22nd December 2024
Share

TUMAKURU:SHAKTHIPEETA FOUNDATION

ಗುಬ್ಬಿ ತಾಲ್ಲೋಕು ಬಿದರೆಹಳ್ಳ ಕಾವಲ್ ನಲ್ಲಿ ಹೆಚ್.ಎ.ಎಲ್ ವತಿಯಿಂದ ಆರಂಭವಾಗುತ್ತಿರುವ ಯುದ್ಧ ಹೆಲಿಕ್ಯಾಪ್ಟರ್ ಉತ್ಪಾದನಾ ಘಟಕ ಮತ್ತೆ ಸುದ್ದಿ ಮಾಡುತ್ತಿದೆ. ಸುತ್ತಮುತ್ತಲಿನ ಯಾವುದೇ ಗ್ರಾಮಕ್ಕೇ ಹೋದರೂ ಎರಡು ವಿಚಾರಗಳು ಚರ್ಚೆ ಆಗುತ್ತಿವೆಯಂತೆ.

ಏ ಹೆಚ್.ಎ.ಎಲ್ ನವರು ಹೆಚ್ಚಿಗೆ ಜಮೀನೇ ಕೇಳಿಲ್ವಂತೆ ಸುಮ್ಮ ಸುಮ್ಮನೆ ಪುಕಾರು ಹಬ್ಬಿಸಿದ್ದಾರಂತೆ ಎಂದು ಕೆಲವರು ಚರ್ಚೆ ಮಾಡುತ್ತಿದ್ದರೆ. ಇನ್ನೂ ಕೆಲವರು ಏ ನಿಮಗೇನು ಗೊತ್ತು ಇನ್ನೂ 6000 ಎಕರೆ ಕೇಳಿದ್ದಾರಂತೆ, ನಿಮ್ಮ ಮನೆ ಹಾಳುಮಾಡಿದ ಈ ಕುಂದರನಹಳ್ಳಿ ರಮೇಶ್ ಎಂಬ ಚರ್ಚೆ ನಡೆಯುತ್ತಲೇ ಇದೆ. ನನಗೂ ಹೇಳಿ ಹೇಳಿ ಸಾಕಾಗಿದೆ.

ಹೌದು ಹೆಚ್.ಎ.ಎಲ್ ಘಟಕ ತರಲೇ ಬೇಕು ಎಂದು ಫೈಟ್ ಮಾಡಿದವರಲ್ಲಿ ಮೊದಲಿಗರು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ನಾನು ಎರಡು ಮಾತಿಲ್ಲ.

ಆದರೇ ಈ ಭಾರಿ ಹೆಚ್.ಎ.ಎಲ್ ನವರು ಹೆಚ್ಚುವರಿ ಜಮೀನು ಕೇಳಿರುವ ನಿಖರವಾದ ಮಾಹಿತಿ ನನಗೂ ತಿಳಿದಿರಲಿಲ್ಲ. ಸತ್ಯ ಹೇಳಬೇಕೆಂದರೆ ಎಂಪಿಯವರಿಗೂ ತಿಳಿದಿರಲಿಲ್ಲ. ಜನ ಸುಮ್ಮನೆ ಹೇಳುತ್ತಿರ ಬಹುದು ಎಂದು, ನಾನು ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ.

ಇದು ಒಂದು ತರಹ ನಾಚಿಕೆಗೇಡು ಎನ್ನ ಬಹುದು ಅಥವಾ ಇವರು ಸುಳ್ಳು ಹೇಳುತ್ತಿದ್ದಾರೆ ಎನ್ನಲೂ ಬಹುದು. ಜನರ ಅಭಿಪ್ರಾಯಕ್ಕೆ ಬಿಡಲೇ ಬೇಕು. ಹೌದು ದಿನಾಂಕ:22.04.2021 ರಂದೇ ಹೆಚ್.ಎ.ಎಲ್ ವತಿಯಿಂದ ತುಮಕೂರು ಜಿಲ್ಲಾಧಿಕಾರಿಗಳಿಗೆ ನಕ್ಷೆ ಸಹಿತ ಪತ್ರ ಬರೆದಿದ್ದಾರೆ.

ಈಗಲೂ ಯಾರೊಬ್ಬರೂ ರೈತರಿಗೆ ಸುಳ್ಳು ಹೇಳ ಬೇಡಿ. ಹೆಚ್.ಎ.ಎಲ್ ಅಂತಹ ಪ್ರತಿಷ್ಠಿತ ಸಂಸ್ಥೆ ಜಮೀನು ಕೇಳಿದರೆ ರಾಜ್ಯ ಸರ್ಕಾರ ಕೊಡಲೇ ಬೇಕು. ಇದು ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಆಸಕ್ತ ಸಾರ್ವಜನಿಕರ ಜವಾಬ್ಧಾರಿಯೂ ಹೌದು.

ಇದಕ್ಕೋಸ್ಕರವೇ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಹೆಚ್.ಎ.ಎಲ್ ಸಭೆಯಲ್ಲಿಯೇ ಯಾರೊಬ್ಬ ರೈತರು ಕೇಳುವ ಮೊದಲೇ ಪರ್ಯಾಯ ಜಮೀನು ನೀಡಲು ಸಲಹೆ ನೀಡಿದ್ದಾರೆ. ರೈತರ ಜಮೀನು ಮತ್ತು ಜೊತೆಗೆ ಹಿಂದೆ ಅಮೃತಮಹಲ್ ಕಾವಲ್ ಜಮೀನನ್ನು ಅರಣ್ಯ ಇಲಾಖೆಗೆ ನೀಡಿರುವ 1093 ಎಕರೆ ಜಮೀನು ಮಾಹಿತಿ ನೀಡಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಅರಣ್ಯ ಇಲಾಖೆ ಜಮೀನಿಗೆ ಬದಲಿ ಸರ್ಕಾರಿ ಜಮೀನು ಇರುವ ಬಗ್ಗೆಯೂ ಮಾಹಿತಿ ನೀಡಲು ಸೂಚಿಸಿದ್ದಾರೆ. ಇದು ಅವರ ಕರ್ತವ್ಯ. ಸುಳ್ಳು ಹೇಳಿದರೆ ಜನ ನಾಳೆ ಹುಗಿಯುತ್ತಾರೆ. ಜಮೀನು ಕೊಡದಿದ್ದರೇ ಪ್ರಧಾನಿಯವರ ಅವಕೃಪೆಗೆ ಒಳಗಾಗಬೇಕಾಗುತ್ತದೆ.

ಬಿದರೆಹಳ್ಳ ಕಾವಲ್ ರೈತರು ಬಂದು ಸಂಸದರ ಬಳಿ ಸಮಾಲೋಚನೆ ನಡೆಸಿದಾಗ ಇದೇ ಮಾತನ್ನು ನೇರವಾಗಿ ರೈತರಿಗೆ ಹೇಳಿದರು. ಸಾರ್ ನಮ್ಮ ಗ್ರಾಮದ ಸ್ಥಳಾಂತರ ಹೇಗೆ ಎಂದಾಗ ಸಂಸದರ ಸ್ಪಷ್ಟ ನುಡಿ, ನಾನು ಅಂದೇ ಹೇಳಿದ್ದೆ ನೀವೂ ಒಂದು ಕಡೆ ಶಿಪ್ಟ್ ಆಗಿ, ಮಧ್ಯೆ ಭಾಗದಲ್ಲಿ ಇರಬೇಡಿ ಮುಂದೆ ಒಂದು ದಿವಸ ನೀವೂ ಬಿಡಬೇಕಾಗ ಬಹುದು ಎಂದು. ನೀವೂ ನನ್ನ ಮಾತು ಕೇಳಲಿಲ್ಲ. ಈಗಲೂ ನಿಮ್ಮ ಗ್ರಾಮ ಬಿಡಿ ಎಂದು ಹೇಳಬಹುದು. ಮುದೊಂದು ದಿನ ಶಿಪ್ಟ್ ಮಾಡಿದರೆ ಹೇಗೆ ಅಲೋಚನೆ ಮಾಡಿ. ನಿಮಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.

ನಂತರ ಬಿದರೆಹಳ್ಳ ಕಾವಲ್ ರೈತರು ನನ್ನೊಂದಿಗೂ ಮಾತನಾಡಿದರು. ನಾನು ಅವರಿಗೆ 2014 ರಲ್ಲಿ ಏನೂ ಹೇಳಿದ್ದೇನೋ ಅದನ್ನೆ ಈಗಲೂ ಹೇಳಿದ್ದೇನೆ. ಉಳಿದ ವಿಚಾರ ಅವರಿಗೆ ಬಿಟ್ಟಿದ್ದು.

ನನಗೆ ತಿಳಿದ ಪ್ರಕಾರ ಬಿದರೆಹಳ್ಳಕಾವಲ್ ರೈತರು ಹಲವಾರು ವಿಚಾರಗಳ ಬಗ್ಗೆ ಆಲೋಚನೆ ಮಾಡುತ್ತಿದ್ದಾರಂತೆ.

  1. ಕುಂದರನಹಳ್ಳಿ ರಮೇಶ್ ಹಿಂದೆ ಹೇಳಿದ್ದ ಸ್ಥಳಕ್ಕೆ ಶಿಪ್ಟ್ ಆಗಬಹುದಾ? ಈಗ ಅದು ಸಾದ್ಯಾವಾ?
  2. ಅಂಕಪುರದ ಪಾರೆಸ್ಟ್ ಜಾಗ ನೀಡಿದರೇ ಶಿಪ್ಟ್ ಆಗುಬಹುದಾ?
  3. ಅಳಿಲಘಟ್ಟದ ಬಳಿ ಇರುವ ಎರೆಕಾವಲ್ ನಲ್ಲಿ ಉಳಿದ ಸರ್ಕಾರಿ ಜಮೀನು ನೀಡಿದರೇ ಶಿಪ್ಟ್ ಆಗಬಹುದಾ?
  4. ಅವರವರ ಇಷ್ಟ ಎಲ್ಲಾದರೂ ಜಮೀನು ಕೊಂಡು ಕೊಂಡರಾಯಿತು.
  5. ಏನೇ ಆಗಲಿ ಈ ಜಾಗ ಬಿಟ್ಟು ಕದಲ ಬಾರದು, ನೋಡೇ ಬಿಡೋಣ ಎಂಬ ನಿಲವು ಕೆಲವರಲ್ಲಿ ಇದೆಯಂತೆ.
  6. ಕೇಂದ್ರ ಸಚಿವರಾದ ಶ್ರೀ ನಾರಾಯಣಸ್ವಾಮಿರವರು ಮತ್ತು ಮೂಲಭೂತ ಸೌಕರ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಇಬ್ಬರೂ ನಮ್ಮ ಕುಲಭಾಂದವರೂ ಅವರು ಹೇಳಿದ ಹಾಗೆ ಮಾಡೋಣ ಎಂಬ ಬಗ್ಗೆಯೂ ಮಾತನಾಡುತ್ತಾರ0ತೆ.

ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಶ್ರೀ ಕೆ.ಪಿ.ಮೋಹನ್ ರಾಜ್ ರವರ ಅನುಮತಿ ಮೇರೆಗೆ. ನಾನಂತೂ ಬಿದರೆಹಳ್ಳ ಕಾವಲ್ ನ ಶೇ 80 ರಷ್ಟು ಜನ ಏನೂ ಹೇಳುತ್ತಾರೋ ಅವರಿಗೆ ಬೆಂಬಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಏಕೆಂದರೆ ನಾನು ಈಗಾಗಲೇ ಅವರಿಗೆ ಮಾತು ನೀಡಿದ್ದೇನೆ ನಾನೂ ಇರುವವರೆಗೂ ಇವರನ್ನು ಸ್ಥಳಾಂತರ ಮಾಡಲು ಯಾರಿಗೂ ಬೆಂಬಲ ನೀಡುವುದಿಲ್ಲಾ ಎಂದು. ಈಗ ಮಾತು ಬದಲಾಯಿಸುವುದು ಸರಿಯಲ್ಲ.

ಹೆಚ್.ಎ.ಎಲ್ ಗಂತೂ ಹೆಚ್ಚುವರಿ ಜಮೀನು ನೀಡಲೇ ಬೇಕು. ಸರ್ಕಾರಿ ಜಾಗ ಹುಡುಕುವುದು ಜಿಲ್ಲಾಡಳಿತದ ಕರ್ತವ್ಯ. ಮಂಡ್ಯದಲ್ಲಿ ಈಗಾಗಲೇ ಮೇಕೆದಾಟು ಯೋಜನೆಗೆ ಬೇಕಾಗುವ ಅರಣ್ಯ ಇಲಾಖೆ ಜಮೀನಿಗೆ ಬದಲಿಯಾಗಿ ಸರ್ಕಾರಿ ಜಮೀನು ಹುಡುಕಿ ಗಿಡ ಹಾಕಲು ಸಜ್ಜಾಗಿದ್ದಾರಂತೆ.

ಆದರೇ 6000 ಎಕರೆ ಜಮೀನು ಶುದ್ಧ ಸುಳ್ಳು. ಹಾಗೇ ಹೇಳುವವರಿಗೆ ಒಂದು ಹಾರ ಹಾಕಿ ಸನ್ಮಾನಿಸಿ, ಖುಷಿ ಪಡಿಸಿ.