TUMAKURU:SHAKTHIPEETA FOUNDATION
ಕರ್ನಾಟಕ ರಾಜ್ಯದ ಸಣ್ಣ ನೀರಾವರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರು ತಾವು ಪ್ರತಿ ನಿಧಿಸುವ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಕೆರೆಗಳಿಗೆ ನದಿ ನೀರು ತುಂಬಿಸುವ ‘ಮಾದರಿ’ ಯೋಜನೆಯನ್ನು ಆರಂಭಿಸಿದ್ದಾರಂತೆ.
ಅದೇ ರೀತಿ ತುಮಕೂರು ಜಿಲ್ಲೆಯ ಕೆಲವು ಭಾಗದ ಕೆರೆಗಳಿಗೆ ಯೋಜನೆ ರೂಪಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರಂತೆ. ಎಲ್ಲಾ 11 ವಿಧಾನ ಸಭಾ ಕ್ಷೇತ್ರಗಳಿಗೂ ಯೋಜನೆ ರೂಪಿಸಿ ‘ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ಯೋಜನೆಯಂತೆ ಕೇಂದ್ರ ಸರ್ಕಾರಕ್ಕೆ ಪರಿಷ್ಟøತ ಪ್ರಸ್ತಾವನೆ ಕಳುಹಿಸಲು ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರು ಶತ ಪ್ರಯತ್ನ ಮಾಡುತ್ತಿದ್ದಾರಂತೆ.
ಅಧಿಕಾರಿಗಳು ಕಳೆದ ಒಂದು ತಿಂಗಳಿನಿಂದ ಇಂದು ನಾಳೆ ಎನ್ನುತ್ತಿದ್ದಾರಂತೆ, ಇದೂವರೆಗೂ ಪ್ರಸ್ತಾವನೆ ಸಂಸದರ ಕೈ ಸೇರಿಲ್ಲವಂತೆ, ಇಲ್ಲಿ ಪಕ್ಷ ರಾಜಕೀಯ ಬೇಡ, ಜಾತಿ ರಾಜಕೀಯ ಬೇಡ, ಲೋಕಸಭಾ ಕ್ಷೇತ್ರಗಳ ತಾರತಮ್ಯವೂ ಬೇಡ. ತುಮಕೂರು ಜಿಲ್ಲೆ ಒಂದು ಯುನಿಟ್ ಎಂದು ಭಾವಿಸಿ.
ಹೇಮಾವತಿ ಮೈಕ್ರೋ ಇರ್ರಿಗೇಷನ್ ಮಾಡುವ ಮೂಲಕ, ಹೇಮಾವತಿ ಅಚ್ಚುಕಟ್ಟು ಪ್ರದೇಶದ ಕೆರೆಗಳಿಗೂ ಸೇರಿದಂತೆ ಜಿಲ್ಲೆಯ ಎಲ್ಲಾ ಗ್ರಾಮಗಳಿಗೂ ಭಧ್ರಾ ಮೇಲ್ದಂಡೆ, ಎತ್ತಿನಹೊಳೆ, ತಂಗಭಧ್ರಾ ಯೋಜನೆ ಮೂಲಕ ಈಗ ದೊರೆಯುವಷ್ಟು ನೀರಿನಲ್ಲಿ ಶೇಕಡವಾರು ಇಂತಿಷ್ಟು ಸಾಮಾಥ್ರ್ಯ ಕೆರೆ ತುಂಬಿಸಲು ಯೋಜನೆ ರೂಪಿಸಿ, ನಂತರ ಉಳಿದ ನದಿ ನೀರಿನ ಯೋಜನೆ ರೂಪಿಸಿದಾಗ ಹಂಚಿಕೆ ಮಾಡಿ ಶೇ 100 ರಷ್ಟು ಕೆರೆ ತುಂಬಿಸಲು ಕಾಲುವೆ ಅಥವಾ ಪೈಪ್ ಲೈನ್ ಈಗಲೇ ಮಾಡಿಸಿ.
ಕೆರೆ ಕಟ್ಟೆಗಳಿಲ್ಲದ ಗ್ರಾಮಗಳಿಗೂ ಹೊಸದಾಗಿ ಜಲಸಂಗ್ರಹಾಗಾರ ನಿರ್ಮಾಣ ಮಾಡುವ ಮೂಲಕ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಒದಗಿಸಿ, ಉಳಿದ ಅಗತ್ಯವಿರುವ ನದಿ ನೀರಿನ ಯೋಜನೆಗೂ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ. ಜೊತೆಗೆ ತುಮಕೂರು ಜಿಲ್ಲೆಯ ಎಲ್ಲಾ ಗ್ರಾಮಗಳ ಕರಾಬುಹಳ್ಳಗಳ ಸಮಗ್ರ ಅಭಿವೃದ್ದಿಗೂ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ.
ನಿಮ್ಮ ಕರ್ತವ್ಯ ಪ್ರಾಮಾಣಿಕವಾಗಿ ಆದಂತಾಗುತ್ತದೆ. ‘ತುಮಕೂರು ಜಿಲ್ಲೆಯ ಪಾಲಿಗೆ ನೀರಿನ ಹಿರೋ ಆಗುತ್ತೀರಿ’ ಮುಂದೆ ಶ್ರೀ ಜಿ.ಎಸ್.ಬಸವರಾಜ್ ರವರು ಸೇರಿದಂತೆ ಜಿಲ್ಲೆಯ ಮೂರು ಜನ ಸಂಸದರಾದ ಕೇಂದ್ರ ಸಚಿವರಾದ ಶ್ರೀ ನಾರಾಯಣಸ್ವಾಮಿರವರು ಮತ್ತು ಶ್ರೀ ಡಿ.ಕೆ.ಸುರೇಶ್ ರವರು ಕೇಂದ್ರ ಸರ್ಕಾರದಲ್ಲಿ ಶ್ರಮಿಸಲಿ. ನನಗೆ ತಿಳಿದ ಪ್ರಕಾರ ಶೇ 100 ರಷ್ಟು ಯೋಜನೆ ಮಂಜೂರಾತಿ ಗ್ಯಾರಂಟಿ. ಇದು ‘ಬಸವರಾಜ್ ರವರ ಪ್ರತಿಜ್ಞೆ ?’
ಬಲ್ಲ ಮೂಲಗಳ ಪ್ರಕಾರ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಬೆಂಗಳೂರಿಗೆ ನದಿ ನೀರು ಕೊಡಲು ಮುಂದಿನ ಆರು ತಿಂಗಳಲ್ಲಿ ಕನಿಷ್ಟ 50 ರಿಂದ 100 ಟಿ.ಎಂ.ಸಿ ಅಡಿ ನೀರಿನ ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರಂತೆ.
ಚಿತ್ರದುರ್ಗದ ಜಿಲ್ಲೆಯ ವಾಟರ್ ಬ್ಯಾಂಕ್ ವಾಣಿ ವಿಲಾಸಕ್ಕೆ 26 ಟಿ.ಎಂ.ಸಿ ಅಡಿ ನೀರಿ£ ಅಲೋಕೇಷನ್ ಮಾಡಿ, ಉಳಿದ ನೀರನ್ನು ಸಂಗ್ರಹ ಮಾಡಲು ತುಮಕೂರು ಜಿಲ್ಲೆಯಲ್ಲಿ ಹೊಸ ಡ್ಯಾಂ/ ವಾಟರ್ ಬ್ಯಾಂಕ್ ನಿರ್ಮಾಣ ಮಾಡಲು ತುದಿಗಾಲಲ್ಲಿ ನಿಂತಿದ್ದಾರಂತೆ. ಹೊಸ ಡ್ಯಾಂ ನೀಲಿ ನಕ್ಷೆಯೂ ಸಿದ್ಧವಾಗಿದೆಯಂತೆ.
ಬೆಂಗಳೂರಿಗೆ ನೀರು ಕೊಂಡೊಯ್ಯುವಾಗ ದಾರಿಯಲ್ಲಿ ಸಿಗುವ ಪ್ರದೇಶಗಳಿಗೂ ನೀರು ಕೊಡುವುದು ಸಂಪ್ರದಾಯ, ಈ ಯೋಜನೆಯಲ್ಲಿನ ಕೆರೆಗಳಿಗೆ ಶೇ 100 ರಷ್ಟು ತುಂಬಿಸಲು ತುಮಕೂರು ಜಿಲ್ಲೆಗೆ ದೊರೆಯುವುದು ಖಚಿತವಂತೆ.
ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು 2025 ರೊಳಗೆ ಪೂರ್ಣಗೊಳಿಸುವ ಎನ್.ಐ.ಪಿ ಯೋಜನೆಯ ಪಟ್ಟಿಯಲ್ಲಿ ಇವೆಲ್ಲಾ ಈಗಾಗಲೇ ಸೇರ್ಪಡೆ ಆಗಿವೆ. ರಾಜ್ಯದಿಂದ ಕೇಂದ್ರಕ್ಕೆ ಪ್ರಸ್ತಾವನೆ ಹೋದ ಮೇಲೆ ಮಂಜೂರು ಮಾಡಲೇ ಬೇಕು ಎಂಬ ವಾತವಾರಣ ಕಾನೂನು, ನಿಯಮ ಪ್ರಕಾರ ಸಿದ್ಧವಾಗಿದೆ. ಪಕ್ಕಾ ವೇದಿಕೆ ಆಗಿದೆ.
‘MODI ಯವರು ಮೋಸ ಮಾಡುವುದಿಲ್ಲಾ ಎಂಬ ಭರವಸೆ ನಮಗೆ ಇದೆ. ನೀವೂ ಮೋಸ ಮಾಡ ಬೇಡಿ ಅಷ್ಟೆ ! ನಿಮ್ಮ ಇಲಾಖೆಯ ಪ್ರಸ್ತಾವನೆ, ಸಂಸದರ ಸಲಹೆ ಮೇರೆಗೆ ಪರಿಷ್ಟøತ ಪ್ರಸ್ತಾವನೆ ಅಧ್ಯಯನ ಮಾಡಿದ ನಂತರ, ಮುಂದಿನ ಮಾತು’.