29th March 2024
Share

TUMAKURU:SHAKTHI PEETA FOUNDATION

  ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಸಿದ್ದಪಡಿಸುವ ಸಲುವಾಗಿ, ಶಕ್ತಿಪೀಠ ಫೌಂಡೇಷನ್ ನಡೆಸುತ್ತಿರುವ ಸರಣೆ  8 ನೇ ಸಭೆ ದಿನಾಂಕ:23.01.2023 ಮತ್ತು 24.01.2023 ರಂದು ಎರಡು ದಿವಸಗಳ ಕಾರ್ಯಾಗಾರ ನಡೆಯಲಿದೆ, ಆಯೋಜಿಸುವವರು, ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೋಕು, ಮೂಕಾನನ ರೆಸಾರ್ಟ್, ವೆಸ್ಟರ್ ಘಾಟ್ ಫೌಂಡೇಷನ್, ಸಕಲೇಶಪುರ ರೆಸಾರ್ಟ್ ಓನರ್ಸ್ ಅಸೋಶಿಯೇಷನ್ ಮತ್ತು ಸಕಲೇಶಪುರ ಹೋ ಸ್ಟೇ ಓನರ್ಸ್ ಅಸೋಶಿಯೇಷನ್- ಸಹಕಾರ ಶ್ರೀ ವೇದಾನಂದಾಮೂರ್ತಿಯವರು ಮತ್ತು ತಂಡ. 

  ಈ ಸಭೆಗೆ ರಾಜ್ಯಸಭಾ ಸದಸ್ಯರಾದ ಶ್ರೀ ಹನುಮಂತಪ್ಪನವರನ್ನು ಆಹ್ವಾನಿಸಲಾಗಿದೆ. ಅವರು ಸಹ ಕಾರ್ಯಾಗಾರಕ್ಕೆ ಬರುವುದಾಗಿ ತಿಳಿಸಿದ್ದಾರೆ. ಜೊತೆಯಲ್ಲಿ ಶ್ರೀ ವೇದಾನಂದಮೂರ್ತಿ, ಚಿ.ಹಿತೇಶ್, ಕಲಾಬಂಧು ಪತ್ರಿಕೆಯ ಶ್ರೀ ನರಸಿಂಹಮೂರ್ತಿಯವರು ಮತ್ತು ತಂಡದವರು ಇದ್ದಾರೆ.

ರಾಜ್ಯಸಭಾ ಸದಸ್ಯರಾದ ಶ್ರೀ ಹನುಮಂತಪ್ಪನವರು ಅಷ್ಟು ದೂರದ ರೆಸಾರ್ಟ್ ಸಭೆಗಿಂv ಇಲ್ಲಿಯೇ ಯಾವುದಾದರೂ ರೆಸಾರ್ಟ್‍ನಲ್ಲಿ ಸಭೆ ನಡೆಸಬಹುದಿತ್ತಲ್ಲಾ ಎಂದರು.

ನನ್ನ ಮಾತಿಗೆ ಕಟಿಬದ್ಧರಾಗಿ, ಅವರು ಪುಕ್ಕಟೆ ರೆಸಾರ್ಟ್ ಕಾಟೇಜ್, ಪುಕ್ಕಟೆ ಊಟ, ತಿಂಡಿ ಕೊಡುತ್ತಾರೆ, ಜೊತೆಗೆ ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯಿಂದ, ರಾಜ್ಯದ ವಿವಿಧ ಜಿಲ್ಲೆಗಳ ಜನ ಬರಲು ಒಂದು ಬಸ್ ಸಹ ಮಾಡಿ ಕೊಟ್ಟಿದ್ದಾರೆ. ಇಲ್ಲಿ ಮಾಡಲು ದುಡ್ಡೆಲ್ಲಿಂದ ಸಾರ್ ತರದು. ಇ ಪೇಪರ್‍ನಲ್ಲಿ ಯಾರಾದರೂ, ಈ ಕಾರ್ಯಾಗಾರಕ್ಕೆ  ದಾನ ನೀಡಿ ಎಂದು ಬರೆದರೂ ಇದೂವರೆಗೂ ಒಂದು ಪೈಸೆ ಯಾರು ಕೊಟ್ಟಿಲ್ಲ.

ಆದರೇ ಜ್ಞಾನದಾನ ಮಾಡಲು ಸುಮಾರು 125 ಕ್ಕೂ ಹೆಚ್ಚು ಜನರು ಬರುವವರಿದ್ದಾರೆ. ಇದಕ್ಕಿಂತ ನೆಮ್ಮದಿ ಇನ್ನೂ ಏನಿದೆ ಸಾರ್, ಪಶ್ಚಿಮಘಟ್ಟಗಳ ಮಧ್ಯೆ ಒಂದು ದಿವಸ ಕಾಲ ಕಳೆಯುವ ಅವಕಾಶ ಜ್ಞಾನದಾನಿಗಳಿಗೆ ನೀಡಿರುವುದು ಒಂದು ಒಳ್ಳೆಯ ವಿಚಾರ ಸಾರ್.

ಇನ್ನೂ ಯಾರನ್ನಾದರೂ ದೇಣಿಗೆ ನೀಡಿ ಎಂದರೆ, ಇದು ಯಾವುದೋ ದುಡ್ಡು ಹೊಡೆಯುವ ಸ್ಕೀಮ್ ಅಂತಾರೆ. ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಜೊತೆ ಉಚಿತವಾಗಿ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಹೆಚ್ಚಿಗೆ ಅನುದಾನ ತರಲು ಸ್ಟ್ರಾಟಜಿ ಸಿದ್ಧಪಡಿಸುವುದಾಗಿ ಎಂ.ಓ.ಯು ಮಾಡಿಕೊಂಡು ನಮೋ, ನಮೋ’ ಎನ್ನುವಂತಾಗಿದೆ ಸಾರ್ ಎಂದಾಗ ಅವರು ನಕ್ಕು ಸುಮ್ಮನಾದರು.

ಮುಂದಿನ ಸಭೆಗಳನ್ನು ಆಯೋಜಿಸುವರು ಕರೆ ಮಾಡಿ.