27th July 2024
Share

TUMAKURU:SHAKTHIPEETA FOUNDATION

ವಿಶಿಷ್ಠ ಲೈಬ್ರರಿ : ಬೆಂಗಳೂರಿನ ಯಲಹಂಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಪ್ರಿಸ್ಟೇಜ್ ಜಿಂದಾಲ್ ಸಿಟಿಯ(ಪಿಜೆಸಿ) ಯಲ್ಲಿರುವ ರೀಡಿಂಗ್ ರೂಮ್ ಅಥವಾ ಗ್ರಂಥಾಲಯವನ್ನು ಸ್ಮರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪುಸ್ತಕಗಳಿಂದ ಆರಂಭಿಸಿ, ಪ್ರತಿಯೊಂದು ವರ್ಗ ಅಂದರೆ, ಮಕ್ಕಳಿಂದ ಆರಂಭಿಸಿ ಹಿರಿಯ ನಾಗರೀಕರವರೆಗೆ ಅಗತ್ಯವಿರುವ ಪುಸ್ತಕಗಳನ್ನು ಸಂಗ್ರಹಿಸಿಡಲು ಚಿಂತನೆ ಆರಂಭವಾಗಿದೆ.

ಕರ್ನಾಟಕ ರಾಜ್ಯದ 31 ಜಿಲ್ಲಾವಾರು, ದೇಶದ 37 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಭಿವೃದ್ಧಿ, ಸಂಸ್ಕøತಿ,ವಿವಿಧ ಧರ್ಮ, ವಿವಿಧ ನದಿಗಳ, ವಿವಿಧ ದೇವಾಲಯಗಳ, ಕಲೆಗಳಿಗೆ ಸಂಭಂದಿಸಿದ ವರದಿಗಳು, ರಾಜ್ಯ ಸರ್ಕಾರದ ಇಲಾಖಾವಾರು, ಕೇಂದ್ರ ಸರ್ಕಾರದ ಇಲಾಖಾವಾರು ವಿವಿಧ ಯೋಜನೆಗಳ ಮಾಹಿತಿ ಪುಸ್ತಕ, 20247 ರ ವೇಳೆಗೆ ನವ ಕರ್ನಾಟಕದ ಜಿಲ್ಲಾವಾರು ಅಭಿವೃದ್ಧಿಗೆ ಪೂರಕವಾಗುವ ಮಾಹಿತಿಗಳನ್ನು ಒಳಗೊಂಡ ಮಾಹಿತಿಗಳು ಒಂದೇ ಕಡೆ ದೊರೆಯುವಂಥ ವಿಶಿಷ್ಠ ಲೈಬ್ರರಿ ಬಗ್ಗೆ ಆಲೋಚನೆಗಳು ಹುಟ್ಟಿಕೊಂಡಿವೆ.

1947 ರಿಂದ 2047 ರವರೆಗೆ ಪ್ರತಿ ವರ್ಷದ ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಅನುದಾನದ ಮೌಲ್ಯಮಾಪನ ದಾಖಲೆಗಳು ಇರುವಂತಹ ವ್ಯವಸ್ಥೆ ಇರಬೇಕು ಎಂಬ ಕನಸು ಇದೆ.

ಮಾನವೀಯತೆ ಮಂಟಪ: ವಿಶಿಷ್ಠ ಯೂಟ್ಯೂಬ್ ಚಾನಲ್ ಅಥವಾ ಮಕ್ಕಳಿಗೆ ಅಜ್ಜಿ ಹೇಳುತ್ತಿದ್ದ ಕಥೆಗಳ ಮಾದರಿಯಲ್ಲಿ, ಪ್ರತಿಯೊಬ್ಬ ಮನುಷ್ಯನ ತಲೆಯಲ್ಲಿರುವ ವಿಚಾರಗಳ ಸಂಗ್ರಹಣೆಗಾಗಿ ಮಾನವ ಗ್ರಂಥಾಲಯಕ್ಕೆ ಪೂರಕವಾಗಿ, ಅಪಾರ್ಟ್ ಮೆಂಟ್‍ನಲ್ಲಿ ಒಂದು ಕಡೆ ‘ಒನ್ ಟು ಒನ್’ಚರ್ಚೆಗೆ ಅವಕಾಶವಿರುವ ಸ್ಥಳಕ್ಕೆ ‘ಮಾನವೀಯತೆ ಮಂಟಪ’ ಎಂದು ಹೆಸರಿಡಲು ಚಿಂತನೆ ನಡೆದಿದ್ದು, ಪಿಜೆಸಿ ಮಾಲೀಕರಿಗೆ ಬೇಡಿಕೆ ಪತ್ರ ನೀಡುವ ಅಗತ್ಯವಿದೆ.

ಪರಿಸರವೇ ದೇವರು: ಯಾವುದಾದರೂ ಒಂದು ಫೌಂಟೇನ್‍ನಲ್ಲಿನ ನೀರು ಮತ್ತು ಯಾವುದಾದರೊಂದು ಗಿಡ ಪೂಜಿಸುವ ಮೂಲಕ ಪರಿಸರವೇ ದೇವರು ಎಂಬ ಜಾಗೃತಿ ಮೂಡಿಸುವ ಬಗ್ಗೆಯೂ ಚರ್ಚೆ ಆರಂಭವಾಗಿದೆ.

ಈ ಬಗ್ಗೆ ಹಲವಾರು ನಿವಾಸಿಗಳು ಜೊತೆ, ಜೊತೆಯಾಗಿ ಡಿಜಿಟಲ್ ಚರ್ಚೆ ಆರಂಭಿಸಿದ್ದಾರೆ, ದಿನಾಂಕ:30.09.2022 ರಂದು ಸೂಕ್ತ ಸಮಯದಲ್ಲಿ, ಆಸಕ್ತರು ಒಂದೆಡೆ ಸೇರಿ, ಈ ಮೂರು ವಿಷಯಗಳಿಗೆ ಸಂಭಂಧಿಸಿದ ವಿಷನ್ ಗ್ರೂಪ್ ರಚಿಸಲು ಚಿಂತನೆ ನಡೆದಿದೆ ಆಸಕ್ತರು ತಮ್ಮ ಅಭಿಪ್ರಾಯ ನೀಡಬಹುದಾಗಿದೆ.

ಆಸಕ್ತರು ಈಗಾಗಲೇ ಜಿಲ್ಲಾವಾರು ನಿವಾಸಿಗಳ ಡಾಟಾ ಸಂಗ್ರಹ ಮಾಡುತ್ತಿರುವ  ಶ್ರೀ ಸಿದ್ಧಗಂಗಪ್ಪ-9343777577 ಇವರನ್ನು ಡಿಜಿಟಲ್ ಮೂಲಕ ಸಂಪರ್ಕಿಸಬಹುದು.