16th September 2024
Share

TUMAKUR:SHAKTHIPEETA FOUNDATION

ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ಪಿ.ರವಿಕುಮಾರ್ ರವರೊಂದಿಗೆ  ಗುಬ್ಬಿ ಹೆಚ್.ಎ.ಎಲ್ ಘಟಕದ ವಿಸ್ತರಣಾ ಘಟಕಕ್ಕೆ ಜಮೀನು ನೀಡುವ ಸಂಬಂಧ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ದಿನಾಂಕ:26.10.2021 ರಂದು ಬೆಂಗಳೂರಿನಲ್ಲಿ ಚರ್ಚೆ ನಡೆಸಿದರು.

ಹೆಚ್.ಎ.ಎಲ್ ಜಮೀನು ಕೇಳಿದೆ ಎಂದರೆ, ರಾಜ್ಯ ಸರ್ಕಾರ ಜಮೀನುಕೊಡಲೇ ಬೇಕು ಇದು ನಮ್ಮ ಆಧ್ಯತೆ. ಜೊತೆಗೆ ಬಸವರಾಜ್ ಬಂದ್ರು ಎಂದರೆ ಯಾವುದಾದರೂ ಒಂದು ಯೋಜನೆ ಇರಲೇಬೇಕು.ಅವರು ಹೇಳಿದ್ದನ್ನು ಮಾಡದಿದ್ದರೆ ಅವರೆಲ್ಲಿ ಸುಮ್ಮನೆ ಇರುತ್ತಾರೆ ಎಂದು ಜೋಕ್ ಮಾಡಿದರು.

ಕಂದಾಯ ಸಚಿವರಾದ ಶ್ರೀ ಆರ್.ಅಶೋಕ್ ರವರ ಕಚೇರಿಗೆ ನೀಡಿ ಹೆಚ್ಚುವರಿ ಜಮೀನು ನೀಡುವ ಸಂಬಂಧ ಸಮಾಲೋಚನೆ ನಡೆಸಿದರು.

ನಂತರ ಆರ್ಥಿಕ ಇಲಾಖೆಗೆ ಭೇಟಿ ಮಾಡಿ ಹೆಚ್.ಎ.ಎಲ್ ಘಟಕಕ್ಕೆ ಹೇಮಾವತಿ ನೀರು ನೀಡಲು ಕಡಬ ಕೆರೆ ಯೋಜನೆ ಬಗ್ಗೆ ಸಮಾಲೋಚನೆ ನಡೆಸಿದರು.

ಇಂದನ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀ ಕುಮಾರ್ ನಾಯಕ್ ಬಳಿ ಹೆಚ್.ಎ.ಎಲ್ ಘಟಕಕ್ಕೆ ಎಂ.ಯು.ಎಸ್.ಎಸ್ ಮಂಜೂರು ಮಾಡುವ ಬಗ್ಗೆ ಚರ್ಚೆ ನಡೆಸಿದರು.

ಮೂಲಭೂತ ಸೌಕರ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಯವರೊಂದಿಗೆ ಸಮಾಲೋಚನೆ ನಡೆಸಲು ಕಚೇರಿಗೆ ಭೇಟಿ ನೀಡಿದಾಗ ಅವರು ದೆಹಲಿಗೆ ಹೋಗಿದ್ದರಿಂದ ಭೇಟಿ ಸಾಧ್ಯಾವಾಗಲಿಲ್ಲ.

ಗುಬ್ಬಿ ಹೆಚ್.ಎ.ಎಲ್ ಘಟಕದ ಲೋಕಾರ್ಪಣೆ ಬಗ್ಗೆ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಕಚೇರಿಯಿಂದ ನೇರವಾಗಿ ಪ್ರಗತಿ ಪರಿಶೀಲನೆ ನಡೆಸುವ ಹಿನ್ನಲೆಯಲ್ಲಿ ಸಂಸದರು ಸೀರಿಯ್ ಆಗಿ ತೆಗೆದು ಕೊಂಡಿದ್ದಾರೆ.

ಯಾವುದೇ ಇಲಾಖೆಯ ಅಧಿಕಾರಿಗಳು ಕಾರಣವಿಲ್ಲದೆ ವಿಳಂಭ ಮಾಡದೇ ಇರುವುದು ಒಳ್ಳೆಯದು. ಕರ್ನಾಟಕ ರಾಜ್ಯ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಜೊತೆಯಲ್ಲಿ ಇದ್ದರು.