330 ಪಿಡಿಓ ಗಳಲ್ಲಿ ಕೇವಲ ಒಬ್ಬರು ಪಿಡಿಒ NRDMS ಗೆ ಬಂದಿದ್ದಾರಂತೆ:ಸಿಇಓ ಮೇಡಂ
TUMAKURU:SHAKTHI PEETA FOUNDATION
ದಿನಾಂಕ:14.07.2021 ನೇ ಬುಧವಾರ ಸಂಜೆ 5.25 ಗಂಟೆಗೆ ಸತೀಶ್ ಎಂ.ವಿ.ಯೋಜನಾ ನಿರ್ದೇಶಕರು, ಜಿಲ್ಲಾ ಎನ್.ಆರ್.ಡಿ.ಎಂ.ಎಸ್ ಕೇಂದ್ರ, ಜಿಲ್ಲಾ ಪಂಚಾಯತ್ ತುಮಕೂರು ಇವರಿಂದ ತುಮಕೂರು ಜಿಲ್ಲೆಯ 10 ತಾಲ್ಲೂಕುಗಳಿಗೂ ಗ್ರಾಮಪಂಚಾಯತ್ ಮ್ಯಾಪ್ ಗಳನ್ನು ರವಾನಿಸಿದ್ದಾರೆ.ಗ್ರಾಮಪಂಚಾಯಿತಿವಾರು ಕೆರೆಗಳು ಇರುವ ನಕ್ಷೆ.
ದುರಂತವೆಂದರೆ ಇದೂವರೆಗೂ ಜಿಲ್ಲೆಯಲ್ಲಿರುವ 330 ಗ್ರಾಮ ಪಂಚಾಯತ್ ಪಿಡಿಓ ಗಳಲ್ಲಿ ಎನ್.ಎರ್.ಡಿ.ಎಂ.ಎಸ್ ಘಟಕಕ್ಕೆ ಕೇವಲ ಒಬ್ಬರು ಪಿಡಿಓ ಬಿಟ್ಟರೇ ಇನ್ನೂ ಯಾವುದೇ ಪಿಡಿಓ ಬಂದಿಲ್ಲವಂತೆ. ಈ ಸತೀಶ್ ರವರು ಕಾರ್ಯನಿರ್ವಹಿಸಲು ಬಂದಾಗಿನಿಂದಲೂ ಬಂದಿಲ್ಲ ಎಂಬ ಮಾತುಕೇಳಿ ನನಗೆ ಆಶ್ಚರ್ಯವಾಯಿತು.
ದಿನಾಂಕ:14.06.2021 ರಂದು ಕರ್ನಾಟಕ ಸರ್ಕಾರದ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಯೋಜನೆಯಿಂದ ಒಂದು ಸುತ್ತೋಲೆ ಬಂದಿದೆ. ತುಮಕೂರು ಜಿಲ್ಲಾ ಪಂಚಾಯತ್ ಯೋಜನಾ ಘಟಕದಲ್ಲಿ ಯಾವ ಅಧಿಕಾರಿ ಏನೇನು ಕೆಲಸ ಮಾಡಬೇಕು ಎಂಬ ಬಗ್ಗೆ ಸ್ಪಷ್ಟವಾಗಿ ಕನ್ನಡಲ್ಲಿ ಕಳುಹಿಸಿದ್ದಾರೆ. ಜಿಲ್ಲಾ ಪಂಚಾಯತ್ ಸಿಇಓ ರವರೇ ದಯವಿಟ್ಟು ಇದನ್ನು ಪೂರ್ಣವಾಗಿ ಓದಿ.
ಈ ಬಗ್ಗೆ ದಿನಾಂಕ: 09.11.2021 ರಂದು ಸಿಪಿಓ ಕಚೇರಿಗೆ ಭೇಟಿ ನೀಡಿ ಸಮಾಲೋಚನೆ ನಡೆಸಲಾಯಿತು.
ಇನ್ನೂ ಈ ಮ್ಯಾಪ್ ಬಗ್ಗೆ ಹೇಳಬೇಕೆಂದರೆ ಗ್ರಾಮಪಂಚಾಯಿತಿವಾರು ಇರುವ ಕೆರೆಗಳ ಮಾಹಿತಿ ಸಂಗ್ರಹಿಸುವುದಾಗಿದೆ.
ಈ ಮಾಹಿತಿಯನ್ನು ಪಿಡಿಓ ಗಳು ಕಳುಹಿಸಬೇಕು. ಆದರೇ ಇಓ ಗಳು ಪಿಡಿಓ ಗಳಿಗೆ ರವಾನಿಸಿದ್ದಾರೆಯೇ? ಪಿಡಿಓ ಗಳು ಏಕೆ ನೋಡಿಲ್ಲ ಎಂಬ ಬಗ್ಗೆ ಉತ್ತರಿಸಬೇಕಾದರವರು, ಸಿಪಿಓ, ಪಿಎಇಓ, ಟಿಪಿಓ.ಎಎಸ್‍ಓ-1 ಮತ್ತು ಎಎಸ್ ಓ-2 ಯೋಜನಾ ಇಲಾಖೆಯ ಸುತ್ತೋಲೆಯಲ್ಲಿ ಸ್ಪಷ್ಟವಾಗಿದೆ.
ಇವರ ಜೊತೆಗೆ ಏನೇನು ಮಾಹಿತಿ ಬೇಕು ಎಂಬ ವಿವರ ನೀಡಬೇಕಾದವರು ಸಣ್ಣ ನೀರಾವರಿ ಇಲಾಖೆ ಇಇ ರವರು ಮತ್ತು ಗ್ರಾಮೀಣ ಕುಡಿಯುವ ನೀರು ವಿಭಾಗದ ಇಇ ರವರು ಇವರ ಕಚೇರಿಗೂ ಇಂದೇ ಭೇಟಿ ನೀಡಿದೆ.
ಜಲಜೀವನ್ ಮಿಷನ್ ನೋಡುತ್ತಿರುವ ಗ್ರಾಮೀಣ ಕುಡಿಯುವ ನೀರು ವಿಭಾಗದವರು ಸಾರ್ ಮ್ಯಾಪ್ ಕಳುಹಿಸಿರುವುದು ನಮಗೂ ಗೊತ್ತಿದೆ. ಆದರೇ ಇನ್ನೂ ಮಾಹಿತಿ ಬಂದಿಲ್ಲ. ಈ ಬಗ್ಗೆ ಒಂದೆರೆಡು ದಿವಸದಲ್ಲಿ ಉತ್ತರ ನೀಡಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಸಣ್ಣ ನೀರಾವರಿ ಇಲಾಖೆ ಇಇ ರವರು ಬಹಳ ಹೆಮ್ಮೆಯಿಂದ ಹೇಳಿದ ಮಾತು ನಾನು ಈಗ ಮೆಂಬರ್ ಸಕ್ರೇಟರಿ ಅಲ್ಲ ಬದಾಲಾವಣೆ ಆಗಿದೆ ಎಂದು ಸರ್ಕಾರಿ ಅಧೇಶ ನೀಡಿದರು. ಹೌದು ನೀವು ಹೇಳಿದ ಸಮಿತಿ ಉಚ್ಚ ನ್ಯಾಯಾಲಗಳ ಆದೇಶದ ಮೇರೆಗೆ ಕೆರೆ-ಕಟ್ಟೆಗಳ ಸಂರಕ್ಷಣೆ ಮತ್ತು ನಿರ್ವಹಣೆ ಅಭಿವೃದ್ಧಿಗೆ ಸಂಭಂಧಿಸಿದ ಸಮಿತಿ.
ನಾನು ನಿಮಗೆ ಹೇಳಿದ್ದು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಪ್ರಕಾರ ರಚನೆಯಾಗಿರುವ ಜಿಲ್ಲಾ ಕಾರ್ಯವಿರ್ವನಿರ್ವಹಣಾ ಪ್ರಾಧಿಕಾರದ ಸಮಿತಿಯ ಸದಸ್ಯ ಕಾರ್ಯದರ್ಶಿ ಕರ್ತವ್ಯದ ಪ್ರಕಾರ ಈ ಡೇಟಾ ಬೇಸ್ ಇಟ್ಟುಕೊಳ್ಳುವುದು ನಿಮ್ಮ ಕರ್ತವ್ಯವಾಗಿದೆ, ಈ ಬಗ್ಗೆ ಇನ್ನೋಮ್ಮೆ ಎರಡು ಸಮಿತಿಗಳ ಬಗ್ಗೆ ನನಗೆ ಮನವರಿಕೆ ಮಾಡಲು ಇಇ ರವರಿಗೆ ಹೇಳಿದ್ದೇನೆ.
ಜಲಜೀವನ್ ಮಿಷನ್ ಮತ್ತು ಅಟಲ್ ಭೂಜಲ್ ಈ ಎರಡು ಯೋಜನೆಗಳ ಕೇಂದ್ರ ಸರ್ಕಾರದ ಮಾರ್ಗದರ್ಶಿ ಸೂತ್ರದ ಪ್ರಕಾರ ಕೆಲಸ ಮಾಡದೇ ಇದ್ದರೆ ಖಂಡಿತಾ ಸುಮ್ಮನೆ ಕೂರಲು ಸಾದ್ಯಾವಿಲ್ಲ. ನಿಮಗೆ ಏನು ಕೊರತೆ ಹೇಳಿ ಅದಕ್ಕೆ ಸ್ಪಂಧಿಸೋಣ, ಸರ್ಕಾರದ ಜೊತೆ ಸಮಾಲೋಚನೆ ನಡೆಸೊಣ. ಅದು ಬಿಟ್ಟು ಕಥೆ ಹೇಳುವುದು ದಯವಿಟ್ಟು ಬೇಡ.
ಇಂದು ಸಣ್ಣ ನೀರಾವರಿ ಇಲಾಖೆ ಇಇ ರವರಿಗೆ ನಾನು ಹೇಳಿಬಂದ ಮಾತು, ನೋಡೋಣ ಸಾರ್ ಈ ವಿಚಾರದಲ್ಲಿ ನಾನು ಸೋಲುತ್ತೇನಾ? ಅಥವಾ ನೀವೂ ನೀವೂ ಸೋಲುತ್ತಿರಾ? ಅವರ ಉತ್ತರ ಸಾರ್ ನೀವೂ ಹೇಳುತ್ತಿರುವುದು ನಮ್ಮ ಕರ್ತವ್ಯ ನಾವು ಮಾಡೀಯೇ ತೀರುತ್ತೇವೆ. ದಿನಾಂಕ:15.11.2021 ರೊಳಗೆ ಗುಬ್ಬಿ ತಾಲೋಕಿನ ಮಾಹಿತಿಯನ್ನು ನಿಮಗೆ ನೀಡಿಯೇ ತೀರುತ್ತೇನೆ ಎಂದಿದ್ದಾರೆ. ಆದರೂ ಒಂದೆರಡು ದಿವಸ ಅವಕಾಶವಿರಲಿ ಎಂದಿದ್ದಾರೆ.
ಸಿಇಓ ಮೇಡಂ ಈ ಎರಡು ವಿಚಾರದಲ್ಲಿ ಒಂದು ಸಮಿತಿ ಮಾಡಲು ಕಡತದಲ್ಲಿ ರೆಡಿಯಾಗಿದೆ, ನೀವೂ ಇನ್ನೂ ಸಮಿತಿ ಆದೇಶಕ್ಕೆ ಸಹಿ ಹಾಕಿಲ್ಲ ಕಾರಣ ನೀವೇ ಹೇಳಬೇಕು. ನೀವೂ ರಚಿಸಿರುವ ಸಮಿತಿಯಲ್ಲೂ ಸಂಭಂಧಿಸಿದ ಎಲ್ಲಾ ಇಲಾಖೆಗಳು ಇಲ್ಲ, ಮತ್ತೊಮ್ಮೆ ಪರಿಶೀಲಿಸಿ.
ದಿನಾಂಕ:06.11.2021 ರಂದು ನಡೆದ ದಿಶಾ ಸಮಿತಿ ಸಭೆಯಲ್ಲಿ ಮನೆ ಮನೆಗೆ ಗಂಗೆ ಅಥವಾ ಜಲಜೀವನ್ ಮಿಷನ್ ಪಾನಿ ಸಮಿತಿಯ ಮೂಲಕ ವಿಲೇಜ್ ಆಕ್ಷನ್ ಪ್ಲಾನ್ ಗೆ ಸಂಭಂಧಿಸಿದ ಡಾಟಾ ಮತ್ತು ನಕ್ಷೆ ಸಿದ್ದವಿರಲೇ ಬೇಕು. 15 ದಿವಸದ ಗಡುವು ನೀಡಿದ್ದೀರಿ, ಎಲ್ಲಾ ಪತ್ರಿಕೆಗಳವರೂ ಇದನ್ನೆ ಲೀಡ್ ಮಾಡಿದ್ದಾರೆ. ನೆನಪಿರಲಿ ಮೇಡಂ.
ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಎರಡು ಸಮಿತಿಗಳಿಗೆ ಈ ವಿಷಯ ಬರಲಿದೆ. ಗ್ರಾಮೀಣ ಕುಡಿಯುವ ನೀರು ಸಮಿತಿ ಮತ್ತು ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ ಇವೆರಡರಲ್ಲೂ ನಕ್ಷೆ ಮತ್ತು ಮಾಹಿತಿಗಳ ಬಗ್ಗೆ ಸಭೆ ನಡವಳಿಕೆ ಆಗಲೇಬೇಕು. ಇದು ಸರ್ಕಾರಗಳ ನಿಯಮ.
ನೀವೂ ಈ ಬಗ್ಗೆ ಯಾವುದೇ ಸಭೆಗಳಿಗೆ ಆಹ್ವಾನಿಸಿದರೂ ಭಾಗವಹಿಸಿ ನನಗೆ ತಿಳಿದಿರುವ ವಿಚಾರವನ್ನು ಸಭೆಯ ಗಮನಕ್ಕೆ ತರುತ್ತೇನೆ.ದಿನಾಂಕ:21.11.2021 ರ ನಂತರ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಲಿಖಿತ ದೂರು ನೀಡುವುದಾಗಿ ದಿಶಾ ಸಮಿತಿ ಸಭೆಯಲ್ಲಿಯೇ ಘೋಷಣೆ ಮಾಡಿದ್ದೇನೆ, ದಯವಿಟ್ಟು ಎಲ್ಲಾ ಅಧಿಕಾರಿಗಳಿಗೂ ನೆನಪಿರಲಿ.
ಜೊತೆಗೆ ಬಿಎಂಸಿ ರಚಿಸಿರುವ ಪಿಬಿಆರ್ ಗೆ ಸಂಭಂಧಿಸಿದಂತೆ ಎನ್.ಜಿ.ಟಿ ಆದೇಶವೂ ಇದೆ ಎಂಬ ವಿಚಾರವನ್ನು ತಮ್ಮೆಲ್ಲರ ಆಧ್ಯ ಗಮನಕ್ಕೆ ತರುತ್ತಿದ್ದೇನೆ.
ಎಲ್ಲರೂ ಒಗ್ಗಟ್ಟಾಗಿ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಕೆಲಸ ಮಾಡೋಣ. ಇದೇ ದಿಶಾ ಸಮಿತಿ ಉದ್ದೇಶ.