27th September 2023
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರ  ಯಾವಾಗ ಹಸಿರು ನೀಶಾನೆ ನೀಡುತ್ತದೋ ಅಂದು ಗುಬ್ಬಿ ಹೆಚ್.ಎ.ಎಲ್ ಘಟಕ ಕಾರ್ಯಾರಂಭ ಮಾಡಲಿದೆ ಎಂದು ತುಮಕೂರು ಲೋಕಸಭಾ ಸದಸ್ಯ ಶ್ರೀ ಜಿ.ಎಸ್.ಬಸವರಾಜ್ ತಿಳಿಸಿದ್ದಾರೆ.

75 ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸಹವದ ಅಂಗವಾಗಿ ದಿನಾಂಕ:15.08.2022 ರಂದು ಭಾರತ ದೇಶದಲ್ಲಿ ಸುಮಾರು 75 ಬೃಹತ್ ಯೋಜನೆಗಳನ್ನು ಲೋಕಾರ್ಪಣೆ ಮಾಡಲು ಮಾನ್ಯ ಶ್ರೀ ನರೇಂದ್ರ ಮೋದಿಯವರು ಸಿದ್ಧತೆ ನಡೆಸಿದ್ದಾರೆ. ಅದರಲ್ಲಿ ಹೆಚ್.ಎ.ಎಲ್ ಘಟಕವೂ ಇದೆ.

ಆದರೂ ಬೇಡಿಕೆಗಳಿಗೆ ಅನುಗುಣವಾಗಿ ಮೊದಲೇ ಪ್ರಾರಂಭವಾದರೂ ಆಗಬಹುದು. ಕೊರೊನಾ ನಡುವೆಯೂ ಕಾಮಗಾರಿ ವೇಗದಲ್ಲಿ ನಡೆದಿದೆ. ನ್ಯಾಯಾಲಯದ ಕೇಸುಗಳಿಂದ ಆರಂಭದಲ್ಲಿ ವಿಳಂಭವಾಯಿತು. ಇನ್ನೂ ಒಂದು ಮೊಕೊದ್ದಮೆ ಬಗೆಹರಿಯಬೇಕಿದೆ.

ರಕ್ಷಣಾ ಸಚಿವರಾದ ಶ್ರೀ ರಾಜನಾಥ ಸಿಂಗ್ ರವರ ಜೊತೆಯೂ ಈಗಾಗಲೇ ಮಾತುಕತೆ ನಡೆಸಲಾಗಿದೆ. ಘಟಕವನ್ನು ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಭವಿಷ್ಯದಲ್ಲಿ ಯುದ್ಧ  ವಿಮಾನಗಳ ಉತ್ಪಾದನೆ ಘಟಕ ಆರಂಭಿಸುವ ಉದ್ದೇಶವೂ ಇದೆ.

ಯಾವ ಜಮೀನನ್ನು ಪಡೆಯಬೇಕು ಎಂಬ ಚಿಂತನೆ ಆರಂಭವಾಗಿದೆ. ಈಗಾಗಲೇ ಬಿದರೆಹಳ್ಳ ಕಾವಲ್ ಜಮೀನು ಪಡೆಯುವುದಿಲ್ಲಾ ಎಂದು ಅಲ್ಲಿನ ರೈತರಿಗೆ ಮಾತು ಕೊಟ್ಟಿದ್ದೇವೆ. ಆದರೂ ಕೆಲವು ರೈತರು ಜಮೀನು ಕೊಡುವುದಾಗಿ ಹೇಳುತ್ತಿದ್ದಾರೆ. ಹೊಸ ನಿಯಮದ ಪ್ರಕಾರ ಶೇ 80 ರಷ್ಟು ರೈತರು ಒಪ್ಪಿಗೆ ನೀಡದಿದ್ದರೆ ಭೂ ಸ್ವಾಧೀನ ಮಾಡುವ ಆಗಿಲ್ಲ, ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ನಂತರ ಜಿಲ್ಲಾಡಳಿತ ಒಂದು ನಿರ್ಧಾರ ಕೈಗೊಳ್ಳಲಿದೆ.

ಉಳಿದಂತೆ ತುರ್ತಾಗಿ ಆಗಬೇಕಿರುವ ವಿವಿಧ ಇಲಾಖೆಗಳ ಕಾಮಗಾರಿಗಳ ಬಗ್ಗೆ ಮೂಲಭೂತ ಸೌಕರ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಕಪಿಲ್ ಮೋಹನ್ ರವರೊಂದಿಗೆ ಇಂದು ಹೆಚ್.ಎ.ಎಲ್ ಘಟಕದಲ್ಲಿ ಸಭೆ ನಡೆಸಿ ಪ್ರಗತಿ ಪರಿಶೀಲನೆ ಮಾಡಲಾಯಿತು.

ಇನ್ನೂ ಮುಂದೆ ಪ್ರತಿ ತಿಂಗಳು ಹೆಚ್.ಎ.ಎಲ್ ಯೋಜನೆಗಳಿಗೆ ಸಂಭಂಧಿಸಿದ ದಿಶಾ ಸಮಿತಿ ಸಭೆ ನಡೆಸಲು ಉದ್ದೇಶಿಸಲಾಗಿದೆ. ಮಾರ್ಚ್ 2022 ರೊಳಗೆ ವಿವಿಧ ಕಾಮಗಾರಿಗಳು ಪೂರ್ಣಗೊಳಿಸಲು ಕೇಂದ್ರ ಸರ್ಕಾರದ ಗಡುವಿನೊಂದಿಗೆ ಕಾಮಗಾರಿ ನಡೆಯುತ್ತಿದೆ.

ಇಂದು ನಡೆದ ಸಭೆಯಲ್ಲಿ ಹೆಚ್.ಎ.ಎಲ್ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.