22nd December 2024
Share

ಜಿ.ಎಸ್.ಬಸವರಾಜ್-80 # ಅನ್ನಪರಿಸರಜ್ಞಾನ

TUMAKURU:SHAKTHIPEETA FOUNDATION

1988 ರಲ್ಲಿ ಕುಂದರನಹಳ್ಳಿ ಗಂಗಮಲ್ಲಮ್ಮ ದೇವಿಯನ್ನು ಪೂಜಿಸಿ. ನಮ್ಮೂರಿನ ಪಕ್ಕದಲ್ಲಿರುವ ಬಿದರೆಹಳ್ಳಕಾವಲ್ ನಲ್ಲಿದ್ದ ಸುಮಾರು 930 ಎಕರೆ ಸರ್ಕಾರಿ ಜಮೀನಿನಲ್ಲಿ ಏನಾದರೂ ಒಂದು ಬೃಹತ್ ಯೋಜನೆ ಆರಂಭ ಮಾಡಲು ಶ್ರಮಿಸಲು ಶಕ್ತಿ ಕೊಡು ತಾಯಿ ಎಂದು ಪ್ರಾರ್ಥಿಸಿ, ಅವಿರತ ಹೋರಾಟವನ್ನು, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಒಡನಾಟದಲ್ಲಿ ಆರಂಭಿಸಲಾಯಿತು.

 2016 ರಲ್ಲಿ ದೇಶದ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಮತ್ತು ರಾಜ್ಯದ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ಶಂಕುಸ್ಥಾಪನೆ ಮಾಡಿ, ಪ್ರಸ್ತುತ 2022 ರೊಳಗೆ ರಕ್ಷಣಾ ಇಲಾಖೆಯ ಹೆಚ್.ಎ.ಎಲ್ ವತಿಯಿಂದ ಯುದ್ಧ ಹೆಲಿಕ್ಯಾಪ್ಟರ್ ಘಟಕ ಆರಂಭವಾಗಲು ಸಿದ್ಧತೆ ನಡೆಯುತ್ತಿರುವುದು ಕಣ್ಣೆದುರಿನ ಸಾಕ್ಷಿಯಾಗಿದೆ.

 1988 ರಿಂದ ಸುಮಾರು 9 ವರ್ಷಗಳ ನನ್ನ  ಅಭಿವೃದ್ಧಿ ಪರ ಚಿಂತನೆ, 1997 ರಲ್ಲಿ ಅಭಾವ ಪೀಡೀತ ಪ್ರದೇಶಗಳ ನೀರಾವರಿ ಅಭಿವೃದ್ಧಿ ಸಲಹಾ ಸಮಿತಿ (ಅಪ್ನಾಸ್) ರಚಿಸಲು ಪ್ರೇರಣೆ ನೀಡಿದ್ದು ಇತಿಹಾಸ. ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಕನಸಿನ ನೀರಾವರಿ ಯೋಜನೆಗಳ ಜನ ಜಾಗೃತಿ ಮತ್ತು ಅನುಷ್ಠಾನಕ್ಕೆ ಒಂದು ಕೊಡುಗೆ ನೀಡಿದ ತೃಪ್ತಿ ಇದೆ.

1988 ರಿಂದ ಸುಮಾರು 13 ವರ್ಷಗಳ ನಂತರ ಚಿಂತನಾ-ಕಾರ್ಯಾಗಾರ-ಅನುಷ್ಠಾನ’ ಘೋಷಣೆಯಡಿಯಲ್ಲಿ ಶ್ರೀ ಜಿ.ಎಸ್.ಬಸವರಾಜ್‍ರವರಿಗೆ -60 ವರ್ಷ ಆದಾಗ, ತುಮಕೂರು ನಗರದ ಅಭಿವೃದ್ಧಿಗಾಗಿ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸ್ಥಾಪನೆ ಮಾಡಲು ಪ್ರೇರಣೆ ನೀಡಿತ್ತು. ಯಾರು ಏನೇ ಹೇಳಿದರೂ ಅಭಿವೃದ್ಧಿಯಲ್ಲಿ ಒಂದು ಕ್ರಾಂತಿಯನ್ನೇ ಮಾಡಿದ ತೃಪ್ತಿ ನನಗೆ ಇದೆ.

1988 ರಿಂದ ಸುಮಾರು 31 ವರ್ಷಗಳ ನಂತರ 2019 ರಲ್ಲಿ ಶಕ್ತಿಪೀಠ ಫೌಂಡೇಷನ್ ಸ್ಥಾಪಿಸಿ, ಭಾರತ ದೇಶದ ಅಭಿವೃದ್ಧಿ ಪರ ಚಿಂತನೆಗಳಿಗೆ ಶ್ರಮಿಸಲು ಮುಂದಾಗಿರುವುದು ನನಗೆ ಖುಷಿ ಎನಿಸಿದೆ.

1988 ರಿಂದ ಸುಮಾರು 33 ವರ್ಷಗಳ ನಂತರ ವಿಶ್ವದ 108 ಶಕ್ತಿಪೀಠಗಳನ್ನು ಪೂಜಿಸಿ, ಅನ್ನ-ಪರಿಸರ-ಜ್ಞಾನ’ ಘೋಷಣೆಯಡಿಯಲ್ಲಿ ಶ್ರೀ ಜಿ.ಎಸ್.ಬಸವರಾಜ್ -80 ವರ್ಷ ಆದಾಗ ದೇಶದ ಅಭಿವೃದ್ಧಿ ಪರ ಯೋಜನೆಗಳ ಚಿಂತನೆಗಾಗಿಯೇ ಒಂದು ಸಂಶೋಧನಾ ಕಟ್ಟಡ ನಿರ್ಮಾಣ ಮಾಡುತ್ತಿರುವುದು ನಿಜಕ್ಕೂ ಒಂದು ಪವಾಡ ಎನಿಸಿದೆ. ಈ ಶಕ್ತಿ ಪೀಠ ಕ್ಯಾಂಪಸ್ ಅನ್ನು ನನ್ನ ತಂದೆ ತಾಯಿಗೆ ಸಮರ್ಪಣೆ ಮಾಡಿದ ತೃಪ್ತಿ ನಮ್ಮ ಕುಟುಂಬಕ್ಕೆ ಇದೆ.

1988 ರಿಂದ ಸುಮಾರು 34 ವರ್ಷಗಳಿಗೆ 2022 ರಲ್ಲಿ ಶಕ್ತಿಪೀಠ ಕ್ಯಾಂಪಸ್‍ನ ಈ ಕಟ್ಟಡ ಲೋಕಾರ್ಪಣೆಯಾಗಲಿದೆ. ಈ ಕ್ಯಾಂಪಸ್ ನಲ್ಲಿ ನಿರ್ಮಾಣ ಮಾಡುತ್ತಿರುವ ಪ್ರಥಮ ಕಟ್ಟಡಕ್ಕೆ

ಅನ್ನ-ಪರಿಸರ-ಜ್ಞಾನ

ಜಿ.ಎಸ್.ಬಸವರಾಜ್-80

ಎಂಬ ಹೆಸರು ಇಡಲು ಚಿಂತನೆ ನಡೆಯುತ್ತಿದೆ. ಈ ಕಟ್ಟಡ ಆರಂಭಿಸಿದರೇ ಕ್ಯಾಂಪಸ್ ಲೋಕಾರ್ಪಣೆ ಆಗಲಿದೆ. ಕ್ಯಾಂಪಸ್ ಯೋಜನೆಗಳೆಲ್ಲಾ ಪೂರ್ಣಗೊಳ್ಳುವ ಸಮಯ ಆ ಶಕ್ತಿದೇವತೆಗೆ ಮಾತ್ರ ಗೊತ್ತು. ನನಗಂತೂ ಗೊತ್ತಿಲ್ಲ. ಪೂರ್ಣ ಪ್ರಮಾಣದ ಕ್ಯಾಂಪಸ್ ಲೋಕಾರ್ಪಣೆ?

ನೋಡಿ ಕಾಕತಾಳೀಯವಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ಶುಭ ಸಂದರ್ಭದಲ್ಲಿ ಇಂಥಹ ಅಭಿವೃದ್ಧಿ ಚಂತನೆಗಾಗಿಯೇ ಒಂದು ಕ್ಯಾಪಸ್ ಮಾಡುತ್ತಿರುವುದು ವಿಶ್ವದಲ್ಲಿಯೇ ಪ್ರಥಮ. ನಮ್ಮ ಪರಿಕಲ್ಪನೆಯೇ ಒಂದು ವಿಶಿಷ್ಟವಾಗಿದೆ. ಸ್ವಾತಂತ್ರ್ಯ ಬಂದು 100 ವರ್ಷಗಳಾಗುವ ವೇಳೆಗೆ ಒಂದು ಬೃಹತ್ ಹೆಮ್ಮರವಾಗಲಿದೆ, ಈ ಶಕ್ತಿಪೀಠ ಕ್ಯಾಂಪಸ್. ಆ ಆತ್ಮವಿಶ್ವಾಸ ನನಗಿದೆ.

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಕನಸಿನ ‘ಗತಿಶಕ್ತಿ’ ಯೋಜನೆಯ 75 ವರ್ಷದ ಮತ್ತು 100 ವರ್ಷಗಳ ಯೋಜನೆಗಳ ಮೌಲ್ಯ ಮಾಪನ ದೇಶದ ಪರಿಣಿತರ ಸಮ್ಮುಖದಲ್ಲಿ ಈ ಕ್ಯಾಂಪಸ್ ನಲ್ಲಿ  ನಡೆಸುವ ಚಿಂತನೆ ಇದೆ. ಅಲ್ಲಿಯವರೆಗೂ ಯಾರೇ ಪ್ರಧಾನಿಯಾದರೂ ಈ ಯೋಜನೆಗಳು ಮುಂದುವರೆಯಲೇ ಬೇಕು ಅಲ್ಲವೇ?

ಈ ಪ್ರಥಮ ಕಟ್ಟಡವೂ ಕ್ಯಾಂಪಸ್ ನ ಅಗ್ನೇಯ ದಿಕ್ಕಿನಲ್ಲಿ ಬರಲಿದೆ. ಹಿಂದೂ ಸಮಾಜದ ನಂಬಿಕೆಯ ಪ್ರಕಾರ ಈ ಸ್ಥಳ ಅನ್ನಪೂರ್ಣೇಶ್ವರಿ ಸ್ಥಾನ, ಅಡುಗೆ ಕೋಣೆ ಇರಬೇಕಂತೆ. ಅನ್ನ ದಾಸೋಹ ಇಲ್ಲಿ ನಡೆಯಬೇಕು. ಈ ಹಿನ್ನಲೆಯಲ್ಲಿ ಅನ್ನ ಹಾಕಲು ಖ್ಯಾತಿ ಪಡೆದಿರುವ ಶ್ರೀ ಜಿ.ಎಸ್.ಬಸವರಾಜ್ ರವರ ಹೆಸರಿನಲ್ಲಿ ಈ ಕಟ್ಟಡ ಆಗಲಿದೆ.

ಬಸವರಾಜ್ ಅಭಿಮಾನಿಯೊಬ್ಬರು ಹೇಳಿದ ಪ್ರಕಾರ ಶ್ರೀ ಜಿ.ಎಸ್.ಬಸವರಾಜ್ ರವರು 5 ಭಾರಿ ಸಂಸದರಾಗಿರುವ   ಅವಧಿಯಲ್ಲಿ ದೆಹಲಿಯಲ್ಲಿ ಅವರ ಮನೆಯಲ್ಲಿ ಊಟ ಮಾಡಿರುವವರು, ತುಮಕೂರಿನಲ್ಲಿ ಅವರ ಮನೆಯಲ್ಲಿ ಊಟಮಾಡಿರುವವರು, ಗಂಗಸಂದ್ರದಲ್ಲಿ ಅವರ ತಾತ ಮುತ್ತಂದಿರ ಕಾಲದಿಂದಲೂ ಊಟ ಮಾಡಿರುವವರ ಮತ್ತು ಈಗ ಸಾಯಿಬಾಬಾ ದೇವಾಲಯದಲ್ಲಿನ ದಾಸೋಹದ ಪ್ರೇರಣೆ ಅವರ ಹೆಸರಿನಲ್ಲಿ ಈ ಕಟ್ಟಡ ಆಗಲಿದೆ ಅಲ್ಲವೇ ಎಂಬ ಅಭಿಪ್ರಾಯ ಮಂಡಿಸಿದರು. ಅಂದರೆ ಅವರ ಕುಟುಂಬವೇ ಅನ್ನ ದಾನ ಮಾಡಿದ ಇತಿಹಾಸ ಹೊಂದಿದೆ.

ಅನ್ನ ಹಾಕಿದ ಮನೆ ಕೆಡುವುದಿಲ್ಲಾ, ಗೊಬ್ಬರ ಹಾಕಿದ ಹೊಲ ಕೆಡುವುದಿಲ್ಲಾ ಎಂಬ ಗಾದೆ ನೆನಪಿಗೆ ಬರಲಿದೆ. ನಾವು ಗಮನಿಸಿದ ಹಾಗೆ ಯಾವುದೇ ವ್ಕಕ್ತಿಯ ಹೆಸರಿನಲ್ಲಿ ಒಂದು  ಕಟ್ಟಡ ಆಗಬೇಕಾದರೇ ಆ ಕುಟುಂಬದವರು ದಾನ ಮಾಡಿದರೇ ಅಥವಾ ಸಂಸ್ಥೆಗಳ ವಿಶೇಷ ಆಸಕ್ತಿಯಿಂದ ಅವರ ಹೆಸರು ಇಡುವುದು ವಾಡಿಕೆ.

ನನ್ನ ಮತ್ತು ಜಿ.ಎಸ್.ಬಸವರಾಜ್ ರವರ 31 ವರ್ಷಗಳ ಅಭಿವೃದ್ಧಿ ಒಡನಾಟ ಇಂದು ಶಕ್ತಿಪೀಠ ಕ್ಯಾಂಪಸ್ ನ ಪ್ರಥಮ ಕಟ್ಟಡ ಅವರ ಹೆಸರಿನಲ್ಲಿ ಇಡಲು ತಾಯಿ ಶಕ್ತಿದೇವತೆ ಸೂಚಿಸಿದ್ದಾರೆ. ಇಲ್ಲಿ ನನ್ನ ಪಾತ್ರ ಏನೂ ಇಲ್ಲ.

ಬಸವರಾಜ್ ರವರು ರಾಜಕಾರಣದ ಜೊತೆಗೆ ಧಾರ್ಮಿಕ ಗುಣಗಳನ್ನು ಮೈಗೂಡಿಸಿಕೊಂಡಿದ್ದಾರೆ. ತುಮಕೂರಿನ ಸಾಯಿಬಾಬಾ ದೇವಾಲಯ, ಮುಜರಾಯಿ ಇಲಾಖೆಯ ಗುಬ್ಬಿಯ ಶ್ರೀ ಚನ್ನಬಸವೇಶ್ವರ ದೇವಾಲಯ, ಮುಜರಾಯಿ ಇಲಾಖೆಯ ಗೋಡೆಕೇರೆಯ ಶ್ರೀ ಗುರುಸಿದ್ಧರಾಮೇಶ್ವರ ದೇವಾಲಯ, ಮತ್ತು ತುಮಕೂರಿನ ಶ್ರೀ ಬಾಳೆಹೊನ್ನೂರಿನ ಮಠದ ಕಟ್ಟಡ ಸೇರಿದಂತೆ ಹಲವಾರು ಕ್ಷೇತ್ರಗಳ ಅಭಿವೃದ್ಧಿಗೆ ಸಹಕರಿಸಿದ್ದಾರೆ.

ನನ್ನ ಪ್ರಕಾರ ಅವರ ಹೆಸರಿನಲ್ಲಿ  ಈ ಅಭಿವೃದ್ಧಿ ಸಂಶೋಧನಾ ಕಟ್ಟಡ ನಿರ್ಮಾಣ ಆಗುತ್ತಿರುವುದು ಅರ್ಥಪೂರ್ಣ ಎನಿಸಿದೆ.

ಈ ಕಟ್ಟಡದ ನಕ್ಷೆಯನ್ನು ಇಲ್ಲಿ ಹಾಕಲಾಗಿದೆ. ಎಲ್ಲೆಲ್ಲಿ ಏನೇನು ಬರಲಿದೆ ಎಂಬ ಮಾಹಿತಿಯನ್ನು ಹಾಕಲಾಗಿದೆ. ತಾವು ತಮ್ಮ ಅಮೂಲ್ಯವಾದ ಸಲಹೆಗಳನ್ನು ನೀಡುವಿರಾ? ವಾಸ್ತು, ಶಾಸ್ತ್ರ, ಜೋತಿಷ್ಟ ಎಲ್ಲವೂ ಅಗತ್ಯ, ನಂತರ ತಾಂತ್ರಿಕತೆ, ಆರ್ಕಿಟೆಕ್ಚರ್.