6th December 2024
Share

TUMAKURU:SHAKTHIPEETA FOUNDATION

ಶಕ್ತಿಪೀಠ ಫೌಂಡೇಷನ್ ಹೂಮನ್ ಲೈಬ್ರರಿಯನ್ನು ಆರಂಭಿಸಿದೆ. ಶ್ರೀ ಟಿ.ಆರ್.ರಘೋತ್ತಮರಾವ್ ರವರು  ನಾನು ಈಗಾಗಲೇ ಕಳೆದ 34 ವರ್ಷಗಳಲ್ಲೇ ಮಾನವ ಗ್ರಂಥಾಲಯ ಆರಂಭ ಮಾಡಿದ್ದೇನೆ ಎಂದು ಹೇಳುತ್ತಾರೆ. ಆದರೇ ಈ ಪರಿಕಲ್ಪನೆಗೆ ಈಗ ‘HUMAN LIBRARY ಎಂದು ನಾಮಕಾರಣ ಮಾಡಿದ್ದಾರೆ ಅಷ್ಟೆ ಎನ್ನುತ್ತಾರೆ.

ಹೌದು ಮಾನವ ಗ್ರಂಥಾಲಯದ ಪರಿಕಲ್ಪನೆ, ಪುಸ್ತಕ ಓದುವ ಮೂಲಕ ಹಲವಾರು ವಿಚಾರಗಳನ್ನು ತಿಳಿದು ಕೊಳ್ಳುವ ಹಾಗೆ, ಮಾನುಷ್ಯರು ಒನ್-ಟು-ಒನ್ ಕುಳಿತು, ಅವರ ತಲೆಯಲ್ಲಿರುವ ವಿಚಾರ ವಿನಿಮಯ ಮಾಡಿಕೊಳ್ಳವುದು ಅಷ್ಟೆ?

ನಾನು ಕಳೆದ 34 ವರ್ಷಗಳಿಂದಲೂ ಸಾವಿರಾರು ಜನರ ಅಭಿಪ್ರಾಯ, ಸಲಹೆ, ಮಾರ್ಗದರ್ಶನ ಪಡೆಯುವ ಮೂಲಕ ಅಭಿವೃದ್ಧಿ ತಪಸ್ಸು ಮಾಡುತ್ತಿದ್ದೇನೆ ಎನ್ನುವುದರಲ್ಲಿ ಅತಿಶಯೋಕ್ತಿಯಲ್ಲ.

ಪಂಚವಟಿ ಗಿಡ ಎಂದರೇನು?

ಅಗ್ನಿಹೋತ್ರ ಹೋಮ ಎಂದರೇನು?

ಈ ಎರಡು ವಿಚಾರಗಳ ಬಗ್ಗೆ ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯ ಸುಮಾರು 3571 ಮನೆಗಳ ನಿವಾಸಿಗಳ ಬಾಯಲ್ಲಿ ಕೇಳಿ ತಿಳಿದುಕೊಳ್ಳಲು ಇಚ್ಚಿಸಿದ್ದೇನೆ. ಕಾರಣ ಇಷ್ಟೆ ಪಿಜೆಸಿ ಆವರಣದಲ್ಲಿ ಪಂಚವಟಿ ಗಿಡಗಳನ್ನು ಹಾಕಲು ಸಿದ್ಧತೆ ನಡೆದಿದೆ. ಪ್ರತಿ ದಿನ ಅಗ್ನಿಹೋತ್ರ ಹೋಮ ಮಾಡಲು ಚರ್ಚೆ ಆರಂಭವಾಗಿದೆ.ಮಾಲೀಕರ ಅನುಮತಿಯ ಪ್ರಕ್ರೀಯೆ ನಡೆಯುತ್ತಿದೆ.

ಈಗಾಗಲೇ ಪಿಜೆಸಿ ನಿವಾಸಿ, ಶ್ರೀ ಸಿದ್ದಗಂಗಪ್ಪನವರು ಸಂಗ್ರಹಿಸಿದ ಡಾಟಾ ಪ್ರಕಾರ, ಈ ಸಿಟಿಯಲ್ಲಿ ರಾಜ್ಯದ 28 ಜಿಲ್ಲೆಗಳ ಜನರು ನಿವಾಸಿಗಳಾಗಿದ್ದಾರೆ. ಬಹಳ ಖುóಷಿಯಿಂದ, ತಮ್ಮ ತಮ್ಮ ಜಿಲ್ಲೆ ಬಗ್ಗೆ ಪ್ರಕಟ ಮಾಡಿದ್ದಾರೆ, ಅವರೆಲ್ಲರಿಗೂ ಅಭಿನಂದನೆಗಳು.

ಎಷ್ಟು ರಾಜ್ಯದ ಮತ್ತು ಎಷ್ಟು ದೇಶದ ನಿವಾಸಿಗಳು ಇದ್ದಾರೆ ಎಂಬ ಬಗ್ಗೆ ಡಾಟಾ ಸಂಗ್ರಹ ಮಾಡಲು ಆರಂಭಿಸಲಿದ್ದಾರೆ.

ಇದೊಂದು ವೈವಿಧ್ಯಮಯದ ಸಂಸ್ಖøತಿ ಇರುವ ಹಲವಾರು, ವಿಭಿನ್ನ ರುಚಿಯ ನಿವಾಸಿಗಳು ಇರುವ ಸ್ಥಳ. ಈ ಆವರಣದಲ್ಲಿ ಪಂಚವಟಿ ಗಿಡ ಏಕೆ? ಹಾಕಿ ಬೆಳಸಬೇಕು, ಅಗ್ನಿಹೋತ್ರ ಹೋಮ ಏಕೆ ಮಾಡಬೇಕು? ಇದು ವಿಜ್ಞಾವೋ ಅಥವಾ ಮೂಢÀ ನಂಬಿಕೆಯೋ ಎಂಬ ಬಗ್ಗೆ ಚರ್ಚೆ ಆಗಬೇಕಿದೆ. ಎಲ್ಲರಿಗೂ ಸ್ಪಷ್ಟ ಮಾಹಿತಿಯ ಅರಿವು ಆಗಬೇಕಿದೆ.

‘ಅರಳಿ, ಅತ್ತಿ, ಬಿಲ್ವ ಪತ್ರೆ, ಬೇವು ಮತ್ತು ಬನ್ನಿ ಐದು ಜಾತಿಯ ಗಿಡಗಳನ್ನು ಪಂಚವಟಿ ಗಿಡ ಎನ್ನುತ್ತಾರೆ. ಈ ಬಗ್ಗೆ ಮತ್ತು ಅಗ್ನಿಹೋತ್ರ ಹೋಮದ ಬಗ್ಗೆ ಗೂಗಲ್ ನಲ್ಲಿ ವಿಚಾರ ತಿಳಿದು ಕೊಳ್ಳಬಹುದು’.

ಸಹೋದರಿ,  ಶ್ರೀಮತಿ ಪವಿತ್ರರವರು ಗಿಡಗಳನ್ನು ಸಂಗ್ರಹ ಮಾಡಿ ನೀಡಿದ್ದಾರೆ, ಒಂದು ದಿವಸ ಪೂರ್ಣ ಸಮಯ ಹಾಕಿ, ಪಾರಂಪರಿಕ ನಾಟಿ ವೈಧ್ಯರಾದ  ಶ್ರೀ ಗುರುಸಿದ್ಧರಾಧ್ಯರವರು ಸಂಗ್ರಹ ಮಾಡಲು ಶ್ರಮ ಹಾಕಿದ್ದಾರೆ, ಶ್ರೀ ರಾಜೇಶ್ ರವರು ಶಕ್ತಿಪೀಠ ಕ್ಯಾಂಪಸ್ ನಿಂದ ಕೆಲವು ಗಿಡ ತಂದಿದ್ದಾರೆ. ಈ ಗಿಡಗಳನ್ನು ಪಿಜೆಸಿ ಮಾಲೀಕರಿಗೆ ಮತ್ತು ನಿವಾಸಿಗಳಿಗೆ ತಲುಪಿಸಬೇಕಿದೆ.