TUMAKURU:SHAKTHI PEETA FOUNDATION
ನಾಟಿ ವೈದ್ಯರು, ಹಕೀಮರು ಮತ್ತು ಪಾರಂಪರಿಕ ವೈಧ್ಯರ ರಾಜ್ಯ ಮಟ್ಟದ ಸಮಾವೇಶವನ್ನು ದಿನಾಂಕ:16.10.2021 ರಂದು ಶಕ್ತಿಪೀಠ ಕ್ಯಾಂಪಸ್ ಆವರಣದಲ್ಲಿ ಏರ್ಪಡಿಸಲಾಗಿತ್ತು. ಅಂದು ಭಾಗವಹಿಸಿದ್ದ ಸುಮಾರು 108 ಕ್ಕೂ ಹೆಚ್ಚು ಜನರ ಒಕ್ಕೊರಲಿನ ಬೇಡಿಕೆ ನಮಗೆ ಸ್ಥಳೀಯ ಸಂಸ್ಥೆಗಳಿಂದ ದೃಡೀಕರಣ ಪತ್ರ, ಗುರುತಿನ ಪತ್ರ ಕೊಡಿಸಿ ಎಂಬುದಾಗಿತ್ತು.
ಅದಕ್ಕೂ ಮೊದಲು ಶ್ರೀ ಗುರುಸಿದ್ದಾರಾಧ್ಯರವರು ಮತ್ತು ಶ್ರೀ ಗೋವಿಂದಪ್ಪನವರು ನನ್ನಿಂದ ಒಂದು ಪ್ರತಿಜ್ಞೆ ಮಾಡಿಸಿಕೊಂಡಿದ್ದರು. ಸಾರ್ ನಾವು ಶಕ್ತಿಪೀಠ ಕ್ಯಾಂಪಸ್ ನಲ್ಲಿ ಎಷ್ಟು ಸಾಧ್ಯವೋ ಅಷ್ಟು ಜಾತಿ ಔಷಧಿ ಗಿಡ ಸಂಗ್ರಹಣೆ ಮಾಡಿ ಹಾಕುತ್ತೇವೆ, ನಮಗೆ ಒಂದು ದಾರಿ ತೋರಿಸಿ ಎಂದಿದ್ದರು.
ನನಗೆ ಅರಿವೂ ಬರದೇ ಶಕ್ತಿದೇವಿಯತೆಯ ಕೃಪೆಯಿಂದ ಓಕೆ ಎಂದಿದ್ದೆ. ನನಗೆ ಅಂದು ಜನತಾ ಜೀವ ವೈವಿಧ್ಯ ದಾಖಾಲಾತಿ ಬಗ್ಗೆ ಕನಿಷ್ಟ ಜ್ಞಾನವೂ ಇರಲಿಲ್ಲ. ಮೆಡಿಷನಲ್ ಪ್ಲಾಂಟ್ಸ್ ಬೋರ್ಡ್ ಗೆ ಭೇಟಿ ನೀಡಿ ವಿಚಾರಿಸಿದಾಗ ಅಧಿಕಾರಿಯೊಬ್ಬರೂ ಪಿಬಿಆರ್ ಬಗ್ಗೆ ಮಾಹಿತಿ ನೀಡಿದ್ದರು.
ಅಂದಿನಿಂದ ಪಿಬಿಆರ್ ಬೆನ್ನು ಹತ್ತಿದ್ದಾಯಿತು. ಕರ್ನಾಟಕ ಜೀವ ವೈವಿಧ್ಯ ಮಂಡಳಿ ಸದಸ್ಯ ಕಾರ್ಯದರ್ಶಿರವರೊಡನೆ ವಿಚಾರ ವಿನಿಮಯ ಮಾಡಿದಾಗ ನಿಮ್ಮ ಕನಸಿನ ಯೋಜನೆಗಳನ್ನು ನೀವೇ ಆರಂಭಿಸಿ ಸಾರ್ ದೇವರ ಸೇವೆ ಮಾಡಲಿಕ್ಕೆ ಯಾರ ಅಪ್ಪಣೆ ಬೇಕು ಎಂಬ ಮಾತಿನಲ್ಲಿ ಉತ್ತರ ನೀಡಿದಂತೆ ಇತ್ತು.
ತುಮಕೂರು ಲೋಕಸಬಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಜೊತೆ ಸಮಾಲೋಚನೆ ಮಾಡಿದಾಗ 2002 ರಲ್ಲಿ ಅವರು ಸಂಸದರಾಗಿದ್ದ ವೇಳೆಯೇ ಬಿಲ್ ಬಂದಿದ್ದರ ಬಗ್ಗೆ ವಿಷಯ ಹಂಚಿಕೊಂಡರು. ಏನಾದರೂ ಮಾಡು ಪ್ರತಿ ಗ್ರಾಮ ಹಂತದಲ್ಲಿ ಯೋಜನೆಯ ಅರಿವು ಮೂಡಿಸಿ, ಔಷಧಿ ಗಿಡವೂ ಸೇರಿದಂತೆ ಎಲ್ಲಾ ಜಾತಿಯ ಗಿಡ ಬೆಳೆಸಲು ನಿರ್ದಿಷ್ಠವಾದ ಯೋಜನೆ ರೂಪಿಸಲು ಸಲಹೆ ನೀಡಿದರು. ಜೊತೆಗೆ ದಿಶಾ ಸಮಿತಿಯಲ್ಲಿ ವಿಷಯ ಸೇರ್ಪಡೆ ಮಾಡಲು ಸಲಹೆ ನೀಡಿದರು.
ಸಂಸದರ ಮನವಿ ಮೇರೆಗೆ ಇತಿಹಾಸದಲ್ಲಿ ಯಾವ ಜಿಲ್ಲಾಧಿಕಾರಿಯೂ ಮಾಡದ ಕೆಲಸ ಮಾಡಿ ಊರಿಗೊಂದು ಬಯೋಡೈವರ್ಸಿಟಿ ಪಾರ್ಕ್ ಮಾಡಲು ಸರ್ಕಾರಿ ಜಮೀನು ಗುರುತಿಸಲು ಪತ್ರ ಬರೆಯುವ ಮೂಲಕ ದಿಟ್ಟ ನಿರ್ಧಾರ ಕೈಗೊಂಡರು ನಮ್ಮ ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರು ಮತ್ತು ಅವರ ತಂಡ.
ಮತ್ತೆ ದಿನಾಂಕ:06.11.2021 ರಂದು ನಡೆದ ದಿಶಾ ಸಮಿತಿ ಸಭೆಯಲ್ಲಿ ವಿವರವಾಗಿ ಚರ್ಚೆ ನಡೆಸಿದರು.ನಂತರ ಮಂಡಳಿಯ ಅಧ್ಯಕ್ಷರಾದ ಶ್ರೀ ಅನಂತ ಹೆಗ್ಗಡೆ ಆಶಿಸರ ರವರಿಗೆ ಬಸವರಾಜ್ ರವರು ಪತ್ರ ಬರೆಯುವುದರ ಜೊತೆಗೆ ಅವರ ಕಚೇರಿಗೆ ಭೇಟಿ ನೀಡಿ ಅವರೊಂದಿಗೆ ಸಮಾಲೋಚನೆ ನಡೆಸಿದರು.
ಆಶೀಸರವರು ಹೇಳಿದ್ದು ಚುನಾಯಿತ ಜನಪ್ರತಿನಿಧಿಗಳು ಈ ಬಗ್ಗೆ ವಿಶೇಷ ಗಮನ ಹರಿಸಬೇಕು, ತಾವೂ ಮುನ್ನುಡಿ ಬರೆದಿದ್ಧಿರಿ ಸಾರ್, ನಿಮ್ಮ ಈ ಕಾರ್ಯಕ್ಕೆ ಚಾಲನೆ ನಿಡೋಣ. ನಿಯಾಮನುಸಾರ ಏನೇನು ಮಾಡಲು ಸಾಧ್ಯವೋ ಅವುಗಳನ್ನು ಮಾಡೋಣ ಎಂಬ ನಿಲವು ವ್ಯಕ್ತಪಡಿಸಿದ್ದರು. ಈಗ ಸಂಸದರ ಮನವಿಗೆ ಹಸಿರು ನಿಶಾನೆ ನೀಡುವ ಮೂಲಕ ಸಂಸದರ ಪರಿಕಲ್ಪನೆಗೆ ಸಹಕರಿಸಿದ್ದಾರೆ. ಜೊತೆಗೆ ವಿವಿಧ ಮಟ್ಟದಲ್ಲಿ ನಾಟಿವೈಧ್ಯರ ಸಮ್ಮೇಳನವನ್ನು ನಡೆಸುವ ಚಿಂತನೆಯಲ್ಲಿದ್ದಾರೆ.
ಈಗ ನಾವೂ ತುಮಕೂರಿನಲ್ಲಿ ಒಂದು ಹೊಸ ಇತಿಹಾಸ ಸೃಷ್ಠಿಸುವ ಕೆಲಸ ಮಾಡಲೇ ಬೇಕಿದೆ. ಈಗಾಗಲೇ ಸಂಸದರು ಎರಡು ಸಭೆ ನಡೆಸಿ, 11 ವಿಧಾನ ಸಭಾ ಕ್ಷೇತ್ರಗಳಲ್ಲೂ ತಲಾ 9 ಜನರಂತೆ ಸುಮಾರು 99 ಜನರ ವಿಷನ್ ಗ್ರೂಪ್ ತಂಡವನ್ನು ರಚಿಸಲು ಸಿದ್ಧತೆ ನಡೆಸಿದ್ದಾರೆ.
ಈ ಬಗ್ಗೆ ನೋಡೆಲ್ ಆಫೀಸರ್ ರವರ ಜೊತೆ ಸಮಾಲೋಚನೆ ನಡೆಸಲಾಗಿದೆ. ಅವರು ಈಗಾಗಲೇ ಜಿಲ್ಲಾಧಿಕಾರಿಗಳ ಪತ್ರ, ದಿಶಾ ಸಮಿತಿಯ ನಿರ್ಣಯ ಮತ್ತು ಆಶೀಸರವರ ಪತ್ರದ ಮೇಲೆ ರೂಪುರೇಷೆಗಳ ಬಗ್ಗೆ ಸಮಾಲೋಚನೆ ಆರಂಭಿಸಿದ್ದಾರೆ.
ಆಸಕ್ತರು ವಿಷನ್ ಗ್ರೂಪ್ ಸೇರ್ಪಡೆ ಆಗಬಹುದು..
ಕ್ರಮಾಂಕ:ತುಎಂಪಿ/ಜೀವೈ/ಪಿಬಿಆರ್/1/2021 ದಿನಾಂಕ:08.11.2021
ಗೆ.
ಅಧ್ಯಕ್ಷರು.
ಕರ್ನಾಟಕ ಜೀವ ವೈವಿದ್ಯ ಮಂಡಳಿ
ಕರ್ನಾಟಕ ಸರ್ಕಾರ. ಬೆಂಗಳೂರು
ಮಾನ್ಯರೇ.
ವಿಷಯ: ಬಯೋಡೈವರ್ಸಿಟಿ ಯೋಜನೆಗಳ ಬಗ್ಗೆ.
ತುಮಕೂರಿನ ಶಕ್ತಿಪೀಠ ಫೌಂಡೇಷನ್ (988677447) ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಯಾಮುನುಸಾರ. ತುಮಕೂರು ಜಿಲ್ಲೆಯ ತುಮಕೂರು ವಿಶ್ವವಿದ್ಯಾಲಯ, ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು, ಶಾಲಾ ಕಾಲೇಜುಗಳು, ಎನ್.ಎಸ್.ಎಸ್. ಇಕೋಕ್ಲಬ್ ಗಳು, ಯುವ ಸಂಘಟನೆಗಳು, ಸ್ರ್ತೀಶಕ್ತಿ ಸಂಘಟನೆಗಳು, ರೈತರ ಸಂಘಟನೆಗಳು, ಹಿರಿಯ ನಾಗರೀಕರು, ವಿದ್ಯಾರ್ಥಿಗಳು, 352 ಎನ್.ಜಿ.ಓ ಗಳು, ಪರಿಣಿತ ವ್ಯಕ್ತಿಗಳು, ನಾಟಿ ವೈದ್ಯರು, ಹಕೀಮರು, ಪಾರಂಪರಿಕ ವೈದ್ಯರು ಮತ್ತು ನಾಲೇಡ್ಜಬಲ್ ಪರ್ಸನ್‍ರವರ ನೇತೃತ್ವದಲ್ಲಿ ವಿಷನ್ ಗ್ರೂಪ್ ರಚಿಸಿಕೊಂಡು ಅವರ ಶ್ರಮದಾನ ಮತ್ತು ಸಹಕಾರÀದೊಂದಿಗೆ ಮತ್ತು ಸರ್ಕಾರಗಳ ವಿವಿಧ ಯೋಜನೆಗಳ ಕನ್ವರ್ಜೆನ್ಸ್ ಅಡಿಯಲ್ಲಿ, ಈ ಕೆಳಕಂಡ ಯೋಜನೆಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಿದೆ. ಆದ್ದರಿಂದ ಇವರ ಜೊತೆ ಸಮಾಲೋಚನೆ ನಡೆಸಿ, ಅರ್ಹತೆ ಆಧಾರದ ಮೇಲೆ ಅಗತ್ಯ ಕ್ರಮಕೈಗೊಳ್ಳಲು ಕೋರಿದೆ.
- ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೋಕಿನ, ಜೆ.ಜಿ.ಹಳ್ಳಿ ಹೋಬಳಿ, ಗೌಡನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿನ ಬಗ್ಗನಡು ಕಾವಲ್‍ನಲ್ಲಿ ಅಂತರ ರಾಷ್ಟ್ರೀಯ ಮಟ್ಟದ ಜೀವ ವೈವಿಧ್ಯ ಪಾರ್ಕ್ ನಿರ್ಮಾಣ ಮಾಡುವುದು.
- ತುಮಕೂರು ಜಿಲ್ಲೆಯಲ್ಲಿನ 11 ವಿಧಾನಸಭಾ ಕ್ಷೇತ್ರಗಳಲ್ಲಿನ. 330 ಗ್ರಾಮಪಂಚಾಯಿತಿಯಗಳು, 11 ನಗರ ಸ್ಥಳೀಯ ಸಂಸ್ಥೆಗಳು, 10 ತಾಲ್ಲೋಕು ಪಂಚಾಯಿತಿಗಳು ಮತ್ತು 1 ಜಿಲ್ಲಾ ಪಂಚಾಯಿತಿ ಸೇರಿದಂತೆ 352 ಬಿಎಂಸಿಗಳ ಮಾನಿಟರಿಂಗ್ ಸೆಲ್ ಅರಂಭಿಸುವುದು.
- ತುಮಕೂರು ಜಿಲ್ಲೆಯ 352 ಪಿಬಿಆರ್ ಮೌಲ್ಯಮಾಪನ ಮಾಡುವುದು.
- ತುಮಕೂರು ಜಿಲ್ಲೆಯಲ್ಲಿ ಊರಿಗೊಂದು ಬಯೋಡೈವರ್ಸಿಟಿ ಪಾರ್ಕ್ ನಿರ್ಮಾಣ ಮಾಡುವುದು.
- ತುಮಕೂರು ಜಿಲ್ಲೆಯಲ್ಲಿ ಊರಿಗೊಂದು ಗ್ರಾಮ ಇತಿಹಾಸ ಪುಸ್ತಕ ರಚಿಸುವುದು.
ವಂದನೆಗಳೊಂದಿಗೆ ತಮ್ಮ ವಿಶ್ವಾಸಿ
(ಜಿ.ಎಸ್.ಬಸವರಾಜ್)
ಪ್ರತಿಯನ್ನು ಸದಸ್ಯ ಕಾರ್ಯದರ್ಶಿರವರಿಗೆ ಅಗತ್ಯ ಕ್ರಮ ಕೈಗೊಳ್ಳಲು ರವಾನಿಸಿದೆ.
ತಾವೂ ನಮ್ಮೊಂದಿಗೆ ಕೈಜೋಡಿಸ ಬಹುದು.