12th September 2024
Share

TUMAKURU:SHAKTHIPEETA FOUNDATION

ಆಕ್ಟೀವ್ ಕಿರಿಯ ಕೆಎಎಸ್ ಮಹಿಳಾ ಅಧಿಕಾರಿಯೊಬ್ಬರು, ಸಾರ್ ನೀವೂ ಒಂದು HUMAN LIBRARY ಆರಂಭಮಾಡುವುದು ಒಳ್ಳೆಯದು ಎಂಬ ಸಲಹೆ ನೀಡಿದರು. ನನಗೆ ಈ ಬಗ್ಗೆ ಕಿಂಚಿತ್ತು ಮಾಹಿತಿ ಇರಲಿಲ್ಲ.

ನಾನು ನಮ್ಮ ಶ್ರೀ ಟಿ.ಆರ್.ರಘೋತ್ತಮರಾವ್ ರವರನ್ನು ಈ ಬಗ್ಗೆ ಮಾಹಿತಿ ಸಂಗ್ರಹಿಸಲು ಕೇಳಿದೆ. ಅವರು ಒಂದರ್ಧ ಗಂಟೆ ಬಿಟ್ಟು ಹೇಳಿದ ಮಾತು, ನೀವು ಈಗ ಮಾಡುತ್ತಿರುವ VISON GROUP ಕೆಲಸವೇ HUMAN LIBRARY ಪರಿಕಲ್ಪನೆ. ನೀವೂ ಆ ಹೆಸರು ಇಟ್ಟಿಲ್ಲ ಅಷ್ಟೆ, ರಾಜ್ಯದ ಮೂಲೆ, ಮೂಲೆಯಲ್ಲಿರುವ ಅಭಿವೃದ್ಧಿ ಪರ ತಜ್ಞರ ತಲೆಯಲ್ಲಿರುವ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದರಲ್ಲ. ಅದೇ HUMAN LIBRARY ಪರಿಕಲ್ಪನೆ.

ಈ ಬಗ್ಗೆ ಗಂಭೀರವಾಗಿ ಹಲವಾರು ಜನರ ತಂಡ ಕುಳಿತು ಚರ್ಚೆ ಮಾಡಿದೆವು, ಅವರ ಅಭಿಪ್ರಾಯ  ಕರ್ನಾಟಕ ಸರ್ಕಾರ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ರಚಿಸಿರುವುದು ಒಂದು HUMAN LIBRARY ಪರಿಕಲ್ಪನೆ. ಅದನ್ನೇ ಚುರುಕುಗೊಳಿಸಿ ಎಂದು ಸಲಹೆ ನೀಡಿದ್ದಾರೆ.

ಬಹಳಷ್ಟು ಅಧಿಕಾರಿಗಳು ಸಾರ್ ನಮ್ಮ ಫೋಟೋ ಮತ್ತು ಹೆಸರುಗಳನ್ನು ನಿಮ್ಮ ಇ ಪೇಪರ್ ನಲ್ಲಿ  ಪ್ರಕಟಿಸ ಬೇಡಿ, ನಮ್ಮಲ್ಲೂ ಹೊಟ್ಟೆ ಹುರಿದು ಕೊಳ್ಳುವ ಹಿರಿಯ ಅಧಿಕಾರಿಗಳಿದ್ದಾರೆ. ನಾವೇ ನಿಮಗೆ ಎಲ್ಲಾ ಹೇಳಿದ್ದಾರೆ ಎಂದು ನಮ್ಮನ್ನು ಗುರಿಯಾಗಿಸುತ್ತಿದ್ದಾರೆ. ಎಂದು ಸಲಹೆ ನೀಡುತ್ತಿದ್ದಾರೆ.

ನಾನು ಇತ್ತೀಚೆಗೆ ಅದನ್ನು ಪಾಲಿಸುತ್ತಿದ್ದೇನೆ. ಹೀಗಿರುವಾಗ HUMAN LIBRARY ಯಲ್ಲಿ ಲೈವ್ ಡಾಟಾ ದೊರೆಯಬೇಕಾದರೆ, ಅಧಿಕಾರಿಗಳು ಮತ್ತು ನೌಕರರ ವರ್ಗದಿಂದ ಮಾತ್ರ. ಹಲವಾರು ಪರಿಣಿತರ ಬಹುತೇಕ ಮಾಹಿತಿಗಳು ಅಂತೆ-ಕಂತೆಗಳಾಗಿವೆ.

ಕೆಲವು ಪರಿಣಿತರು ಪಕ್ಕಾ ಮಾಹಿತಿ ಸಂಗ್ರಹಿಸುವಲ್ಲಿ 90 ವರ್ಷವಾದರೂ ಅಷ್ಟೆ ಚುರುಕಾಗಿದ್ದಾರೆ. ಅವರಿಗೆ ಮರೆವು ಬಂದೇ ಇಲ್ಲ, ಅದೇನೆ ಇರಲಿ 2022-2047 ಜೈ ಅನುಸಂಧಾನ್ ಒಂದು HUMAN LIBRARY ಆರಂಭಿಸುವುದು ಸೂಕ್ತ ಎಂಬ ಸಲಹೆಗಳು ಬರುತ್ತಿವೆ, ನೀವೂ ಎನಂತಿರಾ?