20th September 2023
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆಯಲ್ಲಿ ಹೇಮಾವತಿ ನೀರಿಗಾಗಿ ಕಿತ್ತಾಟ ನಿರಂತರವಾಗಿ ನಡೆದಿದೆ. ಹೇಮಾವತಿ ಅಚ್ಚುಕಟ್ಟು ಪ್ರದೇಶದ ಕೆರೆಗಳಿಗೆ ಈವರೆಗೂ  ಅಧಿಕೃತವಾಗಿ ಹೇಮಾವತಿ ನೀರು ತುಂಬಿಸುವ  ಯೋಚನೆ ಮಾಡದೇ ಇರುವ ಎಲ್ಲಾ ಪಕ್ಷಗಳ ರಾಜಕಾರಣಿಗಳಿಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ.

ಕೃಷ್ಣಾಕೊಳ್ಳದ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುತ್ತಿದ್ದಾರೆ. ಅದಕ್ಕೆ ರಂಪಾಟ ಬೇರೆ. ಮೂಲ ಅಚ್ಚುಕಟ್ಟು ವ್ಯಾಪ್ತಿಯ ಗ್ರಾಮಗಳಿಗೆ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನಲ್ಲಿ ಮೂಲಕ ಕುಡಿಯುವ ನೀರು ಒದಗಿಸಲು ಕೆರೆಗಳಿಗೆ ನೀರು ತುಂಬಿಸಲೇ ಬೇಕಿದೆ.

ಇಂಥಹದೊಂದು ಪ್ರಯತ್ನವನ್ನು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಆರಂಭಿಸಿದ್ದಾರೆ. ಇತರೆ ರಾಜಕಾರಣಿಗಳು ಏನಂತಾರೋ? ನೋಡಬೇಕು.