22nd December 2024
Share

TUMAKURU:SHAKTHI PEETA FOUNDATION

ನವರಾತ್ರಿ ದುರ್ಗಾ ಪೂಜಾ ಪ್ರಪಂಚದ ಎಲ್ಲಾ ವರ್ಗದವರೂ ಮಾಡುವ ವಿಶೇಷ ಪೂಜೆ. ಶಕ್ತಿ ದೇವತೆಯಾದ ಸತಿಯ ದೇಹದ ಅಂಗÀಗಳು ಬಿದ್ಧ ಸ್ಥಳಗಳು ಮತ್ತು ಇತರ ಅಂಶಗಳು ಬಿದ್ಧ ಸ್ಥಳಗಳು  108 ಶಕ್ತಿ ಪೀಠಗಳಾಗಿವೆ.ಶಕ್ತಿಪೀಠಗಳಲ್ಲಿ ಬಹಳ ಸಂಭ್ರಮದ ಪೂಜೆ ನಡೆಯಲಿದೆ.

ಆದಿಶಕ್ತಿ ದೇವಿಯು ಕೋಟಿ ಕೋಟಿ ಹೆಸರಲ್ಲಿ ಪೂಜಿಸಿಕೊಳ್ಳುತ್ತಿದ್ದಾರೆ. ಮಾರಮ್ಮ, ಕೆಂಪಮ್ಮ, ಪಾರ್ವತಿ, ಶಾರದೆ, ಅನ್ನಪೂರ್ಣೆ, ವೈಷ್ಣವಿ, ಡೋಲಾ ಮಾತೆ ಹೀಗೆ ಯಾವ ಜಾತಿಯವರು ತಮಗೆ ಯಾವ ಹೆಸರು ಸರಿ ಬರುತ್ತದೆಯೋ ಆ ಹೆಸರಿನಲ್ಲಿ ಪೂಜಿಸುತ್ತಾರೆ.

ಪ್ರತಿಯೊಂದು ಗ್ರಾಮ ದೇವತೆಯೂ ಒಂದೊಂದು ಹೆಸರಿನಲ್ಲಿ ಕರೆಸಿಕೊಳ್ಳತ್ತಾರೆ. ಗ್ರಾಮ ದೇವತೆಗೆ ಇರುವ ಮಹತ್ವ ಬೇರೆ ಯಾರಿಗೂ ಇಲ್ಲ ಎಂಬುದು ಒಂದು ನಂಬಿಕೆ. ದೇವಿ ಒಬ್ಬರೇ, ಆದರೇ ನಾಮ ಹಲವು, ದೇವಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ರಿಗೆ ಜನ್ಮ ನೀಡಿದ ತಾಯಿಯೂ ಹೌದು. ಪತ್ನಿಯರು ಹೌದು. ಸಂದರ್ಭಗಳಿಗೆ ತಕ್ಕಂತೆ ಅವತಾರಗಳು ಎಂಬ ನಂಬಿಕೆ ನಮ್ಮದಾಗಿದೆ.

ಯಾವುದನ್ನೂ ನೋಡಿರುವವರು ಇಲ್ಲಿ ಯಾರು ಇಲ್ಲ, ಕೇಳಿರುವವರು ಯಾರು ಇಲ್ಲ, ಆದರೂ ಎಲ್ಲರೂ ನಂಬಿದ್ದೇವೆ. ಅದೇ ಅಗೋಚರ ಶಕ್ತಿ, ಅವರೇ ತಾಯಿ ಜಗನ್ಮಾತೆ. ನವರಾತ್ರಿ ವೇಳೆ 9 ದಿವಸಗಳು ನವದುರ್ಗೆಯರ ಪೂಜೆ ಮಾಡುವುದೇ ಒಂದು ಸಡಗರ, ವಿಶ್ವಕ್ಕೆ ನಾಡದೇವತೆ ಆ ತಾಯಿ.

 ನಮ್ಮ ಅಖಂಡ ಭಾರತದ ಎಲ್ಲಾ ದೇಶಗಳು ಬಹಳ ಸಂಭ್ರಮದಿಂದ ಆಚರಿಸುವ ಹಬ್ಬ ನವರಾತ್ರಿ. ಹಿಂದೂಗಳಿಗಂತೂ ಸಂಭ್ರಮವೋ ಸಂಭ್ರಮ ಈ ನವರಾತ್ರಿ. ತಾಯಿ ಜಗನ್ಮಾತೆ ಪೂಜೆ ಮಾಡಿ, ಆಡಂಬರ, ಅಬ್ಬರ, ನಾಟಕದ ಪೂಜೆ, ಪ್ಯಾಕೇಜ್ ಪೂಜೆಗಿಂತ ತಾಯಿಗೆ ಭಕ್ತಿ ಪ್ರಧಾನವಾದ ಪೂಜೆಯೇ ಶ್ರೇಷ್ಠವಾದದ್ದು.

ನಿಮ್ಮ ಕುಟುಂಬದ ಸದಸ್ಯರುಗಳು ಮಾಡುವ ಪೂಜೆಯೂ ಶ್ರೇóಷ್ಠ, ಪೂಜೆ ಮಾಡುವವರು ಸಿಗಲಿಲ್ಲ ಎಂದೂ ಪೂಜೆ ನಿಲ್ಲಿಸ ಬೇಡಿ. ಭಕ್ತಿ ಪ್ರಧಾನವಾದ ಪೂಜೆಗೆ ಯಾವುದೇ ನಿಯಮವಿಲ್ಲ, ಮನಸ್ಸಿನಲ್ಲಿ ಧ್ಯಾನ ಮಾಡಿದರೇ ಸಾಕು. ಉಳಿದಿದ್ದೂ ಎಲ್ಲವೂ ನಾವು ಮಾಡಿಕೊಂಡಿರುವ ನಿಯಮಗಳು ಅಷ್ಟೆ.

ಶಕ್ತಿದೇವತೆಗೆ ಯಾವುದೇ ಆಕಾರವಿಲ್ಲ, ಕವಿ ವರ್ಣನೆ ಅಷ್ಟೆ, ಸತಿಯ ದೇಹದ ಭಾಗಗಳಿಗೆ ಯಾವುದೇ ಆಕಾರ, ರೂಪು ಇಲ್ಲ, ಕೆಲವು ಶಕ್ತಿ ಪೀಠಗಳಲ್ಲಿ  ಬಂಡೆಗಳಿಗೆ, ಕೆಲವು ಕಡೆ ಮರಗಳಿಗೆ, ಕೆಲವು ಕಡೆ ಗಂಗಾಮಾತೆಗೆ ಪೂಜೆ ಸಲ್ಲಿಸುತ್ತಾರಂತೆ. ಅಲ್ಲಿ ಯಾವುದೇ ವಿಗ್ರಹಗಳಿಲ್ಲವಂತೆ, ಅಂದ ಮೇಲೆ ನಿಮ್ಮ ಮುಂದಿರುವ ಕಲ್ಲಿಗೂ, ನೀರಿಗೂ, ಸಸ್ಯಗಳಿಗೂ  ಪೂಜೆ ಮಾಡಬಹುದಲ್ಲವೇ ಅದೇ ಭಕ್ತಿ. ಪರಿಸರವೇ ದೇವರು.

ಸತ್ತಮೇಲೆ ಆಡಂಬರದ ಪೂಜೆ ಮಾಡುವ ನಾವು ಬದುಕಿರುವ ತಂದೆ ತಾಯಿಯರಲ್ಲಿ ಏಕೆ ದೇವರನ್ನು ಕಾಣುತ್ತಿಲ್ಲ? ತಂದೆ ತಾಯಿಗಿಂತ ಮಿಗಿಲಾದ ದೇವರು ಯಾರು? ಅವರಲ್ಲಿಯೇ ಶಕ್ತಿ ದೇವತೆ ಸ್ವರೂಪ ಕಾಣಿರಿ.

ಜೈ ಮಾತಾಜಿ!