25th July 2024
Share

TUMAKURU:SHAKTHIPEETA FOUNDATION

  ವಿಧಾನಸೌಧದ ಇ ಗ್ರಂಥಾಲಯಕ್ಕೆ ದಿನಾಂಕ:21.09.2022 ರಂದು ಭೇಟಿ ನೀಡಿ ಮುಖ್ಯ ಗಂಥಪಾಲಕರಾದ ಶ್ರೀ ಕನಕಪ್ಪ ನಲವಾಗಲ ಜೊತೆ ಸಮಾಲೋಚನೆ ನಡೆಸಲಾಯಿತು.

  ಕರ್ನಾಟP Àರಾಜ್ಯದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಯಾವ ಯಾವ ದಾಖಲೆಗಳು,ಗ್ರಂಥಗಳು, ಅಧ್ಯಯನ ವರದಿಗಳು ಇಲ್ಲಿ ಇವೆ ಎಂಬ ಬಗ್ಗೆ ಮಾಹಿತಿಗಳನ್ನು ಸಂಗ್ರಹ ಮಾಡಲು ಆರಂಭಿಸಲಾಯಿತು.

1947 ರಿಂದ 2022 ರವರೆಗೆ ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಬಂದಿರುವ ಅನುದಾನದ ಮಾಹಿತಿ ಏನಾದರೂ ಲಭ್ಯವಾಗುತ್ತದೆಯೇ ಎಂಬ ಬಗ್ಗೆ ಚರ್ಚೆ ನಡೆಸಲಾಯಿತು. ಈ ಗ್ರಂಥಾಲಯಕ್ಕೆ ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಮಾತ್ರ ಭೇಟಿ ನೀಡಿ ಅಧ್ಯಯನ ಮಾಡಬಹುದಾಗಿದೆಯಂತೆ.

ರಾಜ್ಯ ಮಟ್ಟದ ದಿಶಾ ಸದಸ್ಯರಿಗೆ ಅಧ್ಯಯನ ಮಾಡಲು ಅವಕಾಶನೀಡಲು, ರಾಜ್ಯ ದಿಶಾ ಸಮಿತಿ ಸದಸ್ಯಕಾರ್ಯದರ್ಶಿಯವರಿಂದ ಪತ್ರ ಬರೆಸಿ, ಅಧ್ಯಯನ ಮಾಡ ಬೇಕಾಗಿದೆ.

ನಮ್ಮ ಮುಖ್ಯ ಮಂತ್ರಿ-ನಮ್ಮ ಪ್ರಧಾನಮಂತ್ರಿ ಮ್ಯೂಸಿಯಂಗೆ ಅಗತ್ಯವಿರುವ ಮಾಹಿತಿಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು.

ಈ ಗ್ರಂಥಾಲಯಕ್ಕೆ ಹೆಚ್ಚು ಬೇಟಿ ಅಧ್ಯಯನ ಮಾಡುವ ಚುನಾಯಿತ ಜನಪ್ರತಿನಿಧಿಗಳ ಬಗ್ಗೆಯೂ ತಿಳಿದುಕೊಳ್ಳುವ ಪ್ರಯತ್ನ ಆರಂಭವಾಗಿದೆ.

ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯದ ಪ್ರತಿಪಾದನೆಗಾಗಿ, 224 ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿ ಮೌಲ್ಯಮಾಪನ ವರದಿಗಳ ಸಂಗ್ರಹದ ಬಗ್ಗೆಯೂ ಚರ್ಚೆ ನಡೆಸಲಾಯಿತು.