TUMAKURU:SHAKTHIPEETA FOUNDATION
ಶಕ್ತಿಪೀಠ ಫೌಂಡೇಷನ್ ಇದೂವರೆಗೂ ಶಕ್ತಿಪೀಠ ಕ್ಯಾಂಪಸ್ ನಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡದೇ, ನೀರು, ಮರಗಿಡ, ಔಷಧಿ ಗಿಡ,ಹೀಗೆ ಪರಿಸರಕ್ಕೆ ಆಧ್ಯತೆ ನೀಡಲಾಗಿತ್ತು. ಶಕ್ತಿ ಪೀಠ ಕ್ಯಾಂಪಸ್ ಎಂಬ ಪರಿಕಲ್ಪನೆಯನ್ನು ಭೂಮಿಯ ಮೇಲೆ ಇಳಿಸುವ ಪ್ರಯತ್ನ ಮಾಡಿದೆ.
ಈಗ ಕ್ಯಾಂಪಸ್ ನಲ್ಲಿ ಮೊದಲು ಫಾರಂ ಹೌಸ್ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ. ನಂತರ ಇದೇ ಕಟ್ಟಡವನ್ನು ಅನ್ನ ದಾಸೋಹ, ಜ್ಞಾನ ದಾಸೋಹ ಮತ್ತು ಅಭಿವೃದ್ಧಿ ಜ್ಞಾನದ ಕೇಂದ್ರವಾಗಿ ಮಾರ್ಪಾಡು ಮಾಡಲು ಚಿಂತನೆ ನಡೆಸಲಾಗಿದೆ. ಈ ಪ್ರಥಮ ಕಟ್ಟಡದ ಕಾಮಗಾರಿಯ ತಪಾಸಣೆಯನ್ನು ತಾಂತ್ರಿಕ ಸಮಿತಿಯ ಪಧಾಧಿಕಾರಿಗಳು ತಪಾಸಣೆ ಮಾಡಿದರು.
ಶಕ್ತಿಪೀಠ ಫೌಂಡೇಷನ್ ರಚಿಸಿದ ತಾಂತ್ರಿಕ ಸಮಿತಿಯ ಪದಾಧಿಕಾರಿಗಳೇ ಲೋಕಾಯುಕ್ತದವರು ಮಾಡುವ ತನಿಖೆಯಂತೆ ಯಾವುದೇ ಮುಲಾಜು ಇಲ್ಲದೆ ದಾಖಲೆ ಸಹಿತ ಮಾಹಿತಿ ಪಡೆಯುವ ಮೂಲಕ ಆರಂಭದಿಂದಲೇ ಪಾರದರ್ಶಕ ನಡೆಗೆ ಮುಂದಾಗಿರುವ ರೀತಿ ನಿಜಕ್ಕೂ ಸ್ವಾಗಾತಾರ್ಹ.
ಕೆಳಕಂಡ ದಾಖಲೆಗಳೊಂದಿಗೆ ಮುಂದಿನ ತಾಂತ್ರಿಕ ಸಭೆ ಕರೆಯಲು ಸಲಹೆ ನೀಡುವ ಮೂಲಕ ದೇಶದ ಅಭಿವೃದ್ಧಿ ಬಗ್ಗೆ ಮೌಲ್ಯ ಮಾಪನ ಮಾಡುವ ಸಂಸ್ಥೆ, ಯಾವುದೇ ಒಂದು ಸಣ್ಣ ತಪ್ಪು ಮಾಡದಂತೆ ಎಚ್ಚರ ವಹಿಸಲು ಆರಂಭಿಸಿದೆ. ಪ್ರಥಮ ಕಟ್ಟಡದ ತಾಂತ್ರಿಕ ಸಮಿತಿಗೆ ಸಂಸ್ಥೆಯ ಆಡಿಟರ್ ಮತ್ತು ಲೀಗಲ್ ಅಡ್ವೈಸರ್ ಇಬ್ಬರನ್ನು ನೇಮಕ ಮಾಡಲು ಸಲಹೆ ನೀಡಿದರು.
- ಗ್ರಾಮಪಂಚಾಯಿತಿ ಅನುಮತಿ ಎಲ್ಲಿದೆ?
- ಕಂದಾಯ ಇಲಾಖೆಯ ಅನುಮತಿ ಎಲ್ಲಿದೆ?
- ಬೆಸ್ಕಾಂ ಅನುಮತಿ ಎಲ್ಲಿದೆ?
- ಭೂ ಪರಿವರ್ತನೆ ದಾಖಲೆ ನೀಡಿ?
- ಪಿಪಿಪಿ ಮಾದರಿಗೆ ಅನುಮತಿ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆಯೇ?
- ಶಕ್ತಿಪೀಠ ಫೌಂಡೇಷನ್ ಗೆ ಎರಡು ವರ್ಷದ ಆಡಿಟ್ ರಿಪೋರ್ಟ್ ಇದೆಯೇ?
- 80 ಜಿ ಲಭ್ಯವಾಗಿದೇಯೇ?
- ಕಟ್ಟಡ ನಿರ್ಮಾಣ ಮಾಡುವ ಮೊದಲು ಮಣ್ಣು ಪರೀಕ್ಷೆ ಮಾಡಿಸಲಾಗಿದೇಯೇ?
- ಜಮೀನಿನ ಲೀಸ್ ಅಗ್ರಿಮೆಂಟ್ ಎಲ್ಲಿದೆ?
- ಕಟ್ಟಡದ ನಿರ್ಮಾಣ ಮಾಡುವ ಗುತ್ತಿಗೆ ದಾರರ ಅಗ್ರಿಮೆಂಟ್ ಎಲ್ಲಿದೆ.
- ಕಟ್ಟಡದ ಪ್ಲಾನ್ ಎಲ್ಲಿದೆ?.
- ಈ ಕಟ್ಟಡದ ಸುತ್ತ ಮುತ್ತ ಯಾವ ರೀತಿ ಅಭಿವೃದ್ಧಿ ಪಡಿಸಲಾಗುವುದು ಎಂಬ ಬಗ್ಗೆ ಲೇ ಔಟ್ ಮಾಡಲಾಗಿದೇಯೇ?
- ಶಕ್ತಿಪೀಠ ಫೌಂಡೇಷನ್ ಹುಂಡಿಯನ್ನು ಇಡಲಾಗಿದೇಯೇ?
- ಕಟ್ಟಡದ ದಾನಿಗಳು ದಾನ ನೀಡಲು ಶಕ್ತಿಪೀಠ ಫೌಂಡೇಷನ್ ಬ್ಯಾಂಕ್ ವಿವರದ ನಾಮಫಲಕ ಹಾಕಿ.
- ಶಕ್ತಿಪೀಠ ಕ್ಯಾಂಪಸ್ ಲೇ ಔಟ್ ಪ್ಲಾನ್ ಹಾಕಿ.
- ಈ ಕಟ್ಟಡದ ಆರಂಭದ ದಿನವನ್ನು ಈಗಾಗಲೇ ನಿಗದಿ ಮಾಡಿರುವುದರಿಂದ ಅಂದಿನ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾಹಿತಿ ಸಿದ್ಧಪಡಿಸಿ ಕೊಳ್ಳಿ.
- ಅಗ್ರಿ ಟೂರಿಸಂ ಬಗ್ಗೆ ಇಲಾಖೆ ಅನುಮತಿ ಪಡೆಯಲಾಗಿದೆಯೇ?
- ಈ ಯೋಜನೆ ಬಗ್ಗೆ ಈ ಗ್ರಾಮದ ಮತ್ತು ಸುತ್ತಮುತ್ತಲಿನ ಗ್ರಾಮದ ಜನರಿಗೆ ಮಾಹಿತಿ ನೀಡಲಾಗಿದೇಯೇ?
- ಈ ಕ್ಯಾಂಪಸ್ ಗೆ ಹೆಸರು ಅಂತಿಮ ಗೊಳಿಸಲಾಗಿದೇಯೇ?.
- ಬೆಂಗಳೂರು- ಪುಣೆ ರಾಷ್ಟ್ರೀಯ ಹೆದ್ಧಾರಿ ಬಳಿ ಕ್ಯಾಂಪಸ್ ನಾಮಫಲಕ ಹಾಕಲು ಎನ್.ಹೆಚ್.ಎ.ಐ ಇಂದ ಅನುಮತಿ ಪಡೆಯಲಾಗಿದಿಯೇ?
ಓಂ ಶಕ್ತಿ ಪೀಠಾಯ ನಮಃ!