15th January 2025
Share

TUMAKURU:SHAKTHIPEETA FOUNDATION

  ತುಮಕೂರು ನಗರದ ಪೌರಕಾರ್ಮಿಕರ, ನಗರ ಗುಡಿಸಿ ಸ್ವಚ್ಚ ಮಾಡುವವರ, ಪ್ರತಿ ನಿತ್ಯ ಜನರ ಮನೆಗೆ ನೀರು ಬಿಡುವವರ, ಲೆಟರಿನ್ ಸ್ವಚ್ಚ ಮಾಡುವವರ, ಉಧ್ಯಾನವನ ಸ್ವಚ್ಚ ಮಾಡುವ ಕಾರ್ಮಿಕರಿಗೆ, ವಸತಿ ಸೌಕರ್ಯ, ಅವರ ಮಕ್ಕಳ ಶಿಕ್ಷಣ, ಆರೋಗ್ಯದ ಬಗ್ಗೆ ವಿಶೇಷ ಗಮನಹರಿಸಬೇಕಾಗಿರುವುದು ಚುನಾಯಿತ ಜನ ಪ್ರತಿನಿಧಿಗಳ ಆಧ್ಯ ಕರ್ತವ್ಯವಾಗಬೇಕು.

ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಫೌರಕಾರ್ಮಿಕರಿಗೆ ಕನಿಷ್ಟ ಪಕ್ಷ ಎಲ್ಲರಿಗೂ ಸೂರು ಕೊಡಲು ಒಂದು ವ್ಯಾಪಕ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂಬ ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಕನಸು ನಿಜಕ್ಕೂ, ಮಾನವೀಯತೆಯ ಪ್ರತೀಕ ಬಹಳ ಒಳ್ಳೆಯ ಆಲೋಚನೆ.

ಜೊತೆಗೆ ನಗರದ ಪೌರಕಾರ್ಮಿಕರ ಉದ್ಯೋಗ ಭಧ್ರತೆ ಬಗ್ಗೆ ಸರ್ಕಾರದ ಹಂತದಲ್ಲಿರುವ ಕಡತಗಳನ್ನು ಶೀಘ್ರವಾಗಿ ಮುಕ್ತಿಕಾಣಿಸಲು ಚಿಂತನೆ ನಡೆಸಿದ್ದಾರೆ.

ಮಹಾನಗರ ಪಾಲಿಕೆಯ ಆಯುಕ್ತರು, ಈ ಬಗ್ಗೆ ಒಂದು ವಿವರವಾದ ವರದಿ ಸಿದ್ಧಪಡಿಸುವುದು ಅಗತ್ಯವಾಗಿದೆ. ಪೌರಕಾರ್ಮಿಕರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಪೌರಕಾರ್ಮಿಕರ ಬಗ್ಗೆ ಅಧ್ಯಯನ ಮಾಡಿರುವವರು ಉತ್ತಮ ಸಲಹೆಗಳ ಜೊತೆಗೆ ಅಂಕಿಅಂಶಗಳ ಸಹಿತ ಮಾಹಿತಿ ನೀಡುವುದು ಸೂಕ್ತವಾಗಿದೆ.