23rd December 2024
Share

ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಮೆಂಟ್ ಕಮಿಟಿ ಚುರುಕಾಗ ಬೇಕಿದೆ.

TUMAKURU:SHAKTHIPEETA FOUNDATION

ದಿನಾಂಕ:06.11.2021 ರಂದು ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯಲ್ಲಿ ನಡೆದ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯ ಸಭೆಯಲ್ಲಿ ಜೀವಿ ವೈವಿಧ್ಯ ದಾಖಲಾತಿ ಬಗ್ಗೆ ನಡೆದ ಚರ್ಚೆ ಮಾಹಿತಿ. ತಾವೂ ಸಲಹೆ ನೀಡಬಹುದು.

ಅಧ್ಯಕ್ಷರು ಮಾತನಾಡಿ ಪರಿಸರದ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಯುತ್ತಿದೆ. ಕೊರೊನಾದಂತಹ ಮಹಾಮಾರಿ ಬಂದಾಗ ಎಲ್ಲರೂ ಆಯುಷ್ ಔಷಧಿಗಿಡಗಳ ಬಗ್ಗೆ ಮಾತನಾಡುತ್ತೇವೆ, ಪರಿಸರದ ಬಗ್ಗೆ ಅಂತಂಕ ವ್ಯಕ್ತ ಪಡುತ್ತೇವೆ, ಕೇಂದ್ರ ಸರ್ಕಾರ ಈ ಬಗ್ಗೆ ಗಂಭೀರವಾಗಿ ತೆಗೆದುಕೊಂಡಿದೆ. ಎನ್.ಜಿ.ಟಿಯೂ ನಿರಂತರವಾಗಿ ಚಾಟಿ ಬೀಸುತ್ತಿದೆ.

 ಧೌರ್ಬಾಗ್ಯ ಎಂದರೆ ತುಮಕೂರು ಜಿಲ್ಲೆಯಲ್ಲಿನ 11 ವಿಧಾನಸಭಾ ಕ್ಷೇತ್ರಗಳಲ್ಲಿನ. 330 ಗ್ರಾಮಪಂಚಾಯಿತಿಯಗಳು, 11 ನಗರ ಸ್ಥಳೀಯ ಸಂಸ್ಥೆಗಳು,  10 ತಾಲ್ಲೋಕು ಪಂಚಾಯಿತಿಗಳು ಮತ್ತು 1 ಜಿಲ್ಲಾ ಪಂಚಾಯಿತಿ ಸೇರಿದಂತೆ 352 ಬಿಎಂಸಿ.ಈಗಾಗಲೇ ರಚನೆಯಾಗಿವೆ.

ಇವುಗಳ ರಚನೆಗಾಗಿ ಮತ್ತು ಜೀವ ವೈವಿದ್ಯ ದಾಖಲಾತಿ ರಚಿನೆಗಾಗಿ  ಕೇಂದ್ರ ಸರ್ಕಾರ ಲಕ್ಷಾಂತರ ರೂ ವ್ಯಯಮಾಡಿದೆ. ಬಿಎಂಸಿಗಳು ಸಮಿತಿ ರಚನೆ ಆದ ಮೇಲೆ ನಿಯಾಮುನುಸಾರ ಸಭೆ ನಡೆಸದೆ ಮೌನವಾಗಿರುವುದು ನನ್ನ ಗಮನಕ್ಕೆ ಬಂದಿದೆ.

 ಅದೇ ರೀತಿ ಜೀವ ವೈವಿಧ್ಯ ದಾಖಲಾತಿ ಮಾಡುವಾಗ ಪ್ರತಿ ಗ್ರಾಮದಲ್ಲಿರುವ ನಾಲೇಡ್ಜಬಲ್ ಪರ್ಸನ್, ನಾಟಿ ವೈಧ್ಯರು, ಹಕೀಮರು ಮತ್ತು ಪಾರಂಪರಿಕ ವೈಧ್ಯರ  ಪಟ್ಟಿಯನ್ನು ಸರಿಯಾಗಿ ಮಾಡಿಲ್ಲ ಎಂಬ ದೂರುಗಳು ಬಂದಿವೆ.

ಈ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ಬಿಎಂಸಿಗಳು ಮತ್ತು ಪಿಬಿಆರ್ ದಾಖಾಲಾತಿ ಸಂಯೋಜಕರು, ಸಲಹಾಗಾರರು ಪ್ರತಿಯೊಂದು ಗ್ರಾಮಗಳಲ್ಲಿಯೂ ಪುನರ್ ಪರಿಶೀಲನೆ ಮಾಡಲು ನವಂಬರ್ ತಿಂಗಳಿನಲ್ಲಿ ಬಯೋಡೈವರ್ಸಿಟಿ ಆಂದೋಲನ ಕೈಗೊಳ್ಳಲು ಸೂಚನೆ ನೀಡಿದರು.

 ಮಾನ್ಯ ಸದಸ್ಯರಾದ ಶ್ರೀ ಕುಂದರನಹಳ್ಳಿ ರಮೇಶ್ ಮಾತನಾಡಿ ಮಾನ್ಯ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮನವಿ ಮೇರೆಗೆ ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್.ಪಾಟೀಲ್ ರವರು ಈಗಾಗಲೇ ತುಮಕೂರು ಜಿಲ್ಲೆಯಾದ್ಯಾಂತ ಊರಿಗೊಂದು ಬಯೋ ಡೈವರ್ಸಿಟಿ ಪಾರ್ಕ್ ಮಾಡಲು ಸರ್ಕಾರಿ ಜಮೀನು  ಗುರುತಿಸಲು ಎಲ್ಲಾ ಉಪವಿಭಾಗಾಧಿಕಾರಿಗಳು. ತಹಶೀಲ್ಧಾರ್ ರವರಿಗೆ ಪತ್ರ ಬರೆಯುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾನಗರಾಭಿವೃದ್ಧಿ ಕೋಶಗಳಿಗೂ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

ಜೊತೆಗೆ ತುಮಕೂರು ಜಿಲ್ಲೆಯನ್ನು ಡಾಟಾ ಜಿಲ್ಲೆಯಶಾಗಿ ಘೋಷಣೆ ಮಾಡುವ ಅಂಗವಾಗಿ ಪಿಬಿಆರ್ ಮಾದರಿಯಲ್ಲಿ ತುಮಕೂರು ಜಿಲ್ಲೆಯಲ್ಲಿನ ಊರಿಗೊಂದು ಇತಿಹಾಸ ಪುಸ್ತಕ ರಚಿಸಲು ಸಂಸದರು ಸಲಹೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಬಯೋಡೈವರ್ಸಿಟಿ ವಿಷನ್ ಗ್ರೂಪ್ ರಚಿಸಿ ಅಗತ್ಯ ಕ್ರಮಕೈಗೊಳ್ಳುವುದು ಸೂಕ್ತವಾಗಿದೆ ಎಂದರು.

ಮುಂದುವರೆದು ಮಾತನಾಡಿದ ಕುಂದರನಹಳ್ಳಿ ರಮೇಶ್ ಗಣಿ ಹಣದಲ್ಲಿ ಇಂತಹ ಮಹತ್ವದ ಕೆಲಸ ಮಾಡಲು ಹಣ ಬಳಸ ಬೇಕಿದೆ. ಜಿಲ್ಲೆಯಲ್ಲಿ ಆರಂಭವಾಗುವ ಹೆಚ್.ಎ.ಎಲ್ ಘಟಕ ಸಿ.ಎಸ್.ಆರ್ ಫಂಡ್ ನೀಡುವ ಮೂಲಕ ಪ್ರತಿ ಗ್ರಾಮದಲ್ಲೂ ಬಯೋಡೈವರ್ಸಿಟಿ ಪಾರ್ಕ್ ಮಾಡಲು ಸಹಕರಿಸಲು ಪತ್ರ ವ್ಯವಹಾರ ಮಾಡಲು ಸಲಹೆ ನೀಡಿದರು.

ಜಿಲ್ಲಾಧಿಕಾರಿಯವರು ಮಾತನಾಡಿ ಇದೊಂದು ಒಳ್ಳೆಯ ಯೋಜನೆ, ಮುಂದಿನ 30 ವರ್ಷಗಳಲ್ಲಿ ಏನಾಗಬಹುದು ಎಂದು ವಿಶ್ವವೇ ಪರಿಸರದ ಬಗ್ಗೆ ಚಿಂತನೆ ನಡೆಸುತ್ತಿದೆ. ಸಂಸದರು ಪತ್ರ ನೀಡಿದ ದಿನವೇ ನಾನು ಎಲ್ಲರಿಗೂ ಪತ್ರ ಬರೆದಿದ್ದೇನೆ, ಪತ್ರ ಬರೆದು ಸುಮ್ಮನೇ ಕೂತರೇ ಕೆಲಸ ಆಗಲ್ಲ, ಆದ್ದರಿಂದ ಬಿಎಂಸಿಗಳು ಚುರುಕುಗೊಳ್ಳಬೇಕಿದೆ ಎಂದು  ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಿಇಓರವರು ಮಾತನಾಡಿ ಇದೊಂದು ಆಗಲೇ ಬೇಕಾದ ಒಳ್ಳೆಯ ಯೋಜನೆ, ಯಾರೊಬ್ಬರೂ ಉದಾಸೀನ ಮಾಡಬಾರದು, ಜೀವಿ ವೈವಿಧ್ಯ ಮಂಡಳಿಯ ಅಧಿಕಾರಿಗಳ ಜೊತೆ ಚರ್ಚಿಸಿ ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಲು ನೋಡೆಲ್ ಆಫೀಸರ್‍ಗೆ ಸೂಚಿಸಿದರು.

ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ನೋಡೆಲ್ ಆಫೀಸರ್‍ರವರು ಮಾತನಾಡಿ ಶೀಘ್ರವಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಕುಂದರನಹಳ್ಳಿ ರಮೆಶ್ ಮಾತನಾಡಿ ಸಂಸದರ ಆದರ್ಶ ಗ್ರಾಮ ಯೋಜನೆಗಳಿಗೆ ಆಯ್ಕೆಯಾದ ಐದು ಗ್ರಾಮಪಂಚಾಯಿತಿಗಳಲ್ಲಿ ಮೊದಲು ಪ್ರಾಯೋಗಿಕವಾಗಿ ಸಂಸದರು ನೀಡಿರುವ ಸಲಹೆಗಳು ಮತ್ತು ನ್ಯಾಷನಲ್ ಆಥಾರಿಟಿ ಆಫ್ ಬಯೋಡೈವರ್ಸಿಟಿ ಆಕ್ಟ್ ಯೋಜನೆಗಳ ಬಗ್ಗೆ ಒಂದು ವಿಷನ್ ಗ್ರೂಪ್ ರಚಿಸಿ ಕಾರ್ಯ ಪ್ರವೃತ್ತರಾಗಲು ಸಲಹೆ ನೀಡಿದರು.

ಈಗಾಗಲೇ ಕುಂದರನಹಳ್ಳಿ ರಮೇಶ್ ಕರ್ನಾಟಕ ಜೀವಿ ವೈವಿಧ್ಯ ಮಡಳಿಯ ಕಾರ್ಯದರ್ಶಿಯವರ ಜೊತೆ ಸಮಾಲೋಚನೆ ನಡೆಸಿದ್ದಾರೆ, ಮಂಡಳಿಯ ಅಧ್ಯಕ್ಷರನ್ನು ಆಹ್ವಾನಿಸಿ ಒಂದು ಸೆಮಿನಾರ್ ಮಾಡಲು 5 ಸಂಸದರ ಆದರ್ಶ ಗ್ರಾಮದ ನೋಡೆಲ್ ಆಫೀಸರ್‍ಗಳು ಅಗತ್ಯ ಕ್ರಮ ಕೈಗೊಳ್ಳಲು ಮಾನ್ಯ ಅಧ್ಯಕ್ಷರು ಸೂಚಿಸಿದರು.

ತುಮಕೂರು ಜಿಲ್ಲೆಯ ಎಲ್ಲಾ 352 ಬಿಎಂಸಿಗಳ ಪದಾಧಿಕಾರಿಗಳು, ಸೆಮಿನಾರ್ ನಲ್ಲಿ ಭಾಗವಹಿಸಲೇ ಬೇಕು, ಈ ಸೆಮಿನಾರ್ ನಲ್ಲಿ ಸಂಯೋಜಕರು ಕೂಡ ಭಾಗವಹಿಸಿ ಅವರ ಅನುಭವಗಳ ಬಗ್ಗೆ ಹಂಚಿಕೊಳ್ಳಬೇಕು.ಇದೊಂದು ಜಿಲ್ಲೆಯಲ್ಲಿ ಬಯೋಡೈವರ್ಸಿಟಿ ಹಬ್ಬದಂತಾಗಬೇಕು ಎಂದು ಮಾನ್ಯ ಅಧ್ಯಕ್ಷರು ಸೂಚಿಸಿದರು.

ಮುಂದುವರೆದು ಮಾತನಾಡಿದ ಅಧ್ಯಕ್ಷರು ತುಮಕೂರು ಜಿಲ್ಲೆಯಲ್ಲಿನ ವಿಶ್ವವಿದ್ಯಾನಿಲಯ, ಇಂಜಿನಿಯರ್ ಕಾಲೇಜುಗಳ ವಿಧ್ಯಾರ್ಥಿಗಳ ಆಕ್ಟಿವಿಟಿ ಪಾಯಿಂಟ್, ಕಾಲೇಜುಗಳ ಎನ್.ಎಸ್.ಎಸ್. ಘಟಕಗಳು, ಇಕೋಕ್ಲಬ್‍ಗಳು, ಆಯಾ ಗ್ರಾಮದ ಸಂಘ ಸಂಸ್ಥೆಗಳು, ನಾಲೇಡ್ಜಬಲ್ ಪರ್ಸನ್, ನಾಟಿ ವೈಧ್ಯರು, ಹಕೀಮರು ಮತ್ತು ಪಾರಂಪರಿಕ ವೈದ್ಯರೂ ಇನ್ನೂ ಮುಂತಾದವರು ಸಕ್ರೀಯವಾಗಿ  ಭಾಗವಹಿಸುವ ಅಗತ್ಯದ ಬಗ್ಗೆ  ಕ್ರಮ ಕೈಗೊಳ್ಳಲು ಸೂಚಿಸಿದರು.