TUMAKURU:SHAKTHIPEETA FOUNDATION
ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ತುಮಕೂರು ಜಿಲ್ಲೆಯಲ್ಲಿನ ಪ್ರತಿ ಗ್ರಾಮದಲ್ಲಿ ಬಯೋಡೈವರ್ಸಿಟಿ ಪಾರ್ಕ್ ನಿರ್ಮಾಣ ಮಾಡಲು ಸ್ಥಳ ಗುರುತಿಸಲು ಜಿಲ್ಲಾಧಿಕಾರಿಗಳ ಮೂಲಕ ಸಂಬಂದ ಪಟ್ಟವರಿಗೆ ಪತ್ರ ಬರೆಸಿದ್ದು ಇತಿಹಾಸ.
ಪೂರಕವಾಗಿ ರಾಜ್ಯ ಸರ್ಕಾರ, ಊರಿಗೊಂದು ಪವಿತ್ರವನ ಮಾಡಲು ಆದೇಶ ನೀಡಿ, ಅನುಷ್ಠಾನಕ್ಕೆ ಶ್ರಮಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕಾರೇಕುರ್ಚಿ, ದೊಣೆಗಂಗಾ ಕ್ಷೇತ್ರದಲ್ಲಿ ಪವಿತ್ರವನ ನಿರ್ಮಾಣ ಮಾಡಲು ಯುವಕರ ತಂಡ ದಿನಾಂಕ:21.09.2022 ರಂದು ಸಂಸದರಿಗೆ ಮನವಿ ಪತ್ರ ಸಲ್ಲಿಸಿದರು.
- ತಿಪಟೂರು ತಾಲ್ಲೋಕು ದೊಣೆಗಂಗಾ ಕ್ಷೇತ್ರದಲ್ಲಿ ಶ್ರೀ ಸಿದ್ಧರಾಮೇಶ್ವರ ಪವಿತ್ರವನ/ತಪೋವನ.
- ಗುಬ್ಬಿ ತಾಲ್ಲೋಕು ಕುಂದರನಹಳ್ಳಿಯಲ್ಲಿ ಶ್ರೀ ಶಿವಕುಮಾರಸ್ವಾಮಿಜಿ ಪವಿತ್ರವನ್/ತಪೋವನ.
- ಚಿಕ್ಕನಾಯಕನಹಳ್ಳಿ ತಾಲ್ಲೋಕು ಗೋಡೆಕೆರೆಯಲ್ಲಿ ಶ್ರೀ ಸಿದ್ಧರಾಮೇಶ್ವರ ಪವಿತ್ರವನ/ತಪೋವನ.
- ಚಿಕ್ಕನಾಯಕನಹಳ್ಳಿ ತಾಲ್ಲೋಕು ತೀರ್ಥರಾಮೇಶ್ವರ ವಜ್ರದಲ್ಲಿ ಶ್ರೀ ತೀರ್ಥ ರಾಮೇಶ್ವರ ಪವಿತ್ರವನ/ತಪೋವನ.
- ಗುಬ್ಬಿ ತಾಲ್ಲೋಕು ಮಾರಶೆಟ್ಟಿಹಳ್ಳಿಯಲ್ಲಿ ಶ್ರೀ ಬೋರೇಗೌಡ ದೇವರ ಪವಿತ್ರವನ್/ತಪೋವನ.
- ತುಮಕೂರು ತಾಲ್ಲೋಕು ವಸಂತನರಸಾಪುರದಲ್ಲಿ ನಿಮ್ಜ್ ಪವಿತ್ರವನ.
- ಕೊರಟಗರೆ ತಾಲ್ಲೋಕು ಸಿದ್ದರ ಬೆಟ್ಟದಲ್ಲಿ ಪವಿತ್ರವನ.
- ಶಿರಾ ತಾಲ್ಲೂಕು ಜುಂಜಪ್ಪನ ಕ್ಷೇತ್ರದಲ್ಲಿ ಪವಿತ್ರವನ.
- ಗುಬ್ಬಿ ತಾಲ್ಲೋಕು ಕಾರೇಹಳ್ಳಿಯಲ್ಲಿ ಪವಿತ್ರವನ.
ಹೀಗೆ ಹಲವಾರು ಕಡೆ ಮಾದರಿ ಪವಿತ್ರವನ ನಿರ್ಮಾಣ ಮಾಡಲು ಆಯಾ ಗ್ರಾಮದ ಕೆಲವರು ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ದೊಣೆಗಂಗಾ ಕ್ಷೇತ್ರದಲ್ಲಿ ಒಂದು ಸಮಾವೇಶ ನಡೆಸಲು ಚಿಂತನೆ ನಡೆಯುತ್ತಿದೆ.
‘ದೊಣೆಗಂಗಾ ಕ್ಷೇತ್ರದ ಇತಿಹಾಸದ ಜೊತೆಗೆ ಶ್ರೀ ಸಿದ್ಧರಾಮೇಶ್ವರರ/ ನೊಳಂಬ ಮ್ಯೂಸಿಯಂ ಮಾದರಿಯಲ್ಲಿ ಪವಿತ್ರವನ ನಿರ್ಮಾಣ ಮಾಡಲು, ಕಾರೇಕುರ್ಚಿಯ ನೊಳಂಬÀರ ಯುವಕರ ತಂಡ ಸಮಾಲೋಚನೆ ನಡೆಸುತ್ತಿದೆ.’
ತುಮಕೂರು ಜಿಲ್ಲೆಯಲ್ಲಿ ಮಾದರಿ ಪವಿತ್ರವನ ನಿರ್ಮಾಣ ಮಾಡಲು ಆಸಕ್ತಿ ಇರುವವರು ಸಂಪರ್ಕಿಸಬಹುದು.