27th July 2024
Share

TUMAKURU:SHAKTHIPEETA FOUNDATION

ಇಂದು ಬೆಳಿಗ್ಗೆ 12 ಗಂಟೆ 8 ನಿಮಿಷಕ್ಕೆ ಪಿಜೆಸಿ ನಿವಾಸಿ ಶ್ರೀ ಸಿದ್ಧಗಂಗಯ್ಯನವರು ಒಂದು ಪೋಸ್ಟ್ ಬರೆದು ಪಿಜೆಸಿ ಕನ್ನಡ ಬಳಗ ವಾಟ್ಸ್ ಅಪ್ ಗ್ರೂಪ್ ನಲ್ಲಿ ಹಾಕುವುದಾಗಿ ತಿಳಿಸಿದಾಗ ನನಗೆ ಹೆಮ್ಮೆ ಎನಿಸಿತು.

ಕರ್ನಾಟಕ ಮೌಲ್ಯ ಮಾಪನ ಪ್ರಾಧಿಕಾರದ ಜೊತೆಗೆ ಎಂ.ಓ.ಯು ಮಾಡಿಕೊಂಡು ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಸರ್ಕಾರ ಅತಿ ಹೆಚ್ಚಿನ ಅನುದಾನ ಪಡೆಯಲು ಸ್ಟ್ರಾಟಜಿ ಸಿದ್ಧಪಡಿಸುತ್ತಿದ್ದೇನೆ.

2022-20247 ನವ ಕರ್ನಾಟಕದ ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸಲು ಆರಂಭಿಸಲಾಗಿದೆ.

ರಾಜ್ಯದ ನದಿÀ ನೀರಿನಲ್ಲಿ ಸಾಮಾಜಿಕ ನ್ಯಾಯದ ಪ್ರತಿಪಾದನೆಗಾಗಿ ‘ಜಲಗ್ರಂಥ ಸಿದ್ಧಪಡಿಸಲು ಆರಂಭಿಸಲಾಗಿದೆ.

ರಾಜ್ಯದ 224 ವಿಧಾನಸಭಾ  ಕ್ಷೇತ್ರಗಳಲ್ಲಿ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯದ ಪ್ರತಿಪಾದನೆ ಪ್ರಮುಖವಾಗಿದೆ.

ಕೇಂದ್ರ ಸರ್ಕಾರದ ಅನುದಾನದ ಸಮರ್ಪಕ ಬಳಕೆ, ಕಾಲಮಿತಿಯಲ್ಲಿ ಬಳಕೆ, ದುರುಪಯೋಗ ತಡೆಗಟ್ಟುವುದು ಹಾಗೂ ಕೇಂದ್ರ ಸರ್ಕಾರದ ಯಾವ ಇಲಾಖೆಯಿಂದ ಯಾವ ಜಿಲ್ಲೆಗೆ ಯಾವ ಯೋಜನೆಯನ್ನು ಮಂಜೂರು ಮಾಡಿಸಬಹುದು ಎಂಬ ಪ್ರಗತಿ ಪರಿಶೀಲನೆಗಾಗಿ, ಕೇಂದ್ರ ಸರ್ಕಾರ ರಾಜ್ಯ ಮಟ್ಟದಲ್ಲಿ ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ದಿಶಾ ಸಮಿತಿ ಹಾಗೂ ಪ್ರತಿ ಜಿಲ್ಲಾ ಮಟ್ಟದಲ್ಲಿ ಲೋಕಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ದಿಶಾ ಸಮಿತಿ ರಚಿಸಲಾಗಿದೆ.

ರಾಜ್ಯ ಮಟ್ಟದ ದಿಶಾ ಸಮಿತಿಯಲ್ಲಿ ಎನ್.ಜಿ.ಓ ಗಳ ಪ್ರತಿನಿಧಿಯಾಗಿ ನನ್ನನ್ನು ಮಾನ್ಯ ಮುಖ್ಯ ಮಂತ್ರಿಗಳಾಗಿದ್ದ ಶ್ರೀ ಬಿ.ಎಸ್.ಯಡಿಯೂರಪ್ಪನವರು ನೇಮಕ ಮಾಡಿದ್ದಾರೆ,

ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಸದಸ್ಯನಾಗಿಯೂ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ನೇಮಕ ಮಾಡಿದ್ದಾರೆ.

ಮೇಲ್ಕಂಡ ಉದ್ದೇಶಗಳ ಅಧ್ಯಯನ ವರದಿ ಸಿದ್ಧಪಡಿಸಲು ರಾಜ್ಯದ 31 ಜಿಲ್ಲೆಗಳ ಜನತೆಯೊಂದಿಗೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ಅಗತ್ಯವಾಗಿದೆ.

ಈ ಉದ್ದೇಶಕ್ಕೊಸ್ಕರ ‘ಮಾನವ ಗ್ರಂಥಾಲಯ’ ಆರಂಭಿಸಲು ಉದ್ದೇಶಿಸಲಾಗಿದೆ.

ನಾನು ಸಹ ಪಿಜೆಸಿಯ ನಿವಾಸಿ’ಯಾಗಿದ್ದೇನೆ, ಈ ಹಿನ್ನಲೆಯಲ್ಲಿ ರಾಜ್ಯದ 31 ಜಿಲ್ಲೆಗಳ ಜನರ ಡಾಟಾ ಸಂಗ್ರಹ ಮಾಡಲಾಗುತ್ತಿದೆ.

ಇಲ್ಲಿ ರಾಜಕೀಯ, ಪಕ್ಷ, ಜಾತಿ ಯಾವುದೇ ಉದ್ದೇಶವಿಲ್ಲ, ನಾವೆಲ್ಲಾ ಕುಳಿತು ನಮ್ಮ ಜಿಲ್ಲೆಯ ಸಮಗ್ರ ಅಭಿವೃದ್ಧಿ ಬಗ್ಗೆ ಮಾಹಿತಿ ಹಂಚಿಕೊಳ್ಳೋಣ.

ಒಂದು ದಿವಸ ಎಲ್ಲವನ್ನು ಬಿಟ್ಟು ನಾವೆಲ್ಲಾ ಸಾಯುತ್ತೇವೆ, ಯಾವುದು ನಮ್ಮದಲ್ಲ, ನಾವೆಲ್ಲಾ ಬಾಡಿಗೆ ಜನರು, ನಮಗೆ ಕೋವಿಡ್ ಬಂದಾಗ ಅನುಭವ ಆಗಿರಬಹುದು. ಕ್ಷಣ ಮಾತ್ರ ನಮ್ಮದು ಅದನ್ನು ಅನುಭವಿಸುವುದೇ ಜೀವನ.

ಮಾನವೀಯತೆಯೊಂದಿಗೆ  ಬಿಡುವಿನ ವೇಳೆಯಲ್ಲಿ ನಮ್ಮ ನಮ್ಮ ಜಿಲ್ಲೆ ಅಭಿವೃದ್ದಿಗೂ ಸ್ವಲ್ಪ ಸಮಯ ವಿನಿಯೋಗಿಸೋಣ? ಈ ಬಗ್ಗೆ ಒನ್ ಟು ಒನ್ ಟು ಸಮಾಲೋಚನೆಯೇ ಮಾನವ ಗ್ರಂಥಾಲಯದ ಉದ್ದೇಶ.

ನಾನು ಈಗಾಗಲೇ ಕೆಲವು ಮಾಹಿತಿಗಳನ್ನು ಇ-ಪೇಪರ್ ಮೂಲಕ ಹಂಚಿಕೊಂಡಿದ್ದೇನೆ. ತಾವೂ ಗಮನಿಸಬಹುದು ಎಲ್ಲವೂ ಡಿಜಿಟಲ್ ರೂಪದಲ್ಲಿ ಸಂಗ್ರಹವಾಗಿದೆ.