22nd December 2024
Share

TUMAKURU:SHAKTHIPEETA FOUNDATION

 ವಿಧಾನಸಭೆ ಅಧಿವೇಶನದಲ್ಲಿ ಕೆರೆ-ಕರಾಬು ಹಳ್ಳಗಳ ಕಳ್ಳರ-ಒತ್ತುವರಿದಾರರ ಬಗ್ಗೆ ಏರು ಧ್ವನಿಯಲ್ಲಿ ಬಿಸಿ,ಬಿಸಿ ಚರ್ಚೆ ನಡೆಯುತ್ತಿದೆ. ತುಮಕೂರು ನಗರದಲ್ಲಿ ಈಗಾಗಲೇ ಟೆಂಡರ್ ಕರೆದು ತುಮಕೂರು ನಗರದ ಕೆರೆ-ಕರಾಬುಹಳ್ಳಗಳ ಜಾತಕ ಹುಡಕುವ ಕೆಲಸವನ್ನು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಮತ್ತು ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸದ್ದು-ಗದ್ದವಿಲ್ಲದೆ ಮಾಡುತ್ತಿದ್ದಾರೆ.

ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಗ್ರಾಮಗಳ ನಕ್ಷೆ, ಪರಿಷ್ಟøತ ಸರ್ವೇ ಸಮೀಕ್ಷೆ ನಂತರದ ನಕ್ಷೆ. ಪ್ರತಿಯೊಂದು ಲೇಔಟ್, ಲೇ ಔಟ್ ಮಾಡುವಾಗ ಕರಾಬುಹಳ್ಳಗಳ ಮಾರ್ಗಗಳನ್ನು ಬದಲಾಯಿಸಿರುವುದು ಸೇರಿದಂತೆ, ಸ್ವಾತಂತ್ರ್ಯಪೂರ್ವದಿಂದ ಜಾತಕ ಹುಡುಕುವ ಕೆಲಸ ಆರಂಭವಾಗಿದೆ. ಜೊತೆಗೆ ತುಮಕೂರು ಸ್ಮಾರ್ಟ್ ಸಿಟಿಯವರು ಕೈಗೊಂಡಿರುವ ಡ್ರೋನ್ ಸಮೀಕ್ಷೆಯ ನಕ್ಷೆಗಳನ್ನು ಬಳಸಿಕೊಳ್ಳಲು ಚಿಂತನೆ ನಡೆಯುತ್ತಿದೆ.

ರಾಜ್ಯದ ಎಲ್ಲಾ ಶಾಸಕರು, ಈ ಬಗ್ಗೆ ಗಮನ ಹರಿಸುವುದು ಸೂಕ್ತವಾಗಿದೆ, ಅವರವರ ಕ್ಷೇತ್ರದ ಕೆರೆ ಕರಾಬು ಹಳ್ಳಗಳ ಜಾತಕ ಇಟ್ಟುಕೊಳ್ಳುವುದು ಶಾಸಕರ ಕರ್ತವ್ಯವೂ ಆಗಿದೆ. ತುಮಕೂರು ನಗರದ ಶಾಸಕರು ವಿಧಾನಸಭೆಯಲ್ಲಿ ಈ ವಿಚಾರದ ಬಗ್ಗೆ ಗಂಭೀರವಾದ ಚರ್ಚೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರೂ, ಮಾತನಾಡಲು ಅವಕಾಶ ಸಿಕ್ಕಿಲ್ಲ, ದೇವರು ಮೆಚ್ಚುವ ಕೆಲಸ ಆರಂಭಿಸಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ.

ನಗರದ ಕೆರೆ-ಕರಾಬುಹಳ್ಳಗಳ ಸಂಶೋಧಕರು, ಹೋರಾಟಗಾರರು, ತಮ್ಮ ಅಧ್ಯಯನ ಮಾಹಿತಿಗಳನ್ನು ಹಂಚಿಕೊಳ್ಳಲು ಮನವಿ ಮಾಡಲಾಗಿದೆ.