27th July 2024
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರ  ದೇಶದಲ್ಲಿ 7 ಮೆಗಾ          ಇಂಡಸ್ಟ್ರಿಯಲ್ ಟೆಕ್ಸ್ ಟೈಲ್  ಪಾರ್ಕ್ ಸ್ಥಾಪನೆ  ಮಾಡಲು ಉದ್ದೇಶಿಸಿದೆ.       ಈ ಹಿನ್ನಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಒಂದು  ಪಾರ್ಕ್ ಸ್ಥಾಪನೆ ಮಾಡಲು ಜಿಲ್ಲಾಡಳಿತ ಸುಮಾರು 1000 ಎಕರೆ ಜಮೀನು ಗುರುತಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ.

ಬೆಂಗಳೂರಿನ ವಿಕಾಸ ಸೌಧದಲ್ಲಿ ಈ ಬಗ್ಗೆ ಅಧಿಕಾರಿಗಳೊಂದಿಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸಮಾಲೋಚನೆ ನಡೆಸಿದರು. ಕಡತ ಮುಖ್ಯ ಮಂತ್ರಿಗಳ ಅಂಗಳದಲ್ಲಿದೆ ಅವರು ಯಾವ ಜಿಲ್ಲೆಯನ್ನು ಆಯ್ಕೆ ಮಾಡುತ್ತಾರೋ ನೋಡಬೇಕು. 

ಕೇಂದ್ರ ಸರ್ಕಾರದ ಎಂ.ಎಸ್.ಎಂ.ಇ ಟೆಕ್ನಾಲಜಿ ಸೆಂಟರ್ ಸ್ಥಾಪಿಸಲು ತುಮಕೂರಿನ ನಗರ ಗ್ರಂಥಾಲಯದಲ್ಲಿ ಇರುವ ಕಟ್ಟಡದಲ್ಲಿ ಎರಡು ಅಂತಸ್ತು ನೀಡಲು ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಿದೆ. ಆದರೇ ನೀವೂ ಒಂದು ಅಂತಸ್ತು ಸಾಕು ಎಂದಿದ್ದೀರಿ. ಈ ಬಗ್ಗೆ ಪುನಃ ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ಮರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ಶ್ರೀ ಜಯಕುಮಾರ್ ರವರಿಗೆ ಸಲಹೆ ನೀಡಿದರು.

ಕಾರ್ಯದರ್ಶಿಯವರಾದ ಶ್ರೀ ಪಂಕಜ್ ಕುಮಾರ್ ಪಾಂಡೆಯವರು ಕಚೇರಿಗೆ ಬಂದ ತಕ್ಷಣ ತಾವೂ ಬಂದಿರುವ ವಿಚಾರ ತಿಳಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ದಿಶಾ ಸಮಿತಿಯ ಸದಸ್ಯರಾದ ಕುಂದರನಹಳ್ಳಿ ರಮೇಶ್ ಮತ್ತು ಶ್ರೀ ಟಿ.ಆರ್.ರಘೋತ್ತಮರಾವ್ ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು.