12th September 2024
Share

TUMAKURU:SHAKTHIPEETA FOUNDATION

ಮಾನವೀಯತೆ ಮರೆತು ಯಾಂತ್ರಿಕ ಜೀವನ ಸಾಗಿಸುವ ಈ ಸಮಯದಲ್ಲಿ, ಗತಕಾಲದ ವೈಭವ ನನೆಪಿಸುವ ಮತ್ತು ಜ್ಞಾನಾರ್ಜನೆಯ ವಿಷಯಗಳ ಬಗ್ಗೆ  ಉಪನ್ಯಾಸ, ಪ್ರಬಂಧ, ಚರ್ಚಾಸ್ಪರ್ದೆ, ಗುಂಪು ಚರ್ಚೆ, ಆಶುಭಾಷಣ ಸ್ಪರ್ದೆ, ಹಾಡು, ಹರಿಕಥೆ, ನಾಟಕ, ಬಾಷಣ ಇತ್ಯಾದಿ ಕಾರ್ಯಕ್ರಮ ಆಯೋಜಿಸಲು ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿ (ಪಿಜೆಸಿ)ಯ ನಿವಾಸಿಗಳು ಆಲೋಚನೆ ಮಾಡುತ್ತಿದ್ದಾರಂತೆ.

ವಿವಿಧ ಜಾತಿಯ, ವಿವಿಧ ಧರ್ಮದ, ವಿವಿದ ಜಿಲ್ಲೆಯ, ವಿವಿಧ ರಾಜ್ಯದ, ವಿವಿಧ ದೇಶದ ಜನ ಇಲ್ಲಿ ವಾಸವಾಗಿದ್ದಾರೆ. ಈ ಅಪಾರ್ಟ್‍ಮೆಂಟ್‍ನಲ್ಲಿನ 3571 ಮನೆಗಳ ಜನರು, ಎಲ್ಲಾ ಜಾತಿ ಗೊಂದಲ, ದ್ವೇಷ-ಅಸೂಯೆಗಳನ್ನು ಮರೆತು ಒಂದು ಅವಿಭಕ್ತ ಕುಟುಂಬದಂತೆ ಸಂತೋಷದಿಂದ ಕಾಲಕಳೆಯಲು ಯೋಚಿಸುತ್ತಿದ್ದಾರಂತೆ.

ವರ್ಷದ 365 ದಿವಸವೂ, ಪ್ರತಿ ದಿನ ಕಾರ್ಯಕ್ರಮ ನಡೆಯಲಿದೆಯಂತೆ, ತಲಾ 5 ನಿಮಿಷದಂತೆ ಸಂಜೆ ಒಂದು ಗಂಟೆ ಕಾರ್ಯಕ್ರಮ ಇರಲಿದೆಯಂತೆ.

ಪ್ರತಿ ದಿವಸ 9 ಮನೆಯವರು ಕಾರ್ಯಕ್ರಮ ನಡೆಸಿದರೂ, 3285 ಮನೆಗಳಿಗೆ ಹೊಣೆಗಾರಿಕೆ ಅಥವಾ ಅವಕಾಶ ದೊರೆಯಲಿದೆಯಂತೆ. ಕೆಳಕಂಡ ವಿಷಯಗಳ ಬಗ್ಗೆ ಪ್ರತಿ ದಿನ ಸಮಾಲೋಚನೆ ನಡೆಯಲಿದೆಯಂತೆ.

  1. ಶಕ್ತಿಪೀಠ ಅಥವಾ ಯಾವುದೇ ಧರ್ಮದ ದೇವರು
  2. ನದಿ ಅಥವಾ ಜಲಸಂಗ್ರಹಾಗರ ಅಥವಾ ಗಂಗಾಮಾತೆ ಹಾಗೂ ನೀರಿಗಿರುವ ಸಂಭಂದ
  3. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಥವಾ ವಿಶ್ವದ ಯೋಜನೆ
  4. ಜಾತಿ ಅಥವಾ ಉಪಜಾತಿ ಅಥವಾ ಸಾಧಕ ವ್ಯಕ್ತಿ
  5. ರೋಗ ಹಾಗೂ ಔಷಧಿ ಗಿಡ
  6. ರೈತರ ಉತ್ಪನ್ನ
  7. ಪ್ರವಾಸಿಕೇಂದ್ರ
  8. ರಾಕ್ ಅಥವಾ ಒಂದು ಕಟ್ಟಡ ಸಾಮಾಗ್ರಿ
  9. ಧರ್ಮ ಅಥವಾ ನಾಡ ಹಬ್ಬ ಅಥವಾ ಹಬ್ಬ ಅಥವಾ ದಿನದ ವಿಶೇಷ ಅಥವಾ ಭಾಷೆ ಅಥವಾ ಸಂಸ್ಕøತಿ

ಸಿಟಿ ಕ್ಲಬ್‍ನಲ್ಲಿರುವ ಗ್ರಂಥಾಲಯದಲ್ಲಿ ಮೇಲ್ಕಂಡ ವಿಷಯಗಳ ಕಡತಗಳ ಸಂಗ್ರಹ ನಡೆಯಲಿದೆಯಂತೆ, ಮಾಲಿಕರ ಅನುಮತಿಯ ಮೇರೆಗೆ, ಪಿಜೆಸಿ ಆವರಣ ಗೋಡೆಯ ಮೇಲೆ ಬರಹಗಳ ಬಗ್ಗೆಯೂ ಚಿಂತನೆ ನಡೆಯುತ್ತಿದೆಯಂತೆ.

ಪ್ರತಿ ದಿವಸ 9 ಮನೆಯವರು, 9 ವಿಷಯಗಳ ಬಗ್ಗೆ ನಡೆಸುವ ಕಾರ್ಯಕ್ರಮಕ್ಕೆ ಆಸಕ್ತರು ಭಾಗವಹಿಸ ಬಹುದಂತೆ, ಭಾಗವಹಿಸಲು ಸಾಧ್ಯಾವಿಲ್ಲದವರೆಗೆ, ಇ-ಪೇಪರ್, ಯೂಟ್ಯೂಬ್, ಸೋಶಿಯಲ್ ಮೀಡಿಯಾ  ಮೂಲಕ ವಿಷಯ ತಲುಪಿಸಲು ಚರ್ಚೆ ನಡೆಯುತ್ತಿದೆಯಂತೆ.

ವೈಜ್ಞಾನಿಕ ಪದ್ಧತಿಯಲ್ಲಿ ಪ್ರತಿ ದಿನ ಸೂರ್ಯ ಹುಟ್ಟುವ ವೇಳೆ ಅಥವಾ ಸೂರ್ಯ ಮುಳುಗುವ ವೇಳೆ ಅಗ್ನಿ ಹೋತ್ರ ಹೋಮವನ್ನು ನಡೆಸಲು ಚಿಂತನೆ ಮಾಡುತ್ತಿದ್ದಾರಂತೆ.

ಬಹುಷಃ ನವಂಬರ್ 5 ರಂದು ಪಿಜೆಸಿ ಲೋಕಾರ್ಪಣೆಗೊಳ್ಳುವ ವೇಳೆಗೆ ಒಂದು ಅಂತಿಮ ರೂಪುರೇಷೆ ನಿರ್ಧಾರ ಮಾಡುತ್ತಾರಂತೆ.

2022 ರಿಂದ 2047 ರ ವೇಳೆಗೆ ನವಕರ್ನಾಟಕ ಸಮಗ್ರ ಅಭಿವೃದ್ಧಿಗೆ ಪೂರಕವಾಗುವ ಕಾರ್ಯಕ್ರಮ ಇದಾಗಲಿದೆಯಂತೆ. ಇನ್ನೂ ಯಾವುದೇ ಅಂತಿಮ ನಿರ್ಧಾರ ಆಗಿಲ್ಲವಂತೆ ಚರ್ಚೆಯ ಹಂತದಲ್ಲಿ ಇದೆಯಂತೆ.

ಈ ಕಾರ್ಯಕ್ರಮ ಐಎಎಸ್, ಕೆಎಎಸ್ ಅಥವಾ ಇತರೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ವರದಾನವಾಗಲಿದೆಯಂತೆ. ಮಾನವರಾಗಿ ಬದುಕಲು ದಾರಿ ದೀಪವಾಗಲಿದೆಯಂತೆ.