TUMAKURU:SHAKTHI PEETA FOUNDATION
ಇದೊಂದು ಪಕ್ಷಾತೀತವಾಗಿ, ಜಾತ್ಯಾತೀತವಾಗಿ, ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ, 330 ಗ್ರಾಮಪಂಚಾಯಿತಿಗಳ, 11 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಎಲ್ಲಾ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಯೂ ಇದಾಗಲಿದೆ.
ತುಮಕೂರು ವಿಷನ್ ಡಾಕ್ಯುಮೆಂಟ್- 2047 ಗೆ, ಪೂರಕವಾಗಿ 365 ವಿಷಯಗಳ ಪಟ್ಟಿಯನ್ನು ಅಂತಿಮಗೊಳಿಸಲು ನಿರ್ಧರಿಸಲಾಗಿದೆ. ಬಹುತೇಕ ಪಟ್ಟಿಯನ್ನು ಸಿದ್ಧಪಡಿಸಿ, ಯಾವುದಾದರೂ ಯೋಜನೆಯನ್ನು ಕೈಬಿಡಲಾಗಿದೆಯೇ ಅಥವಾ ಯಾವುದಾದರೂ ಯೋಜನೆ ಡೂಪ್ಲಿಕೇಟ್ ಆಗಿದೆಯೇ ಎಂಬ ಬಗ್ಗೆ, ಶ್ರೀ ಟಿ.ಆರ್.ರಘೋತ್ತೊಮವರಾವ್, ಶ್ರೀ ಉಮಾಶಂಕರ್ ಹಾಗೂ ಶ್ರೀ ವಿಶ್ವನಾಥ್ ಪರಿಶೀಲನೆ ನಡೆಸಲು ಇ ಮೇಲ್ ಮಾಡಲಾಗಿದೆ.
ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಓದಿ ಅನುಮೋದನೆ ನೀಡಿದ ನಂತರ, ಮೊದಲನೆಯ ಹಂತದಲ್ಲಿ, ಕೆಳಕಂಡ ಸುಮಾರು 9 ಸಭೆಗಳನ್ನು ಸಂಸದರ ಅಧ್ಯಕ್ಷತೆಯಲ್ಲಿ ಆಯೋಜಿಸಿ, 365 ವಿಷಯಗಳ ಪಟ್ಟಿಯನ್ನು ಮಂಡಿಸಿ, ಸಮಾಲೋಚನೆ ನಡೆಸಲಾಗುವುದು. ಅಭಿವೃದ್ಧಿ ಆಸಕ್ತರ ಸಲಹೆಗಳನ್ನು ಪಟ್ಟಿಗೆ ಸೇರ್ಪಡೆ ಅಥವಾ ಕೈಬಿಡುವುದನ್ನು ಮಾಡಲು ಚಿಂತನೆ ನಡೆಸಲಾಗಿದೆ.
- ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್,
- ತುಮಕೂರು ಜಿಲ್ಲಾ ನಿವೃತ್ತ ನೌಕರರ ಸಂಘ
- ತುಮಕೂರು ಜಿಲ್ಲಾ ಸರ್ಕಾರಿ ನೌಕರರ ಸಂಘ.
- ತುಮಕೂರು ವಿಶ್ವ ವಿದ್ಯಾನಿಲಯ,
- ಎಸ್.ಐ.ಟಿ, ಇಂಜಿನಿಯರಿಂಗ್ ಕಾಲೇಜು.
- ಎಸ್.ಎಸ್.ಐ.ಟಿ ಇಂಜಿನಿಯರಿಂಗ್ ಕಾಲೇಜು.
- ಶ್ರೀದೇವಿ ಇಂಜಿನಿಯರಿಂಗ್ ಕಾಲೇಜು.
- ಹೆಚ್.ಎಂ.ಎಸ್. ಇಂಜಿನಿಯರಿಂಗ್ ಕಾಲೇಜು.
- ಅಕ್ಷಯ ಇಂಜಿನಿಯರಿಂಗ್ ಕಾಲೇಜು.
ನಂತರ, ತುಮಕೂರು ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳ ಜೊತೆ ಸಮಾಲೋಚನೆ ನಡೆಸಲಾಗುವುದು. ಎಲ್ಲರ ಅಭಿಪ್ರಾಯದ ನಂತರ ಜಿಲ್ಲೆಯ ಎಲ್ಲಾ 341 ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ, ನಾಗರೀಕರ, ಸಂಘ ಸಂಸ್ಥೆಗಳ, ಎಲ್ಲಾ ವರ್ಗದ ಜನಾಭಿಪ್ರಾಯ ಪಡೆದು, ಅಂತಿಮವಾಗಿ ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರ ಅದ್ಯಕ್ಷತೆಯಲ್ಲಿ ಎಲ್ಲಾ ಇಲಾಖೆಗಳ ಸಭೆ ಆಯೋಜಿಸಲು, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಕೆ.ಡಿ.ಪಿ ಸಭೆಯಲ್ಲಿ, ಸಂಸದರ ಅಧ್ಯಕ್ಷತೆಯ ದಿಶಾ ಸಮಿತಿಯಲ್ಲೂ ಚರ್ಚೆ ನಡೆಸಲು ಚಿಂತನೆ ನಡೆಸಲಾಗಿದೆ. ಎಲ್ಲಾ ಹಂತದ ಸಮಾಲೋಚನೆಯ ನಂತರ, ತುಮಕೂರು ವಿಷನ್ ಡಾಕ್ಯುಮೆಂಟ್-2047 ಅಂತಿಮ ಗೊಳಿಸಲಾಗುವುದು.
ನಿರಂತರವಾಗಿ ವರ್ಷದ ಎಲ್ಲಾ 365 ದಿವಸವೂ, ಮುಂದಿನ 25 ವರ್ಷಗಳವರೆಗೆ, ಶಕ್ತಿಪೀಠ ಯೂ-ಟ್ಯೂಬ್ ಚಾನಲ್ ನಲ್ಲಿ ವಿಷಯವಾರು ಪ್ರಗತಿ ಪರಿಶೀಲನೆ ಸಂವಾದ ನಡೆಸಿ, ಜಿಲ್ಲೆಯ ಎಲ್ಲಾ ಮಾಧ್ಯಮಗಳಿಗೂ ಸುದ್ದಿಯನ್ನು ರವಾನಿಸಲು ಯೋಚಿಸಲಾಗಿದೆ.
ನಂತರ ಇದೇ ಮಾದರಿ ಕರ್ನಾಟಕ ರಾಜ್ಯಾಧ್ಯಾಂತ, ಬಾರತ ದೇಶಾಧ್ಯಾಂತ ವಿಸ್ತರಿಸುವ ಪರಿಕಲ್ಪನೆ ನಮ್ಮದಾಗಿದೆ. ಇಡೀ ವಿಶ್ವಕ್ಕೆ ಮಾದರಿಯಾದ ವ್ಯವಸ್ಥೆಗೆ ಎಲ್ಲಾ ಪೂರ್ವ ಸಿದ್ಧತೆ ಆರಂಭವಾಗಿದೆ. 365 ವಿಷಯವಾರು ಆಸಕ್ತರು ನೊಂದಾಯಿಸಿಕೊಳ್ಳ ಬಹುದು. ವಿಷನ್ ಗ್ರೂಪ್ ಸದಸ್ಯರ ಸಂಖ್ಯೆ ಸೀಮೀತವಾಗಿಲ್ಲ.