22nd November 2024
Share

TUMAKURU:SHAKTHIPEETA FOUNDATION

ಕಚೇರಿ ಶಿಪ್ಟ್ ಮಾಡಿದ ದಿವಸ ಶ್ರೀ ಜಿ.ಎಸ್.ಬಸವರಾಜ್ ಹಾಗೂ ಸ್ನೇಹಿvರೊಂದಿಗೆ ನಮ್ಮ ತಂಡ

  ಶಕ್ತಿಪೀಠ ಫೌಂಡೇಷನ್ ದಿನಾಂಕ:26.09.2022 ರಂದು ಶರನ್ನವರಾತ್ರಿ ಮೊದಲ ದಿವಸ ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿ ಯಾವುದೇ ಸದ್ದು ಗದ್ದಲವಿಲ್ಲದೆ ಅಧಿಕೃತವಾಗಿ ತನ್ನ ಕಚೇರಿಯನ್ನು ಆರಂಭಿಸಿತು.

ಪ್ರಿಸ್ಟೇಜ್ ಜಿಂದಾಲ್ ಸಿಟಿ ಆವರಣದಲ್ಲಿ ಯಾವುದಾದರೊಂದು ಗಿಡ ಹಾಕಿ ಅಥವಾ ಹಾಕಿರುವ ಗಿಡ ದತ್ತು ತೆಗೆದುಕೊಂಡು, ಆವರಣದಲ್ಲಿರುವ ಫೌಂಟೇನ್ ನಲ್ಲಿರುವ ಗಂಗಾಮಾತೆಗೆ ಪೂಜೆ ಆರಂಭಿಸಿ, ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿನ 31 ಜಿಲ್ಲೆಗಳ ನಿವಾಸಿಗಳ ಒಂದು ವಿಷನ್ ಗ್ರೂಪ್ ರಚಿಸಲು ಚಿಂತನೆ ನಡೆಸಲಾಗಿದೆ.

 ಜಿಂದಾಲ್ ಫೌಂಡೇಷನ್ ಜೊತೆಗೂ ಸಮಾಲೋಚನೆ ನಡೆಸಲು ಉದ್ದೇಶಿಸಲಾಗಿದೆ.

 ಈಗಾಗಲೇ ಒಂದು ಸಂಸ್ಥೆಯ ಜೊತೆ ಎಂ.ಓ.ಯು ಮಾಡಿಕೊಳ್ಳಲು ಚರ್ಚೆ ಆರಂಭಿಸಲಾಗಿದೆ. ಈ ಸಂಸ್ಥೆ ಬೆಂಗಳೂರಿನ ಅಥವಾ ದೆಹಲಿ ಕಚೇರಿಯ ಎಲ್ಲಾ ಖರ್ಚು ವೆಚ್ಚಗಳನ್ನು ಮುಯ್ಯಾಳು ರೂಪದಲ್ಲಿ ನೀಡಲು ಮುಂದೆ ಬಂದಿದೆ. ನಾನು ಸಹ ಅವರ ಸಂಸ್ಥೆಯ ಕೆಲಸ ಮಾಡಲು ಬಹುತೇಕ ಒಪ್ಪಿರುತ್ತೇನೆ.

ಸ್ವಾಭಿಮಾನದಿಂದ ದುಡಿದು ಶಕ್ತಿಪೀಠ ಫೌಂಡೇಷನ್ ತನ್ನ ಸಂಸ್ಥೆಯ ಉದ್ದೇಶಗಳ ಅನುಷ್ಠಾನಕ್ಕಾಗಿ ಶ್ರಮಿಸುವ ಉದ್ದೇಶ ಹೊಂದಿದೆ. 3 ನೇ ವರ್ಷ ಪೂರೈಸಿರುವ ಶಕ್ತಿಪೀಠ ಫೌಂಡೇಷನ್ ಮಹತ್ವದ ಯೋಜನೆಗಳ ಅಧ್ಯಯನ ಆರಂಭಿಸಿದೆ ಎಂದು ತಿಳಿಸಲು ಹರ್ಷವಾಗುತ್ತಿದೆ.

ನೀರು ಮತ್ತು ವಿಶ್ವದ 108 ಶಕ್ತಿಪೀಠ (ಗಂಗಾಮಾತೆ)ಗಳಿಗೆ ಇರುವ ಸಂಬಂಧಗಳ ಅಧ್ಯಯನ ಮತ್ತು ಸಂಶೋಧನೆ ಮಾಡುತ್ತಿರುವ ಹಾಗೂ ರಾಜ್ಯದ ಜಲಗ್ರಂಥ ಸಿದ್ಧಪಡಿಸುತ್ತಿರುವ ನಮ್ಮ ಸಂಸ್ಥೆಗೆ ಪರಿಸರವೇ ದೇವರು ಎಂಬ ಆಲೋಚನೆ ನಮ್ಮದಾಗಿದೆ. ಶರನ್ನವರಾತ್ರಿಯ ಒಂಭತ್ತು ದಿನಗಳು ಕೈಗೊಳ್ಳುವ ಕಾರ್ಯಗಳಿಗೆ ಬಹಳ ಮಹತ್ವ ಇದೆ.

ದೆಹಲಿಯಲ್ಲಿ ಸ್ವಂತ ಕಚೇರಿ ತೆರೆಯುವ ಬಗ್ಗೆಯೂ ಇಂದಿನಿಂದ ಚರ್ಚೆ ಆರಂಭವಾಗಿದೆ. ಸಧ್ಯದಲ್ಲಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ದೆಹಲಿಯ ಮನೆಯಲ್ಲಿಯೇ ನಮ್ಮ ಸಂಸ್ಥೆಯ ಸಿಇಓ ರವರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಕುಂದರನಹಳ್ಳಿ, ತುಮಕೂರು, ಹಿರಿಯೂರು ಕ್ಯಾಂಪಸ್, ಬೆಂಗಳೂರು ಹೀಗೆ ನಾಲ್ಕು ಕಡೆ ಶಕ್ತಿಪೀಠ ಫೌಂಡೇಷನ್‍ನ ಅಧಿಕೃತ ವಿಳಾಸ ದೊರಕಿದೆ. ದೆಹಲಿ ಮತ್ತು ತುಮಕೂರಿನ ವಸಂತನರಸಾಪುರದ ಇಂಡಸ್ಟ್ರಿಯಲ್ ಕಾರಿಡಾರ್ ನಲ್ಲಿ ಮುಂದಿನ ಶರನ್ನವರಾತ್ರಿ ವೇಳೆಗೆ ಕಚೇರಿ ತೆರೆಯುವ ಬಗ್ಗೆ ಅಲೋಚನೆ ಇದೆ.

 ರಾಜ್ಯದ 7 ನದಿ ಪಾತ್ರಗಳ ವ್ಯಾಪ್ತಿಯಲ್ಲಿ ಪಿಪಿಪಿ ಯೋಜನೆಯಲ್ಲಿ ಜೈ ಅನುಸಂಧಾನ್ 2022-2047 ಅಡಿಯಲ್ಲಿ, ರಾಜ್ಯದ ಸಮಗ್ರ ಅಭಿವೃದ್ಧಿ ಮತ್ತು ನದಿ ಪಾತ್ರವಾರು ನೀರಿನ ಪ್ರಾತ್ಯಾಕ್ಷಿಕೆಗಳನ್ನು ಒಳಗೊಂಡ ನಾಲೇಡ್ಜ್ ಪಾರ್ಕ್ ಆರಂಭಿಸುವ ಬಗ್ಗೆ ಆಸಕ್ತರ ಜೊತೆ ಸಮಾಲೋಚನೆ ನಡೆಸಲಾಗಿದೆ.