22nd November 2024
Share

TUMAKURU:SHAKTHIPEETA FOUNDATION

ದಿನಾಂಕ:23.01.2023 ಮತ್ತು 24.01.2023 ಕಾರ್ಯಾಗಾರದ ಅಜೆಂಡಾ.

ದಯವಿÀಟ್ಟು ಕ್ಷಮಿಸಿ, 1988 ರಿಂದ ಇಲ್ಲಿಯವರೆಗೂ ನನ್ನ 35 ವರ್ಷದ ಅಭಿವೃದ್ಧಿ ಸಮಾಜ ಸೇವೆಯ ಅನುಭವದ ಮೇರೆಗೆ ನಾವೂ ಯಾವುದೇ ಆಹ್ವಾನ ಪತ್ರಿಕೆ ಮಾಡಿಸುವುದಿಲ್ಲ.

ಸಭೆಯಲ್ಲಿ ಭಾಗವಹಿಸಿದ ಯಾರಿಗೂ ಹಾರ ತುರಾಯಿ ಹಾಕುವುದಿಲ್ಲ.

ಈ ಕಾರ್ಯಾಗಾರದ ಹೊಣೆಗಾರಿಕೆ ಸಂಪೂರ್ಣವಾಗಿ ಸಕಲೇóಶಪುರ ರೆಸಾರ್ಟ್ ಓನರ್ಸ್ ಅಸೋಶಿಯೇಷನ್,  ಸಕಲೇóಶಪುರ ಹೋಮ್ ಸ್ಟೇಗಳ ಅಸೋಶಿಯೇಷನ್ ಹಾಗೂ ಮಾಕಾನನ ರೆಸಾರ್ಟ್ ನವರದ್ದಾಗಿದೆ. ಎಲ್ಲಾ ಖರ್ಚು ವೆಚ್ಚಗಳನ್ನು ಅವರೇ ಭರಿಸಲಿದ್ದಾರೆ. ನಿಮ್ಮ ಸಮಯ ಮಾತ್ರ ಮೀಸಲಿಟ್ಟರೆ ಸಾಕು.

‘ಪ್ರತಿಯಾಗಿ ಶಕ್ತಿಪೀಠ ಫೌಂಡೇಷನ್ ಇವರಿಗೆ ಅಗತ್ಯವಾದ ಮಾಸ್ಟರ್ ಪ್ಲಾನ್ ರೂಪಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಅನುಷ್ಠಾನ ಮಾಡಿಸಲು ಸಹಕರಿಸಲಿದೆ.

  1. ದಿನಾಂಕ:23.01.2023 ರಂದು ಮದ್ಯಾಹ್ನ 12 ಗಂಟೆಗೆ ಹಾಸನ ಜಿಲ್ಲೆಯ, ಸಕಲೇಶಪುರ ತಾಲ್ಲೋಕು, ಹೆತ್ತೂರು ಹೋಬಳಿ ಮೂಕಾನನ ರೆಸಾರ್ಟ್‍ನಲ್ಲಿ ನೊಂದಾವಣೆ. 2.30 ರವರೆಗೆ ಊಟ ವಿಶ್ರಾಂತಿ. ರೆಸಾರ್ಟ್ ವೀಕ್ಷಣೆ.
  2. 2.30 ರಿಂದ 4.30 ಗಂಟೆವರೆಗೆ ವೆಸ್ಟರ್ನ್ ಘಾಟ್ ಫೌಂಡೇಷನ್ ಉದ್ಘಾಟನೆ ಮತ್ತು ಪಶ್ಚಿಮಘಟ್ಟಗಳ ಬಗ್ಗೆ ನಿಮಗೇನು ಗೊತ್ತು ಸಂವಾದ.
  3. 4.30.ರಿಂದ 5 ಗಂಟೆವರೆಗೆ ಟೀ ಬ್ರೇಕ್.
  4. 5 ರಿಂದ  7 ಗಂಟೆವರೆಗೆ ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್- 2047 ರ ಸಂವಾದ.
  5. 7 ರಿಂದ 8 ಗಂಟೆವರೆಗೆ ಊಟದ ವಿರಾಮ.
  6. 8 ರಿಂದ ಎಲ್ಲರ ಅಭಿಪ್ರಾಯ ಸಂಗ್ರಹಣೆ ಮುಗಿಯುವವರೆಗೂ ಜಲಗ್ರಂಥ ಸಂವಾದ.
  7. ದಿನಾಂಕ:24.01.2023 ರಂದು ಬೆಳಿಗ್ಗೆ ತಿಂಡಿ ನಂತರ 9.00 ರಿಂದ 11 ಗಂಟೆವರೆಗೆ ಶಕ್ತಿಪೀಠಗಳ ಬಗ್ಗೆ ನಿಮಗೇನು ಗೊತ್ತು ಸಂವಾದ.
  8. 11 ಗಂಟೆಯಿಂದ 12 ಗಂಟೆವರೆಗೆ ನಿರ್ಣಯ.
  9. 12 ಗಂಟೆಗೆ  ಕಾಟೇಜ್ ಖಾಲಿ ಮಾಡಿಕೊಂಡ ನಂತರ ಗುಂಪು ಚರ್ಚೆಯೊಂದಿಗೆ ಕಾರ್ಯಾಗಾರದ ಸಮಾರೋಪ. ನಿರ್ಣಯಗಳ ಪಕ್ಷಿನೋಟ, ಜಿಲ್ಲಾವಾರು ಹೊಣೆಗಾರಿಕೆ,

ಈ ಬಗ್ಗೆ ತಮ್ಮೆಲ್ಲರ ಅಭಿಪ್ರಾಯ ಬಹಳ ಮುಖ್ಯ.

ಇವುಗಳ ಜೊತೆಗೆ ತಾವುಗಳು ನೀಡುವ ಯೋಜನೆಗಳನ್ನು ಸೇರ್ಪಡೆ ಮಾಡಲಾಗುವುದು, ಇದು ನಿರಂತರವಾಗಿ ಪ್ರತಿ ತಿಂಗಳು ನಡೆಯುವ ಸಭೆಯಲ್ಲಿ, 31 ಯೋಜನೆಗಳ ಪಟ್ಟಿ ಮಾಡಿ, 31 ಜಿಲ್ಲೆಗಳಿಗೆ ಹೊಣೆಗಾರಿಕೆ ನೀಡಲು ಚಿಂತನೆ ನಡೆಸಲಾಗಿದೆ. ಒಟ್ಟು 365 ಯೋಜನೆಗಳ ವಿಷನ್ ಗ್ರೂಪ್ ಸಿದ್ಧವಾಗುತ್ತಿದೆ.

ಅಭಿವೃದ್ಧಿ ಪೀಠ

  1. ದಿನಾಂಕ:15.08.2022 ರಂದು ಕೆಂಪುಕೋಟೆಯಲ್ಲಿ ಪ್ರದಾನಿಯವರಾದ ಶ್ರೀ ನರೇಂದ್ರ ಮೋದಿಯವರು ಜೈ ಜವಾನ್-ಜೈ ಕಿಸಾನ್- ಜೈ ವಿಜ್ಞಾನ್- ಜೈ ಅನುಸಂಧಾನ್ ಘೋಷಣೆ ಮೂಲಕ 2047 ರವರೆಗೆ ರಾಜ್ಯ ರಾಜ್ಯಗಳ ಮಧ್ಯೆ ಅಭಿವೃದ್ಧಿಯಲ್ಲಿ ಪೈಪೋಟಿಗಾಗಿ ಕರ್ನಾಟಕ ಸರ್ಕಾರ ಕೈಗೊಳ್ಳ ಬೇಕಾಗಿರುವ ವಿಚಾರಗಳು.
  2. ಲೋಕಸಭಾ ಕ್ಷೇತ್ರಕ್ಕೊಂದು ದಿಶಾ ಸಮಿತಿ ರಚಿಸಲು ಪ್ರಧಾನಿಯವರಿಗೆ ಮನವಿ ಮಾಡುವ ಬಗ್ಗೆ.
  3. ಕರ್ನಾಟಕ ರಾಜ್ಯದ ವಿಧಾಸಭಾ ಸದಸ್ಯರ ವ್ಯಾಪ್ತಿಗೆ ಒಂದೊಂದು ಕೆಡಿಪಿ ರಚಿಸುವ ಬಗ್ಗೆ.
  4. ಕರ್ನಾಟಕ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇರುವ ಬಯೋ ಡೈವರ್ಸಿಟಿ ಸಮಿತಿಗಳ ಮೌಲ್ಯಮಾಪನವನ್ನು ಕರ್ನಾಟಕ ಮೌಲ್ಯ ಮಾಪನ ಪ್ರಾಧಿಕಾರ ಮೌಲ್ಯ ಮಾಪನ ಮಾಡಿಸುವ ಬಗ್ಗೆ.
  5. ಕರ್ನಾಟಕ ರಾಜ್ಯದ ಪ್ರತಿಯೊಂದು ಗ್ರಾಮದ, ನಗರಗಳ ಬಡಾವಣೆಗಳ ವ್ಯಾಪ್ತಿಯಲ್ಲಿ ಇರುವ ವಿವಿಧ ವಿಷಯಗಳ ಪರಿಣಿತ ತಜ್ಞರನ್ನು ಬಯೋ ಡೈವರ್ಸಿಟಿ ಸಮಿತಿಗಳ ಮೂಲಕ ಗುರುತಿಸಿ ಕರ್ನಾಟಕ ಮೌಲ್ಯ ಮಾಪನ ಪ್ರಾಧಿಕಾರಕ್ಕೆ ನೀಡುವ ಬಗ್ಗೆ.
  6. ಕರ್ನಾಟಕ ಮೌಲ್ಯ ಮಾಪನ ಪ್ರಾಧಿಕಾರದಲ್ಲಿ ಡಿಜಿಟಲ್ ದಾಖಲೆಯಾದ ಪರಿಣಿತರಿಗೆ ಮಾತ್ರ ಕರ್ನಾಟಕÀ ರಾಜ್ಯೋತ್ಸವ ಪ್ರಶಸ್ತಿ ನೀಡಲು ಮಾನದಂಡವಾಗಿ ಪರಿಗಣಿಸುವ ಬಗ್ಗೆ.
  7. ಕರ್ನಾಟಕ ಮೌಲ್ಯ ಮಾಪನ ಪ್ರಾಧಿಕಾರದಲ್ಲಿ ಡಿಜಿಟಲ್ ದಾಖಲೆಯಾದ ಪರಿಣಿತರಿಗೆ ಮಾತ್ರ ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ವಿವಿಧ ಸರ್ಕಾರಿ ಸಮಿತಿ, ನಿಗಮ, ಬೋರ್ಡ್, ಕಾರ್ಪೋರೇಷನ್‍ಗಳಲ್ಲಿ ನೇಮಕ ಮಾಡುವ ‘ನಾಲೇಡ್ಜ್ ಬ್ಯಾಂಕ್/ ಎಕ್ಸ್ ಪಟ್ರ್ಸ್ ಬ್ಯಾಂಕ್ ’  ಸ್ಥಾಪಿಸುವ ಬಗ್ಗೆ.
  8. ‘ಜ್ಞಾನ ದಾನಿಗಳ ಪ್ರಶಸ್ತಿ’ ನೀಡುವ ಬಗ್ಗೆ ಹಾಗೂ ಜ್ಞಾನಿಗಳು ನೀಡುವ ಯೋಜನೆಗಳನ್ನು ರಾಜ್ಯದ ಸರ್ವಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಗಳ ವೇಳೆ ಹಾಗೂ ಪ್ರತಿ ವರ್ಷದ ಆಯವ್ಯಯಗಳ್ಲಿ ಸೇರ್ಪಡೆ ಮಾಡಲು ಒಂದು ಮಾನದಂಡವಾಗುವ ಬಗ್ಗೆ.
  9. ಕರ್ನಾಟಕ ರಾಜ್ಯದ ಎಲ್ಲಾ 28 ಜನ ಲೋಕಸಭಾ ಸದಸ್ಯರ ಹಾಗೂ 13 ಜನ ರಾಜ್ಯಸಭಾ ಸದಸ್ಯರಿಗೂ ವಿಷನ್-2047 ದಿಶಾ ಭವನ ನಿರ್ಮಾಣ ಮಾಡುವ ಬಗ್ಗೆ.
  10. ಕರ್ನಾಟಕ ರಾಜ್ಯದ ಎಲ್ಲಾ 225 ಜನ ವಿಧಾನಸಭಾ ಸದಸ್ಯರ ಹಾಗೂ 75 ಜನ ವಿಧಾನ ಪರಿಷತ್ ಸದಸ್ಯರಿಗೂ ವಿಷನ್-2047 ಕೆಡಿಪಿ ಭವನ ನಿರ್ಮಾಣ ಮಾಡುವ ಬಗ್ಗೆ.
  11. ಬೆಂಗಳೂರಿನಲ್ಲಿ ವಿಷನ್-2047 ದೆಹಲಿ ಪ್ರತಿನಿಧಿ ಭವನ ನಿರ್ಮಾಣ ಮಾಡುವ ಬಗ್ಗೆ.
  12. ದಿಶಾ ಮತ್ತು ಕೆಡಿಪಿ ಸಭೆಗಳ ಅಜೆಂಡಾ ಟೆಂಪ್ಲೇಟ್ ಮಾಡುವ ಬಗ್ಗೆ.
  13. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಯುಟಿಲೈಸೆಷನ್ ಸರ್ಟಿಫೀಕೇಟ್ ಸಲ್ಲಿಸುವ ಮೊದಲು ದಿಶಾ ಮತ್ತು ಕೆಡಿಪಿ ಸಭೆಗಳಲ್ಲಿ ಕಡ್ಡಾಯವಾಗಿ ನಿರ್ಣಯ ಮಾಡುವ ಬಗ್ಗೆ
  14. ದಿಶಾ ಮತ್ತು ಕೆಡಿಪಿ ಸಭೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ, ಆಯಾ ವ್ಯಾಪ್ತಿಯ ನಿಗಮ ಮಂಡಳಿಗಳ, ಎನ್.ಜಿ.ಓ ಗಳ ಅನುದಾನಗಳ ಇಂಡೆಕ್ಸ್ ಮಾಡಿ ಪ್ರಗತಿ ಪರಿಶೀಲನೆ ಮಾಡುವ ಬಗ್ಗೆ.
  15. ಡಾ1 ಸರೋಜಿನಿ ಮಹಿಷಿ ವರದಿಯನ್ನು ಆಕ್ಟ್ ಮಾಡುವ ಬಗ್ಗೆ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳನ್ನು ಸ್ಥಾಪನೆ ಮಾಡುವಾಗ ಆಯಾ ಸ್ಥಳೀಯರಿಗೆ ಹಾಗೂ ಭೂ ಸಂತ್ರಸ್ಥರಿಗೆ ಉದ್ಯೋಗದಲ್ಲಿ ರಿಸರ್ವೇನ್ ನೀಡಲು ಆಕ್ಟ್ ಮಾಡುವ ಬಗ್ಗೆ.
  16. ಭಾರತ ದೇಶದ, ಕರ್ನಾಟಕ ರಾಜ್ಯದ ಹಾಗೂ ದೇಶದ ಎಲ್ಲಾ ರಾಜ್ಯಗಳು ಮಾಡಿರುವ ಸಾಲಗಳ ಡಿಸ್‍ಪ್ಲೆ ಮತ್ತು ಉಚಿತ ಯೋಜನೆಗಳ ಡಿಸ್‍ಪ್ಲೆ ಮಾಡುವ ಬಗ್ಗೆ.
  17. ಪ್ರತಿಯೊಂದು ಗ್ರಾಮದ ಹಾಗೂ ಬಡಾವಣೆಯ ಎಕಾನಮಿಕ್ ವೀಕರ್ಸ್ ಪಟ್ಟಿಯನ್ನು ಆಯಾ ಸ್ಥಳೀಯ ಸಂಸ್ಥೆಗಳಲ್ಲಿ ಡಿಸ್‍ಪ್ಲೆ ಮಾಡುವ ಬಗ್ಗೆ.
  18. ಪ್ರತಿಯೊಂದು ಗ್ರಾಮದ ಹಾಗೂ ಬಡಾವಣೆಯ ಬಿಪಿಎಲ್ ಪಟ್ಟಿಯನ್ನು ಆಯಾ ಸ್ಥಳೀಯ ಸಂಸ್ಥೆಗಳಲ್ಲಿ ಡಿಸ್‍ಪ್ಲೆ ಮಾಡುವ ಬಗ್ಗೆ.
  19. ರಾಜ್ಯದ ಎಲ್ಲಾ ವಿಶ್ವ ವಿದ್ಯಾಲಯಗಳಲ್ಲಿರುವ ಅಧ್ಯಯನ ಪೀಠಗಳಿಗೆ ಸರ್ಕಾರಿ ಯೋಜನೆಗಳ ಸಂಶೋಧನೆ ಮತ್ತು ಮೌಲ್ಯಮಾಪನ ಮಾಡಲು  ಕರ್ನಾಟಕ ಮೌಲ್ಯ ಮಾಪನ ಪ್ರಾಧಿಕಾರದಲ್ಲಿ ನೆಟ್ ವರ್ಕ್ ಮಾಡುವುದು.
  20. ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಹೆಚ್ಚಿನ ಅನುದಾನ ಪಡೆಯಲು ಸೆಂಟರ್ ಆಫ್ ಎಕ್ಸಲೆನ್ಸ್ ಕ್ಯಾಪ್ಚರಿಂಗ್ ಜಿ.ಓ.ಐ ಫÀಂಡ್ಸ್ ಸ್ಥಾಪಿಸುವ ಬಗ್ಗೆ.
  21. ಕರ್ನಾಟಕ ಮೌಲ್ಯ ಮಾಪನ ಪ್ರಾಧಿಕಾರದಲ್ಲಿ ದಿಶಾ ಮತ್ತು ಕೆಡಿಪಿ ಸಭೆಗಳ ಮಾನಿಟರಿಂಗ್ ಸೆಲ್ ಸ್ಥಾಪಿಸುವುದು.
  22. ಒಂದು ರಾಜ್ಯ ಒಂದು ನಕ್ಷೆ ಘೋಷಣೆ ಮಾಡುವುದು.
  23. ಒಂದು ರಾಜ್ಯ ಒಂದೇ ಡಾಟಾ ಘೋಷಣೆ ಮಾಡುವುದು.
  24. ಪ್ರತಿ ಗ್ರಾಮದ ರೆವಿನ್ಯೂ ಮ್ಯಾಪ್ ಮಾದರಿಯಲ್ಲಿ ಡೆವಲಪ್ ಮೆಂಟ್ ವಿಲೇಜ್ ಮ್ಯಾಪ್ ಸಿದ್ಧಪಡಿಸುವುದು ಮತ್ತು ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ಪ್ರತಿಪಾದಿಸಲು 224 ವಿಧಾನಸಭಾ ಕ್ಷೇತ್ರಗಳ ಡೆವಲಪ್ ಮೆಂಟ್ ಮ್ಯಾಪ್ ಸಿದ್ಧಪಡಿಸುವುದು.

ಜಲಪೀಠ

25.ದಿನಾಂಕ:21.10.2019 ರಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯಲ್ಲಿ ನಡೆದ ತುಮಕೂರು ಜಿಲ್ಲಾ ದಿಶಾ ಸಮಿತಿಯ ನಿರ್ಣಯ, ನಂತರ ಜಲ ಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ರಾಕೇಶ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆ ನಿರ್ಣಯ, ನಂತರ ಆಗಿನ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆರವರ ಅಧ್ಯಕ್ಷತೆಯಲ್ಲಿ ನಡೆದ ಸಭೆ, ಆಗಿನ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರಿಗೆ ಬರೆದ 3 ಪತ್ರಗಳು ಹಾಗೂ ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಮತ್ತು ರಾಜ್ಯದ ನದಿ ಜೋಡಣೆ ವಿವರವಾದ ವರದಿ ತಯಾರಿಸಲು ಕಾವೇರಿ ನೀರಾವರಿ ನಿಗಮದ ವ್ಯಸ್ಥಾಪಕ ನಿರ್ದೇಶಕರನ್ನು ನೋಡೆಲ್ ಆಫೀಸರ್ ಆಗಿ ನೇಮಕ ಹಾಗೂ ನಂತರದ ನಡವಳಿಕೆಗಳ ಬಗ್ಗೆ.

26.ಕರ್ನಾಟಕ ರಾಜ್ಯದ ಪ್ರತಿಯೊಂದು ಹನಿ ನೀರಿನ ಮಾಹಿತಿಯುಳ್ಳ ಜಲಗ್ರಂಥ ರಚನೆ ಬಗ್ಗೆ ಹಾಗೂ ಪ್ರತಿಯೊಂದು ಗ್ರಾಮಕ್ಕೂ ನದಿ ನೀರಿನ ಅಲೋಕೇಷನ್ ಮಾಡುವ ಬಗ್ಗೆ.

27.ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ದೊರೆಯ ಬಹುದಾದ ನದಿ ಜೋಡಣೆಗಳ ನೀರಿನ ಬಗ್ಗೆ.

ಶಕ್ತಿಪೀಠ

28.ವಿಶ್ವದ 7 ದೇಶಗಳ 108 ಶಕ್ತಿಪೀಠಗಳು, 12 ಜ್ಯೋತಿರ್ಲಿಂಗಗಳು, ವಿಷ್ಣು, ಬ್ರಹ್ಮ ಇವರ ಇತಿಹಾಸದ ಬಗ್ಗೆ ಕೇಂದ್ರ ಸರ್ಕಾರದ ಕಲ್ಚರ್ ಇಲಾಖೆಯ ಇಂದಿರಾಗಾಂದಿ ನ್ಯಾಷನಲ್ ಕಲಾ ಕೇಂದ್ರ ಹಾಗೂ ನ್ಯಾಷನಲ್ ಮಿಷನ್ ಫಾರ್ ಮ್ಯಾನ್ ಸ್ಕ್ರಿಪ್ಟ್ ನಲ್ಲಿ ಡಿಜಿಟಲ್ ದಾಖಲೆ ಮಾಡುವ ಬಗ್ಗೆ.

29.ಕರ್ನಾಟಕ ರಾಜ್ಯದ 31 ಜಿಲ್ಲೆಗಳಲ್ಲಿ ಆಯಾ ಜಿಲ್ಲೆಯ ಜಲಸಂಗ್ರಹಾಗಾರಗಳು, ಕಲೆ, ಸಾಹಿತ್ಯ, ಸಂಸ್ಕøತಿ, ಶಾಸನಗಳ ಥೀಮ್ ಪಾರ್ಕ್, ನದಿ ಜೋಡಣೆ ಪ್ರಾತ್ಯಾಕ್ಷಿಕೆ, ಅಭಿವೃದ್ಧಿ ಪ್ರಾತ್ಯಾಕ್ಷಿಕೆ, ಎಕೋ ರೆಸಾರ್ಟ್  ಬಗ್ಗೆ.

30.ಕರ್ನಾಟಕ ರಾಜ್ಯದ ಎಲ್ಲಾ ಗ್ರಾಮಗಳ, ಎಲ್ಲಾ ವಿಧವಾದ ಜಲಸಂಗ್ರಹಾಗಾರಗಳನ್ನು ಗಂಗಾಮಾತೆ ದೇವಾಲಯ ಎಂದು ಘೋಷಣೆ ಮಾಡುವ ಬಗ್ಗೆ.

31.ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ ಘೋಷಣೆ ಮಾಡಿರುವ ಪವಿತ್ರ ವನ ಯೋಜನೆಯನ್ನು ನಗರಗಳ ಬಡಾವಣೆಗಳಿಗೂ ಘೋಷಣೆ ಮಾಡುವುದು ಹಾಗೂ ಆಯಾ ಗ್ರಾಮಗಳ ಹಾಗೂ ಬಡಾವಣೆಗಳ ಎಲ್ಲಾ ನಾಗರೀಕರ ಸಮಿತಿ ರÀಚಿಸಿ ನಿರ್ವಹಣೆಗಾಗಿ ನೀಡುವುದು.

ನಿಮ್ಮ ಹೊಸ ಹೊಸ ಐಡಿಯಾಗಳಿಗಾಗಿ ಕಾತುರದಿಂದ ಇದ್ದೇವೆ. ಮಾಹಿತಿಗಳ ಕಣಜದೊಂದಿಗೆ ಕಾರ್ಯಾಗಾರಕ್ಕೆ ಬನ್ನಿ.