ್ತಾವನೆ ಕಳುಹಿಸಲು ಸಂಸದರು ಖಡಕ್ ಆಗಿ ಸೂಚಿಸಿದರು. ಏಕೆಂದರೆ ಈಗಾಗಲೇ ತುಮಕೂರು ಜಿಲ್ಲೆಯನ್ನು ಫೈಲಟ್ ಯೋಜನೆಯಾಗಿ ಕೈಗೊಳ್ಳಿ ಎಂದು ಮಾನ್ಯ ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರಿಗೆ ಪತ್ರ ಬರೆದಿದ್ದಾರೆ. ಜೊತೆಗೆ ಶ್ರೀ ಗಜೇಂದ್ರಸಿಂಗ್ ಶೇಖಾವತ್ ರವರು ಪ್ರಸ್ತಾವನೆ ಕಳುಹಿಸಲು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಸೆಂಟ್ರಲ್ ವಾಟರ್ ಕಮಿಷನ್ ಅಧಿಕಾರಿಗಳು ಹತ್ತಾರು ಭಾರಿ ರಾಜ್ಯ ಸರ್ಕಾರಕ್ಕೆ ಪತ್ರಬರೆದಿದ್ದಾರೆ.
ಆದರೇ ಇದೂವರೆಗೂ ಪ್ರಸ್ತಾವನೆ ಕಳುಹಿಸಿರಲಿಲ್ಲ. ಪ್ರಸ್ತುತ ಸಣ್ಣ ನೀರಾವರಿ ಇಲಾಖೆ ಜಿಲ್ಲೆಯ ಬಹುತೇಕ ಭಾಗಗಳಿಗೆ ಪ್ರಸ್ತಾವನೆ ಕಳುಹಿಸಿರುವ ಮಾಹಿತಿ ತಿಳಿಯಿತು.ಜೊತೆಗೆ ಜಿಲ್ಲೆಯ ಉಳಿದ ಭಾಗಗಳ ಪ್ರಸ್ತಾವನೆ ಸಿದ್ಧಪಡಿಸಲು ಕಾರ್ಯದರ್ಶಿ ಶ್ರೀ ಮೃತ್ಯುಂಜಯಸ್ವಾಮಿರವರ ತಂಡ ಸೈನಿಕರಂತೆ ಸಜ್ಜಾಗಿದೆ.
‘ತಾಲ್ಲೂಕುವಾರುಗಮನಿಸಿದಾಗ ಚಿಕ್ಕನಾಯಕನಹಳ್ಳಿ ಶ್ರೀ ಜೆ.ಸಿ.ಮಾಧುಸ್ವಾಮಿ ಹೆಡ್ ಮೇಸ್ಟ್ರು ಮಾಡಿಸಿದ ಪ್ರಸ್ತಾವನೆ ನಿಜಕ್ಕೂ ತಲೆದೂಗುವಂತಿದೆ. ತಾಲ್ಲೂಕಿನ ಎಲ್ಲಾ ಕೆರೆ-ಕಟ್ಟೆಗಳಿಗೆ ನದಿ ನೀರು, ಬೃಹತ್ ಕರಾಬು ಹಳ್ಳಗಳ ಅಭಿವೃದ್ಧಿ, ಯಾವುದೇ ವಾಟರ್ ಬಾಡಿ ಇಲ್ಲದ ಗ್ರಾಮಗಳಿಗೆ ಯಾವುದಾದರೂ ಒಂದು ವಾಟರ್ ಬಾಡಿ, ಹೀಗೆ ಸಂಸದರು ಏನೇನು ಹೇಳಿದರೋ ಅವರು ಎಲ್ಲವನ್ನು ಈಗಾಗಲೇ ಮಾಡಿಸಿದ್ದಾರೆ’.
ಇದೇ ಮಾದರಿ 10 ತಾಲ್ಲೂಕುಗಳಿಗೂ ಆಗಲೇ ಬೇಕು, ಕೇಂದ್ರ ಸರ್ಕಾರಕ್ಕೆ ಕಳುಹಿಸಲೇ ಬೇಕು, ‘ಮೋದಿಯವರ ಮನೆ ಬಾಗಿಲಲ್ಲಿ ಮಲಗಿ ಆದರೂ ಯೋಜನೆ ಮಂಜೂರು ಮಾಡಿಸುತ್ತೇನೆ ಎಂಬ ಘೋಷಣೆ ಜಿ.ಎಸ್.ಬಸವರಾಜ್ ರವರದ್ದು’.
ಯಾವುದೇ ನದಿ ನೀರು ಆಗಲಿ ಅಲೋಕೇಷನ್ ಪಡೆಯೋಣ, ಇರುವ ನದಿ ನೀರಿನ ರಿಅಲೋಕೇಷನ್ ಮಾಡಿಸೋಣ, ರಾಜ್ಯ ಸರ್ಕಾರ ತಗಲುವ ವೆಚ್ಚದಲ್ಲಿ ಶೇ 40% ಪಾವತಿಸುವ ಖಾತರಿ ನೀಡಲಿ. ಶೇ 40% ನದಿ ನೀರಿನ ಅಲೋಕೇಷನ್ ಮಾಡಿಸಿ, ನಂತರ ಹೊಸ ಯೋಜನೆ ಆದಾಗ ಶೇ 100% ತುಂಬಿಸಲು ಪ್ರಾವಿಷನ್ ಮಾಡಿಕೊಳ್ಳೋಣ. ಮಳೆ ನೀರನ್ನು ಇಡಿದು ಇಟ್ಟು ಕೊಳ್ಳುವ ಎಲ್ಲಾ ಹರಸಾಹಸ ಮಾಡೋಣ.
ಎಲ್ಲಿ ಮಳೆ ನೀರಿನಿಂದ ತುಂಬುವುದಿಲ್ಲವೋ ಅಂಥಹ ಕೆರೆ-ಕಟ್ಟೆಗಳಿಗೆ ಮಾತ್ರ ನದಿ ನೀರು ಬಿಡುವ ಪದ್ಧತಿ ಜಾರಿ ಮಾಡೋಣ, ಆದರೂ ತುಮಕೂರು ಜಿಲ್ಲೆಯ ಎಲ್ಲಾ ಗ್ರಾಮಗಳಿಗೂ ನದಿ ನೀರಿನ ಸಂಪರ್ಕದ ಪೈಪ್ ಲೈನ್ ಇರಲೇ ಬೇಕು. ಆಯಾ ಊರಿನಲ್ಲಿ ಕೆರೆಯಾಗಲಿ, ಕಟ್ಟೆಯಾಗಲಿ, ಪಿಕ್ ಅಫ್ ಆಗಲಿ ಮಳೆ ನೀರು ಬರದಿದ್ದಾಗ ನದಿ ನೀರಿನಿಂದ ತುಂಬಿಸುವ ವ್ಯವಸ್ಥೆ ಇರಲೇ ಬೇಕು.
ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ, ಮಳೆ ನೀರನ್ನು ಸಂಪೂರ್ಣವಾಗಿ ಹಿಡಿದು ಇಟ್ಟು ಕೊಳ್ಳುವ ಪ್ರಯತ್ನಕ್ಕೆ ಭಧ್ರಾ ಬುನಾದಿ ಹಾಕಲೇ ಬೇಕು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಅಟಲ್ ಭೂಜಲ್ ಯೋಜನೆ, ಜಲಾಮೃತ ಯೋಜನೆ ನಂತರ, ಎಲ್ಲಾ ಯೋಜನೆಗಳ ಜಾರಿಗೆ ಪ್ರಾಯೋಗಿಕ ಪ್ರಯತ್ನ.
ಇದೂ ತುಮಕೂರು ಜಿಲ್ಲೆಯಲ್ಲಿ ಮೊದಲನೇ ಹಂತದಲ್ಲಿ ಆಗಲೇ ಬೇಕು. ಹೇಮಾವತಿ, ಭಧ್ರಾಮೇಲ್ದಂಡೆ, ಎತ್ತಿನಹೊಳೆ, ತುಂಗಾಭಧ್ರಾ ಮತ್ತು ಪುನರ್ ಬಳಕೆ ಕೊಳಚೆ ನೀರು, ಮಳೆ ನೀರು ಎಲ್ಲವನ್ನು ಹಂಚಿಕೆ ಮಾಡಿ, ನಂತರದ ನೀರಿಗಾಗಿ ಕುಮಾರಧಾರ ಯೋಜನೆಗೆ ಬೆನ್ನು ಹತ್ತಲೇ ಬೇಕು.
ಎರಡನೇ ಹಂತದಲ್ಲಿ ತುಮಕೂರು ಜಿಲ್ಲೆಯ ಎಲ್ಲಾ ಕೃಷಿ ಮತ್ತು ತೋಟಗಾರಿಕಾ ಭೂಮಿಗೆ ಮೈಕ್ರೋ ಇರ್ರಿಗೇಷನ್ ಪದ್ಧತಿಯಡಿ, ಮಳೆ ಕೈಕೊಟ್ಟಾಗ ಮಾತ್ರ ಬಳಸಿಕೊಳ್ಳಲು ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲೇ ಬೇಕು.
ಜಲಜೀವನ್ ಮಿಷನ್ ಅಡಿ ಮೊದಲನೇ ಹಂತದಲ್ಲಿ ಹೇಮಾವತಿ, ತುಂಗ-ಭಧ್ರಾ ನದಿ ನೀರಿನ ಯೋಜನೆ ಮತ್ತು ಅಂತರ್ಜಲ ಚೆನ್ನಾಗಿ ಇರುವ ಕಡೆ ಪ್ರತಿಯೊಂದು ಗ್ರಾಮದಲ್ಲೂ ಜಾರಿ ಮಾಡಬೇಕು. ನಂತರ ಎಲ್ಲಾ ಗ್ರಾಮಗಳಿಗೂ ಯೋಜನೆ ರೂಪಿಸಿ, ಬಂದಷ್ಟು ಬೋರ್ ವೆಲ್ ನೀರಿನಲ್ಲಿ ನೀಡುತ್ತಿರಬೇಕು. ಎತ್ತಿನಹೊಳೆ ಮತ್ತು ಭಧ್ರಾ ಮೇಲ್ದಂಡೆ ಯೋಜನೆಯ ವ್ಯಾಪ್ತಿಯಲ್ಲಿ ಯೋಜನೆಯಡಿ ನೀರು ಬಂದಾಗ ಸಂಪರ್ಕ ಮಾಡುವ ವ್ಯವಸ್ಥೆ ಮಾಡಬೇಕು.
ಕುಮಾರ ಧಾರ, ಶರಾವತಿ, ಅಘಿನಾಷಿನಿ, ನೇತ್ರಾವತಿ ಹೀಗೆ ಬೇರೆ ಮೂಲಗಳ ನದಿ ನೀರಿನ ಯೋಜನೆಗೆ ಜಲಜೀವನ್ ಮಿಷನ್ ಕಾರಿಡಾರ್ ಆಗಿ ಪರಿವರ್ತಿಸುವ ಯೋಜನೆ ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಸ ಬೇಕು.
‘ಈಗಾಗಲೇಭಧ್ರಾ ಮೇಲ್ದಂಡೆ ಯೋಜನೆ ಎನ್.ಪಿ.ಪಿ ಯೋಜನೆಯಾಗುವ ಹಂತಕ್ಕೆ ಬಂದಿದೆ. ಎತ್ತಿನಹೊಳೆ ಯೋಜನೆ ಎನ್.ಪಿ.ಪಿ ಆಗುವ ಆರಂಭಿಕ ಹಂತ ಶುರುವಾಗಿದೆ. ಎನ್.ಐ.ಪಿ ಯೋಜನೆಯಡಿ ಹೊಸ ಪ್ರಸ್ತಾವನೆ ಸಿದ್ಧಪಡಿಸಲು ಕಸರತ್ತು ಆರಂಭವಾಗಿದೆ.’
ಈಗ ಬೇಕಾಗಿರುವುದು ಪಕ್ಷಾತೀತವಾಗಿ ಎಲ್ಲಾ ಚುನಾಯಿತ ಜನಪ್ರತಿನಿಧಿಗಳು ಒಗ್ಗಟ್ಟಾಗಿ ಒಮ್ಮತದ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸದರೆ ಸಾಕು. ಉಳಿದ ಕೆಲಸವನ್ನು ಶ್ರೀ ಜಿ.ಎಸ್.ಬಸವರಾಜ್ ರವರು ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ವೇದಿಕೆ ಸಿದ್ಧಮಾಡಿದ್ದಾರೆ.
‘ಪೂರಕವಾಗಿಮಾಧುಸ್ವಾಮಿರವರು ಬ್ಯಾಟ್ ಹಿಡಿದಿದ್ದಾರೆ, ಅದು ಸಂಪೂರ್ಣ ಜಿಲ್ಲೆಗೆ ಆಗಬೇಕು ಅಷ್ಟೆ. ಸಂಸದರು ಕಲಿತಿರುವ ಎಲ್ಲಾ ಪಟ್ಟುಗಳನ್ನು ಹಾಕುತ್ತಾರೆ. ಅವರ ಜಗ-ಭಂಡಾಟವನ್ನು ಬೇರೆ ಯಾವ ರಾಜಕಾರಣಿಗಳು ಮಾಡಲು ಸಾದ್ಯಾವಿಲ್ಲ. ಯಾವುದು ಆಗುವುದಿಲ್ಲಾ ಎನ್ನುತ್ತಾರೋ ಅದನ್ನು ಮಾಡುವುದೇ ಬಸವರಾಜ್ ರವರ ಗುರಿ. ಹಿಂದೆಯೂ ಮಾಡಿದ್ದಾರೆ, ಈಗಲೂ ಮಾಡುತ್ತಿದ್ದಾರೆ, ಮುಂದೆಯೂ ಮಾಡುತ್ತಾರೆ’.
ಕೈಗಾರಿಕಾ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಜಲಸಂಪನ್ಮೂಲ ಇಲಾಖೆ, ಕೃಷಿ ಇಲಾಖೆ, ಅರಣ್ಯ ಇಲಾಖೆ, ತೋಟಗಾರಿಕಾ ಇಲಾಖೆ, ರೇಷ್ಮೆ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆ. ಅವರವರ ಇಲಾಖೆಯ ಯೋಜನೆಗಳಿಗೆ ಒಂದು ಲೈನ್ ಎಸ್ಟಿಮೇಟ್ ಮಾಡಿ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಸಜ್ಜಾಗಿ ಶೇಕಡ 33 ರಿಂದ 40 % ಹಣವನ್ನು ರಾಜ್ಯ ಸರ್ಕಾರ ಭರಿಸುವ ಒಂದು ಖಾತರಿ ಬೇಕು.
ನದಿ ನೀರಿನ ರಿಅಲೋಕೇಷನ್ ಆಗಲೇ ಬೇಕು. ತುಮಕೂರು ಜಿಲ್ಲೆಯ ಸಮಗ್ರ ನೀರಾವರಿ ಯೋಜನೆಯ ಪ್ರಸ್ತಾವನೆಗೆ ಸಣ್ಣ ನೀರಾವರಿ ಇಲಾಖೆ ನೋಡೆಲ್ ಇಲಾಖೆ ಆಗುವುದು ಉತ್ತಮ.
“ಜಿಲ್ಲೆಯ ಎಲ್ಲಾ ಶಾಸಕರು ಚುರುಕಾಗಬೇಕು. ಮರೆತು ಮಲಗಿದರೆ ಅಷ್ಟೆ”.
‘ಪ್ರಸ್ತಾವನೆ ಸಿದ್ಧಪಡಿಸಲು ಮಾಧುಸ್ವಾಮಿರವರು ಹೆಡ್ ಮಾಸ್ಟರ್ ಆದರೇ, ಜಿ.ಎಸ್.ಬಸವರಾಜ್‍ರವರು ನೀರಿನ ಚೀಫ್ ಕಮ್ಯಾಂಡರ್ ಆಗಲಿದ್ದಾರೆ.ನಾನಂತೂ ಕಡತಗಳ ಅನುಸರಣೆಗಾಗಿ ಅಟೆಂಡರ್ ಆಗಿ ಕೆಲಸ ಮಾಡಲು ಸಿದ್ಧ, ಯಾವ ಕಚೇರಿಗೆ ಸಂಸದರ ಅಗತ್ಯವಿದೆಯೋ ಅಲ್ಲಿಗೆ ಕರೆದುಕೊಂಡು ಹೋಗಿ, ಸಚಿವರು ಮತ್ತು ಅಧಿಕಾರಿಗಳು ಬೇಜಾರಾಗಿ ಕೊನೆಗೆ ಜೈ ಎನ್ನಲೇ ಬೇಕು. ಯಡಿಯೂರಪ್ಪನವರು ರೂ 550 ಕೋಟಿ ಹೇಮಾವತಿ ನಾಲಾ ಆಧುನೀಕರಣ ಯೋಜನೆಗೆ ಜೈ ಎಂದ ಹಾಗೆ.’
ಇಂತಹ ಅನೇಕ ಮಾಡೆಲ್ ಜಿ.ಎಸ್.ಬಸವರಾಜ್ ರವರ ಅನುಭವದಲ್ಲಿ ಆಗಿದೆ. ಒಮ್ಮತದ ಪ್ರಸ್ತಾವನೆ ಕಳುಹಿಸುವುದು ಮಾಧುಸ್ವಾಮಿಯವ ಗುರಿ ಆಗಬೇಕಿದೆ.ಇದು ಸಂಸದರ ಜೀವಮಾನದ ಕನಸು, ನೋಡೋಣ?.