22nd December 2024
Share

TUMAKURU:SHAKTHIPEETA FOUNDATION

ತುಮಕೂರು ವಿಜಯಕರ್ನಾಟಕ ವರದಿಗಾರರು 2023 ರ ಮನ್ನೋಟಕ್ಕೆ ಒಂದು ವರದಿ ಕೇಳಿದಾಗ, ನಾನು ಅವರೊಂದಿಗೆ ಚರ್ಚಿಸಿದ್ದು, ಒಂದು ದಿವಸ ವರದಿ ಮಾಡಿ ಮರೆಯುತ್ತೀರಾ ಅಥವಾ ಪಾಲೋಅಫ್ ಮಾಡುತ್ತಿರಾ?

ಶ್ರೀ ಶಶಿಧರ್ ರವರು ಹೇಳಿದ ಮಾತು, ನಾನು ತುಮಕೂರಿನಲ್ಲಿ ಇರುವವರೆಗೂ ಪ್ರತಿ ತಿಂಗಳು, ‘TUMAKURU VISION DOCUMENT-2047’ ಬಗ್ಗೆ ಫಾಲೋಅಫ್ ವರದಿ ಮಾಡುತ್ತೇನೆ ಸಾರ್ ಎಂದಾಗ ನನಗೆ ಖುಷಿಯಾಯಿತು.

ಅವರು ನನ್ನ ಪರಿಕಲ್ಪನೆ ಜೊತೆಗೆ, ಇತರರ ವರದಿಗಳನ್ನು ಇಲ್ಲಿ ವರದಿ ಮಾಡಿದ್ದಾರೆ. ಅವರೆಲ್ಲರ ಸಭೆ ಕರೆದು ಸರಣಿ ಚರ್ಚೆ ಆರಂಭ ಮಾಡಲು ಯೋಚಿಸಿದ್ದೇನೆ.

ಈಗ ತುಮಕೂರಿನಲ್ಲಿ ನನಗೆ ಒಂದು ಮನೆ ಇಲ್ಲ, ಕಚೇರಿ ಇಲ್ಲ. ಇದ್ದ ಕಚೇರಿಯ ಕಟ್ಟಡವನ್ನು ಕೆಡವಿ ಹಾಕಿ ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠದ ಸಂಶೋಧನಾ ಶಕ್ತಿಭವನ ವನ್ನು ನಿರ್ಮಾಣ ಮಾಡಲು ಆರಂಭಿಸಿದ್ದೇನೆ.

ಕಟ್ಟಡ ಪೂರ್ಣ ಆಗುವವರೆಗೂ ಕಾಯುತ್ತಾ ಕುಳಿತು ಕೊಳ್ಳದೇ, ನಮ್ಮ ಮನೆ ಹಿಂದೆ ಇರುವ ಎಡಕಲ್ಲುದ ಗುಡ್ಡದ ಪಾರ್ಕ್ ನಲ್ಲಿಯೇ  TUMAKURU VISION DOCUMENT-2047’ ರ ಸರಣಿ ಸಭೆಯನ್ನು ಆರಂಭಿಸಲು ಯೋಚಿಸಲಾಗಿದೆ.

ಆಸಕ್ತರು ಸಲಹೆ ಸೂಚನೆಗಳನ್ನು ನೀಡಲು ಬಹಿರಂಗ ಮನವಿ ಮಾಡಲಾಗಿದೆ.