19th May 2024
Share

TUMAKURU:SHAKTHIPEETA FOUNDATION

ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ 7 ಮೆಗಾ ಜವಳಿ ಪಾರ್ಕ್ ಆರಂಭಿಸಲು ಇತ್ತೀಚೆಗೆ ನಡೆದ ಸಚಿವ ಸಂಪುಟದ ಸಭೆಯಲ್ಲಿ ಅನುಮೋದನೆ ನೀಡಿದೆ.

ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಕಲ್ಬುರ್ಗಿ, ತುಮಕೂರು ಮತ್ತು ವಿಜಯಪುರದಲ್ಲಿ ಜವಳಿ ಪಾರ್ಕ್ ಸ್ಥಾಪಿಸಲು ಅಗತ್ಯ ಮೂಲಭೂತ ಸೌಲಭ್ಯ ಒದಗಿಸುವುದಾಗಿ ದಿನಾಂಕ:13.10.2021 ರಂದು ಪತ್ರ ಬರೆಯುವ ಮೂಲಕ ಎಲ್ಲರ ಚಿತ್ತವನ್ನು ದೆಹಲಿಯತ್ತ ನೋಡುವಂತೆ ಮಾಡಿದ್ದಾರೆ.

ತುಮಕೂರು ಯುಪಿಎ ಅವಧಿಯ ನಿಮ್ಜ್ ಅಥವಾ ಎನ್‍ಡಿಎ ಅವಧಿಯ ಇಂಡಸ್ಟ್ರಿಯಲ್ ನೋಡ್ ಎಂಬ ಹೆಸರಿನ ಕೈಗಾರಿಕಾ ಪ್ರದೇಶ ದೇಶದ ಅತ್ಯಂತ ಎರಡನೆಯ ಅತಿ ದೊಡ್ಡ ಕೈಗಾರಿಕಾ ಹಬ್ ಆಗಲಿದೆ.

ತುಮಕೂರು ನಿಮ್ಜ್ ಅನ್ನು ಕೇಂದ್ರ ಸರ್ಕಾರದಿಂದ ಮಂಜೂರು ಮಾಡಿಸುವಾಗಲೂ ಮತ್ತು ಜವಳಿ ಪಾರ್ಕ್ ಮಂಜೂರು ಮಾಡಿಸುವಾಗಲೂ ಶ್ರೀ ಜಿ.ಎಸ್.ಬಸವರಾಜ್ ರವರು ನಿರಂತರವಾಗಿ ಕಡತದ ಅನುಸರಣೆ ಮಾಡುವ ಮೂಲಕ ತಮ್ಮ ಕರ್ತವ್ಯವÀನ್ನು ನಿಭಾಯಿಸಿದ್ದಾರೆ.

ನಿನ್ನೆ ಈ ಪತ್ರ ಪಡೆಯಲು ರಾಜ್ಯ ಸರ್ಕಾರದ ಸಣ್ಣ ಕೈಗಾರಿಕಾ ಕಾರ್ಯದರ್ಶಿ ಶ್ರೀ ಪಂಕಜಕುಮಾರ ಪಾಂಡೆರವರ ಕಚೇರಿಗೆ ಹೋದಾಗ ಅಲ್ಲಿನ ನೌಕರ ವರ್ಗ ಬಸವರಾಜ್ ಸಾಹೇಬ್ರು ಕಿರುಬ ಹಿಡಕೊಂಡ ಹಾಗೆ ಇಡಕೊಂಡು ಬಿಡುತ್ತಾರೆ ಅಲ್ವಾ ಸಾರ್. ನೀವೀಬ್ರೂ ನಿಮ್ಜ್ ಆಗುವಾಗಲೂ ಇದೇ ರೀತಿ ಕಡತದ ಅನುಸರಣೆ ಮಾಡಿದ್ದೀರಿ ಎಂದು ನಗುತ್ತಿದ್ದರು.

ಮೋದಿಯವರು ಯಾರೂ ಹಿತವರು ಈ ಮೂವರೊಳಗೆ ಎನ್ನುತ್ತಾರೋ ಅಥವಾ ಮುಂದಿನ ವಿಧಾನ ಸಭೆ ಚುನಾವಣೆ ಗಮನದಲ್ಲಿ ಇಟ್ಟುಕೊಂಡು 3 ಕ್ಕೂ ಜೈ ಎನ್ನುತ್ತಾರೋ ಕಾದು ನೋಡೋಣ?

ಶಿರಾ-ಮಧುಗಿರಿ-ಕೊರಟಗೆರೆ ಮೂರು ವಿಧಾನ ಸಭಾ ಕೇತ್ರಗಳ ವ್ಯಾಪ್ತಿಗೆ ಒಂದು ಕೊಡುಗೆಯಾಗಲಿದೆ.ಕೊರಟಗೆರೆಯಲ್ಲಿ ಕಾಂಗ್ರೇಸ್ ಶಾಸಕರಾದ ಶ್ರೀ ಡಾ.ಜಿ.ಪರಮೇಶ್ವರ್ ರವರು,  ಶಿರಾದಲ್ಲಿ ಬಿಜೆಪಿ ಶಾಸಕರಾದ ಶ್ರೀ ರಾಜೇಶ್ ಗೌಡರವರು ಮತ್ತು ಮಧುಗಿರಿಯಲ್ಲಿ ಜೆಡಿಎಸ್ ಶಾಸಕರಾದ ಶ್ರೀ ವೀರಭಧ್ರಯ್ಯನವರು ಇದ್ದಾರೆ. ಜೊತೆಗೆ ಶಿರಾ ಚಿತ್ರದುರ್ಗ ಲೋಕಸಭಾ ವ್ಯಾಪ್ತಿಗೆ ಬರಲಿದೆ. ಸಂಸದರಾದ ಶ್ರೀ ನಾರಾಯಣ ಸ್ವಾಮಿಯವರು ಕೇಂದ್ರದಲ್ಲಿ ಸಚಿವರೂ ಆಗಿದ್ದಾರೆ. ಎಲ್ಲರೂ ಶ್ರೀ ಬಸವರಾಜ್ ರವರ ಕನಸಿಗೆ ಸ್ಪಂಧಿಸ ಬೇಕಿದೆ.

ತುಮಕೂರು ಜಿಲ್ಲಾಧಿಕಾರಿಯವರಾದ ಶ್ರೀ ವೈ.ಎಸ್.ಪಾಟೀಲ್ ರವರು , ಅಪರ ಜಿಲ್ಲಾಧಿಕಾರಿ ಶ್ರೀ ಚನ್ನಬಸಪ್ಪನವರು, ಮಧುಗಿರಿ ಉಪವಿಭಾಗಾಧಿಕಾರಿಯವರಾದ ಶ್ರೀ ಸೋಮಪ್ಪ ಕಡುಕೋಳ್ ರವರು ಮತ್ತು ಮೂರು ತಾಲ್ಲೋಕಿನ ತಹಶೀಲ್ಧಾರ್ ರವರು ಸೇರಿದಂತೆ ಎಲ್ಲಾ ಅಧಿಕಾರಿಗಳು ಮತ್ತು ನೌಕರವರ್ಗ ಅತಿ ಕಡಿಮೆ ಅವಧಿಯಲ್ಲಿ ಜಮೀನು ಗುರುತಿಸಿ ನೀಡಿರುವುದು ಅಭಿನಂದನೀಯ.

ಜಿಲ್ಲಾಡಳಿತ ಈ ರೀತಿ ಕಾರ್ಯ ನಿರ್ವಹಿಸಿದರೇ ನಿಜಕ್ಕೂ ಕೇಂದ್ರದ ಅನುದಾನ ತರಲು ಅನೂಕೂಲವಾಗಲಿದೆ.

ಮಧುಗಿರಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಕೆ.ಎನ್.ರಾಜಣ್ಣನವರು ಜವಳಿ ಪಾರ್ಕ್‍ಗೆ ಅನೂಕೂಲವಾಗುವ ರೀತಿಯಲ್ಲಿ ಸ್ಕಿಲ್ ತರಬೇತಿಯನ್ನು ಶೀಘ್ರವಾಗಿ ಆರಂಭಿಸುವ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಲು ಪೂರಕ ವಾತಾವಾರಣ ಸೃಷ್ಠಿಸಲು ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರ ಜೊತೆಯಲ್ಲಿ ಚರ್ಚಿಸಿದ್ದಾರೆ ಎನ್ನಲಾಗಿದೆ.

ಮುಂದಿನ ದಿಶಾ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲು ಪಿಪಿಟಿ ಸಿದ್ಧಪಡಿಸಲು ಶ್ರೀ ಜಿ.ಎಸ್.ಬಸವರಾಜ್ ರವರು ಈಗಾಗಲೇ ಸೂಚಿಸಿದ್ದಾರೆ. ಸ್ಕಿಲ್ ಅಧಿಕಾರಿಗಳು ಮತ್ತು ಜವಳಿ ಇಲಾಖೆಯ ಅಧಿಕಾರಿಗಳು ಗಮನ ಹರಿಸಲು ಸೂಚಿಸಿದ್ದಾರೆ.