21st November 2024
Share

TUMAKURU:SHAKTHI PEETA FOUNDATION

ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೂಕಿನ, ಜೆಜಿ ಹಳ್ಳಿ ಹೋಬಳಿ, ಗೌಡನಹಳ್ಳಿ ಗ್ರಾಮಪಂಚಾಯಿತಿ, ಬಗ್ಗನಡು ಕಾವಲ್ ನಲ್ಲಿ ವಡ್ಡನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವಂತೆ  ಶಕ್ತಿಪೀಠ ಕ್ಯಾಂಪಸ್ ಎಂಬ ಅಗ್ರಿ ಟೂರಿಸಂ ಮಾಡಲು ಆರಂಭಿಸಿದ್ದೇನೆ.

ಅಗ್ರಿ ಟೂರಿಸಂ ಯೋಜನೆಗೆ ಭೂ ಪರಿವರ್ತನೆ ಅಗತ್ಯವಿದೆಯೇ ಎಂಬ ನಿಖರವಾದ ಮಾಹಿತಿ ನನಗೆ ಇನ್ನೂ ದೊರೆತಿಲ್ಲ, ಆದರೂ ಹೊಸದಾಗಿ ಪಾಲಿಸಿ ಮಾಡಿರುವುದರಿಂದ ಪ್ರವಾಸೋಧ್ಯಮಿ ಅಗ್ರಿ ಟೂರಿಸಂ ಮಾಡುವ ಜಮೀನಿನಲ್ಲಿ ಯಾವುದೇ ಪ್ರದೇಶದಲ್ಲಿಯಾದರೂ ಅಗತ್ಯವಿರುವ ಕಟ್ಟಡ ನಿರ್ಮಾಣ ಮಾಡಲು ಶೇ ಇಂತಿಷ್ಟು ಬಳಸಬಹುದು ಎಂಬ ಷರತ್ತಿನೊಂದಿಗೆ ಅನುಮತಿ ನೀಡಲು ಸಾಧ್ಯವೇ ಎಂಬ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡಸಲಾಗುತ್ತಿದೆ.

ಜಿಲ್ಲಾಧಿಕಾರಿಗಳು ಈ ರೀತಿ ಭೂ ಪರಿವರ್ತನೆ ಮಾಡಿದ ನಂತರ ಗ್ರಾಮಪಂಚಾಯಿತಿಯವರು ಲೇಸನ್ಸ್ ನೀಡುವಾಗ ಜಿಯೋ ಟ್ಯಾಗಿಂಗ್ ಸಹಿತ ಅನುಮತಿ ನೀಡುವುದು ಒಳ್ಳೆಯದು.ಈ ರೀತಿ ಅನುಮತಿ ನೀಡಿದರೆ ಪದೇ ಪದೇ ಭೂ ಪರಿವರ್ತನೆ ಮಾಡಿಸುವ ಅಗತ್ಯವೂ ಬರುವುದಿಲ್ಲಾ, ಸುಮ್ಮನೆ ಒಂದೇ ಬಾರಿ ಅನಗತ್ಯವಾಗಿ ಹೆಚ್ಚಿಗೆ ಭೂಮಿಯನ್ನು ಪರಿವರ್ತನೆ ಮಾಡಿಸದಂತೆ ಎಚ್ಚರ ವಹಿಸಬಹುದಾಗಿದೆ.

ವಿಶೇಷ ಚಿಂತನೆ

  1. ನಮ್ಮ ಫೌಂಡೇಷನ್ ಪ್ರಸ್ತುತ 4 ಎಕರೆ ಜಮೀನನ್ನು ಭೂ ಪರಿವರ್ತನೆ ಮಾಡಿಸಲು ಯೋಚಿಸಲಾಗಿದೆ. ಇಲ್ಲಿಯೂ ಶೇ 32 ರಷ್ಟು ಜಮೀನಿನಲ್ಲಿ ಎಲಿಯಾದರೂ ಬಳಸಬಹುದು ಎಂಬಂತೆ ಭೂ ಪರಿವರ್ತನೆ ನೀಡಿ ಎಂಬ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಲು ಚಿಂತನೆ ನಡೆಸಲಾಗಿದೆ.
  2. ಕೃಷಿ ಜಮೀನಿನಲ್ಲಿ ಫಾರಂ ಹೌಸ್ ನಿರ್ಮಾಣ ಮಾಡಲು ಕೃಷಿ ಬೋರ್ ವೆಲ್ ನೀರು ಬಳಸಲು ಅನುಮತಿ ಪಡೆಯುವುದು.
  3. ಫಾರಂ ಹೌಸ್ ಗೆ ಬೋರ್ ವೆಲ್ ನೀರು ಬಳಸಲು ಅನುಮತಿ ಪಡೆಯುವುದು.
  4. ಫಾರಂ ಹೌಸ್ ಗಳಿಗೂ ನಿರಂತರ ವಿದ್ಯುತ್ ಸಂಪರ್ಕ ನೀಡುವುದು.
  5. ಅಗ್ರಿ ಟೂರಿಸಂ ಯೋಜನೆಗೆ ನಿರಂತರ ವಿದ್ಯುತ್ ಸಂಪರ್ಕ ನೀಡುವುದು.

ಒಂದು ವೇಳೆ ಈ ಬಗ್ಗೆ ಸರ್ಕಾರಿ ಅದೇಶಗಳಾಗಿದ್ದರೆ ಅಥವಾ ಸರ್ಕಾರದೊಂದಿಗೆ ವ್ಯವಹಾರಗಳು ಆಗಿದ್ದಲ್ಲಿ ಮಾಹಿತಿ ನೀಡಲು ಓದುಗರಲ್ಲಿ ಮನವಿ.