25th July 2024
Share

TUMAKURU:SHAKTHIPEETA FOUNDATION

ಗೆ.                                                 ದಿನಾಂಕ:09.01.2023

ಕರ್ನಾಟಕ ರಾಜ್ಯದ ಸರ್ವ ಪಕ್ಷಗಳ ಅಧ್ಯಕ್ಷರು, ವಿವಿಧ ವರ್ಗದ ಸಂಘ ಸಂಸ್ಥೆಗಳ ಅಧ್ಯಕ್ಷರು, ವಿಷಯವಾರು ಪರಿಣಿತ ಜ್ಞಾನಿಗಳು, ಅಭಿವೃದ್ಧಿ ಪೀಠ, ಜಲಪೀಠ ಹಾಗೂ ಶಕ್ತಿಪೀಠಗಳ ಬಗ್ಗೆ ಆಸಕ್ತಿ ಇರುವವರು.

ಮಾನ್ಯರೇ.

ವಿಷಯ: ದಿನಾಂಕ:23.01.2023 ಹಾಗೂ 24.01.2023 ರಂದು 2 ದಿವಸಗಳ ಸಂವಾದ ಘೋಷ್ಠಿಗೆ ಭಾಗವಹಿಸುವ ಬಗ್ಗೆ.

ಶಕ್ತಿಪೀಠ: ವಿಶ್ವದ 108 ಶಕ್ತಿಪೀಠಗಳ ಅಧ್ಯಯನ ಮತ್ತು ಸಂಶೋಧನೆ.

ಜಲಪೀಠ: ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರವಾರು, ರಾಜ್ಯದ ನದಿ ಜೋಡಣೆ ಮೂಲಕ ‘ಊರಿಗೊಂದು ಕೆರೆ- ಆ ಕರೆಗೆ ನದಿ ನೀರು’ ಘೋಷಣೆ ಮೂಲಕ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಪ್ರತಿಪಾದನೆ.

ಅಭಿವೃದ್ಧಿ ಪೀಠ: ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರವಾರು, ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ, ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ತರುವ ಸ್ಟ್ರಾಟಜಿ.

ಕೇಂದ್ರ ಸರ್ಕಾರ ದೇಶದ ಪ್ರತಿಯೊಂದು ರಾಜ್ಯದಲ್ಲಿ, ಮಾನ್ಯಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ, ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯನಾಗಿ ಹಾಗೂ ಶಕ್ತಿಪೀಠ ಫೌಂಡೇಷನ್ ಸಂಸ್ಥಾಪಕನಾಗಿ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮತ್ತು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಜೊತೆ 3 ದಶಕಗಳ ಕಾಲ ಒಡನಾಟದ ಅನುಭವದೊಂದಿಗೆ ಮಾಡುತ್ತಿರುವ ಒಂದು ಪ್ರಾಮಾಣಿಕ ಪ್ರಯತ್ನ

ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೋಕು ಮೂಕಾನನ ರೆಸಾರ್ಟ್ ಹಾಗೂ ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿ, ಅಂತರ ರಾಷ್ಟ್ರೀಯ ಮಟ್ಟದ ಸಂವಾದ ನಡೆಸುವ ಆಲೋಚನೆ ಇದೆ.

ಸಂವಾದದ ಅಧ್ಯಕ್ಷತೆಯನ್ನು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ವಹಿಸುವರು.

ಸಂವಾದದಲ್ಲಿ

ವಿಶ್ವದ 7 ದೇಶಗಳಲ್ಲಿರುವ 108 ಶಕ್ತಿಪೀಠಗಳ, ಭಾರತ ದೇಶದಲ್ಲಿರುವ 12 ಜ್ಯೋತಿರ್ಲಿಂಗಗಳ ಹಾಗೂ ಬ್ರಹ್ಮ, ವಿಷ್ಣು ಸೇರಿದಂತೆ 122 ದೇವರುಗಳ ಸಮ್ಮುಖದಲ್ಲಿ, ಕೆಳಕಂಡ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.

  1. ಪಶ್ಚಿಮ ಘಟ್ಟಗಳ ಸ್ಥಿತಿಗತಿ.
  2. ಕರ್ನಾಟಕ ರಾಜ್ಯದ ಸಮಗ್ರ ನೀರಾವರಿ ಮಾಹಿತಿಯುಳ್ಳ ಜಲಗ್ರಂಥ.
  3. ತುಮಕೂರು ಜಿಲ್ಲಾ ವಿಷನ್ ಡಾಕ್ಯುಮೆಂಟ್-2047/ ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್-2047.
  4. ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಹೆಚ್ಚಿಗೆ ಅನುದಾನ ಪಡೆಯುವ ಸ್ಟ್ರಾಟಜಿ
  5. ವಿಶ್ವದ, ದೇಶದ, ರಾಜ್ಯದ, ಜಿಲ್ಲಾ, ತಾಲ್ಲೋಕು, ಸ್ಥಳೀಯ ಸಂಸ್ಥೆಗಳ, ಗ್ರಾಮ ಹಾಗೂ ಬಡಾವಣೆ ಮಟ್ಟದಲ್ಲಿನ ವಿಷಯವಾರು ಪರಿಣಿತ ಜ್ಞಾನಿಗಳ ಸಂಗಮ.

ಮೇಲ್ಕಂಡ ವಿಷಯಗಳಲ್ಲಿ ಜ್ಞಾನವುಳ್ಳ ಅಥವಾ ಆಸಕ್ತಿ ಇರುವ 122 ಜನರನ್ನು ಮಾತ್ರ, ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯಿಂದ ಮತ್ತು ತುಮಕೂರು ನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಿಂದ ದಿನಾಂಕ:23.01.2023 ರಂದು ಬೆಳಿಗ್ಗೆ ಪಿಕ್ ಮಾಡಿ, ದಿನಾಂಕ:24.01.203 ರಂದು ರಾತ್ರಿ 7 ಗಂಟೆಗೆ ಪಿಕ್ ಮಾಡಿದ ಸ್ಥಳಕ್ಕೆ ಕರೆದು ತರಲಾಗುವುದು. ಸ್ವಂತ ವಾಹನದಲ್ಲಿ ಬರುವವರು ನೋಂದಾಯಿಸಿಕೊಂಡು ಅವರ ಸಾರಿಗೆ ಖರ್ಚಿನಲ್ಲಿ ಬರಬಹುದು.

ಎಲ್ಲಾ ಖರ್ಚು- ವೆಚ್ಚಗಳು ಉಚಿತ, ಜಾÐನ ದಾನ ನೀಡಲು ಭಾಗವಹಿಸಿದವರಿಗೆ ರೂ 122 ಜ್ಞಾನ ಸಂಭಾವನೆ ಮತ್ತು ‘ಜ್ಞಾನ ದಾನ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು.

ನೋಂದಾಯಿಸಿ ಕೊಳ್ಳಿ

ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ್ ವಿವರ ಹಾಗೂ ವ್ಯಕ್ತಿಗತ ವಿವರದೊಂದಿಗೆ ಉಚಿತವಾಗಿ ವಾಟ್ಸ್ ಅಫ್:9886774477 ಮತ್ತು 9844266050 ಗೆ ನೋಂದಾಯಿಸಿ ಕೊಳ್ಳಿ. 122 ಜನರಿಗೆ ಮಾತ್ರ ಅವಕಾಶ, ಪ್ರಾತಿನಿದ್ಯ, ದೇಶದ ಎಲ್ಲಾ ರಾಜ್ಯಗಳ ಪ್ರತಿನಿಧಿ, ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರತಿನಿಧಿ, ಶಕ್ತಿಪೀಠಗಳಿರುವ 7 ದೇಶಗಳ ಪ್ರತಿನಿಧಿಗಳಿಗೆ, ಮೊದಲು ಬಂದವರಿಗೆ ಮೊದಲ ಆಧ್ಯತೆ.

ರಾಜಕೀಯ ಪಕ್ಷಗಳಲ್ಲಿ ಮನವಿ: ನಿಮ್ಮ ಪಕ್ಷದ ಹಂತದಲ್ಲಿ ದೆಹಲಿ ಪ್ರತಿನಿಧಿ, ಅಭಿವೃದ್ಧಿ ಹಾಗೂ ಜಲಶಕ್ತಿ  ವಿಭಾಗ/ಸೆಲ್/ಮೋರ್ಚಾ/ಪ್ರಕೋಷ್ಠ ಯಾವುದೇ ಹೆಸರಿನಲ್ಲಿ ರಾಜ್ಯ ಮಟ್ಟದ ಸಮಿತಿ ರಚಿಸಿ, ಸಂಚಾಲಕರನ್ನು ನೇಮಿಸಿ, ನಿರಂತರವಾಗಿ, ಇಂಥಹ ಸಭೆಗಳಲ್ಲಿ ಭಾಗವಹಿಸಲು ಪ್ರತಿನಿಧಿಗಳನ್ನು ಕಳುಹಿಸಲು ಮನವಿ, ಪಕ್ಷಾತೀತವಾಗಿ ಸರ್ವಪಕ್ಷಗಳ ಅಭಿಪ್ರಾಯದೊಂದಿಗೆ ವರದಿ ಸಿದ್ಧಪಡಿಸುವುದು ನಮ್ಮ ಪರಿಕಲ್ಪನೆ.

ಶಕ್ತಿಪೀಠ ಫೌಂಡೇಷನ್, ರಾಜ್ಯದ ಎಲ್ಲಾ ರಾಜಕೀಯ ಪಕ್ಷಗÀಳು, ಚುನಾಯಿತ ಜನಪ್ರತಿನಿಧಿಗಳು, ಅಗತ್ಯವಿರುವವರು ಕೇಳುವ ಅಭಿವೃದ್ಧಿ ಮಾಹಿತಿ ನೀಡುವ ಡಾಟಾ ಬ್ಯಾಂಕ್ ಎಂದು ತಿಳಿಸಲು ಹರ್ಷಿಸುತ್ತೇನೆ.

ನೋಂದಾಯಿಸಿದವರಿಗೆ ಸಂವಾದ ಘೋಷ್ಠಿಗಳÀ ಮಾಹಿತಿಯನ್ನು ಶೀಘ್ರದಲ್ಲಿ ರವಾÀನಿಸಲಾಗುವುದು.

ವಂದನೆಗಳೊಂದಿಗೆ                                                 ತಮ್ಮ ವಿಶ್ವಾಸಿ

ಕುಂದರನಹಳ್ಳಿ ರಮೇಶ್,

ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ

ಹಾಗೂ

ಶಕ್ತಿಪೀಠ ಫೌಂಡೇಷನ್, ಸಂಸ್ಥಾಪಕ.

ತುಮಕೂರು, ವಾಟ್ಸ್ ಅಫ್:9886774477