16th September 2024
Share

ಯಾವುದೇ ಕಾರಣಕ್ಕೂ ಹೇಮಾವತಿ ಅಚ್ಚುಕಟ್ಟು ಪ್ರದೇಶದ ಜಮೀನನ್ನು ಹೆಚ್.ಎ.ಎಲ್ ಗೆ ಕೊಡಲು ಬರುವುದಿಲ್ಲಾ. ರೈತರು ಗಾಬರಿ ಪಡುವುದು ಅಗತ್ಯವಿಲ್ಲ ಎಂದು ಗುಬ್ಬಿ ತಾಲ್ಲೂಕು ಕಾರೇಹಳ್ಳಿ ರೈತರಿಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಭರವಸೆ ನೀಡಿದ್ದಾರೆ.

ನಾನು ಕೇಂದ್ರ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ರವರಿಗೆ, ಈಗ ಹೆಚ್.ಎ.ಎಲ್ ರವರು ಕೇಳಿರುವ ಜಮೀನು ನಕ್ಷೆ ಮತ್ತು ಹಾಲಿ ಹೆಚ್.ಎ.ಎಲ್ ಗೆ ಜಮೀನು ನೀಡಿರುವ ನಕ್ಷೆ ಮತ್ತು ಬಿದರೆ ಹಳ್ಳ ಕಾವಲ್ ಜಮೀನನ್ನು ಅರಣ್ಯ ಇಲಾಖೆಗೆ ಈ ಹಿಂದೆ ನೀಡಿರುವ ನಕ್ಷೆ ತೋರಿಸಿ, 592 ಎಕರೆ ರೈತರ ಜಮೀನು ಬಿಟ್ಟು ಅರಣ್ಯ ಇಲಾಖೆಗೆ ನೀಡಿರುವ ಜಮೀನನ್ನು ಪಡೆಯರಿ ಎಂದು ಮನವಿ ಮಾಡಲು ಎಲ್ಲಾ ಸೇರಿಸಿ ಒಟ್ಟಿಗೆ ನಕ್ಷೆ ನೀಡಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆಯೇ ಹೊರತು ರೈತರ ಜಮೀನು ಪಡೆಯಲು ನಾನು ಇದೂವರೆಗೂ ಪತ್ರ ಬರೆದಿಲ್ಲ ಮತ್ತು ಮುಂದೆಯೂ ಬರೆಯುವುದಿಲ್ಲಾ ಎಂದು ಸ್ಪಷ್ಟ ಭರವಸೆ ನೀಡಿದರು.

ಅರಣ್ಯ ಇಲಾಖೆಯ 1093 ಎಕರೆ ಜಮೀನು ಬದಲಿಗೆ ನಿಯಾಮನುಸಾರ ಸರ್ಕಾರಿ ಜಮೀನು ಗುರುತಿಸಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಹೆಚ್.ಎ.ಎಲ್ ಸಭೆಯಲ್ಲಿಯೇ ನಾವೂ ಈ ಬಗ್ಗೆ ಸಭೆ ನಡವಳಿಕೆ ಮಾಡಿಸಿದ್ದೇವೆ ಎಂದು ತಿಳಿಸಿದರು.

ರೈತರೊಬ್ಬರೂ  ನೀವಂತೆ  ಸಾರ್ ಈ ಜಮೀನು ತೆಗೆದುಕೊಳ್ಳಲು ಹೇಳಿದ್ದು, ಬಿದರೆಹಳ್ಳ ಕಾವಲ್  ಜನ ಮಾತನಾಡುತ್ತಾರೆ ಎಂದು ನನಗೆ ಕೇಳಿದ  ಮಾತಿಗೆ ಹಿಂದೆ ಹೆಚ್.ಎ.ಎಲ್ ಗೆ ಜಮೀನು ನೀಡುವಾಗ ಯಾವುದೇ ಕಾರಣಕ್ಕೂ ಬಿದರೆಹಳ್ಳ ಕಾವಲ್ ಗ್ರಾಮದ ಜಮೀನನ್ನು ಭೂ ಸ್ವಾಧೀನ ಮಾಡಲು ಪ್ರಯತ್ನ ಮಾಡಬೇಡಿ ಎಂದು ಆಗಿನ ಜಿಲ್ಲಾಧಿಕಾರಿಯವರಾದ ಶ್ರೀ ಕೆ.ಪಿ.ಮೋಹನ್ ರಾಜ್ ರವರ ಸಲಹೆ ಮೇರೆಗೆ ಗಂಗಮಲ್ಲಮ್ಮನ ಮೇಲೆ ಆಣೆ ಮಾಡಿ ಅವರಿಗೆ ಮಾತು ಕೊಟ್ಟಿದ್ದೇನೆ. ಆದ್ದÀರಿಂದ ಬಿದರೆ ಹಳ್ಳ ಕಾವಲ್ ರೈತರ ಜಮೀನು ಪಡೆಯಲು ನಾನಾಗಲಿ ಸಂಸದರಾಗಲಿ ಪತ್ರ ಬರೆದಿಲ್ಲಾ ಎಂದು ಸ್ಪಷ್ಟ ಪಡಿಸಿದ್ದೇನೆ.

ನಾನು ಮತ್ತು ಶ್ರೀ ಗುರುಸಿದ್ದಪ್ಪನವರು ಬಂದು ನಿಮ್ಮ ಜಮೀನು ನೋಡಿಕೊಂಡು ಬಂದಿದ್ದೇವೆ, ಯಾವುದೇ ಕಾರಣಕ್ಕೂ ನಾನು ಮಾತು ತಪ್ಪುವುದಿಲ್ಲಾ. ನನ್ನ ಮೇಲೆ ಅಪವಾದ ಕೂರಿಸುವುದು ಕೆಲವರ ಕೆಲಸವಾಗಿದೆ, ಆದರೂ ಬಿದರೆಹಳ್ಳ ಕಾವಲ್ ಗೆ ಸೇರಿದ ಅರಣ್ಯ ಜಮೀನನ್ನು ಹೆಚ್.ಎ.ಎಲ್ ಗೆ ಕೊಡಿಸಲು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರು, ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ಗುಬ್ಬಿ ಶಾಸಕರಾದ ಶ್ರೀ ಎಸ್.ಆರ್.ಶ್ರಿನಿವಾಸ್ ರವರು ಸೇರಿದಂತೆ ಜಿಲ್ಲಾಡಳಿತ ಸಭೆಯಲ್ಲಿ ನಿರ್ಣಯ ಮಾಡಿದರೆ ಮಾತ್ರ ನಾನೂ ಶ್ರಮಿಸುತ್ತೇನೆ. ಇವರಲ್ಲಿ ಒಗ್ಗಟ್ಟು ಇಲ್ಲದಿದ್ದರೆ ಏನೂ ಮಾಡಲು ಸಾದ್ಯಾ?

ನನಗೆ ಹೆಚ್.ಎ.ಎಲ್ ಘಟಕ ಮಂಜೂರಾತಿ ಮಾತ್ರ ಚಾಲೇಂಜ್ ಆಗಿತ್ತು. ಅಂದು ಶ್ರೀ ಬಸವರಾಜ್ ರವರು ಸೋತಿದ್ದಾಗಲೂ ನಾನು ಬಿಡಲಿಲ್ಲ, ಗೋವಾಕ್ಕೆ ಶಿಪ್ಟ್ ಮಾಡುವ ವಿಚಾರ ಮೊದಲು ಹೇಳಿದ್ದು ನನಗೆ ಅಧಿಕಾರಿಗಳು, ಬಸವರಾಜ್ ರವರು ದೆಹಲಿಗೆ ಬರದಿದ್ದರೂ ನಾನೇ ಸುಮಾರು 7 ಸಲ ಹೋಗಿ ವಾರ ಗಟ್ಟಲೇ ಉಳಿದುಕೊಂಡು ಶ್ರಮಿಸಿದ್ದು ನಿಜ.

ಗುರುಸಿದ್ದಪ್ಪನವರ ಬಳಿ ಎಂಪಿಯವರು ಇವನಿಗೇನು ಇಷ್ಟೊಂದು ಹುಚ್ಚು ಎಂದು ಮಾತನಾಡಿದ್ದರಂತೆ ಇಲ್ಲೇ ಇದ್ದಾರೆ ಕೇಳಿ. ಈ ಯೋಜನೆ ಬಿಟ್ಟಿದ್ದರೆ ಮೈನ್ಸ್ ಲಾಭಿಯಿಂದ ಕಬ್ಬಿಣದ ಕೈಗಾರಿಕೆ ಮಾಡಿ ಹಾಳು ಮಾಡಲು ಒಂದು ಗ್ಯಾಂಗ್ ರೆಡಿಯಿತ್ತು ಎಂದು ಮನವರಿಕೆ ಮಾಡಲಾಯಿತು.