19th March 2024
Share

TUMAKURU:SHAKTHI PEETA FOUNDATION

ಸಣ್ಣ ನೀರಾವರಿ ಇಲಾಖೆವತಿಯಿಂದ ತುಮಕೂರು ಜಿಲ್ಲೆಯ 10 ತಾಲ್ಲೋಕುಗಳಿಗೂ ‘ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆ ನಕ್ಷೆ ಮತ್ತು ವರದಿ ತಯಾರಿಸಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಪಣ ತೊಟ್ಟಿದ್ದಾರೆ.

ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿಯವರಾದ ಶ್ರೀ ಮೃತ್ಯುಂಜಯಸ್ವಾಮಿರವರು ಈಗಾಗಲೇ ನಿರ್ದೇಶನ ನೀಡಿದ್ದಾರೆ, ಸಂಸದರು ಹಲವಾರು ಸಭೆ ನಡೆಸಿ ಪಾಠ ಮಾಡಿದ್ದಾರೆ. ಆದರೂ ಸಂಸದರು ಒಪ್ಪುವ ರೀತಿಯಲ್ಲಿ ಯಾರು ಮಾಡಿಲ್ಲ.ಇನ್ನೂ ನಾಟಕ ಆಡುತ್ತಿದ್ದಾರೆ.

ಕೊನೆಗೆ ಕುಂದರನಹಳ್ಳಿ ರಮೇಶ್ ಅವರ ಗುಬ್ಬಿ ತಾಲ್ಲೋಕಿನ ನಕ್ಷೆ ಮತ್ತು ವರದಿ ತಯಾರಿಸಲಿ ನಂತರ ಅದೇ ಮಾದರಿಯಲ್ಲಿ ಎಲ್ಲಾ ತಾಲ್ಲೋಕುಗಳು ಸಿದ್ಧಪಡಿಸೋಣ ಎಂಬ ಕೊನೆ ಆಟಕ್ಕೆ ಬಂದಂತಿದೆ.

ದಿನಾಂಕ:20.10.2021 ರಂದು ಸಂಸದರ ಕಚೇರಿಗೆ ಗುಬ್ಬಿ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಶ್ರೀ ವಿನಯ್ ಬಂದು ಅವರು ಸಿದ್ಧಪಡಿಸಿರುವ ವರದಿ ತೋರಿಸಿದಾಗ ಸಂಸದರು, ಈ ರೀತಿಯಲ್ಲ, ಈ ಮಾದರಿ ಮಾಡಿ ಎಂದು ಸಲಹೆ ನೀಡಿದರು.

ನಂತರ ವಿನಯ್ ಸಂಸದರು ಹೇಳಿದ ರೀತಿ ಮಾಡಬೇಕಾದರೆ ನಾನು ಏನೇನು ಮಾಡಬೇಕು ಎಂಬ ಬಗ್ಗೆ ಮಾಹಿತಿ ಪಡೆದರು. ಅವರೇ ಕೈಯಲ್ಲಿ ಬರೆದು ಕೊಂಡರು. ಏನೇ ಆಗಲಿ, ಎಷ್ಟೇ ಕಷ್ಟ ಆಗಲಿ ಈ ರೀತಿ ಮಾಡಿಯೇ ತಿರುತ್ತೇನೆ ಎಂದು ಪ್ರತಿಜ್ಞೆ ಮಾಡಿದರು.

 ಸಾಕ್ಷಿಯಾಗಿ ದಿಶಾ ಸಮಿತಿ ಸದಸ್ಯರಾದ ಶ್ರೀ ಟಿ.ಆರ್.ರಘೋತ್ತಮರಾವ್ ರವರು ಮತ್ತು ಪರಿಸರವಾದಿ ಶ್ರೀ ಸಿದ್ಧಪ್ಪನವರು ಇದ್ದರು.

ಗುಬ್ಬಿ ಇಓ ರವರಿಗೆ ಕರೆ ಮಾಡಿ ತಮ್ಮ ತಾಲ್ಲೋಕಿನ 34 ಗ್ರಾಮ ಪಂಚಾಯಿತಿಗಳು ಮತ್ತು ಒಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳನ್ನು ಕರೆದು ಸಣ್ಣ ನೀರಾವರಿ ಇಲಾಖೆಗೆ ಬೇಕಾಗಿರುವ ಮಾಹಿತಿ ನೀಡಲು ಹೇಳಿದಾಗ ಅವರು ನಾಳೆಯೇ ಸಭೆ ಕರೆಯುವುದಾಗಿ ತಿಳಿಸಿದರು.

ಅಂದರೆ ದಿನಾಂಕ:21.10.2021 ರಂದೇ ಎಲ್ಲಾ ಪಿಡಿಓಗಳ ಸಭೆ ಕರೆದು ಚರ್ಚೆ ಮಾಡಿದ್ದಾರೆ. ಈ ಸಭೆಗೆ ಸಂಸದರು ಭಾಗವಹಿಸುವದಾಗಿ ಹೇಳಿದ್ದರು ಕಾರಣಾಂತರದಿಂದ ಹಾಜರಾಗಲು ಸಾಧ್ಯವಾಗಲಿಲ್ಲ.

ಸೋಮವಾರ ಎಲ್ಲಾ 34 ಗ್ರಾಮ ಪಂಚಾಯಿತಿ ಮತ್ತು ಪಟ್ಟಣ ಪಂಚಾಯಿತಿಯ ನಕ್ಷೆ ಮತ್ತು ಟೇಬಲ್ ನಲ್ಲಿರುವಂತೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ಇಓ ಶ್ರೀ ನರಸಿಂಹಯ್ಯನವರು ಮತ್ತು ಎಓ ಶ್ರೀಮತಿ ಶೋಭಾರವರು ಎಲ್ಲರಿಂದ ಮಾಹಿತಿ ಪಡೆದು ನೀಡುವುದಾಗಿ ಭರವಸೆ ನೀಡಿದ್ದಾರೆ.

ಮಾಹಿತಿ ಸಿಕ್ಕ ತಕ್ಷಣ ಸೆಕ್ಟ್ರಾ ಅಸೋಯೇಷನ್ ಸಿದ್ಧಪಡಿಸಿರುವ ನಕ್ಷೆಗೆ ತಾಳೆ ಹಾಕಿ, ಪಕ್ಕಾ ನಕ್ಷೆ ಮತ್ತು ವರದಿ ನೀಡಲಿದ್ದಾರೆ ವಿನಯ್ ರವರು.

ನಂತರ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರು, ಸಂಸದರಾದ  ಶ್ರೀ ಜಿ.ಎಸ್.ಬಸವರಾಜ್ ರವರು, ಗುಬ್ಬಿ ತಾಲ್ಲೋಕಿನ ಶಾಸಕರುಗಳಾದ ಶ್ರೀ ಮಸಲಾ ಜಯರಾಮ್ ರವರು ಮತ್ತು ಶ್ರೀ ಎಸ್.ಆರ್.ಶ್ರಿನಿವಾಸ್ ರವರೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ರೂಪು ಕೊಡಲಾಗುವುದು. ದೇಶಕ್ಕೆ ಮಾದರಿ ಯೋಜನೆ ಇದಾಗಲಿದೆ.

ನಂತರ ತುಮಕೂರು ಜಿಲ್ಲೆಯ ಉಳಿದ 9 ತಾಲ್ಲೋಕುಗಳು ಇದೇ ರೀತಿ ಮಾಡಬೇಕಾಗುತ್ತದೆ. ಗಮನವಿರಲಿ, ‘ಯಾವುದೇ ಕಾರಣಕ್ಕೂ ಇಂಜಿನಿಯರ್ ಗಳು ಕೈ ಕೊಡುವ ಹಾಗಿಲ್ಲ. ನೀವೂ ಇದೇ ಮಾದರಿ ಆರಂಭಿಸಿ ಸ್ವಾಮಿ. ಅಗತ್ಯವಿದ್ದಲ್ಲಿ ವಿನಯ್ ಮಾಸ್ಟ್ರು ಪಾಠ ಮಾಡುತ್ತಾರೆ.’