9th October 2024
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯಕ್ಕೆ ಸಂಭದಿಸಿದ ನೀರಾವರಿ ಯೋಜನೆಗಳ ಬಗ್ಗೆ ರಾಜ್ಯದ ಸಂಸದರು ಕೈಗೊಳ್ಳಬೇಕಾಗಿರುವ ಅಂಶಗಳ ಬಗ್ಗೆ ತುಮಕೂರು ಲೋಕಸಭಾ ಸದಸ್ಯರು ಹಾಗೂ ಕೇಂದ್ರ ಜಲಶಕ್ತಿ ಸಮಿತಿ ಸದಸ್ಯರಾದ ಶ್ರೀ ಜಿ.ಎಸ್.ಬಸರವಾಜ್ ರವರು ರಾಜ್ಯದ ನದಿ ಜೋಡಣೆ ನೋಡೆಲ್ ಆಫೀಸರ್ ಆದ ಶ್ರೀ ಕೆ.ಜೈಪ್ರಕಾಶ್ ರವರು ಮತ್ತು ಸರ್ಕಾರದ ಸಲಹೆಗಾರರಾದ ಶ್ರೀರಾಮಯ್ಯ ಅವರೊಂದಿಗೆ ಕಾವೇರಿ ನೀರಾವರಿ ನಿಗಮದ ಕಚೇರಿಯಲ್ಲಿ ದಿನಾಂಕ:26.11.2021 ರಂದು ವಿಚಾರ ವಿನಿಮಯ ಮಾಡಿಕೊಂಡರು.

ಇಂಟರ್ ಲಿಂಕಿಂಗ್ ಮತ್ತು ರಾಜ್ಯದ ನದಿ ಜೋಡಣೆಗಳ ಹಲವಾರು ಯೋಜನೆಗಳ ಬಗ್ಗೆ ಸುಧೀರ್ಘವಾಗಿ ಚರ್ಚೆ ನಡೆಯಿತು. ಸಂಸದರು ಲೋಕಸಭೆಯಲ್ಲಿ ಪ್ರಶ್ನೆ ಕೇಳಬೇಕಾದಲ್ಲಿ ರಾಜ್ಯ ಸರ್ಕಾರದ ನಿಲುವುಗಳ ಆಧಾರದ ಮೇಲೆಯೇ ಕೇಳಬೇಕು. ಅವರ ಮನಸ್ಸಿಗೆ ಬಂದ ರೀತಿಯಲ್ಲಿ ಕೇಳಿ ರಾಜ್ಯ ಸರ್ಕಾರಕ್ಕೆ ಮುಜಗರ ತರಬಾರದು ಎಂಬ ಬಗ್ಗೆಯೂ ಚರ್ಚೆ ನಡೆಯಿತು.

ರಾಜ್ಯ ಸರ್ಕಾರದ ನಿಲುವು, ನಡವಳಿಕೆಗೆ ಪೂರಕವಾಗಿ ಮಾಹಿತಿಯನ್ನು ರಾಜ್ಯದ ಎಲ್ಲಾ ಸಂಸದರಿಗೂ ನೀಡುವ ಬಗ್ಗೆ ಅಲೋಚನೆ ಮಾಡಲಾಯಿತು.ಈ ಬಗ್ಗೆ ಜಲಸಂಪನ್ಮೂಲ ಸಚಿವರಾದ ಶ್ರೀ ಗೋವಿಂದ ಕಾರಜೋಳರವರು ಮತ್ತು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿ ರವರೊಂದಿಗೆ ಸಮಾಲೋಚನೆ ಮಾಡುವುದಾಗಿಯೂ ಶ್ರೀ ಬಸವರಾಜ್ ರವರು ತಿಳಿಸಿದರು.

ಶ್ರೀ ಕೆ.ಜೈಪ್ರಕಾಶ್ ರವರು ವಿವರವಾಗಿ ಯೋಜನಾವಾರು ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಶ್ರೀ ಜೈಪ್ರಕಾಶ್ ರವರಿಗೆ ಸಂಸದರು ಯಾವುದರ ಬಗ್ಗೆ ಗಮನ ಹರಿಸ ಬೇಕು ಎಂಬ ಬಗ್ಗೆ ಒಂದು ಟಿಪ್ಪಣೆ ಮಾಡಿ ನೀಡಿದರೆ ಸಂಬಂದಿಸಿದ ಲೋಕಸಭಾ ಸದಸ್ಯರ ಗಮನಕ್ಕೆ ತರುವ ಕೆಲಸವನ್ನು ದೆಹಲಿಯಲ್ಲಿ ಮಾಡಲಾಗುವುದು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶ್ರೀ ರಾಮಯ್ಯನವರು, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರೊಂದಿಗೆ ಕೆಲಸ ಮಾಡಿದ ಅನುಭವವಿರುವ ಶ್ರೀ ಹರೀಶ್ ರವರು, ಶ್ರೀ ಮಲ್ಲೇಶ್ ರವರು, ಶ್ರೀ ಸತ್ಯಾನಂದ್ ರವರು, ಶ್ರೀ ವೆಂಕಟೇಶ್ ರವರು,ಶ್ರೀ ಪ್ರದೀಪ್ ರವರು ನದಿ ಜೋಡಣೆ ಬಗ್ಗೆ ಕೆಲಸ ಮಾಡುತ್ತಿರುವ ಶ್ರೀಮತಿ ಮಾನಸರವರು, ಇನ್ನೂ ಮುಂತಾದ ಅಧಿಕಾರಿಗಳು  ಇದ್ದರು.

ಲೋಕಸಭೆ ಅಧಿವೇಶನ ಆರಂಭವಾಗುವ ಮೊದಲು ಮಾನ್ಯ ಮುಖ್ಯ ಮಂತ್ರಿಯವರು ರಾಜ್ಯದ ಸಂಸದರಿಗೆ ಕೇಂದ್ರದಲ್ಲಿ ನನೆಗುದಿಗೆ ಬಿದ್ದಿರುವ ರಾಜ್ಯದ ಎಲ್ಲಾ ಯೋಜನೆಗಳ ಬಗ್ಗೆ ಮನವರಿಕೆ ಮಾಡುವುದು ವಾಡಿಕೆ. ಈಗಲೂ ಮಾನ್ಯ ಮುಖ್ಯ ಮಂತ್ರಿಯವರು ದೆಹಲಿಯಲ್ಲಿ ಸಭೆ ನಡೆಸಬಹುದು.

ದೆಹಲಿ ಪ್ರತಿನಿಧಿ ಮತ್ತು ದೆಹಲಿಯಲ್ಲಿ ಇರುವ ರೆಸಿಡೆಂಟ್ ಕಮೀಷನರ್ ರವರ ಕಚೇರಿ ಸಂಸದರಿಗೆ ಮಾಹಿತಿ ನೀಡವುದು ಸೂಕ್ತವಾಗಿದೆ. ಈ ಬಗ್ಗೆ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯರು ಭೇಟಿಯಾಗಿ ಚರ್ಚೆ ಮಾಡುವ ಅಗತ್ಯವೂ ಇದೆ. ನಮ್ಮ ಕೆಲವೂ ಇದೇ ಆಗಿದೆ.