21st November 2024
Share

ಶಕ್ತಿಪೀಠ ಕ್ಯಾಂಪಸ್ ಬಯೋಡೈವರ್ಸಿಟಿ ಮಾದರಿ ಕ್ಯಾಂಪಸ್ ಆಗಲಿದೆ.

TUMAKURU:SHAKTHIPEETA FOUNDATION

 ತುಮಕೂರಿನಲ್ಲಿ ಬೇವಿನ ಮರ ಬೆಳೆಸುತ್ತಿರುವ ಸಿದ್ಧಪ್ಪನವರು ಇಂದು(28.10.2021) ಶಕ್ತಿಪೀಠ ಕ್ಯಾಂಪಸ್ ಗೆ ಬಂದಿದ್ದರು. ಹೋಗುವಾಗ ಅವರು ಅವರ ಕಲ್ಪನೆಗಳ ಬಗ್ಗೆ ಹೇಳುತ್ತಾ ಹೋದರು. ನಾನು ಮೌನವಾಗಿ ಎಲ್ಲಾ ಆಲಿಸಿಕೊಂಡು ಹೋದೆ. ಸಿದ್ಧಪ್ಪನವರು ನಮ್ಮ ಕ್ಯಾಂಪಸ್ ನಲ್ಲಿರುವ ರಿಂಗ್ ರಸ್ತೆಯನ್ನು ಒಂದು ಸುತ್ತು ಹಾಕಿದರು.

ಸಾರ್ ಇದು ವಿಶ್ವದ ಬಯೋಡೈವರ್ಸಿಟಿ ಮಾದರಿ ಕ್ಯಾಂಪಸ್ ಆಗಲಿದೆ. ಇಲ್ಲಿ ಮಾಡುತ್ತಿರುವ ಕೆಲಸ ನಿಜಕ್ಕೂ ಅದ್ಭುತವಾಗಿದೆ. ಈ ಯೋಜನೆಯ ಹಿಂದಿನ ಮರ್ಮ ಏನು ಸಾರ್ ಎಂಬ ಮಾತಿನತ್ತ ತಿರುಗಿದರು. ಸಾರ್ ಶಕ್ತಿದೇವತೆ ಪವಾಡ ನಾನು ಏನೂ ಹೇಳಲು ಆಗುವುದಿಲ್ಲ. ಇಲ್ಲಿ ಏನು ನಡೆಯುತ್ತಿದೆ ಎಂಬುದು ನನಗೂ ಒಂದು ಯಕ್ಷ ಪ್ರಶ್ನೆ ಆಗಿದೆ ಎಂಬುದೇ ನನ್ನ ಉತ್ತರವಾಗಿತ್ತು.

ನಮ್ಮ ಕ್ಯಾಂಪಸ್‍ನ ಹಸಿರು ವಿಷನ್ ಗ್ರೂಪ್ ನ  ಶ್ರೀ ಗುರುಸಿದ್ಧರಾಧ್ಯರು, ಶ್ರೀ ಗೋವಿಂದಪ್ಪನವರು, ಶ್ರೀ ರಾಜೇಶ್ ರವರು, ಶ್ರೀ ಜಿ.ಎಸ್.ಚಂದ್ರಶೇಖರ್ ರವರು ಮತ್ತು ನಾನು ಇದೂವರೆಗೂ ಸಿಕ್ಕ ಸಿಕ್ಕ ಗಿಡ ತಂದು ಹಾಕುತ್ತಿದ್ದೇವೆ.

ರಾಜ್ಯದ ಸುಮಾರು 100 ಕ್ಕೂ ಹೆಚ್ಚು ನಾಟಿ ವೈಧ್ಯರ ಸಮಾವೇಶವನ್ನು ಇಲ್ಲಿ ಈಗಾಗಲೇ ನಡೆಸಲಾಗಿದೆ. ಅವರು ಹಲವಾರು ಗಿಡಗಳನ್ನು ಮತ್ತು ಬೀಜಗಳನ್ನು ತಂದು ಹಾಕಿದ್ದಾರೆ. ಇಲ್ಲಿರುವ ಬಸವರಾಜ್ ಗಿಡಗಳ ನಿರ್ವಹಣೆ ಮಾಡುತ್ತಿದ್ದಾರೆ.

ನೀವೂ ಈಗ ಈ ಕ್ಯಾಂಪಸ್‍ನ ಗ್ರೀನ್ ಆಡಿಟ್ ಮಾಡಬೇಕು. ನಮ್ಮ ತಂಡಕ್ಕೆ ವಿವಿಧ ಜಾತಿಯ ಔಷಧಿ ಗಿಡಗಳು ಮತ್ತು ಇತರೆ ಜಾತಿಯ ಗಿಡಗಳ ಪತ್ತೆ ಹಚ್ಚಿ ಸಂಗ್ರಹಣೆ ಮಾಡಲು ಸಹಕರಿಸ ಬೇಕು. ಅವರು ಈಗ ಹಾಕಿರುವ ಗಿಡಗಳು ಮತ್ತು ಮುಂದೆ ಹಾಕಲು ಉದ್ದೇಶಿರುವ ಗಿಡಗಳು ಸೇರಿ 1000 ಜಾತಿಯ ಗಿಡಗಳು ಇಲ್ಲಿ ಇರಬೇಕು, ಈ ಬಗ್ಗೆ ತುಮಕೂರಿನಲ್ಲಿರುವ ಎಲ್ಲಾ ಬಾಟ್ನಿ ಪ್ರೋಪೇಸರ್ ಗಳು ವಿಷನ್ ಗ್ರೂಪ್ ರಚಿಸಿಕೊಂಡು ಸಲಹೆ ನೀಡಲು ಮನವಿ ಮಾಡಿದೆ.

ನಮ್ಮ ಹಸಿರು ಗ್ರೂಪ್ ಬಹಳ ಆಕ್ಟೀವ್ ಆಗಿ ಇದ್ದಾರೆ. ಈಗಾಗಲೇ ತುಮಕೂರು ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲೂ ಬಯೋಡೈವರ್ಸಿಟಿ ಪಾರ್ಕ್ ನಿರ್ಮಿಸಲು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಪತ್ರ ಬರೆಯುವ ಹಿನ್ನಲೆಯೂ ಈ ತಂಡದ ಸಲಹೆ ಮತ್ತು ಈ ಕ್ಯಾಂಪಸ್ ನ ಆದೇಶ.  ಭಾಷಣ ಮತ್ತು ಬುರುಡೆ ಮಾತು ಬಿಟ್ಟು ಕಾಯಕ ಮಾಡುವ ಒಂದು ತಂಡದ ಅವಶ್ಯಕತೆ ನಮಗೆ ಇದೆ.

FIRST BUILDING STATUS

ಸಿದ್ದಪ್ಪನವರ ಪ್ರತಿಕ್ರಿಯೇ ನಾನು ಹಲವಾರು ದೇಶಗಳನ್ನು ಸುತ್ತಿದ್ದೇನೆ, ಹಲವಾರು ರಾಜ್ಯಗಳನ್ನು ಸುತ್ತಿದ್ದೇನೆ, ನಿಮ್ಮ ಮನೆಯಲ್ಲಿರುವ ಗ್ರಂಥಾಲಯ ಮತ್ತು ನಿಮ್ಮ ಕ್ಯಾಂಪಸ್ ಕಲ್ಪನೆ ನಿಜಕ್ಕೂ ವಿಶಿಷ್ಠವಾಗಿದೆ. ಈ ಕಲ್ಪನೆ ನನ್ನನ್ನೂ ಮೌನವಾಗಿಸಿದೆ. ಇಲ್ಲಿ ಬರೀ ಮಾತಿಗೆ ಬೆಲೆಯಿಲ್ಲ. ಕೃತಿ ಮಾಡುವವರಿಗೆ ಅಷ್ಟೆ ಅವಕಾಶ.

ನೋಡೋಣ ಸಾರ್ ನಾವು ಈ ಕ್ಯಾಂಪಸ್ ಗೆ ಏನೂ ಸೇವೆ ಮಾಡಬಹುದು ಯೋಚಿಸುತ್ತೇವೆ ಎಂದಷ್ಟೆ ಹೇಳಿದ್ದಾರೆ ನಮ್ಮ ಬೇವಿನ ಮರದ ಸಿದ್ದಪ್ಪನವರು.

ನಿಮ್ಮಲ್ಲಿರುವ ಯಾವುದೇ ಜಾತಿಯ ಔಷಧಿಗಿಡಗಳು, ಹೂವಿನ ಗಿಡಗಳು, ಸೊಪ್ಪ ಸೆದೆ ಬೇರುಗಳು, ವಿಶೇಷ ಜಾತಿಯ ಮರಗಿಡಗಳು, ಬೀಜಗಳು  ಇದ್ದಲ್ಲಿ ನಮ್ಮ ಕ್ಯಾಂಪಸ್‍ಗೂ ಹಸಿರು ದಾನ ಮಾಡಲು ಓದುಗರಲ್ಲಿ ಮನವಿ.

 ಊರಿಗೊಂದು ಬಯೋಡೈವರ್ಸಿಟಿ ಪಾರ್ಕ್ ಹೇಗಿರಬೇಕು? ದಯವಿಟ್ಟು ಸಲಹೆ ನೀಡುವಿರಾ?