22nd November 2024
Share

TUMAKURU:SHAKTHI PEETA FOUNDATION

ಪ್ರಧಾನಿ ಶ್ರೀ ನರೇಂದ್ರಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ 7 ಬೃಹತ್ ಮೆಗಾ ಇಂಡಸ್ಟ್ರಿಯಲ್ ಟೆಕ್ಸ್ ಟೈಲ್ಸ್ ಪಾರ್ಕ್‍ಗಳನ್ನು ಸ್ಥಾಪಿಸಲು ಮೆಗಾ ಪ್ಲಾನ್ ಮಾಡಿದ್ದಾರೆ.

ಪ್ರಸ್ತುತ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿಯವರು ರಾಜ್ಯದ ಗುಲ್ಬರ್ಗ, ಬಿಜಾಪುರ ಮತ್ತು ತುಮಕೂರು ಸೇರಿದಂತೆ 3 ಜಿಲ್ಲೆಗಳ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಹಸಿರು ನಿಶಾನೆ ನೀಡಿದ್ದಾರೆ ಎಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‍ರವರು  ತಿಳಿಸಿದ್ದಾರೆ.

ಕೇಂದ್ರ ಸರ್ಕಾರದಲ್ಲಿ ಲಾಭಿ ಮಾಡುವ ಮೂಲಕ ನಮ್ಮ ರಾಜ್ಯಕ್ಕೆ ಮೆಗಾ ಇಂಡಸ್ಟ್ರಿಯಲ್ ಟೆಕ್ಸ್ ಟೈಲ್ಸ್ ಪಾರ್ಕ್ ಮಂಜೂರು ಮಾಡಿಸಲು ಶ್ರಮಿಸಲಾಗುವುದು ಎಂದಿದ್ದಾರೆ.

ಇತಿಹಾಸ:

ಶ್ರೀ ಬಸವರಾಜ್ ರವರು 4 ನೇ ಅವಧಿಯಲ್ಲಿ ಸಂಸದರಾಗಿದ್ದಾಗ ತುಮಕೂರು ಜಿಲ್ಲೆಯ ಮಧುಗಿರಿ ಅಥವಾ ತಿಪಟೂರು ಜಿಲ್ಲೆಗೆ ಟೆಕ್ಸ್ ಟೈಲ್ಸ್ ಪಾಕ್ ್ ಸ್ಥಾಪನೆ ಮಾಡಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಶ್ರಮಿಸಿದ್ದರು. ಅಂದಿನ ಯುಪಿಎ ಸರ್ಕಾರ ಸುಮಾರು 150 ಎಕರೆ ಜಮೀನು ನೀಡಿದರೆ, ಟೆಕ್ಸ್ ಟೈಲ್ಸ್ ಪಾಕ್ ್  ನೀಡುವುದಾಗಿ ಕೇಂದ್ರ ಸರ್ಕಾರದಿಂದ ಹಸಿರು ನಿಶಾನೆ ದೊರಕಿತು.

ಬಸವರಾಜ್ ರವರು ನನಗೆ  ನೋಡು ಈ ಎರಡು ತಾಲ್ಲೋಕಿನಲ್ಲಿ ಸರ್ಕಾರಿ ಜಮೀನು ಇದೆಯಾ ಪರಿಶೀಲಿಸಿ ಎಂದಿದ್ದರು.ನಾನು ತಿಪಟೂರು ಶಾಸಕರಾಗಿದ್ದ ಶ್ರೀ ಷಡಕ್ಷರಿಯವರೊಂದಿಗೆ ಮಾತನಾಡಿದಾಗ ಅವರ ಬಹಳ ಆಸಕ್ತಿ ವಹಿಸಿದ್ದರು. ತಾಲೋಕು ಮಟ್ಟದ ಅಧಿಕಾರಿಗಳ ಸಭೆ ಕರೆದು ನನ್ನನ್ನು ಸಭೆಗೆ ಆಹ್ವಾನಿಸಿದ್ದರು. ಅಲ್ಲಿ ಅಧಿಕಾರಿಗಳು ಹೇಳಿದ್ದು ಎಲ್ಲಾ ಸರ್ಕಾರಿ ಜಮೀನನ್ನು ಬಗರ್ ಹುಕುಂ ಯೋಜನೆಯಡಿ ಉಳುಮೆ ಮಾಡಿದ್ದಾರೆ. ಖಾಲಿ ಇಲ್ಲ ಎಂದಿದ್ದರು.

ನನಗೆ ನಗು ಬಂತು ಅವಕಾಶವಿದ್ದಲ್ಲಿ ವಿಧಾನಸೌಧದ ಆವರಣಕ್ಕೂ ಅರ್ಜಿ ಹಾಕುತ್ತಾರೆ. ನೂರಾರು ಜನಕ್ಕೆ ಅನೂಕೂಲವಾಗುವ ಕೈಗಾರಿಕೆ ಜಾಗ ನೀಡಲು ಶ್ರಮ ಹಾಕಬೇಕು ಎಂದಾಗ ಷಡಕ್ಷರಿಯವರು ಸಭೆಯಲ್ಲಿಯೇ ಏ ರಮೇಶ್ ನೀನೂ ಮತ್ತು ಎಂ.ಪಿ.ಯವರು ಮೊಂಡರು ನೀವೂ ಯಾರನ್ನು ಬೇಕಾದರೂ ಎದುರು ಹಾಕಿಕೊಳ್ಳುತ್ತೀರಿ ನನಗೆ ಆಗಲ್ಲ ಎಂದಿದ್ದರು.

ಮತ್ತೆ ಮಧುಗಿರಿ ಶಾಸಕರಾದ ಶ್ರೀ ಕೆ.ಎನ್.ರಾಜಣ್ಣನವರ ಜೊತೆ ಮಾತನಾಡಲೇ ಇಲ್ಲ. ಅಲ್ಲಿಗೆ ಚುನಾವಣೆ ಬಂತು, ಬಸವರಾಜ್ ಸೋತರು ಯೋಜನೆ ಗೋವಿಂದ.

ಈಗ ಶ್ರೀ ರಾಮಗೋಪಾಲ್ ಎಂಬ ಪರಿಣಿತರು ಶ್ರೀ ಜಿ.ಎಸ್.ಬಸವರಾಜ್ ರವರನ್ನು ಭೇಟಿಯಾಗಿ ಕೇಂದ್ರ ಸರ್ಕಾರದ ಯೋಜನೆ ಬಗ್ಗೆ ಸಮಾಲೋಚನೆ ನಡೆಸಿದರು. ಅವರು ತಕ್ಷಣ ನನ್ನನ್ನು ಕರೆದು ಚರ್ಚಿಸಿದರು. ಅಂದು ಸರ್ಕಾರಿ ಪತ್ರಗಳನ್ನು ನೀಡಿದರು.

ನನಗೆ ಸಿಟ್ಟು ನೆತ್ತಿಗೆ ಏರಿತು.  ತುಮಕೂರು ಜಿಲ್ಲೆಯ ಟೆಕ್ಸ್ ಟೈಲ್ಸ್ ಅಧಿಕಾರಿ ಶ್ರೀಮತಿ ಸುಮರವರೊಂದಿಗೆ ಮಾತನಾಡಿದೆ. ಎಂಪಿಗಳು ಇರೋದು ಕತ್ತೆ ಕಾಯೋಕಾ? ಇಂಥಹ ಯೋಜನೆಗಳ ಬಗ್ಗೆ ಪತ್ರ ಬಂದಾಗ ಏಕೆ ಅವರೊಂದಿಗೆ ಚರ್ಚಿಸಿಲ್ಲ, ದಿಶಾ ಸಭೆಯಲ್ಲಿ ಏಕೆ ವಿಚಾರ ಮಂಡಿಸಿಲ್ಲ ಎಂಬ ನನ್ನ ಮಾತಿಗೆ ಅವರ ಒಂದೇ ಉತ್ತರ ಸಾರ್ ನಾನು ಹೊಸದಾಗಿ ಬಂದಿದ್ದೇನೆ ಎಂದಾಗ ನಾನು ಮೌನ ವಹಿಸಲೇ ಬೇಕಾಯಿತು.

ತಕ್ಷಣ ಕಾರ್ಯೋನ್ಮೂಖವಾಗಲೂ ಸಂಸದರು ಸೂಚಿಸಿದರು. ಈ ಸಂಸದರು ಒಂದು ತರಹ ಕಿರುಬ ಇದ್ದ ಹಾಗೆ ಅವರ ತಲೆಗೆ ಹೋಯಿತು ಎಂದರೆ ಹೂಹೂ ಬಿಡುವುದೇ ಇಲ್ಲ. ಈಲ್ಲಾಧಿಕಾರಿಗಳಿಗೆ ಪತ್ರ ಬರೆದು ಮಧುಗಿಯಲ್ಲಿ ಜಮೀನು ಹುಡುಕಲು ಸಲಹೆ ನೀಡಿದರು.

ನಮ್ಮ ಜಿಲ್ಲಾಧಿಕಾರಿಯವರಾದ ಶ್ರೀ ವೈ.ಎಸ್.ಪಾಟೀಲ್ ರವರಿಗೂ ಸರ್ಕಾರಿ ಯೋಜನೆ ಎಂದರೆ ಪ್ರಾಣ. ಅವರು ಮಧುಗಿರಿ ಉಪವಿಭಾಗಾಧಿಕಾರಿಗಳಿಗೆ ಪತ್ರ ಬರೆದರು. ಜಿಲ್ಲಾಧಿಕಾರಿಗಳು ಪತ್ರ ಬರೆಯುವ ಮುನ್ನವೇ ಮಧುಗಿರಿ ಉಪವಿಬಾಗಾಧಿಕಾರಿಯಾದ ಶ್ರೀ ಸೋಮಪ್ಪ ರವರನ್ನು ಕರೆದು ಸಂಸದರು ಸಮಾಲೋಚನೆ ನಡೆಸಿದರು.

ಎಸಿಯವರು ಸುಮಾರು ಮೂರು ಕಡೆ ಜಮೀನು ಹುಡುಕುವ ಹಂತದಲ್ಲಿದ್ದಾಗಲೇ ನಮ್ಮ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕರಾದ ಶ್ರೀ ನಾಗೇಶ್ ರವರು ಈಗ ಗುರುತಿಸಿರುವ ಜಮೀನು ಬಗ್ಗೆ ಮಾಹಿತಿ ನೀಡಿದರು. ತಕ್ಷಣ ಸಂಸದರು ಎಸಿಯವರಿಗೆ ಸೂಚಿಸಿದರು.

ಸಂಸದರು ಅದೆಷ್ಟೋ ಭಾರಿ ಎಸಿಯವರೊಂದಿಗೆ ಮಾತನಾಡಿದ್ದಾರೆ. ಕರೆದು ನಕ್ಷೆ ಸಹಿತ ಮಾಹಿತಿ ಪಡೆದುಕೊಂಡಿದ್ದಾರೆ. ಎಸಿಯವರು ಅಷ್ಟೆ ಜರೂರಾಗಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಹಾಜರಾಗಿ ಸಂಸದರಿಗೆ ಜಮೀನು ಇರುವ ಬಗ್ಗೆ ಖಾತರಿ ಪಡಿಸಿದರು.

ಕೊನೆಗೂ ಪ್ರಸ್ತಾವನೆ ಜಿಲ್ಲಾಡಳಿತಕ್ಕೆ ಬಂತು, ಜಿಲ್ಲಾಧಿಕಾರಿಗಳು ತಕ್ಷಣ ರಾಜ್ಯ ಸರ್ಕಾರಕ್ಕೆ ಕಳುಹಿಸಿದರು. ಕಳೆದ ದಿಶಾ ಸಭೆಯಲ್ಲಿ ರಾಜ್ಯಕ್ಕೆ ಕಳುಹಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್.ಪಾಟೀಲ್ ರವರು ಖಚಿತ ಪಡಿಸಿದರು. ತಕ್ಷಣವೇ ಪತ್ರದ ನಕಲು ಪಡೆದ ಸಂಸದರು ರಾಜ್ಯ ಸರ್ಕಾರದ ಅಧಿಕಾರಿÀಗಳು ಮತ್ತು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರೊಂದಿಗೆ ಸಮಾಲೋಚನೆ ನಡೆಸಲು ಆರಂಭಿಸಿದರು. ಬೊಮ್ಮಾಯಿಯವರು ತುಮಕೂರು ಜಿಲ್ಲೆಯನ್ನು ಕಳುಹಿಸುವುದಾಗಿ ಸಂಸದರಿಗೂ ತಿಳಿಸಿದ್ದರು ಮತ್ತು ಜಿಲ್ಲಾಧಿಕಾರಿಗಳೊಂದಿಗೂ ಸಮಾಲೋಚನೆ ನಡೆಸಿದ್ದರಂತೆ.

ಇಂದು(05.10.2021) ಮುಖ್ಯ ಮಂತ್ರಿಯವರ ಕಚೇರಿಗೆ ಹೋಗಿ ಶ್ರೀ ಪೊನ್ನುರಾಜ್ ರವರೊಂದಿಗೆ ಮಾತನಾಡಿದಾಗ, ಈ ಮೂರು ಜಿಲ್ಲೆಗಳ ಪ್ರಸ್ತಾವನೆ ದೆಹಲಿಗೆ ಕಳುಹಿಸಲು ಹಸಿರು ನಿಶಾನೆ ನೀಡಿರುವ ಮಾಹಿತಿ ತಿಳಿಯಿತು. ತಕ್ಷಣ ಟೆಕ್ಸ್ ಟೈಲ್ ಇಲಾಖೆ ಕಾರ್ಯದರ್ಶಿಯವರಾದ ಶ್ರಿ ಪಂಕಜಕುಮಾರ ಪಾಂಡೆ ರವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. ಅವರು ದೆಹಲಿಗೆ ಪತ್ರ ಬರೆದು ನಿಮಗೂ ಒಂದು ನಕಲು ಹಾಕುವುದಾಗಿ ತಿಳಿಸಿದರು. ಇನ್ನೂ ಬಸವರಾಜ್ ರವರ ಅಖಾಡ ದೆಹಲಿಯಲ್ಲಿ ಆರಂಭವಾಗಲಿದೆ.

ಸುಮಾರು 1000  ಎಕರೆ ಜಮೀನು ಮತ್ತು ಅಗತ್ಯ ಮೂಲಭೂತ ಸೌಕರ್ಯಗಳನ್ನು ರಾಜ್ಯ ಸರ್ಕಾರ ನೀಡಬೇಕಿದೆ. ನಮ್ಮ ಜಿಲ್ಲೆಯಲ್ಲೂ  ಶಿರಾ- ಮಧುಗಿರಿ-ಕೊರಟಗೆರೆ ಮೂರು ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸುಮಾರು 1000 ಎಕರೆ ಜಮೀನು ಗುರುತಿಸುವಲ್ಲಿ ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್.ಪಾಟೀಲ್ ರವರು, ಮಧುಗಿರಿ ಉಪವಿಬಾಗಾಧಿಕಾರಿಯವರದ ಶ್ರೀ ಸೋಮಪ್ಪ ಕೊಡಕಲ್ ರವರು , ಮೂರು ತಾಲ್ಲೋಕುಗಳ ತಹಶಿಲ್ಧಾರ್ ರವರು, ಕಂದಾಯ ನೀರಿಕ್ಷಕರು, ಗ್ರಾಮ ಲೆಕ್ಕಿಗರು, ಸರ್ವೇಯರ್ಸ್ ತಂಡ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಶ್ರಮ ನಿಜಕ್ಕೂ ಸಾರ್ಥಕವಾಗಿದೆ.

ಶ್ರೀ ರಾಮಗೋಪಾಲ್ ರವರು, ಶ್ರೀ ರಘೋತ್ತಮರಾವ್ ರವರು ಮತ್ತು ಶ್ರೀ ನಾಗೇಶ್ ರವರು ವಾರಕ್ಕೆರಡು ಬಾರಿ ಮಾತನಾಡಿ ವಿಚಾರಿಸುತ್ತಿದ್ದರು. ನಾನು ಡಿಐಸಿ ಜೆಡಿ, ಶ್ರೀ ನಾಗೇಶ್ ರವರಿಗೆ ಹೇಳಿದ್ದೆ ನೋಡಿ ಸಾರ್, ನಾನು ಊರಿಗೆ ಹೋದರೆ ಎಲ್ಲಾ ತೋಟಗಳನ್ನು ನೋಡಿಕೊಂಡು ಬರುವ ಹಾಗೆ, ಬೆಂಗಳೂರಿಗೆ ಹೋದರೆ ನಮ್ಮ ಜಿಲ್ಲೆಯ ಎಲ್ಲಾ ಪ್ರಸ್ತಾವನೆಗಳು ಬಾಕಿ ಇರುವ ಕಚೇರಿಗಳಿಗೆ ಹೋಗಿ ವಿಚಾರಿಸುತ್ತೇವೆ. ಬಹುಷಃ ನನಗೂ ಎಂಪಿಯವರಿಗೂ ಇದೇ ಒಂದು ತರಹ ವಾಕ್ ಎಂದಿದ್ದೆ. ಅವರು ನಕ್ಕು ನಕ್ಕು ಸುಸ್ತಾಗಿದ್ದರು.

ಕಳೆದ ವಾರ ಪಂಕಜಕುಮಾರ ಪಾಂಡೆಯವರು ಕಚೇರಿಯಲ್ಲಿ ಇರಲಿಲ್ಲ, ಜೆಡಿಯವರಾದ ಜೈಕುಮಾರ್ ಕಚೇರಿಗೆ ತೆರಳಿ ಟೆಕ್ಸ್ ಟೈಲ್ ಅಧಿಕಾರಿಗಳನ್ನು ಅಲ್ಲಿಗೆ ಕರೆಸಿ ಚರ್ಚಿಸಿದ್ದರು, , ಶ್ರೀ ರಘೋತ್ತಮರಾವ್ ರವರು ಸಹ ಅಂದು ಜೊತೆಯಲ್ಲಿ ಇದ್ದರು ಏನು ಎಂಪಿಯವರು ಹೀಗೆ ಯಾರ ಬಳಿ ಬೇಕಾದರೂ ಹೋಗುತ್ತಾರೆ ಎಂದಾಗ ನಾನು ಹೇಳಿದೆ. ರಘುಜೀ ಜವಾನನ್ನು ಪೈಲ್ ತೆಗೆದು ವಿಕಾಸ ಸೌzದಿಂದ ವಿಧಾನ ಸೌಧಕ್ಕೆ ಅವರ ಕಾರಿನಲ್ಲಿ ಕುಳ್ಳಿಸಿಕೊಂಡು ಹೋಗುತ್ತಾರೆ. ನಂತರ ಹುಡುಗರಿಗೆ ಹಣ್ಣು ತೆಗೆದು ಕೊಂಡು ಹೋಗು ಎಂದು ನೂರು ರೂ ಕೊಡುತ್ತಾರೆ.

ಅವರ ಆಟ ನಿಮಗೆ ಪೂರ್ಣ ಗೊತ್ತಿಲ್ಲ. ಒಂದು ಕೆಲಸಕ್ಕೆ ಕೈಹಾಕಿದರೆ ಕೊನೆವರೆಗೂ ಅಧಿಕಾರಿಗಳಿಗೆ ತಲೆ ಕೆಟ್ಟು ಎಂಪಿಯವರ ಕೆಲಸ ಮಾಡೇ ಬಿಡೋಣ ಎಂಬ ಭಾವನೆ ಬರಲಿದೆ.

ಅಷ್ಟೆ ಅಲ್ಲ ಕೆಲಸ ಆಗಬೇಕು ಎಂದರೆ ಅಧಿಕಾರಿಗಳ ಇತಿಹಾಸವನ್ನೇ ಅವರೊಂದಿಗೆ ಮಾತನಾಡುವಷ್ಟು ಮಾಹಿತಿ ಕಲೆ ಹಾಕುತ್ತಾರೆ. ಕೊನೆಗೆ ಎಂಥ ಅಧಿಕಾರಿಯೂ ಆದರೂ ಜೈ ಎನ್ನುತ್ತಾರೆ. ಇಲ್ಲದಿದ್ದರೆ ಬೃಹತ್ ಯೋಜನೆಗಳ ಮಂಜೂರು ಅಷ್ಟು ಸುಲಭವಲ್ಲ ಎಂದಾಗ ಅವರು ನಿಮ್ಮ ಜೋಡಿಗೆ ಕೈಮುಗಿಯಬೇಕರಿ ಎಂದರು.

 ನೋಡೋಣ ಮೋದಿಯವರು ಯಾವ ಜಿಲ್ಲೆಗೆ ಜೈ ಎನ್ನುತ್ತಾರೆ.