27th July 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ತಂಡ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ ಜಿಐಎಸ್ ಲೇಯರ್, ಕೈ ಬರಹದ ನಕ್ಷೆ, ಪ್ರಿಂಟೆಡ್ ನಕ್ಷೆ ಸಹಿತ, ಕೇಂದ್ರ ಸರ್ಕಾರಗಳ ಯೋಜನೆಗಳ  ಮಾಹಿತಿಗಳ ಸಮೀಕ್ಷೆ ಮಾಡಲಿದೆ ಎಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಘೋಶಿಸಿದ್ದಾರೆ.

ಪ್ರಜಾಪ್ರಭುತ್ವದ ಹಾದಿಯಲ್ಲಿ ನಮ್ಮ ರಾಜ್ಯ ಗ್ರಾಮಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ’ ಮಹತ್ವ ನೀಡಿದೆ.ಇದೊಂದು  ಸ್ಥಳೀಯ ಸರ್ಕಾರ, ಮಾಹಿತಿಗಳ ಕಣಜ, ಇವುಗಳ ಮೇಲ್ವಿಚಾರಣೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಆಯಾ ವಿಧಾನಸಭಾ ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹೀಗೆ ಎಲ್ಲರೂ ತಪಾಸಣೆ ಮಾಡಬಹುದು ಅಂದು ಕೊಂಡಿದ್ದೇನೆ. ಇದೇ ಮಾದರಿಯಲ್ಲಿ ಅಧಿಕಾರಿಗಳು ಸಹ ತಪಾಸಣೆ ಮಾಡಲು ಕಾನೂನಿನಲ್ಲಿ ಅವಕಾಶವಿದೆ.

ಕೇಂದ್ರ ಸರ್ಕಾರ ಲೋಕಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ದಿಶಾ ಸಮಿತಿ ರಚಿಸಿದೆ. ಸಮಿತಿಯ ಕೆಲಸ ಕೇಂದ್ರ ಸರ್ಕಾರದ ಯೋಜನೆಗಳ ಹಣ ಸದ್ಭಳಕೆ, ಕಾಲಮಿತಿ ಜಾರಿ, ದುರುಪಯೋಗ ಆಗದಂತೆ ತಡೆಗಟ್ಟುವುದು, ದುರೊಪಯೋಗ ಆಗಿದ್ದಲ್ಲಿ ತನಿಖೆಗೆ ಶಿಫಾರಸ್ಸು ಮಾಡುವುದು ಮತ್ತು ಹೋಸ ಯೋಜನೆಗಳ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸುವುದು.’

ದೇಶದ ಕೆಲವು ಲೋಕಸಭಾ ಸದಸ್ಯರಿಗೆ ಈ ಸಮಿತಿಯ ಮಹತ್ವವೇ ತಿಳಿದಿಲ್ಲ. ತುಮಕೂರು ಜಿಲ್ಲೆ ಒಂದು ವಿಶಿಷ್ಟ ರೀತಿಯಲ್ಲಿ ನಡೆಯುತ್ತಿದೆ. ಪ್ರಧಾನಿ ನರೇಂದ್ರಮೋದಿಯವರ ಕನಸಿನ ಡಿಜಿಟಲ್ ಇಂಡಿಯಾ’ ಯೋಜನೆಯ ಶೇ 100% ಬಳಕೆ ಸಾದ್ಯವೇ ಎಂಬ ತಪಸ್ಸುನ್ನು ಶ್ರೀ ಬಸವರಾಜ್ ರವರು ಮಾಡುತ್ತಿದ್ದಾರೆ. 

ಎಲ್ಲವೂ ಪಾರದರ್ಶಕವಾಗಿರಬೇಕು, ಬೆರಳ ತುದಿಯಲ್ಲಿ ಡಿಜಿಟಲ್ ಮಾಹಿತಿ ಲಭ್ಯವಾಗಬೇಕು, ಕೇಂದ್ರ ಸರ್ಕಾರದ ಯೋಜನೆಗಳ ಜಿಐಎಸ್ ಲೇಯರ್ ಸಹಿತಿ ಮಾಹಿತಿ ಲಭ್ಯವಾಗಬೇಕು ಎಂದು ದಿನಾಂಕ:21.09.2019 ರಿಂದ ಇಲ್ಲಿಯವರೆಗೂ ನಡೆದ ಎಲ್ಲಾ ದಿಶಾ ಸಭೆಗಳಲ್ಲಿ ಜಿಐಎಸ್ ಲೇಯರ್ ಪಾಠ ಮಾಡುತ್ತಾ ಬಂದಿದ್ದಾರೆ.

ಇವು ಏಕೆ ಅಗತ್ಯ ಎಂಬ ಬಗ್ಗೆ ಎರಡು ಲೈವ್ ಉದಾಹರಣೆ ಕೊಡಲೇ ಬೇಕಾಗಿದೆ.

1.ಮದಲೂರು ಕೆರೆ ವಿವಾದ

ತುಮಕೂರು ಜಿಲ್ಲೆಯ ಅಥವಾ ರಾಜ್ಯದ ಇಬ್ಬರು ಕಾನೂನು ಪಂಡಿತರ ಮಧ್ಯೆ ಮದಲೂರು ಕೆರೆಗೆ ಹೇಮಾವತಿ ನದಿ ನೀರಿನ ಅಲೋಕೇಷನ್ ಬೀದಿ ಕಾಳಗ ನಡೆಯುತ್ತಿದೆ.

ಇಬ್ಬರೂ ಕಾನೂನು ಪಂಡಿತರೇ, ಒಬ್ಬರಿಗಿಂತ ಒಬ್ಬರು ಬುದ್ದಿವಂತರೇ, ಒಬ್ಬರೂ ಶ್ರೀ ಟಿ.ಬಿ.ಜಯಚಂದ್ರರವರು ಮಾಜಿ ಕಾನೂನು ಮತ್ತು ಸಂಸದೀಯ ಸಚಿವರಾಗಿದ್ದರೆ, ಇನ್ನೊಬ್ಬರೂ ಶ್ರೀ ಜೆ.ಸಿ.ಮಾಧುಸ್ವಾಮಿರವರು ಹಾಲಿ ಕಾನೂನು ಮತ್ತು ಸಂಸದೀಯ ಸಚಿವರಾಗಿದ್ದರೆ,

ಶ್ರೀ ಜಿ.ಎಸ್.ಬಸವರಾಜ್ ರವರ ಪ್ರಕಾರ ‘ಮದಲೂರು ಕೆರೆ ಹೇಮಾವತಿ ಯೋಜನೆ’ ಎಂದು ಕ್ಲಿಕ್ ಮಾಡಿದರೆ ಎಲ್ಲಾ ಮಾಹಿತಿಗಳು ಜಿಐಎಸ್ ಲೇಯರ್ ಸಹಿತ, ಇತಿಹಾಸ ಸಹಿತ ಡಿಜಿಟಲ್ ಮಾಹಿತಿ ಲಭ್ಯವಾಗಬೇಕು.ಇಲ್ಲಿ ಯಾವುದೇ ಅಧಿಕಾರಿ ಇರಲಿ ಅಥವಾ ವರ್ಗಾವಣೆಯಾಗಲಿ ಮಾಹಿತಿ ಮಾತ್ರ ಪಕ್ಕಾ ದೊರೆಯಲಿದೆ.

ಆದರೇ ಗ್ರಾಮೀಣ ಮತ್ತು ಕುಡಿಯುವ ನೀರಿನ ಇಲಾಖೆ ಬಳಿ ಈ ಮಾಹಿತಿ ಇರಬೇಕಾಗಿತ್ತು. ಕಾರಣ ಹೇಮಾವತಿ ನದಿಯಿಂದ 0.891 ಎಂ.ಸಿ.ಎಂ.ಎಫ್.ಟಿ ಅಡಿ ನೀರು ಕಳ್ಳಂಬೆಳ್ಳ ಮತ್ತು ಶಿರಾ ಕೆರೆಗೆ ಅಲೋಕೇಷನ್ ಆಗಿತ್ತು. ಇದರಲ್ಲಿ ಹೆಚ್ಚುವರಿ ನೀರಿನ ಅಲೋಕೇಷನ್ ಅನ್ನು ಮದಲೂರು ಕೆರೆಗೆ ಬಳಸುತ್ತಿದ್ದಾರೆ. ಈ ಮಾಹಿತಿಯನ್ನು ಅಧಿಕಾರಿಗಳು ನೀಡದೇ ಇರುವುದರಿಂದ ಜೆ.ಸಿ.ಮಾಧುಸ್ವಾಮಿಯವರು ‘ನೀರು ಬಿಟ್ಟರೇ ಜೈಲಿಗೆ ಹೋಗಬೇಕಾಗುತ್ತದೆ’ ಎಂದು ಹೇಳಬೇಕಾಯಿತು ನೋಡಿ. ಅದೇ ಜಿಐಎಸ್ ಲೇಯರ್ ಇದ್ದರೇ ಈ ಸ್ಥಿತಿ ಬರುತ್ತಿರಲಿಲ್ಲ.

2.ಇಂಜಿನಿಯರ್ ಮೇಲೆ ಕ್ರಿಮಿನಲ್ ಮೊಕದ್ದಮೆ.

ಶಿರಾ ತಾಲ್ಲೂಕು ಮಾನಂಗಿಯ ತಾಂಡದ ಒಂದು ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಎರಡು ಇಲಾಖೆಯಿಂದ ಬಿಲ್ ಮಾಡಿದ್ದಾರೆ ಎಂದು, ಹೊಸದಾಗಿ ಬಂದು ಬಿಲ್ ಗೆ ಸಹಿ ಹಾಕಿದ ಎಇಇ ಮತ್ತು ಜೆಇ ಮೇಲೆ ‘ಕ್ರಿಮಿನಲ್ ಕೇಸು ಹಾಕಲು ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆ ಆದೇಶ ನೀಡಿದೆ’.

 ಇಲ್ಲಿ ಎಇಇ ಗೋಳು ಸಾರ್ ನಾನು ಬರುವ ಒಂದು ವರ್ಷದ ಮೊದಲೇ ಕಾಮಗಾರಿ ಮುಗಿದಿದೆ, ನನಗೆ ಇತಿಹಾಸ ಗೊತ್ತಿಲ್ಲ, ಹೋಗಿ ನೋಡಿದೆ ಕಾಮಗಾರಿ ನಡೆದಿತ್ತು ಬಿಲ್ ಗೆ ಸಹಿ ಹಾಕಿದೆ. ನಂತರ ಜನ ದೂರು ಕೊಟ್ಟಿದ್ದಾರೆ. ಎರಡು ಇಲಾಖೆಯಿಂದ ಹಣ ಬಿಡುಗಡೆಯಾಗಿದೆ. ನಾನು ಉಳಿದ ಹಣ ತಡೆ ಹಿಡಿದಿದ್ದೇನೆ. ಬಿಡುಗಡೆ ಆದ ಹಣ ಪಾವತಿಸಲು ಸೂಚಿಸಿದ್ದೇನೆ. ‘ಆದರೂ ಜೈಲಿಗೆ ಹೋಗಬೇಕಲ್ಲ ಸಾರ್’.

ಇಲ್ಲಿ ಜಿಐಎಸ್ ಲೇಯರ್ ಸಹಿತ, ಇತಿಹಾಸ ದಾಖಲಾಗಿದ್ದರೆ. ಆ ರಸ್ತೆ ಕ್ಲಿಕ್ ಮಾಡಿದ ತಕ್ಷಣ ಯಾವ ಅನುದಾನದಲ್ಲಿ ಯಾವ ದಿನಾಂಕ, ಯಾವ ಕೆಲಸ ನಡೆದಿದೆ ಎಂಬ ಮಾಹಿತಿ ಪಾರದರ್ಶಕವಾಗಿ ಕಣ್ಣಿಗೆ ಕಾಣುತ್ತಿತ್ತು. ಇಲ್ಲಿ ದುರುಪಯೋಗವೇ ನಡೆಯುತ್ತಿರಲಿಲ್ಲ.

ಈ ರೀತಿ ಎಷ್ಟೋ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ. ಈ ರೀತಿ ಕೊಳ್ಳೆ ಹೊಡೆಯಲು ಅವಕಾಶ ತಪ್ಪುವ ಜಿಐಎಸ್ ಲೇಯರ್ ಹೇಗೆ ಮಾಡುತ್ತಾರೆ ನಮ್ಮ ಅಧಿಕಾರಿಗಳು. ಅವರಿಗೆ ಬರುವ ಲಾಭಕ್ಕೆ ಅವರೇ ಕಡಿವಾಣ ಹಾಕಿ ಎಂದರೆ ಹೇಗೆ ಸಾಧ್ಯ? MODI ಯವರು ಅಲ್ಲ ಅವರ ತಾತ ಮುತ್ತಾತ  ಬಂದರೂ ಸಾಧ್ಯವಿಲ್ಲವೇನೋ ಎಂಬ ವಾತಾವಾರಣ ಸೃಷ್ಠಿಯಾಗಿದೆ’.

ತುಮಕೂರು ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮಾತ್ರ ನೋಡೇ ಬಿಡೋಣ ಒಂದು ಕೈ ಎಂಬ ಛಾಲೇಂಜ್ ಮಾಡಿದ್ದಾರೆ. ನನಗೂ ಅನ್ನಿಸುತ್ತಿದೆ ನಮ್ಮ ಹಣೆ ಬರಹ ಇಷ್ಟೆನಾ? ಎಂದು ಒಂದು ದಿವಸ ಪತ್ರಿಕಾ ಹೇಳಿಕೆ ನೀಡಿ ಸುಮ್ಮನಿರಬೇಕೋ ಅಥವಾ ‘2022 ಕ್ಕೆ ತುಮಕೂರು ಜಿಲ್ಲೆಯನ್ನು ಡಾಟಾ ಜಿಲ್ಲೆ ಎಂದು ಘೋಶಿಸಬೇಕೋ ನೋಡೋಣ’.

 ‘ಹಿನ್ನಲೆಯಲ್ಲಿ ಗ್ರಾಮಪಂಚಾಯಿತಿ ಮಟ್ಟದಲ್ಲೂ ತಪಾಸಣೆ ಮಾಡಲು ಸಜ್ಜಾಗಿದ್ದಾರೆ ನಮ್ಮ ಸಂಸದರು. ಹಾಗಾದರೇ ಶಾಸಕರುಗಳ ಪಾತ್ರ ಏನು? ಎಂಬ ಪ್ರಶ್ನೆ ಮತದಾರ ಪ್ರಭುಗಳು ಯೋಚಿಸಬೇಕಲ್ಲವೇ?’