21st December 2024
Share

ಹಾಳಾಗಿರುವ ತೆಂಗಿನ ಮರ: ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಿ.

TUMAKURU:SHAKTHIPEETA FOUNDATIN

ದಿನಾಂಕ:06.11.2021 ರಂದು ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯಲ್ಲಿ ನಡೆದ ತುಮಕೂರು ಜಿಲ್ಲಾ ದಿಶಾ ಸಮಿತಿಯ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ಶ್ರೀ ನಾರಾಯಣಗೌಡರವರ ಬಹುದಿನದ ಬೇಡಿಕೆ ಹನಿನೀರಾವರಿ ಸಹಾಯಧನ ಮುಂದುವರೆಸುವುದಾಗಿದೆ. ನೋಡೋಣ ಸಾರ್?

One district one crop

ಸಭೆಯ ಮಾನ್ಯ ಅಧ್ಯಕ್ಷರು ಮಾತನಾಡಿ, ಒಂದು ಜಿಲ್ಲೆ ಒಂದು ಬೆಲೆ  (One district one crop)  ಯೋಜನೆಯಡಿ ಕೇಂದ್ರ ಸರ್ಕಾರದ ಸೂಚನೆಯನ್ವಯ ತುಮಕೂರು ಜಿಲ್ಲೆಯು ಆಯ್ಕೆಯಾಗಿದ್ದು, ಈ ಸಂಬಂಧ ತೆಂಗಿನ ಬೆಳೆ ಅಭಿವೃದ್ಧಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕಾದ ಅವಶ್ಯಕತೆ ಇರುವುದಾಗಿ ಕೇಂದ್ರದ ತೆಂಗು ಮತ್ತು ತೆಂಗಿನ ನಾರಿನ ಅಭಿವೃದ್ಧಿ ಮಂಡಳಿಯವರು ಸೂಚಿಸಿರುವುದಾಗಿ ಸಭೆಗೆ ತಿಳಿಸಿದರು. 

               ಮುಂದುವರೆದು ಮಾತನಾಡುತ್ತಾ, “ನೀರಾ” ಮಾರುಕಟ್ಟೆ ವ್ಯವಸ್ಥೆಯ ಕುರಿತು ಮಾಹಿತಿ ಪಡೆದರಲ್ಲದೆ ಗುಬ್ಬಿ ಅಥವಾ ಕೆ.ಬಿ.ಕ್ರಾಸ್‍ನಲ್ಲಿ ವ್ಯವಸ್ಥೆಗೊಳಿಸಲು ತಿಳಿಸಿದರು.  ಪೂರಕವಾಗಿ, ಮಾನ್ಯ ಸದಸ್ಯರಾದ ಶ್ರೀ ಕುಂದರನಹಳ್ಳಿ ರಮೇಶ್‍ರವರು ಮಾತನಾಡಿ, ಮಿಲ್ಕ್ ಫೆಡರೇಷನ್ ರೀತಿಯಲ್ಲಿ ಮಾಡಿದರೆ “ನೀರಾ” ಉತ್ತಮ ಮಾರಾಟವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

 ಪ್ರತಿಯಾಗಿ ತೋಟಗಾರಿಕಾ ಉಪ ನಿರ್ದೇಶಕರು ಮಾತನಾಡಿ, ರಾಜ್ಯ ವಿವಿದೆಡೆಗಳಿಂದ ವಿಜ್ಞಾನಿಗಳನ್ನು ಕರೆಸಿ ಸಮಾಲೋಚಿಸಲಾಗಿದ್ದು, ವಿಶೇಷ ಪ್ಯಾಕೇಜ್ ಮಂಜೂರಾತಿಗಾಗಿ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ;  ಭೂಮಿಯ ಫಲವತ್ತತೆ ಕೊರತೆ ಮತ್ತು ನೀರಿನ ಸಮಸ್ಯೆಯಿಂದಾಗಿ “ನೀರಾ” ಇಳುವರಿಗೆ ಸಮಸ್ಯೆಯಾಗುತ್ತಿರುವುದಾಗಿ ವಿಜ್ಞಾನಿಗಳು ತಿಳಿಸಿರುವುದಾಗಿ ಸಭೆಯ ಗಮನಕ್ಕೆ ತಂದರು.  ಮಾನ್ಯ ಅಧ್ಯಕ್ಷರು ಮಾತನಾಡಿ ಅಗತ್ಯ ಕ್ರಮ ವಹಿಸಬೇಕೆಂದು ತೋಟಗಾರಿಕೆ ಉಪ ನಿರ್ದೇಶಕರಿಗೆ ತಿಳಿಸಿದರು.

ಹಾಳಾಗಿರುವ ತೆಂಗಿನ ಮರಗಳ ಗಣತಿ ಮಾಡಿ.

 ಮಾನ್ಯ ಅಧ್ಯಕ್ಷರು ಮುಂದುವರೆದು ಮಾತನಾಡುತ್ತಾ ತುಮಕೂರು ಜಿಲ್ಲೆಯಲ್ಲಿ ಹಲವಾರು ರೋಗಗಳು ಬಂದು ತೆಂಗಿನ ಮರಗಳು ಹಾಳಾಗಿವೆ. ಜಿಲ್ಲೆಯ ಪ್ರತಿಯೊಬ್ಬರ ತೋಟದಲ್ಲಿ ಎಷ್ಟು ಮರ ಹಾಳಾಗಿವೆ. ಯಾವ ರೋಗಕ್ಕೆ ಬಲಿಯಾಗಿವೆ ಎಂಬ ಪಟ್ಟಿ ಮಾಡಿ ರೈತರ ನೆರವಿಗೆ ಬರಲು ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಕಾರ್ಯಕ್ರಮದಡಿ ತುಮಕೂರು ಜಿಲ್ಲೆಯಲ್ಲಿ ತೆಂಗಿನ ಬೆಳೆ ಅಭಿವೃದ್ಧಿಪಡಿಸಲು ರೈತರನ್ನು ಉತ್ತೇಜಿಸಬೇಕೆಂದು ತಿಳಿಸಿದರು. 

 ಈ ಮಾತಿಗೆ ಮಾನ್ಯ ಸದಸ್ಯರಾದ ಶ್ರೀ ಕುಂದರನಹಳ್ಳಿ ರಮೇಶ್‍ರವರು ಸಹಮತ ವ್ಯಕ್ತಪಡಿಸಿದರು.  ಪ್ರತಿಯಾಗಿ ಇಲಾಖಾ ಉಪನಿರ್ದೇಶಕರು ಮಾತನಾಡಿ ಮತ್ತು ಹೀರೆಹಳ್ಳಿ ಕೃಷಿ ವಿಜ್ನಾನ ಕೇಂದ್ರದ ಅಧಿಕಾರಿಗಳು ಮಾತನಾಡಿ ಒಂದು ಆಂದೋಲನ ರೂಪದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಅಡಿಕೆ ಬೆಳೆ ಬಗ್ಗೆ ಪ್ರಸ್ತಾವನೆ.

ಮಾನ್ಯ ಅಧ್ಯಕ್ಷರು ಮಾತನಾಡಿ ಕೇಂದ್ರ ಸರ್ಕಾರ ಅಡಿಕೆಯನ್ನು ಆಹಾರ ಪದಾರ್ಥ ಎಂದು ಘೋಷಣೆ ಮಾಡಬೇಕು. ನರೇಗಾ ಯೋಜನೆಯಡಿಯಲ್ಲಿ ವಿವಿಧ ಅಡಿಕೆ ಬೆಳೆಗೆ ಕಾರ್ಯಕ್ರಮ ರೂಪಿಸಬೇಕು ಎಂಬ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.

ಹನಿ ನೀರಾವರಿ ಅನುದಾನ ನೀಡಲು ಮುಖ್ಯ ಮಂತ್ರಿಗಳಿಗೆ ಮನವಿ.

ಮೈಕ್ರೋ ಇರ್ರಿಗೇಷನ್ ಗೆ ಕೇಂದ್ರ ಸರ್ಕಾರ ನೀಡುವ ಅನುದಾನದ ಜೊತೆಗೆ ರಾಜ್ಯ ಸರ್ಕಾರವೂ ಅನುದಾನ ನೀಡುತ್ತಿತ್ತು. ಪ್ರಸ್ತುತ ರಾಜ್ಯ ಸರ್ಕಾರ ಅನುದಾನ ನಿಲ್ಲಿಸಿರುವುದರಿಂದ ಈ ಬಗ್ಗೆ ಮುಖ್ಯ ಮಂತ್ರಿಯವರಿಗೆ ಮನವಿ ಮಾಡಲು ಪತ್ರ ಸಿದ್ಧಪಡಿಸಲು ಮಾನ್ಯ ಅಧ್ಯಕ್ಷರು ಸೂಚಿಸಿದರು.

ಮಾನ್ಯ ಸದಸ್ಯರಾದ ಶ್ರೀ ಕುಂದರನಹಳ್ಳಿ ರಮೇಶ್ ಮಾತನಾಡಿ ಈ ಬಗ್ಗೆ ಮುಖ್ಯ ಮಂತ್ರಿಯವರ ಬಳಿ ನಿಯೋಗ ಹೋಗಲು ಸಲಹೆ ನೀಡಿದರು.

ಸಭೆಯ ಮಾನ್ಯ ಅಧ್ಯಕ್ಷರು ಮಾತನಾಡಿ, ತುಂತುರು ನೀರಾವರಿ (ಸ್ಪ್ರಿಂಕ್ಲರ್ ಇರಿಗೇಷನ್) ಯೋಜನೆಯ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಅವರ ತೋಟದಲ್ಲಿ ಪ್ರಸಕ್ತ ವರ್ಷದ ಸೆಪ್ಟಂಬರ್ ಮಾಸಾಂತ್ಯಕ್ಕೆ ಕೊಳವೆಬಾವಿಯ ನೀರು ಪೂರೈಕೆ ನಿಂತು ಹೋಗಿದ್ದು, ತೋಟದಲ್ಲಿದ್ದ 02 ಬಾವಿಗಳಿಂದ ನೀರನ್ನು ಸರಿದೂಗಿಸಿರುವುದಾಗಿ ಸಭೆಗೆ ಉದಾಹರಿಸಿದರು.