27th July 2024
Share

TUMAKURU:SHAKTHIPEETA FOUNDATION

ಎರಡು ದಿವಸಗಳ ಕಾರ್ಯಾಗಾರಕ್ಕೆ ಮೂಕಾನನ ರೆಸಾರ್ಟ್ ನೌಕರರ ಜೊತೆ ಸಮಾಲೋಚನೆ ನಡೆಸುತ್ತಿರುವ ಶ್ರೀ ವೇದಾನಂದಾ ಮೂರ್ತಿ, ಎಕೋ ರೇಸಾರ್ಟ್ ಶ್ರೀ ಪೃಥ್ವಿ.

 ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ದಿನಾಚರಣೆಯಲ್ಲಿ ಜೈ ಅನುಸಂಧಾನ್ ಘೋಷಣೆಯನ್ನು ಜೈ ಜವಾನ್-ಜೈಕಿಸಾನ್- ಜೈ ವಿಜ್ಞಾನ್  ಘೋಷಣೆಗೆ ಸೇರ್ಪಡೆ ಮಾಡಿ, ದೇಶದ ಅಭಿವೃದ್ಧಿಗಾಗಿ ರಾಜ್ಯ- ರಾಜ್ಯಗಳ ಮಧ್ಯೆ ಅಭಿವೃದ್ಧಿಯಲ್ಲಿ ಪೈಪೋಟಿ ಅಗತ್ಯವಿದೆ ಎಂದು ಪ್ರತಿಪಾದನೆ ಮಾಡಿದ ಹಿನ್ನಲೆಯಲ್ಲಿ,

 ರಾಜ್ಯದ ಸರ್ವಪಕ್ಷಗಳ ನೇತೃತ್ವದಲ್ಲಿ ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಸಿದ್ಧಪಡಿಸಲಾಗುವುದು ಎಂದು ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರ ಅಧ್ಯಕ್ಷತೆಯಲ್ಲಿರುವ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ತಿಳಿಸಿದ್ದಾರೆ.

 ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಹೆಚ್ಚಿನ ಅನುದಾನ ಪಡೆಯಲು ಸ್ಟ್ರಾಟಜಿಯನ್ನು ಕರ್ನಾಟಕ ರಾಜ್ಯ ಮೌಲ್ಯಮಾಪನ ಪ್ರಾಧಿಕಾರದ ಸಹಭಾಗಿತ್ವದಲ್ಲಿ  ಸಿದ್ಧಪಡಿಸಲಾಗುವುದು.

ತುಮಕೂರು ಜಿಲ್ಲೆಯ ವಿಷನ್ ಡಾಕ್ಯುಮೆಂಟ್-2047

ಫೈಲಟ್ ಯೋಜನೆಗಾಗಿ ರಾಜ್ಯ ಮಟ್ಟದ ಕಾರ್ಯಾಗಾರ

ಪ್ರಾರಂಭದಲ್ಲಿ ತುಮಕೂರು ಜಿಲ್ಲೆಯ ವಿಷನ್ ಡಾಕ್ಯುಮೆಂಟ್-2047 ಫೈಲಟ್ ಯೋಜನೆಯನ್ನು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ನೇತೃತ್ವದಲ್ಲಿ ಸಿದ್ಧಪಡಿಸಲಾಗುವುದು, ಈ ಹಿನ್ನಲೆಯಲ್ಲಿ ದಿನಾಂಕ:23.01.2023 ಮತ್ತು 24.01.2023 ರಂದು ಹಾಸನ ಜಿಲ್ಲೆಯ, ಸಕಲೇಶ ಪುರ ತಾಲ್ಲೋಕು, ಮೂಕಾನನ ರೆಸಾರ್ಟ್‍ನಲ್ಲಿ  ರಾಜ್ಯ ಮಟ್ಟದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ದೇಶದ ಮಾಜಿ ಪ್ರಧಾನಿಯವರಾದ ಶ್ರೀ ಹೆಚ್.ಡಿ.ದೇವೇಗೌಡರವರ ಕ್ಷೇತ್ರದಿಂದ  ಆರಂಭಿಸಿ, ನಂತರ ರಾಜ್ಯದ 28 ಲೋಕಸಭಾ ಸದಸ್ಯರ, ರಾಜ್ಯದ ಸರ್ವಪಕ್ಷಗಳ ಅಧ್ಯಕ್ಷರ, ವಿರೋಧ ಪಕ್ಷಗಳ ನಾಯಕರ, ಮಾಜಿ ಮುಖ್ಯ ಮಂತ್ರಿಯವರ, ರಾಜ್ಯಸಭಾ ಸದಸ್ಯರ, ವಿಧಾನಪರಿಷತ್ ಸದಸ್ಯರ ಹಾಗೂ ವಿಧಾನ ಪರಿಷತ್ ಸದಸ್ಯರ ಹಾಗೂ ವಿವಿಧ ವರ್ಗದ ಸಂಘ ಸಂಸ್ಥೆಗಳ, ವಿವಿಧ ಎಸ್.ಪಿ.ವಿ.ಗಳ, ಅಧ್ಯಕ್ಷರ ಹಾಗೂ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳ ಅಧ್ಯಕ್ಷತೆಯಲ್ಲಿಯೂ ಕಾರ್ಯಾಗಾರ/ಸಮಾವೇಶ ನಡೆಸಲು ಚಿಂತನೆ ನಡೆಸಲಾಗಿದೆ.

 ಈ ಕಾರ್ಯಾಗಾರದ ಅಧ್ಯಕ್ಷತೆಯನ್ನು ಹಾಸನ ಲೋಕಸಭಾ ಸದಸ್ಯರಾದ ಶ್ರೀ ಪ್ರಜ್ವಲ್ ರೇವಣ್ಣನವರು ವಹಿಸಲಿದ್ದಾರೆ. ಶ್ರೀ ಹೆಚ್.ಡಿ.ದೇವೇಗೌಡರವರ ಪ್ರತಿ ನಿಧಿಯಾಗಿ ವಿಧಾನಪರಿಷತ್ ಸದಸ್ಯರಾದ ಶ್ರೀ ತಿಪ್ಪೇಸ್ವಾಮಿರವರು ಮತ್ತು ಸಕಲೇಶಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಹೆಚ್.ಕೆ.ಕುಮಾರಸ್ವಾಮಿರವರು ಭಾಗವಹಿಸಲಿದ್ದಾರೆ.

ಎರಡು ದಿವಸದ ಕಾರ್ಯಾಗಾರದಲ್ಲಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಭಾಗವಹಿಸಲಿದ್ದಾರೆ. ರಾಜ್ಯದ 31 ಜಿಲ್ಲೆಯ ವಿವಿಧ ಪರಿಣಿತರು, ಆಸಕ್ತರು, ಕಾರ್ಯಾಗಾರÀದಲ್ಲಿ ಭಾಗವಹಿಸಲು ಉಚಿತವಾಗಿ ನೋಂದಾಯಿಸಿಕೊಳ್ಳಲು ಮನವಿ ಮಾಡಲಾಗಿದೆ.

ಜ್ಞಾನದಾನ ಪ್ರಶಸ್ತಿ ಅರ್ಜಿ ಆಹ್ವಾನ

ರಾಜ್ಯದ 29340 ಗ್ರಾಮ ಮಟ್ಟದಿಂದ ಆರಂಭಿಸಿ ವಿಶ್ವದ ಯಾವುದೇ ದೇಶದ ಜನತೆ, ಅಭಿವೃದ್ಧಿ ಯೋಜನೆಗಳ ಬಗ್ಗೆ ಜ್ಞಾನ ದಾನ ಮಾಡುವವರಿಗೆ ಜ್ಞಾನದಾನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕನಸುಗಾರರು ತಮ್ಮ ಅಭಿವೃದ್ಧಿ ಯೋಜನೆಗಳ ಕನಸುಗಳೊಂದಿಗೆ ಅರ್ಜಿ ಸಲ್ಲಿಸಲು ಮನವಿ ಮಾಡಲಾಗಿದೆ. ಎಲೆಮರೆ ಕಾಯಿಯಂತೆ ಕಾರ್ಯ ನಿರ್ವಹಿಸುತ್ತಿರುವ, ಅಂತಹ ಜ್ಞಾನಿಗಳನ್ನು ಹುಡುಕಿ ಬೇರೆಯವರು ಸಹ ಮನವಿ ಸಲ್ಲಿಸಲು ಅವಕಾಶವಿದೆ.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ನದಿ ನೀರಿ£ಲ್ಲಿÀ ಸಾಮಾಜಿಕ ನ್ಯಾಯದ ಜಲಗ್ರಂಥ

ಕರ್ನಾಟಕ ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಿಗೂ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಒದಗಿಸಲು, ‘ಊರಿಗೊಂದು ಕೆರೆ ಕೆರೆಗೆ ನದಿ ನೀರು ಯೋಜನೆಯ ಬಗ್ಗೆಯೂ ಕಾರ್ಯಾಗಾರÀದಲ್ಲಿ ಘೋಷ್ಠಿ ನಡೆಯಲಿದೆ.

 ನೀರಾವರಿ ಯೋಜನೆಗಳ ಬಗ್ಗೆ ಅಧ್ಯಯನ ಮಾಡುತ್ತಿರುವವರು, ಹೋರಾಟಗಾರರು, ನಿವೃತ್ತ ಅಧಿಕಾರಿಗಳು ಸಹ ಉಚಿತವಾಗಿ ನೊಂದಾಯಿಸಿಕೊಳ್ಳಲು ಮನವಿ ಮಾಡಲಾಗಿದೆ. ರಾಜ್ಯದ ಪ್ರತಿಯೊಂದು ಹನಿ ನೀರಿನ ಮಾಹಿತಿಯುಳ್ಳ ‘ಜಲಗ್ರಂಥ ಸಿದ್ಧಪಡಿಸಲು ಆರಂಭದ ಸಿದ್ಧತೆ ನಡೆದಿದೆ ಎಂದಿದ್ದಾರೆ.

ವಿಶ್ವದ 108 ಶಕ್ತಿಪೀಠಗಳ  ಅಂತರ ರಾಷ್ಟ್ರೀಯ ಮಟ್ಟದ ಸಮಾವೇಶ

ವಿಶ್ವದ 7 ದೇಶUಳÀಲ್ಲಿರುವ 108 ಶಕ್ತಿಪೀಠಗಳ ಸಂಶೋಧನೆ ಮತ್ತು ಅಧ್ಯಯನವನ್ನು ಶಕ್ತಿಪೀಠ ಫೌಂಡೇಷನ್, ಕೇಂದ್ರ ಸರ್ಕಾರದ ಕಲ್ಚರ್ ಇಲಾಖೆಯಡಿಯಲ್ಲಿನ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ ದ ಸಹಬಾಗಿತ್ವದಲ್ಲಿ  ಆರಂಭಿಸಿದ್ದು, ಶಕ್ತಿಪೀಠಗಳ ಜ್ಞಾನ ಮತ್ತು ಮಾಹಿತಿ ಇರುವವರು. ಕಲಾವಿದರು, ವಿಶ್ವದ 108 ಶಕ್ತಿಪೀಠಗಳ  ಅಂತರ ರಾಷ್ಟ್ರೀಯ ಮಟ್ಟದ ಸಮಾವೇಶ’ದಲ್ಲಿ ಭಾಗವಹಿಸಲು ಉಚಿತವಾಗಿ ನೋಂದಾಯಿಸಿಕೊಳ್ಳಲು ಮನವಿ ಮಾಡಲಾಗಿದೆ.

ವೆಸ್ಟರ್ನ್ ಘಾಟ್ ಫೌಂಡೇಷನ್ ಉದ್ಘಾಟನೆ

ಪಶ್ಚಿಮ ಘಟ್ಟಗಳ ಸ್ಥಿತಿ- ಗತಿ ಅಧ್ಯಯನಕ್ಕಾಗಿ ಹಾಗೂ ವಿದ್ಯಾರ್ಥಿಗಳಿಗೆ ಪಶ್ಚಿಮಘಟ್ಟಗಳ ಜ್ಞಾನಕ್ಕಾಗಿ ತರಬೇತಿ ಶಿಬಿರಗಳನ್ನು ಸಹ ನಿರಂತರವಾಗಿ ಹಮ್ಮಿಕೊಳ್ಳಲು ವೆಸ್ಟರ್ನ್ ಘಾಟ್ ಫೌಂಡೇಷನ್ ಅಸ್ಥಿತ್ವಕ್ಕೆ ಬಂದಿದ್ದು, ಇದೇ ಸಮಾವೇಶದಲ್ಲಿ ಉದ್ಘಾಟನೆ ಮಾಡಲಾಗುವುದು,

 ಪಶ್ಚಿಮ ಘಟ್ಟಗಳ ಸಂಶೋಧಕರು, ಹೋರಾಟಗಾರರು,  ತಮ್ಮ ವರದಿಗಳೊಂದಿಗೆ ಬಾಗವಹಿಸಲು ಉಚಿತವಾಗಿ ನೊಂದಾಯಿಸಿಕೊಳ್ಳಲು ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ವೇದಾನಂದಾ ಮೂರ್ತಿ ಮನವಿ ಮಾಡಿದ್ದಾರೆ.

ನಮ್ಮ ಸಂಸ್ಥೆಯ ಉದ್ಘಾಟನೆ ಸಂದರ್ಭದಲ್ಲಿ, ಮೂಕಾನನ ರೆಸಾರ್ಟ್, ಸಕಲೇಶಪುರ ತಾಲ್ಲೋಕು ರೆಸಾರ್ಟ್ ಮತ್ತು ಹೋಂ ಸ್ಟೇಗಳ ಒಕ್ಕೂಟದ ಸಹಭಾಗಿತ್ವದಲ್ಲಿ ಮೇಲ್ಕಂಡ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಲಾಗಿದೆ. ಪಶ್ಚಿಮಘಟ್ಟಗಳ ಸವಿಯನ್ನು ಅನುಭವಿಸುವ ವಿಷಯ ಪರಿಣಿತರಿಗೆ ಒಂದು ಸುವರ್ಣ ಅವಕಾಶ, ಮೊದಲು ಬಂದವರಿಗೆ ಮೊದಲ ಆಧ್ಯತೆ, 125 ಜನರಿಗೆ ಮಾತ್ರ ಅವಕಾಶ ಎಂದು ಮನವಿ ಮಾಡಿದ್ದಾರೆ.

ರಾಜ್ಯದ ಅಭಿವೃದ್ಧಿ ಚರ್ಚೆಗೂ ರೆಸಾರ್ಟ್ ಅತಿಥ್ಯ ನೀಡುತ್ತಿರುವುದು ನಮಗೆ ಸಂತೋóಷ ಉಂಟು ಮಾಡಿದೆ.ದೇಶದ ಪ್ರಧಾನಿಯವರಿಗೆ, ಈ ವಿವಿಧ ವರದಿ ಸಲ್ಲಿಸಲು ರಾಜ್ಯಧ್ಯಾಂತ ನಿಯೋಗ ಹೋಗಲು ಸಹ ರಾಜ್ಯ ಮಟ್ಟದ ರೆಸಾರ್ಟ್ ಮತ್ತು ಹೋಂ ಸ್ಟೇಗಳ ಒಕ್ಕೂಟ ಸಹಕಾರ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ.

ಉಚಿತವಾಗಿ ನೋಂದಾಯಿಸಿ ಕೊಳ್ಳುವ ವಾಟ್ಸ್ ಅಫ್

ವೇದಾನಂದಾ ಮೂರ್ತಿ                               ಕುಂದರನಹಳ್ಳಿ ರಮೇಶ್

ಮ್ಯಾನೇಜಿಂಗ್ ಟ್ರಸ್ಟಿ,                                      ಮ್ಯಾನೇಜಿಂಗ್ ಟ್ರಸ್ಟಿ,

ವೆಸ್ಟರ್ನ್ ಘಾಟ್ ಫೌಂಡೇಷನ್                             ಶಕ್ತಿಪೀಠ ಫೌಂಡೇಷನ್.

9844266050                                                   9886774477