3rd March 2024
Share

TUMAKURU:SHAKTHIPEETA FOUNDATION 

01.08.1988 ರಂದು ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೋಕು ಬಿದರೆಹಳ್ಳ ಕಾವಲ್ ನಲ್ಲಿದ್ದ ಸುಮಾರು 930 ಎಕರೆ ಸರ್ಕಾರಿ ಜಮೀನಿನನಲ್ಲಿ, ಎಮ್ಮೆ ಕಾಯುವಾಗ ನನಗೆ ಬಂದ ‘ಐಡಿಯಾ’ ಏನಾದರೊಂದು ಬೃಹತ್ ಉಧ್ಯಮ ಆರಂಭಿಸಬೇಕು ಎಂಬ ಪರಿಕಲ್ಪನೆ. ಫಲಶೃತಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಸಹಕಾರದಿಂದ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ಹೆಚ್.ಎ.ಎಲ್ ವತಿಯಿಂದ ಹೆಲಿಕ್ಯಾಪ್ಟರ್ ಘಟಕ ಲೋಕಾರ್ಪಣೆ ಆಗಲು ತುದಿಗಾಲಲ್ಲಿ ನಿಂತಿದೆ.

01.08.1988 ರಿಂದ ಈ ನನ್ನ ಕನಸಿಗೆ ಶಕ್ತಿಕೊಡು ತಾಯಿ ಎಂದು ಕುಂದರನಹಳ್ಳಿ ಗಂಗಮಲ್ಲಮ್ಮ ದೇವಿಯನ್ನು ಪೂಜಿಸಿ ಕೊಂಡು ಬರಲಾಗಿತ್ತು. ದೇಶದ ಪ್ರಧಾನಿಯವರು ನಮ್ಮೂರಿಗೆ ಬಂದು ಹೆಚ್.ಎ.ಎಲ್ ಘಟಕದ ಶಂಕುಸ್ಥಾಪನೆ ಮಾಡಿದ ದಿವಸದಿಂದ, ಈ ಘಟಕ ಲೋಕಾರ್ಪಣೆಯಾಗುವ ವೇಳೆಗೆ ಹೊಸದಾಗಿ ಗಂಗಮಲ್ಲಮ್ಮ ದೇವಾಲಯ ನಿರ್ಮಾಣ ಮಾಡಿ, ಅದನ್ನು ಲೋಕಾರ್ಪಣೆ ಮಾಡಬೇಕು ಎನ್ನುವ ಕನಸು ನನೆಗುದ್ದಿಗೆ ಬಿದ್ದಿದೆ.

ಆದರೇ ನನಗೆ ಅರಿವೇ ಇಲ್ಲದ ಹಾಗೆ ಶಕ್ತಿಪೀಠ ಕ್ಯಾಂಪಸ್ ಲೋಕಾರ್ಪಣೆಯಾಗಲು ಅಣಿಗೊಳ್ಳುತ್ತಿದೆ. ಇದು ನಿಜಕ್ಕೂ 108 ಶಕ್ತಿದೇವತೆಗಳ ಆಶೀರ್ವಾದದ ಫಲ ಎಂಬ ತೃಪ್ತಿ ನನಗಿದೆ.

ಶ್ರೀ ಜಿ.ಎಸ್.ಬಸವರಾಜ್‍ರವರ ಪರಿಕಲ್ಪನೆಯ ಕರ್ನಾಟಕ ರಾಜ್ಯದ ಸಮಗ್ರ ನೀರಾವರಿ ಅಧ್ಯಯನಕ್ಕಾಗಿ ನೀರಾವರಿ ತಜ್ಞ ದಿ.ಜಿ.ಎಸ್.ಪರಮಶಿವಯ್ಯ ಅಧ್ಯಯನ ಕೇಂದ್ರವನ್ನು ತುಮಕೂರು ವಿಶ್ವ ವಿದ್ಯಾಲಯದಲ್ಲಿ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸಹಭಾಗಿತ್ವದಲ್ಲಿ ಆರಂಭಿಸುವ ಯೋಜನೆಗೂ ‘ವಿವಿಯ ಕುಲಗೆಟ್ಟ ರಾಜಕಾರಣ’ದಿಂದ ಹಿನ್ನಡೆಯಾಯಿತು.

ಅಂದಿನ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ಮತ್ತು ಜಲಸಂಪನ್ಮೂಲ ಸಚಿವರಾದ ಶ್ರೀ ಎಂ.ಬಿ.ಪಾಟೀಲ್ ರವರ ಸಹಕಾರದಿಂದ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಪರವಾಗಿ ಕರ್ನಾಟಕ ಸರ್ಕಾರ ತುಮಕೂರು ವಿಶ್ವ ವಿದ್ಯಾನಿಲಯಕ್ಕೆ ರೂ 50 ಲಕ್ಷ ಹಣ ನೀಡಿದ್ದು ಇತಿಹಾಸ. ಈ ಬಗ್ಗೆ ಮಾತನಾಡುವುದು   ಸಮಯವನ್ನು ವ್ಯರ್ಥ ಮಾಡಿದಂತೆ. ಒಳ್ಳೆಯ ಕಾಲ ಬಂದಾಗ ನೋಡೋಣ?

ಆದರೇ ಜನ ಒಂದು ರೀತಿ ತೊಂದರೆ ನೀಡಿದರೇ, ದೈವ ಇನ್ನೊಂದು ರೀತಿ ಸಹಕಾರ ನೀಡೇ ನೀಡುತ್ತದೆ ಎಂಬ ನಂಬಿಕೆಯಿಂದ 108 ಶಕ್ತಿಪೀಠಗಳ ಕೃಪೆಯಿಂದ ಭಾರತ ದೇಶದ ಸಮಗ್ರ ನೀರಾವರಿ ಅಧ್ಯಯನಕ್ಕಾಗಿ ಜಲಪೀಠ ಕ್ಯಾಂಪಸ್(ಸೂಕ್ತ ಹೆಸರು ಚಿಂತನೆ ಆರಂಭವಾಗಿದೆ) ದಿನಾಂಕ:04.05.2022 ರಂದು ಲೋಕಾರ್ಪಣೆಯಾಗಲು ಭರದ ಸಿದ್ಧತೆ ಆರಂಭವಾಗಿದೆ.

ಶ್ರೀ ಜಿ.ಎಸ್.ಬಸವರಾಜ್‍ರವರ ಮನವಿ ಮೇರೆಗೆ ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಊರಿಗೊಂದು ಕೆರೆ- ಕೆರೆಗೆ ನದಿ ನೀರು ಯೋಜನೆ ಮತ್ತು ರಾಜ್ಯದ ನದಿ ಜೋಡಣೆ’ ಡಿಪಿಆರ್ ಮಾಡಲು ಆದೇಶ ಮಾಡಿದ್ದಾರೆ. ಪ್ರಸ್ತುತ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಸ್ವತಃ ‘ಜಲತಜ್ಞ’ ರಾಗಿದ್ದಾರೆ.ಅವರು ಈ ಪ್ರಸ್ತಾನೆಗೆ  ಕೈಗೊಳ್ಳುವ ಯೋಜನೆಗಳಿಗೆ ಪೂರಕವಾಗಿ ‘ವಾಟರ್ ಮ್ಯೂಸಿಯಂ’ ಮಾಡುವ ಚಿಂತನೆಯೂ ಇದೆ.

 ಶ್ರೀ ಜಿ.ಎಸ್.ಬಸವರಾಜ್‍ರವರ ಅಭಿಮಾನಿಗಳು ಅವರಿಗೆ 60 ವರ್ಷ ಆದಾಗ ಬೃಹತ್ ಸಮಾರಂಭ ಮಾಡಬೇಕು ಎಂಬ ಆಲೋಚನೆಯನ್ನು ನನ್ನ ಮುಂದೆ ಮಂಡಿಸಿದ್ದರು. ಅಂದು ನನಗೆ ಒಂದು ಐಡಿಯಾ’ ಹೊಳೆಯಿತು. ಈ ಸಮಯದಲ್ಲಿ ತುಮಕೂರು ನಗರದ ಅಭಿವೃದ್ಧಿಗಾಗಿ ಒಂದು ಸಂಸ್ಥೆಯನ್ನು ಹುಟ್ಟುಹಾಕಿ ಮೌನವಾಗಿ ಶ್ರಮಿಸೋಣ ಎಂಬ ಮೊಳಕೆ ಹೊಡೆಯಿತು.

ದಿನಾಂಕ:04.05.2001 ರಂದು ನನ್ನ ಅಧ್ಯಕ್ಷತೆಯಲ್ಲಿಯೇ ಅಭಿವೃದ್ಧಿ ರೆವೂಲ್ಯೂಷನ್ ಫೋರಂ’ ಹುಟ್ಟು ಹಾಕಿದೆ. ಅಂದಿನಿಂದ ಇಂದಿನ ವರೆಗೂ ಆನೇ ನಡೆದಿದ್ದೇ ದಾರಿ’ ಎಂಬ ಭಾವನೆಯಿಂದ ಅಭಿವೃದ್ಧಿಯಲ್ಲಿ ಒಂದು ಕ್ರಾಂತಿಯನ್ನೆ ಮಾಡಿದೆ ಫೋರಂ.

ಮತ್ತೆ ಜಿ.ಎಸ್.ಬಸವರಾಜ್ ರವರಿಗೆ 80 ವರ್ಷ ತುಂಬಿದಾಗಲೂ ಇಂಥಹುದೇ ಒಂದು ಪ್ರಸ್ತಾವನೆ ಬಂತು. ಅವರ ಜೀವನ ಚರಿತ್ರೆ ಬರೆಯುವ ಕೆಲಸವನ್ನು ಹಲವಾರು ಜನ ಆರಂಭಿಸಿದ್ದಾರೆ. ನನ್ನನ್ನು ಭೇಟಿ ಮಾಡಿದ ಜನಕ್ಕೆ ನಾನು ನನ್ನದೇ ಆದ ಒಂದು ವಿಶಿಷ್ಠ ರೀತಿಯಲ್ಲಿ ಶ್ರೀ ಜಿ.ಎಸ್.ಬಸವರಾಜ್ ರವರ ಅಭಿವೃದ್ಧಿ ಡೈರಿ’ಯನ್ನು ಬರೆಯುವ ಇಂಗಿತ ವ್ಯಕ್ತಪಡಿಸಿದ್ದೆ.

ಕೊರೊನಾ ಮಹಾಮಾರಿಯಿಂದ ವಿಳಂಭವಾಗಿದೆ. ಪ್ರಸ್ತುತ ನಾನು ದಿನಾಂಕ:04.05.2022 ರಂದು ಶಕ್ತಿಪೀಠ ಕ್ಯಾಂಪಸ್ ನಲ್ಲಿ ಶ್ರೀ ಜಿ.ಎಸ್.ಬಸವರಾಜ್ ರವರ ಪರಿಕಲ್ಪನೆಯ ಹಾಗೂ ನನ್ನ ಅವರ 31 ವರ್ಷಗಳ ಸುಧೀರ್ಘವಾದ ಅಭಿವೃದ್ಧಿ ಒಡನಾಟದ ಅನುಭವದ ಆಧಾರದಲ್ಲಿ ‘ಅಭಿವೃದ್ಧಿ ಮ್ಯೂಸಿಯಂ’ ಪ್ರಾರಂಭ ಮಾಡುವ ಕನಸು ಕಂಡಿದ್ದೇನೆ.

ಇದೊಂದು ವಿಶಿಷ್ಠ ರೀತಿಯಲ್ಲಿ ಇರಬೇಕು ಎಂಬ ಪರಿಕಲ್ಪನೆ ಇದೆ. ಪ್ರಧಾನಿ ಶ್ರೀ ನರೇಂದ್ರಮೋದಿಯವರ, ಮಾಜಿ ಪ್ರಧಾನಿಯವರಾದ ದಿ.ರಾಜೀವ್ ಗಾಂಧಿಯವರ, ದಿ.ಅಟಲ್ ಬಿಹಾರಿ ವಾಜಪೇಯಿರವರ ಮತ್ತು ಶ್ರೀ ಮನೋಮೋಹನ್ ಸಿಂಗ್ ರವರ ಅವಧಿಯಲ್ಲಿ ಬಸವರಾಜ್ ಅವರ ಅಭಿವೃದ್ಧಿ ಯೋಜನೆಗಳ ಅನುಭವದ ಡಿಜಿಟಲ್ ದಾಖಲೆ ಮಾಡುವುದು,

ಜೊತೆಗೆ ಸ್ವಾತಂತ್ರ್ಯ ಬಂದಾಗಿನಿಂದ, ಈವರೆಗೂ ಮತ್ತು ನಿರಂತರವಾಗಿ ಮುಂದೆ ಯಾರೇ ಬಂದರೂ ಅನೂಕೂಲವಾಗುವ ತುಮಕೂರು ಜಿಲ್ಲೆಯ ಸಂಸದರ ಪೋರ್ಟಲ್ ಮಾಡುವುದು, ತುಮಕೂರು ಜಿಲ್ಲಾ ಮಟ್ಟದ ದಿಶಾ ಪೋರ್ಟಲ್ ಮಾಡುವುದು. ತುಮಕೂರು ಜಿಲ್ಲೆಯ ದಿಶಾ ಮಾನಿಟರಿಂಗ್ ಸೆಲ್ ಮಾಡುವುದು. ಕರ್ನಾಟಕ ರಾಜ್ಯ ಸರ್ಕಾರ ಕೇಂದ್ರದಿಂದ ಹೆಚ್ಚಿಗೆ ಅನುದಾನ ಪಡೆಯಲು ರೂಪುರೇಷೆಗಳ ಅಧ್ಯಯನ ಮತ್ತು ದೇಶದಲ್ಲಿ ವಿದೇಶಗಳ ಹೂಡಿಕೆಯ ಅಧ್ಯಯನದ ವರದಿಗಳ ಬಗ್ಗೆ ಡಿಜಿಟಲ್ ದಾಖಲೆ ಪ್ರಯತ್ನ ಮಾಡಲು ಚಿಂತನೆ ನಡೆಸಲಾಗಿದೆ.

 ಪಿಹೆಚ್‍ಡಿ  ಮಾಡುವ ವಿದ್ಯಾರ್ಥಿಗಳು, ಪ್ರಾಜೆಕ್ಟ್ ವರ್ಕ್ ಮಾಡುವ ವಿದ್ಯಾರ್ಥಿಗಳ ಸಹಕಾರ ಪಡೆಯಲು ಚಿಂತನೆ ನಡೆಸಲಾಗಿದೆ. ಅಭಿವೃದ್ಧಿ ಚಿಂತಕರಾದ ಶ್ರೀ ಟಿ.ಆರ್.ರಘೋತ್ತಮರಾವ್ ರವರು ಸೇರಿದಂತೆ ಪಕ್ಷಾತೀತವಾಗಿ ಸುಮಾರು 1000 ಜನ ಶ್ರೀ.ಜಿ.ಎಸ್.ಬಸವರಾಜ್ ರವರ ಅಭಿಮಾನಿಗಳ ಸಹಕಾರದಿಂದ ಅರ್ಥಪೂರ್ಣವಾದ ಒಂದು ಇತಿಹಾಸ ಸೃಷ್ಠಿ ಮಾಡಬೇಕೆಂಬುದು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಕನಸಾಗಿದೆ. ತಾವೂ ಸಹಕರಿಸಬಹುದಾಗಿದೆ.

ಈ ಬಗ್ಗೆ ಸಲಹೆ, ಮಾರ್ಗದರ್ಶನ ನೀಡಲು ಮನವಿ ಮಾಡಲಾಗಿದೆ

About The Author