TUMAKURU:SHAKTHIPEETA FOUNDATION
ತುಮಕೂರು ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಒಂದೇ ದಿಶಾ ಪೋರ್ಟಲ್ ನಲ್ಲಿ ತರುವ ಕಸರತ್ತು ಇನ್ನೂ ನಡೆಯುತ್ತಲೇ ಇದೆ. ಎನ್.ಐ.ಸಿ ವತಿಯಿಂದ ಪೋರ್ಟಲ್ ಡಿಸೈನ್ ಆರಂಭವಾಗಿದೆ. ದಿಶಾ ಸಮಿತಿಯಲ್ಲಿ ಈಗಾಗಲೇ ಉದ್ಘಾಟನೆಯೂ ಆಗಿದೆ.
ಪೋರ್ಟಲ್ ಕೆಲಸ ನಿರ್ವಹಿಸಲು ಹೆಚ್ಚುವರಿಯಾಗಿ ತಾತ್ಕಾಲಿಕವಾಗಿ 3 ಜನ ನೇಮಕ ಮಾಡಿದ್ದು, ಇವರಿಗೆ ಯಾರು ವೇತನ ನೀಡಬೇಕು, ಹೇಗೆ ನೀಡಬೇಕು ಎಂಬ ಕಸರತ್ತು ನಡೆದಿದೆ. ಆರಂಭದಲ್ಲಿ ತುಮಕೂರು ಜಿಲ್ಲಾ ಪಂಚಾಯತ್ ಮೂಲಕ ನೀಡುವ ಬಗ್ಗೆ ಚರ್ಚೆ ನಡೆದಿತ್ತು, ಅದೇಕೋ ಏನೋ ನಂತರ ದುಡ್ಡೇ ಇಲ್ಲ ಎಂದರು.
ಎನ್.ಐ.ಸಿಯವರು ಮೊದಲೇ ಹೇಳಿದ್ದರು. ಈಗ ಹಣ ನೀಡಲು ದಾನಿಗಳು ಮುಂದೆ ಬಂದಿದ್ದಾರೆ. ಅದಕ್ಕೂ ಸರ್ಕಾರದ ಅನುಮತಿ ಬೇಕಂತೆ. ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಸದಸ್ಯಕಾರ್ಯದರ್ಶಿಯವರಿಗೆ ಈಗಾಗಲೇ ದಾನಿಗಳು ಪತ್ರ ನೀಡಿದ್ದಾರೆ.
ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರು ಪತ್ರ ನೀಡಿದ್ದಾರೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆಯಬೇಕು. ಸರ್ಕಾರಕ್ಕೆ ಸಲ್ಲಿಸುವ ಪ್ರಸ್ತಾವನೆಯಲ್ಲಿ ಏನೇನು ಅಂಶಗಳು ಸೇರ್ಪಡೆ ಮಾಡಬೇಕು ಎಂಬ ಬಗ್ಗೆ ಸಮಾಲೋಚನೆ ನಡೆಯಿತು. ಮೂರು ತಿಂಗಳಲ್ಲಿ ಪೋರ್ಟಲ್ ಪೂರ್ಣಗೊಳಿಸಲು ಚಿಂತನೆ ನಡೆಸಲಾಗಿದೆ.
ಈ ಪ್ರಾಜೆಕ್ಟ್ ವರ್ಕ್‍ನ್ನು ದೆಹಲಿಯ ನೇತಾಜಿ ಸುಭಾಸ್ ಯೂನಿವರ್ಸಿಟಿ ಆಫ್ ಟೆಕ್ನಾಲಾಜಿಯ ಎಂ.ಟೆಕ್ ವಿಧ್ಯಾರ್ಥಿ ಲೈವ್ ಪ್ರಾಜೆಕ್ಟ್ ವರ್ಕ್ ಆಗಿ ತೆಗೆದು ಕೊಳ್ಳಲು ಮುಂದೆ ಬಂದಿದ್ದಾರೆ. ರಾಜ್ಯ ಸರ್ಕಾರದ ಹಂತದಲ್ಲಿ ಚರ್ಚೆ ಆರಂಭವಾಗಿದೆ.ಇದೊಂದು ನನ್ನ ಕನಸಿನ ಯೋಜನೆಯೂ ಆಗಿದೆ. ತಾವೂ ಸಲಹೆ ನೀಡಲು ಮನವಿ ಮಾಡಲಾಗಿದೆ.