9th October 2024
Share

TUMAKURU:SHAKTHIPEETA FOUNDATION

ಗುಬ್ಬಿಯಲ್ಲಿ 610 ಎಕರೆ ಪ್ರದೇಶದಲ್ಲಿ ಹೆಚ್.ಎ.ಎಲ್.ವತಿಯಿಂದ ಯುದ್ಧ ಹೆಲಿಕ್ಯಾಪ್ಟರ್ ತಯಾರಿಕಾ ಘಟಕ ಲೋಕಾರ್ಪಣೆ ಮಾಡಲು ತುದಿಗಾಲಲ್ಲಿ ನಿಂತಿದೆ. ಕೇಂದ್ರ ಸರ್ಕಾರದಿಂದ ಹೆಲಿಕ್ಯಾಪ್ಟರ್ ಉತ್ಪಾದನೆ ಮಾಡಲು ಆದೇಶಕ್ಕಾಗಿ ಕಾಯುತ್ತಿದೆಯಂತೆ.

ಘಟಕವನ್ನು ವಿಸ್ತರಣೆ ಮಾಡಲು ಇನ್ನೂ ಸುಮಾರು 592 ಎಕರೆ 36 ಗುಂಟೆ ಜಮೀನು ಗುರುತು ಮಾಡಲಾಗಿದೆಯಂತೆ. ಇದೂ ನಮ್ಮ ದೇಶದ ಒಂದು ಯುದ್ಧ ದೇವಾಲಯ’ ಜಮೀನು ನೀಡಲೇ ಬೇಕು. ರೈತರ ಜಮೀನು ಬೇಡ, ಹಿಂದೆ ಅರಣ್ಯ ಇಲಾಖೆಗೆ ನೀಡಿರುವ 1093 ಎಕರೆ ಜಮೀನನ್ನು ನಿಯಾಮುನುಸಾರ ಹಿಂಪಡೆದು  ಹೆಚ್.ಎ.ಎಲ್ ಗೆ ನೀಡಿ ಎಂಬ ಕೂಗೂ ರೈತರದ್ದು.

ಈ ಜಮೀನು ನೀಡುವ ಬದಲಿಗೆ ತುಮಕೂರು ಜಿಲ್ಲೆಯ 330 ಗ್ರಾಮಪಂಚಾಯಿತಿಯ, 11 ನಗರ ಸ್ಥಳೀಯ ಸಂಸ್ಥೆಗಳ, 10 ತಾಲ್ಲೋಕುಗಳ ಮತ್ತು ಒಂದು ಜಿಲ್ಲಾ ಮಟ್ಟದ ಒಟ್ಟು 352 ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿಗಳು ಇವೆ. ಈ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಗುರುತಿಸಿ ಕನಿಷ್ಠ ಒಂದೊಂದಂತೆ 352 ಬಯೋಡೈವರ್ಸಿಟಿ ಉದ್ಯಾನ ವನ ನಿರ್ಮಾಣ ಮಾಡಲು ಜಿಲ್ಲಾಡಳಿತ ಚಿಂತನೆ ನಡೆಸಲಿ.

ಈ ಉದ್ಯಾನವನ ನಿರ್ವಹಣೆ ಮಾಡಲು ಕನಿಷ್ಠ 704 ಜನರಿಗೆ ಉದ್ಯೋಗ ನೀಡಬಹುದು. ಊರಿಗೊಂದು ಉದ್ಯಾನವನ ಅಥವಾ ಊರಿಗೊಂದು ಬಯೋಡೈವರ್ಸಿಟಿ ವನ’ ಎಂದು ಕರೆಯ ಬಹುದು, ಇವುಗಳನ್ನು ಹೆಚ್.ಎ.ಎಲ್ ತನ್ನ ಸಿ.ಎಸ್.ಆರ್ ಫಂಡ್ ನಿಂದ ನಿರಂತರವಾಗಿ ನಿರ್ವಹಣೆ ಮಾಡಲಿ. ಇದರಿಂದ ಗ್ರಾಮೀಣ ಪ್ರದೇಶದ ವಾತಾವರಣ ಬದಲಾಗಲಿದೆ.

ಊರಿಗೊಂದು ಉದ್ಯಾನವನ ನಿರ್ಮಾಣದ ಬಗ್ಗೆಯೂ ಚಿಂತನೆ ನಡೆಸಲಿ. ಸುಮಾರು 3000 ಉದ್ಯಾನ ವನಗಳನ್ನು ನಿರ್ಮಾಣ ಮಾಡಬಹುದು. ನಾಟಿ ವೈಧ್ಯರು, ಹಕೀಮರು ಮತ್ತು ಪಾರಂಪರಿಕ ವೈದ್ಯರು ಔಷಧಿ ವನ ‘ ನಿರ್ಮಾಣ ಮಾಡಬಹುದು. ಸ್ರೀಶಕ್ತಿ- ಸ್ವಶಕ್ತಿ ಸಂಘಟನೆಗಳು ಮುಂದೆ ಬಂದಲ್ಲಿ ಒಳ್ಳೆಯದು. ಈ ಮನವಿಯನ್ನು ಕೇಂದ್ರ ರಕ್ಷಣಾ ಸಚಿರಾದ ಶ್ರೀ ರಾಜನಾಥ ಸಿಂಗ್ ರವರಿಗೆ ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರು ನೀಡಬಹುದಾಗಿದೆ.

ತುಮಕೂರು ಜಿಲ್ಲಾಧಿಕಾರಿಗಳು ಮನಸ್ಸು ಮಾಡಿದರೆ, ಅವರ ರೆವಿನ್ಯೂ ತಂಡದಿಂದ  3 ದಿವಸದಲ್ಲಿ ತುಮಕೂರು ಜಿಲ್ಲೆಯ ಗ್ರಾಮ, ತಾಂಡಾ, ಕಾಲೋನಿಗಳ ಸುಮಾರು 3000 ಎಕರೆ ಸರ್ಕಾರಿ ಜಮೀನು ಗುರುತಿಸಿ ಉದ್ಯಾನವನ ಮಾಡಲು ಪಟ್ಟಿ ನೀಡಬಹುದು.

ಬಿಎಂಸಿಗಳು ನೊಣ ಹೊಡೆಯುತ್ತಿವೆ, ಈ ಒಂದು ಹಸಿರು ಆಂದೋಲನ  ಆರಂಬಿಸಬಹುದೇ, ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್.ಪಾಟೀಲ್ ರವರೇ ನಿಮ್ಮ ಮೈಂಡ್ ಸಾಪ್ಟ್ ವೇರ್ ಏನು ಹೇಳುತ್ತದೆ? ಅದರ  ಮೇಲೆ ಯೋಜನೆ ಅವಲಂಭಿತ’

ವಿಜಯಪುರದ ಮಾಡೆಲ್ ಎಂದು ಕೊಳ್ಳಬಹುದೇ? ಮಾಜಿ ಜಲಸಂಪನ್ಮೂಲ ಸಚಿವರಾದ ಶ್ರೀ ಎಂ.ಬಿ.ಪಾಟೀಲ್ ರವರು ಅರಣ್ಯ ಬೆಳೆಸುವ ಯೋಜನೆ ನಮ್ಮ ಜಿಲ್ಲಾಧಿಕಾರಿಗಳಿಗೆ ಚೆನ್ನಾಗಿ ಗೊತ್ತಿದೆ.