25th April 2024
Share

TUMAKURU:SHAKTHIPEETA FOUNDATION

ನಗರದ ಸಾರ್ವಜನಿಕರು ಕರೆ ಮಾಡಿ, ಈ  ಉದ್ಯಾನವನದ ಮುಂದೆ ಹಾಕಿರುವ ನಾಮಫಲಕದ ಬಗ್ಗೆ ನಿಖರವಾದ ಮಾಹಿತಿ ನೀಡಲು ನನ್ನನ್ನು ಕೇಳಿದಾಗ ನಾನು ಅವರಿಗೆ ಒಂದು ವಾರ ಸಮಯ ಕೇಳಿದ್ದೇನೆ.

 ಈ ಪತ್ರ ಬರೆದ ಕರ್ನಾಟಕ ವಿದ್ಯುತ್ ಪ್ರಸರಣಾ ವಿಭಾಗ, ಸಹಾಯಕ ಇಂಜಿನಿಯರ್, ತುಮಕೂರು ಇವರು ಈ ಪತ್ರ ಬರೆದ ಹಿನ್ನಲೆಯನ್ನು ನಗರದ ಜನತೆಯೊಂದಿಗೆ ಹಂಚಿಕೊಳ್ಳಲಿ.

ಈ ನಾಮಫಲಕ ಹಾಕಿರುವ ತುಮಕೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ನಾಮಫಲಕ ಹಾಕಿರುವ ಬಗ್ಗೆ ನಗರದ ಜನತೆಯೊಂದಿಗೆ ಹಂಚಿಕೊಳ್ಳಲಿ.

ಇದೇ ರೀತಿ ತುಮಕೂರು ನಗರದಲ್ಲಿ ಹಾದುಹೋಗಿರುವ ಹೆಚ್.ಟಿ.ಲೈನ್ ಗಳ ಕೆಳಭಾಗದಲ್ಲಿ ನಿರ್ಮಾಣವಾಗಿರುವ ಕಟ್ಟಡಗಳ ವಸ್ತು ನಿಷ್ಟ, ನಿಖರವಾದ ಜಿಐಎಸ್ ಡಾಟಾ ಸಂಗ್ರಹಿಸಿ, ಸೂಕ್ತ ಕ್ರಮಕೈಗೊಂಡು ಪ್ರಾಣಹಾನಿಗಳಿಂದ ರಕ್ಷಿಸಲು ಬಹಿರಂಗ ಮನವಿ.

ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯಲ್ಲಿರುವ ತುಮಕೂರು ಜಿಲ್ಲಾ ವಿದ್ಯುತ್ ಚ್ಚಕ್ತಿ ಸಮಿತಿಯಲ್ಲಿ , ಹೆಚ್.ಟಿ. ಲೈನ್ ಕೆಳಭಾಗದಲ್ಲಿರುವ ಒಂದು ಶಾಲಾ ಕಟ್ಟಡದ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು.

ನಾನು ಆ ಸಭೆಯಲ್ಲಿ ಭಾಗವಹಿಸಿದ್ದೆ, ಹೆಚ್.ಟಿ.ಲೈನ್ ಮತ್ತು ಜಿಲ್ಲಾದ್ಯಾಂತ ಇರುವ ಎಂ.ಯು.ಎಸ್,ಎಸ್.ಗಳ ಜಿಐಎಸ್ ಲೇಯರ್ ಮಾಡಲು ಸಲಹೆ ನೀಡಿದ್ದೆ.

ಬಹಳ ಹಿಂದೆ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ, ಶ್ರೀ ಆದರ್ಶಕುಮಾರ್ ರವರ ಬಳಿ ಈ ಬಗ್ಗೆ ಸಮಾಲೋಚನೆ ನಡೆಸಿದಾಗ ತುಮಕೂರು ನಗರದಲ್ಲಿ ಸುಮಾರು 110 ಕೀಮೀ ಹೆಚ್.ಟಿ.ಲೈನ್ ಇದೆ ಎಂದು ಹೇಳಿದ್ದರು.

ತುಮಕೂರು ಸ್ಮಾರ್ಟ್ ಸಿಟಿಯವರು ಹೆಚ್.ಟಿ.ಲೈನ್ ಗಳ ಕೆಳಭಾಗದಲ್ಲಿ ಸುಮಾರು 48 ಕಡೆ ಗ್ರಿಲ್ ಫೆನ್ಸ್ ಹಾಕಿದ್ದಾರಂತೆ, ಅವುಗಳನ್ನು ಪಟ್ಟಿ ಮಾಡಿ, ಅವುಗಳ ಬಗ್ಗೆಯೂ ತಾಂತ್ರಿಕ ವರದಿ ನೀಡಲು ಕೆಪಿಟಿಸಿಎಲ್ ಇಂಜಿನಿಯರ್ ಗಳಿಗೆ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಬಹಿರಂಗ ಮನವಿ ಮಾಡಲಾಗಿದೆ.

ಈ ಬಗ್ಗೆ ಪಾಲಿಕೆ ಆಯುಕ್ತರಾದ ಶ್ರೀ ಯೋಗಾನಂದ್‍ರವರು, ಸ್ಮಾರ್ಟ್ ಸಿಟಿ ಎಂ.ಡಿ ಶ್ರೀ ರಂಗಸ್ವಾಮಿರವರು ಹಾಗೂ ಕೆಪಿಟಿಸಿಎಲ್ ಇಇ ಶ್ರೀ ಸೈಯದ್ ರವರಿಗೂ ಚರ್ಚಿಸಲಾಗಿದೆ.