11th December 2024
Share

TUMAKRU:SHAKTHI PEETA FOUNDATION   

ತುಮಕೂರು ಜಿಲ್ಲೆಯಲ್ಲಿ ‘66 ನೇ ಕನ್ನಡ ರಾಜ್ಯೋತ್ವವವನ್ನು ಜನತಾ ಜೀವವೈವಿಧ್ಯ ದಾಖಾಲಾತಿ ಉತ್ಸವವ’ನ್ನಾಗಿ ಆಚರಿಸಲುತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜ.ಎಸ್.ಬಸವರಾಜ್ ರವರು ಕರೆ ನೀಡಿದರು. ಸಂಸದರ ಕಚೇರಿಯಲ್ಲಿ ನಡೆದ ಗ್ರಾಮಗಳ ಇತಿಹಾಸ ಪುಸ್ತಕ ಬರಗಾರರ ಸಭೆಯ ಮತ್ತು 66 ನೇ ಕನ್ನಡ ರಾಜ್ಯೋತ್ವವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತುಮಕೂರು ಜಿಲ್ಲೆಯಲ್ಲಿ ಇರುವ 330 ಗ್ರಾಮ ಪಂಚಾಯಿತಿ ಮಟ್ಟದ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ, 11 ನಗರ ಸ್ಥಳೀಯ ಸಂಸ್ಥೆಗಳ ಮಟ್ಟದ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ,10 ತಾಲ್ಲೋಕು ಮಟ್ಟದ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ ಮತ್ತು ಒಂದು ಜಿಲ್ಲಾ ಮಟ್ಟದ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ ಸೇರಿದಂತೆ 352 ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿಗಳು ಆಯಾ ವ್ಯಾಪ್ತಿಯ ಗ್ರಾಮಗಳ ನಾಲೇಡ್ಜಬಲ್ ಪರ್ಸನ್ ಮತ್ತು ಪಾರಂಪರಿಕ ವೈದ್ಯರ, ನಾಟಿ ವೈಧ್ಯರ ಮತ್ತು ಹಕೀಮರ ಪಟ್ಟಿ’ಯೊಂದಿಗೆ ಮುಂದಿನ ದಿಶಾ ಸಭೆಗೆ ಬರಲು ದಿಶಾ ಸಮಿತಿ ಸದಸ್ಯಕಾರ್ಯದರ್ಶಿಯವರಿಗೆ ಪತ್ರ ಬರೆಯಲು ಕಚೇರಿ ಸಿಬ್ಬಂದಿಗೆ ಸೂಚಿಸಿದರು.

  ತುಮಕೂರು ವಿಶ್ವ ವಿದ್ಯಾನಿಲಯದ ಉಪಕುಲಪತಿಗಳು ಕಾಲೇಜುಗಳ ಮಟ್ಟದಲ್ಲಿರುವ ಎನ್.ಎಸ್.ಎಸ್. ವಿಧ್ಯಾರ್ಥಿಗಳನ್ನು ಆಯಾ ಗ್ರಾಮದ ನಾಲೇಡ್ಜಬಲ್ ಪರ್ಸನ್’ ಆಗಿ ಸೇರ್ಪಡೆ ಮಾಡಲು ಒಂದು ಆಂದೋಲನ ರೂಪಿಸಲು ಸಲಹೆ ನೀಡಿದರು.

  ಜನತಾ ಜೀವವೈವಿಧ್ಯ ದಾಖಾಲಾತಿ ಪ್ರಕಾರ ‘ನಾಲೇಡ್ಜಬಲ್ ಪರ್ಸನ್’ ಎಂದರೆ ಯಾರು ಯಾರು ಎಂಬ ಪಟ್ಟಿಯೊಂದಿಗೆ ಮುಂದಿನ ದಿಶಾ ಸಭೆಗೆ ಬರಲು ಬಿಎಂಸಿ ನೋಡೆಲ್ ಅಧಿಕಾರಿಯಾದ ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲು ಆಪ್ತ ಸಹಾಯಕರಿಗೆ ಸೂಚಿಸಿದರು.

  ಪ್ರಧಾನಿ ಶ್ರೀ ನರೇಂದ್ರಮೋದಿಯವರ ಡಿಜಿಟಲ್ ಇಂಡಿಯಾ ಯೋಜನೆಯಡಿಯಲ್ಲಿ ಜಿಲ್ಲಾ ಮಟ್ಟದ ದಿಶಾ ಸಮಿತಿ ‘ತುಮಕೂರು ಡಾಟಾ ಜಿಲ್ಲೆ-2022’ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಈಗಾಗಲೇ ತುಮಕೂರು ಜಿ.ಐ.ಎಸ್ ಪೋರ್ಟಲ್ , ದಿಶಾ ಪೋರ್ಟಲ್ ಮತ್ತು ಎಂ.ಪಿ.ಪೋರ್ಟಲ್ ಲಾಂಚ್ ಮಾಡಲಾಗಿದೆ.

ತುಮಕೂರು ಜಿಲ್ಲೆಯ 352 ಜನತಾ ಜೀವ ವೈವಿಧ್ಯ ದಾಖಲಾತಿ ಗಳನ್ನು ಡಾಟಾ ಪುಸ್ತಕಗಳ ಕಣಜ’ ಮಾಡಬೇಕಿದೆ. ಇದರ ಜೊತೆಗೆ ಗ್ರಾಮಗಳ ಇತಿಹಾಸದ ಬಗ್ಗೆ ಅಗತ್ಯವಿರುವ ಮಾಹಿತಿಗಳನ್ನೂ ಸೇರ್ಪಡೆ ಮಾಡುವ ಅಗತ್ಯವಿದೆ ಎಂದು ಪ್ರತಿ ಪಾದಿಸಿದರು.

 ಎನ್.ಐ.ಸಿ ಮತ್ತು ತುಮಕೂರು ಸ್ಮಾ ರ್ಟ್ ಸಿಟಿಯ ಡಿಜಿಟಲ್ ಲೈಬ್ರರಿ ಹಾಗೂ ಐಸಿಸಿಯನ್ನು ಉಪಯೋಗಿಸಿಕೊಂಡು ಜಿಲ್ಲೆಯ ಪ್ರತಿಯೊಂದು ಗ್ರಾಮಗಳ ಡಿಜಿಟಲ್ ಡಾಟಾ ಸಂಗ್ರಹಣೆ ನವಂಬರ್ ತಿಂಗಳಲ್ಲಿ ಡಾಟಾ ಉತ್ಸವ’ ದಂತೆ ನಡೆಯಬೇಕಿದೆ ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ಕುಂದರನಹಳ್ಳಿ ರಮೇಶ್, ಟಿ.ಆರ್.ರಘೊತ್ತಮರಾವ್. ಗುರುಸಿದ್ಧಪ್ಪ, ಶಿವರುದ್ರಪ್ಪ, ಎಂ.ಎಸ್.ರುದ್ರಮೂರ್ತಿ. ಸುನಿಲ್. ಸಿದ್ಧಪ್ಪ, ಶಂಕರಪ್ಪ, ಹೊಲತಾಳ್ ಸಿದ್ಧಲಿಂಗಪ್ಪ, ಸಿದ್ದಲಿಂಗಯ್ಯ, ಸೋಮಶೇಖÀರಯ್ಯ, ಸಿದ್ದಲಿಂಗಯ್ಯ ಇನ್ನೂ ಮುಂತಾದವರು ಮಾತನಾಡಿದರು.

ಸಂಶೋಧಕರು ತಾವು ಬರೆದ ಪುಸ್ತಕಗಳನ್ನು ನೀಡುವ ಮೂಲಕ ಸಂಸದರ ಕಾರ್ಯ ವೈಖರಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ರೂಪುರೇಷೆಗಳ ಬಗ್ಗೆ ಡಾ.ಶಂಕರಪ್ಪನವರು ಮತ್ತು ತಂಡದ ಸದಸ್ಯರು ಸೇರಿ ವಿಷನ್ ಗ್ರೂಪ್ ರಚಿಸಿಕೊಂಡು ಒಂದು ವರದಿ ನೀಡಲು ನಿರ್ಣಯ ಕೈಗೊಳ್ಳಲಾಯಿತು. ಊರಿಗೊಂದು ಇತಿಹಾಸ ಪುಸ್ತಕ ಬರೆಯಲು ಆಸಕ್ತಿ ಇರುವವರು ಡಾ.ಶಂಕರಪ್ಪನವರನ್ನು ಸಂಪರ್ಕಿಸಬಹದು-9980526296

MANUVINAKURIKE SHANKARAPPA BOOK
HOLATHAL SIDDALINGAPPA BOOK