12th April 2024
Share

TUMAKURU:SHAKTHIPEETA FOUNDATION

 ಶಕ್ತಿಪೀಠ ಫೌಂಡೇಷನ್ ಮತ್ತು ಪಶ್ಚಿಮಘಟ್ಟಗಳ ಫೌಂಡೇಷನ್ ಹಾಸನ ಜಿಲ್ಲೆಯ, ಸಕಲೆಶಪುರದ ಮೂಕಾನನ ರೆಸಾರ್ಟ್‍ನಲ್ಲಿ, ದಿನಾಂಕ:23.01.2023 ಮತ್ತು 24.01.2023 ರಂದು ಆಯೋಜನೆ ಮಾಡುತ್ತಿರುವ ಎರಡು ದಿವಸಗಳ ಕಾರ್ಯಾಗಾರಕ್ಕೆ ಇದೂವರೆಗೂ ರಾಜ್ಯದ 21 ಜಿಲ್ಲೆಗಳ 83 ಜನ ನೋಂದಣೆ ಮಾಡಿದ್ದಾರೆ.

ನೊಂದಣೆ ಮಾಡಿರುವವರಲ್ಲದೆ ಶ್ರೀ ವೇದಾನಂದಾಮೂರ್ತಿಯವರು ಮತ್ತು ನಾನು ಸ್ವತಃ ಇದೂವರೆಗೂ ನಮಗೆ ಹಲವಾರು ಯೋಜನೆಗಳ ‘ಜ್ಞಾನ ದಾನ’ ಮಾಡಿರುವವರಿಗೆ   ನಾವೇ ಖುದ್ಧಾಗಿ  ಆಹ್ವಾನ ನೀಡಿದ್ದೇವೆ.

ಇನ್ನೂ 10 ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಗದಗ್, ರಾಯಚೂರು, ಕೊಪ್ಪಳ, ಕೊಡಗು, ಹಾವೇರಿ,ದಾವಣಗೆರೆ, ವಿಜಯನಗರ ಮತ್ತು ಮಂಡ್ಯ ಜಿಲ್ಲೆಯ ಯಾರೊಬ್ಬರೂ ಕಾರ್ಯಾಗಾರಕ್ಕೆ ಬರುವುದಾಗಿ ನೋಂದಣೆ ಮಾಡಿಕೊಂಡಿಲ್ಲ, ಈ ಜಿಲ್ಲೆಗಳ ಆಸಕ್ತರು ನೋಂದಾವಣೆ ಮಾಡಿಕೊಳ್ಳಲು ಮತ್ತೊಮ್ಮೆ ಮನವಿ ಮಾಡಲಾಗಿದೆ.

ಈ ಕಾರ್ಯಾಗಾರ ನಮಗೆ ರಾಜ್ಯಮಟ್ಟದಲ್ಲಿ ಮೊದಲನೆಯಾಗಿದೆ. ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047, ರೂಪುರೇಷೆಗಳ ಬಗ್ಗೆ ಹಾಗೂ ರಾಜ್ಯದ ನೀರಾವರಿ ಮಾಹಿತಿಗಳನ್ನು ಒಳಗೊಂಡ ಜಲಗ್ರಂಥ ದ ಬಗ್ಗೆ, ಹಲವಾರು ಜನರು ವಿವಿಧ ಯೋಜನೆಗಳ ತಮ್ಮ ಪರಿಕಲ್ಪನಾ ವರದಿಗಳನ್ನು ನೀಡಿದ್ದಾರೆ.

ಇವುಗಳನ್ನು ಕ್ರೋಡೀಕರಿಸಿ, ರಾಜ್ಯದ ಎಲ್ಲಾ ಪಕ್ಷಗಳಿಗೆ, ಎಲ್ಲಾ ಮಾಜಿ ಮುಖ್ಯ ಮಂತ್ರಿಯವರಿಗೆ ಪರಿಣಿತರಿಗೆ, ವಿವಿಧ ವರ್ಗದವರಿಗೆ ರವಾನಿಸಿ, ಅವರೆಲ್ಲರ ಅಭಿಪ್ರಾಯ ಕ್ರೋಡೀಕರಿಸಲು ಕಾರ್ಯಾಗಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳ ಬೇಕಿದೆ.

ಇಲ್ಲಿಯವರೆಗೂ ಜ್ಞಾನದಾನ  ಮಾಡಿರುವವರೆಗೆ ಜ್ಞಾನ ದಾನ ಪ್ರಶಸ್ತಿ ನೀಡಲು ರೂಪುರೇಷೆ ನಿರ್ಧರಿಸಬೇಕಿದೆ.

  ಈ ಕಾರ್ಯಾಗಾರಕ್ಕೆ  ಬರುವ ಪ್ರತಿನಿಧಿಗಳಿಗೆ, ದಿನಾಂಕ:23.01.2023 ರ ಮಧ್ಯಾಹ್ಞ 12 ಗಂಟೆಯಿಂದ  24.01.2023 ರ ಮಧ್ಯಾಹ್ಞ 12 ಗಂಟೆವರೆಗೆ  ಮಾತ್ರ ಉಚಿತವಾಗಿ ರೆಸಾರ್ಟ್‍ನಲ್ಲಿ ಕಾಟೇಜ್‍ಗಳನ್ನು ಕಾಯ್ದಿರಿಸಲಾಗಿದೆ. ಈ ಸಮಯದಲ್ಲಿ ಮಾತ್ರ ಊಟ ತಿಂಡಿಯನ್ನು ಉಚಿತವಾಗಿ ಆಯೋಜಕರು ಭರಿಸುವರು.

ನಂತರ ಅಥವಾ ಮೊದಲು ಬರುವವರು ರೇಸಾರ್ಟ್ ಅನ್ನು, ಅವರ ನಿಗದಿತ ದರ ನೀಡಿ ಬುಕ್ಕಿಂಗ್ ಮಾಡಬೇಕಿದೆ. ಕೆಲವರು ನಮ್ಮ ಕುಟುಂಬದ ಜೊತೆ ಬರಲು ಅವಕಾಶವಿದೆಯೇ ಎಂದು ಕೇಳುತ್ತಿದ್ದಾರೆ,  ಈ ಬಗ್ಗೆ ನಾಳೆ ಮಾಹಿತಿ ನೀಡಲಾಗುವುದು.

ರಾಜ್ಯದ ಮೂಲೆ, ಮೂಲೆಯಿಂದ ಬರುವವರು ಕೆಲವರು ನಮ್ಮ ಸ್ವಂತ ವಾಹನ ಹಾಗೂ ಸ್ವಂತ ಖರ್ಚಿನಲ್ಲಿಯೇ ಬರುತ್ತೇವೆ ಎಂದರೆ, ಕೆಲವರು ಪ್ರಯಾಣದ ಬಸ್ ಅಥವಾ ರೈಲು ವೆಚ್ಚ ನೀಡುತ್ತಿರಾ ಎಂದು ಕೇಳುತ್ತಿದ್ದಾರೆ. ಸಂಘಟಕರು ಇಂದು ಎಲ್ಲರಿಗೂ ಕರೆ ಮಾಡಿ, ಪ್ರತಿಯೊಬ್ಬರ ಅಭಿಪ್ರಾಯ ಸಂಗ್ರಹಿಸಿದ ನಂತರ ನಿಖರವಾದ ನಿರ್ಧಾರ ಕೈಗೊಂಡು ಮಾಹಿತಿ ನೀಡಲಾಗುವುದು.

ಜ್ಞಾನ ದಾನಿಗಳು, ಸಂಪನ್ಮೂಲ ವ್ಯಕ್ತಿಗಳು, ಹೋರಾಟಗಾರರು, ವಿವಿಧ ವರ್ಗದ ಸಂಘಸಂಸ್ಥೆಗಳ ಪದಾಧಿಕಾರಿಗಳಿಗೆ,  ತಮ್ಮ ವಾಸ ಸ್ಥಳದಿಂದ, ಕಾರ್ಯಾಗಾರ ನಡೆಯುವ ಸ್ಥಳದವರೆಗೂ ಬಂದು ಹೋಗಲು,ಸಾರಿಗೆ ವೆಚ್ಚ ಹಾಗೂ ದಿನ ಭತ್ಯೆ ನೀಡುವ ಬಗ್ಗೆ ಅಥವಾ ಕಾರ್ಯಾಗಾರಕ್ಕೆ ದರನಿಗದಿ ಮಾಡುವ ಬಗ್ಗೆ ರೂಪುರೇಷೆ ನಿರ್ಧರಿಸಿ ವರದಿ ನೀಡಲು, ದಿವಂಗತ ಕೆ.ಹೆಚ್.ಪಾಟೀಲ್ರವರ ಅಧ್ಯಯನ ಪೀಠದ’ ನಿರ್ದೇಶಕರು ಹಾಗೂ ಆರ್ಥಿಕ ತಜ್ಞರಾದ, ಮೈಸೂರಿನ ಶ್ರೀ ಬಸವರಾಜ್ ರವರಿಗೆ ಮನವಿ ಮಾಡಲಾಗಿದೆ.

ಅವರ ವರದಿಯನ್ನು ಕಾರ್ಯಾಗಾರದಲ್ಲಿ ಮಂಡಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಕಾರ್ಯಾಗಾರಕ್ಕೆ ಬರುವವರು ಸಾರಿಗೆ ವ್ಯವಸ್ಥೆಯನ್ನು ಮಾತ್ರ, ತಮ್ಮ ಸ್ವಂತ ಖರ್ಚಿನಲ್ಲಿಯೇ ಮಾಡಬೇಕಿದೆ.

ಮುಂದಿನ ನಿರ್ಧಾgದÀ ಬಳಿಕ ಸರ್ಕಾರಗಳ ನಿಯಮದಂತೆ ಯಾವುದೇ ಭತ್ಯೆಯನ್ನು ನೇರವಾಗಿ ಅವರವರ ಖಾತೆಗೆ ಡಿಬಿಟಿ ಮಾಡಬೇಕಿದೆ. ನಗದು ವ್ಯವಹಾರ ಇರುವುದಿಲ್ಲ.

ಕಾರ್ಯಾಗಾರಕ್ಕೆ ದೇಣಿಗೆ ನೀಡುವವರು, ಈ ಕೆಳಕಂಡ ಖಾತೆಗೆ ಇ ಪೇಮೆಂಟ್ ಮಾಡಬಹುದು, ನಗದು ಹಣವನ್ನು ಯಾರಿಂದಲೂ ಪಡೆಯುವುದಿಲ್ಲ.