3rd February 2025
Share

TUMAKURU:SHAKTHIPEETA FOUNDATION

ಶಕ್ತಿಪೀಠ ಕ್ಯಾಂಪಸ್ ನಲ್ಲಿ ನಿರ್ಮಾಣ ಮಾಡಿರುವ ಕೃತಕ ಅರಭ್ಭಿ ಸುಮುದ್ರ, ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರ ನಿರಂತರವಾಗಿ ಮೂರನೇ ವರ್ಷವೂ ತುಂಬಿವೆ. ಬಹುಷಃ ಇಲ್ಲಿ ಇಷ್ಟು ನೀರು ನಿಲ್ಲುವ ಸಾಧ್ಯಾತೆಯೇ ಇಲ್ಲ ಇದೊಂದು ವ್ಯರ್ಥ ಕಸರತ್ತು ಎನ್ನುವ ಜನರ ಮಾತುಗಳಿಗೆ ಗಂಗಾಮಾತೆಯೇ ಉತ್ತರ ನೀಡಿದ್ದಾಳೆ.

ಚಿತ್ರದುರ್ಗ ಬರದನಾಡು, ಹಿರಿಯೂರಿನಲ್ಲಿ ಕೃತಕ ಸಮುದ್ರ ಮಾಡಿದರೇ ನೀರು ಎಲ್ಲಿಂದ ಬರಬೇಕು ಎಂದು ಅಣಕವಾಡಿದ ಅಧಿಕಾರಿಗಳಿಗೂ ಎಚ್ಚರಿಕೆಯಂತೆ ಆಗಿದೆ. ವಿಶಿಷ್ಟವೆಂದರೆ ಮೊದಲನೇ ವರ್ಷ ತುಂಬಿದ ನಂತರ ಇದೂವರೆಗೂ ಖಾಲಿಯೇ ಆಗಿಲ್ಲ.

ಬರದ ನಾಡಿನಲ್ಲೊಂದು ಮಲೆನಾಡು ಸೃಷ್ಠಿ ಮಾಡಬೇಕು ಎಂಬ ಶಕ್ತಿಪೀಠ ಫೌಂಡೇಷನ್ ಕನಸು ನನಸಾಗುವ ಕಾಲ ದೂರವಿಲ್ಲ ಎಂಬ ಭಾವನೆ ನನ್ನದಾಗಿದೆ. ಈಗಿನ ನೀರಿನ ಸಾಮಾಥ್ರ್ಯ  ಸುಮಾರು ಒಂದು ಕೋಟಿ ಅರವತ್ತೆಂಟು ಲಕ್ಷ ಲೀಟರ್ ಆಗಿದೆ. ಇದನ್ನು 2 ಕೋಟಿ ಲೀಟರ್ ಸಾಮಾಥ್ರ್ಯಕ್ಕೆ ಹೆಚ್ಚಿಗೆ ಮಾಡುವ ಅವಕಾಶಗಳ ಬಗ್ಗೆ ಚಿಂತನೆ ನಡೆಯುತ್ತಿದೆ.